ನಿಮ್ಮ ಜಾತಕದಲ್ಲಿ ಗುರು ಬಲ ಹೆಚ್ಚಾಗಬೇಕಾ? ಪ್ರತಿ ಗುರುವಾರ ಬೃಹಸ್ಪತಿ ಮಂತ್ರ ಪಠಿಸಿ, ಗುರುವಿನ ಆಶೀರ್ವಾದ ಪಡೆಯಿರಿ
Brihspati Mantra: ಜೀವನದಲ್ಲಿ ಸುಖ ಸಂತೋಷದಿಂದ ಇರಬೇಕೆಂದರೆ ಪ್ರತಿ ಗ್ರಹಗಳ ಆಶೀರ್ವಾದ ಬಹಳ ಮುಖ್ಯ. ಅದರಲ್ಲೂ ಗುರುವು ಜಾತಕದಲ್ಲಿ ಬಲವಾಗಿರಬೇಕು. ನಿಮ್ಮ ಜಾತಕದಲ್ಲಿ ಗುರು ಬಲ ಹೆಚ್ಚಾಗಬೇಕಾ? ಪ್ರತಿ ಗುರುವಾರ ಬೃಹಸ್ಪತಿ ಮಂತ್ರ ಪಠಿಸಿ, ಗುರುವಿನ ಆಶೀರ್ವಾದ ಪಡೆಯಿರಿ.

ಜ್ಯೋತಿಷಿಗಳ ಪ್ರಕಾರ ಜಾತಕದಲ್ಲಿ ಗುರು ಬಲವಾಗಿದ್ದರೆ, ವ್ಯಕ್ತಿಯು ಜೀವನದಲ್ಲಿ ಎಲ್ಲಾ ರೀತಿಯ ಲೌಕಿಕ ಸುಖಗಳನ್ನು ಪಡೆಯುತ್ತಾನೆ. ಇದರೊಂದಿಗೆ ಜೀವನದಲ್ಲಿ ನೀವು ಎದುರಿಸುವ ಆರ್ಥಿಕ ಬಿಕ್ಕಟ್ಟು ಕೂಡಾ ದೂರವಾಗುತ್ತದೆ. ಆದ್ದರಿಂದ ಗುರುವಾರ ಭಕ್ತರು ಮಡಿಯುಟ್ಟು, ಭಕ್ತಿಯಿಂದ ಬೃಹಸ್ಪತಿಯನ್ನು ಧ್ಯಾನಿಸಬೇಕು. ಜೊತೆಗೆ ವಿಷ್ಣು ಹಾಗೂ ಲಕ್ಷ್ಮಿಯನ್ನು ಪೂಜಿಸಬೇಕು.
ಪ್ರತಿ ಗುರುವಾರ ಉಪವಾಸ ಮಾಡಿ
ಗುರುವಾರ ವಿಷ್ಣುವಿಗೆ ಬಹಳ ಪ್ರಿಯ. ಈ ದಿನದಂದು ಭಗವಾನ್ ವಿಷ್ಣು ಮತ್ತು ದೇವಗುರು ಬೃಹಸ್ಪತಿಯನ್ನು ವಿಧಿವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ. ಅಲ್ಲದೆ, ಗುರುವಾರ ಉಪವಾಸ ಮಾಡಲಾಗುತ್ತದೆ. ಗುರುವಾರ ಉಪವಾಸ ಮಾಡುವುದರಿಂದ ಗುರುವು ಜಾತಕದಲ್ಲಿ ಬಲಶಾಲಿಯಾಗುತ್ತಾನೆ. ಅದರಲ್ಲೂ ಅವಿತಾಹಿತ ಹೆಣ್ಣು ಮಕ್ಕಳು ತಮಗೆ ಆದಷ್ಟು ಬೇಗ ಗುರು ಬಲ ಒಲಿದು ಕಂಕಣ ಭಾಗ್ಯ ಕೈಗೂಡಿ ಬರಲಿ ಎಂದು ಪ್ರಾರ್ಥಿಸಿದರೆ ವಿವಾಹಿತ ಮಹಿಳೆಯರು ತಮ್ಮ ಪತಿಯ ಧೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.
ಜ್ಯೋತಿಷಿಗಳ ಪ್ರಕಾರ, ಜಾತಕದಲ್ಲಿ ಗುರುವು ಬಲವಾಗಿದ್ದರೆ, ವ್ಯಕ್ತಿಯು ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತಾನೆ. ಇದರೊಂದಿಗೆ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ಆದ್ದರಿಂದ ಗುರುವಾರದಂದು ಸ್ನಾನ ಮಾಡಿ ಭಕ್ತರು ಬಾಳೆಗಿಡಕ್ಕೆ ವಿಧಿವಿಧಾನದಂತೆ ಪೂಜೆ ಸಲ್ಲಿಸುತ್ತಾರೆ. ಈ ಸಮಯದಲ್ಲಿ ಗುರುವಾರ ಉಪವಾಸದ ಕಥೆಯನ್ನು ಪಠಿಸಲಾಗುತ್ತದೆ. ನಿಮ್ಮ ಜಾತಕದಲ್ಲಿ ಗುರು ಬಲ ಕೂಡಿ ಬರಲು, ಬೃಹಸ್ಪತಿ ಆಶೀರ್ವಾದವನ್ನು ಪ್ರತಿ ಗುರುವಾರ ಭಗವಾನ್ ವಿಷ್ಣು ಮತ್ತು ಬೃಹಸ್ಪತಿಯನ್ನು ಪೂಜಿಸಿ. ಜೊತೆಗೆ ಪೂಜೆಯ ಸಮಯದಲ್ಲಿ ಬೃಹಸ್ಪತಿ ಮಂತ್ರವನ್ನು ಪಠಿಸಿ.
ಬೃಹಸ್ಪತಿ ಮಂತ್ರ
ಗುರುಬೃಹಸ್ಪತಿರ್ಜೀವಃ ಸುರಾಚಾರ್ಯೋ ವಿದಾಂವರಃ ವಾಗೀಶೋ ಘಿಷಣೋ ಧೀರ್ಧಶ್ಮಶ್ರುಃ ಪೀತಾಂಬರೋ ಯುವಾ
ಸುಧಾ ದೃಷ್ಟಿರ್ಗ್ರಹಾಧಿಶೋ ಗ್ರಹ ಪೀಡಾಪಹಾರಕಃ ದಯಾಕರಃ ಸೌಮ್ಯಮೂರ್ತಿ ಸುರಾಚ್ಯಾ ಕುನ್ಮಧ್ಯುತಿ
ಲೋಕಪೂಜ್ಯೋ ಲೋಕಗುರುರ್ನೀತಿಜ್ಞೋ ನೀತಿಕಾರಕ ತಾರಾಪತಿಶ್ರಚಾಂಗಿರಸೋ ವೇದವೈಧ್ಯ ಪಿತಾಮಃ
ಭಕ್ತ್ಯಾ ಬೃಹಸ್ಪತಿಂ ಸ್ಮೃತ್ವಾ ನಾಮನ್ಯೇತಾನಿತಯ ಪಠೇತ್ ಅರೋಗಿ ಬಲವಾನ್ ಶ್ರೀಮಾನ್ ಪುತ್ರವಾನ್ ಸ ಭವೆನ್ನರ
ಜೀವೇದ್ದರ್ಶಶತಂ ಮರ್ತ್ಯೋ ಪಾಪಂ ನಶ್ಯತಿ ನಶ್ಯತಿ ಗಂಘಾಕ್ಷತಾಂಬರೈಃ
ಪುಷ್ಪದಿಪೋಪಹಾರೈಶ್ರ್ಚ ಪೂಜಾಯಿತ್ವಾ ಬೃಹಸ್ಪತಿಮ್
ಬ್ರಾಹ್ಮಣಾನ್ ಭೋಜಯಿತ್ವಾ ಚ ಪೀಡಾಶಾಂತಿರ್ಭವೇದ್ ಗುರೋಃ
ಇತಿ ಶ್ರೀ ಸ್ಕಂದ ಪುರಾಣೇ ಬೃಹಸ್ಪತಿಸ್ತೋತ್ರಂ ಸಂಪೂರ್ಣಂ
ಇವಿಷ್ಟು ಮಾತ್ರವಲ್ಲದೆ ಗುರುವಿನ ಆಶೀರ್ವಾದ ಪಡೆಯಲು ಪ್ರತಿ ಗುರುವಾರ ಇದನ್ನು ಅನುಸರಿಸಿ
- ನೀರಿನಲ್ಲಿ ಅರಿಶಿನ ಬೆರೆಸಿ ಸ್ನಾನ ಮಾಡಬೇಕು
- ಪ್ರತಿ ಗುರುವಾರ ವಿಷ್ಣು ಸಹಸ್ರನಾಮ ಪಠಿಸಿ
- ವಿಷ್ಣುವಿಗೆ ಹಳದಿ ಬಟ್ಟೆ, ಹಳದಿ ಹೂವು ಮತ್ತು ಹಳದಿ ಬಣ್ಣದ ನೈವೇದ್ಯ ಇಡಿ
- ಹಳದಿ ವಸ್ತುಗಳನ್ನು ದಾನ ಮಾಡಿದರೆ ಕೂಡಾ ಶುಭ ಫಲ ದೊರೆಯುತ್ತದೆ
- ಗುರುವಾರ ಸಂಜೆ ಬಾಳೆಮರದ ಕೆಳಗೆ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ
- ಶ್ರೀಗಂಧದ ತಿಲಕವನ್ನು ಪ್ರತಿ ಗುರುವಾರ ಹಣೆಗೆ ಹಚ್ಚಿಕೊಳ್ಳಿ
- ಪ್ರತಿ ಗುರುವಾರ ಹಸುವಿಗೆ ಬೆಲ್ಲ ತಿನ್ನಿಸಿ
- ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣ ಕಥೆ ಕೇಳಿ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
