ಚಿಕ್ಕದಾದ ಕಣ್ಣು ಹೊಂದಿರುವವರ ಗುಣ ಸ್ವಭಾವ ಹೇಗೆ? ಎಲೆಯ ಆಕಾರದ ಕಣ್ಣು ಇರುವವರ ಜೀವನ ಹೇಗಿರುತ್ತದೆ?-horoscope character of people who has small eyes how will be the life people who has eyes like leaf astrology in kannada ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಚಿಕ್ಕದಾದ ಕಣ್ಣು ಹೊಂದಿರುವವರ ಗುಣ ಸ್ವಭಾವ ಹೇಗೆ? ಎಲೆಯ ಆಕಾರದ ಕಣ್ಣು ಇರುವವರ ಜೀವನ ಹೇಗಿರುತ್ತದೆ?

ಚಿಕ್ಕದಾದ ಕಣ್ಣು ಹೊಂದಿರುವವರ ಗುಣ ಸ್ವಭಾವ ಹೇಗೆ? ಎಲೆಯ ಆಕಾರದ ಕಣ್ಣು ಇರುವವರ ಜೀವನ ಹೇಗಿರುತ್ತದೆ?

ಮುಖ ಲಕ್ಷಣ ಮಾತ್ರವಲ್ಲ, ಕಣ್ಣುಗಳ ಆಕಾರ ನೋಡಿ ಕೂಡಾ ಆ ವ್ಯಕ್ತಿಗಳ ಸ್ವಭಾವ ಹೇಳಬಹುದು ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ವಿಶಾಲವಾದ ಕಣ್ಣು ಹೊಂದಿರುವವರ ಗುಣಸ್ವಭಾವ ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಚಿಕ್ಕದಾದ ಕಣ್ಣು ಹೊಂದಿರುವವರ ಗುಣ ಸ್ವಭಾವ ಹೇಗೆ? ಎಲೆಯ ಆಕಾರದ ಕಣ್ಣು ಇರುವವರ ಜೀವನ ಹೇಗಿರುತ್ತದೆ?
ಚಿಕ್ಕದಾದ ಕಣ್ಣು ಹೊಂದಿರುವವರ ಗುಣ ಸ್ವಭಾವ ಹೇಗೆ? ಎಲೆಯ ಆಕಾರದ ಕಣ್ಣು ಇರುವವರ ಜೀವನ ಹೇಗಿರುತ್ತದೆ? (PC: Unsplash)

ಜನ್ಮ ದಿನಾಂಕ ಆಧರಿಸಿ ಮಾತ್ರವಲ್ಲ, ಕೈ ರೇಖೆಗಳಿಂದ ಕೂಡಾ ಮನುಷ್ಯನ ಸ್ವಭಾವ ತಿಳಿಯಬಹುದು. ಹಾಗೇ ಕಣ್ಣುಗಳನ್ನು ನೋಡಿಯೂ ಆ ವ್ಯಕ್ತಿಗಳ ಸ್ವಭಾವ ಹೇಳಬಹುದು ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ದೇಹದ ಪ್ರತಿಯೊಂದು ಭಾಗಗಳು ಪಂಚಭೂತಗಳ ಅಧೀನಕ್ಕೆ ಬಳಪಟ್ಟಿದೆ. ಈ ಲೇಖನದಲ್ಲಿ ಎಡ ಕಣ್ಣಿನ ಬಗ್ಗೆ ತಿಳಿಸಲಾಗಿದೆ.

ವಿಶಾಲವಾದ ಎಡಗಣ್ಣು ಹೊಂದಿರುವವರ ಸ್ವಭಾವ

ಕೆಲವರ ಎಡಗಣ್ಣು ನೋಡಲು ವಿಶಾಲವಾಗಿರುತ್ತದೆ. ಅಂತವರು ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸುತ್ತಾರೆ. ಒಳಿತನ್ನೇ ಕೋರುವ ಕಾರಣ ಸ್ನೇಹಿತರ ಸಂಖ್ಯೆ ಹೆಚ್ಚಾಗಿರುತ್ತದೆ. ಇವರಿಗೆ ಸಹಾಯ ಮಾಡಲು ಬಂಧು ಬಳಗದವರು ಮುಂದೆ ಬರುವರು. ಇವರ ಸಹಾಯ ಪಡೆದು ಅನೇಕರು ಜೀವನದಲ್ಲಿ ಉನ್ನತ ಮಟ್ಟ ತಲುಪುತ್ತಾರೆ. ಇವರು ವಿರೋಧಿಗಳನ್ನು ಸಹ ಸ್ನೇಹಿತರಂತೆ ಕಾಣುತ್ತಾರೆ. ಹಣಕಾಸಿನ ವಿಚಾರದಲ್ಲಿ ಧಾರಾಳ ಸ್ವಭಾವ ಇರುತ್ತದೆ. ಕಷ್ಟ ನಷ್ಟಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸುತ್ತಾರೆ. ಕುಟುಂಬದ ಜವಾಬ್ದಾರಿಯನ್ನು ಬೇರೆಯವರಿಗೆ ಒಪ್ಪಿಸುತ್ತಾರೆ.

ಮನಸ್ಸಿಗೆ ಒತ್ತಡ ಉಂಟು ಮಾಡುವ ಕೆಲಸಗಳಿಂದ ದೂರ ಉಳಿಯುತ್ತಾರೆ. ಕುಟುಂಬ ಮತ್ತು ಕುಟುಂಬದ ಆಸ್ತಿಯನ್ನು ಕಾಪಾಡಿಕೊಳ್ಳಲು ಯಾವುದೇ ಪರಿಸ್ಥಿತಿಯನ್ನು ಎದುರಿಸಬಲ್ಲರು. ಗಲಭೆಯ ವೇಳೆ ಮೌನದಿಂದ ವರ್ತಿಸುತ್ತಾರೆ. ಹೆಚ್ಚಿನ ಹಣ ಗಳಿಸುವ ಗುರಿ ಇರುತ್ತದೆ. ಆದರೆ ಸ್ತಿರಾಸ್ಥಿಯನ್ನು ವಿಸ್ತರಿಸುವ ಮನಸ್ಸು ಇರುವುದಿಲ್ಲ. ಇವರಲ್ಲಿ ವಿಶೇಷವಾದ ಸುಪ್ತ ಪ್ರತಿಭೆ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಉನ್ನತ ಹುದ್ದೆ ಮತ್ತು ಗೌರವ ದೊರೆಯುತ್ತದೆ. ಮನೆಮಂದಿಯ ಜೊತೆಯಲ್ಲಿ ಕೂಡು ಕುಟುಂಬದಲ್ಲಿ ಬಾಳುವ ಆಸೆ ಇರುತ್ತದೆ.

ಚಿಕ್ಕ ಕಣ್ಣು ಹೊಂದಿರುವವರ ಗುಣ ಸ್ವಭಾವ

ಕೆಲವರ ಎಡಗಣ್ಣು ಸಾಮಾನ್ಯಕ್ಕಿಂತ ಕಿರಿದಾಗಿರುತ್ತದೆ. ಇವರ ಯೋಚನಾಹರಿಯೇ ವಿಭಿನ್ನವಾಗಿರುತ್ತದೆ. ಜವಾಬ್ದಾರಿಯಿಂದ ದೂರವಾಗಲು ಸದಾ ಪ್ರಯತ್ನಿಸುತ್ತಾರೆ. ಆದರೆ ಯಾವುದೇ ವಿಚಾರಗಳನ್ನೂ ಗಂಭೀರವಾಗಿ ಕಾಣುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಸಹ ತಮಗೆ ಇಷ್ಟ ಬಂದ ಸಮಯದಲ್ಲಿ ಅಧ್ಯಯನದಲ್ಲಿ ತೊಡಗುತ್ತಾರೆ. ಯಾರ ಪ್ರಭಾವಕ್ಕೂ ಮಣಿಯುವುದಿಲ್ಲ. ಯಾರೊಬ್ಬರ ಮನಸ್ಸಿಗೂ ನೋವಾಗದಂತೆ ವರ್ತಿಸುತ್ತಾರೆ. ತಮ್ಮ ಕೆಲಸ ಕಾರ್ಯಗಳನ್ನು ಬೇರೆಯವರಿಗೆ ಒಪ್ಪಿಸುತ್ತಾರೆ. ಸಮಯ ದೊರೆತಲ್ಲಿ ವಿಶ್ರಾಂತಿ ಪಡೆಯುವ ಹಂಬಲದವರು.

ಇವರ ಸ್ನೇಹಿತರ ಬಳಗ ಬಹಳ ಚಿಕ್ಕದು. ಬಂಧು ಬಳಗದವರನ್ನು ಸುಲಭವಾಗಿ ನಂಬುವುದಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಸ್ವಂತ ನೀತಿ ನಿಯಮವನ್ನು ಅನುಸರಿಸುತ್ತಾರೆ. ಪದೇ ಪದೇ ಉದ್ಯೋಗವನ್ನು ಬದಲಿಸುತ್ತಾರೆ. ವೈವಾಹಿಕ ಜೀವನದಲ್ಲಿ ವಾದ ವಿವಾದಗಳು ಸಾಮಾನ್ಯವಾದರೂ ಒಂದು ಮಿತಿಯಲ್ಲಿ ಇರುತ್ತದೆ. ಕಷ್ಟಕರವಾದ ಕೆಲಸದಿಂದ ದೂರ ಉಳಿಯುತ್ತಾರೆ. ಪ್ರೀತಿ ವಿಶ್ವಾಸದಿಂದ ಬಾಳುವಂತೆ ಎಲ್ಲರನ್ನೂ ಪ್ರೇರೇಪಿಸುತ್ತಾರೆ. ಕಿರು ಪ್ರವಾಸದಲ್ಲಿ ಆಸಕ್ತಿ ಮೂಡುತ್ತದೆ. ಆರೋಗ್ಯದ ಬಗ್ಗೆ ಗಮನ ನೀಡುವುದಿಲ್ಲ. ಐಷಾರಾಮಿ ಜೀವನ ಇಷ್ಟಪಡುವುದಿಲ್ಲ. ಗುರು ಹಿರಿಯರ ಬಗ್ಗೆ ಗೌರವ ಇದ್ದರೂ ಅವರ ಸೂಚನೆಯನ್ನು ಪಾಲಿಸುವುದಿಲ್ಲ.

ಎಲೆಯ ಆಕಾರದಲ್ಲಿ ಕಣ್ಣು ಹೊಂದಿರುವವರ ಸ್ವಭಾವ

ಕೆಲವರ ಎಡಗಣ್ಣು ಗಿಡದ ಎಲೆಯ ಆಕಾರದಲ್ಲಿ ಇರುತ್ತದೆ. ಇಂತಹವರು ಕುಟುಂಬದವರ ಬಗ್ಗೆ ಕಾಳಜಿ ತೋರುತ್ತಾರೆ. ಕ್ಲಿಷ್ಠಕರವಾದ ಸನ್ನಿವೇಶದಲ್ಲೂ ಶಾಂತಿ ಸಂಯಮದಿಂದ ವರ್ತಿಸುತ್ತಾರೆ. ಇವರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಬಹಳ ಕಠಿಣ. ಕಠಿಣವಾದ ಮನಸ್ಸು ಇರುವುದರಿಂದ ಯಾವುದೇ ಪರಿಸ್ಥಿತಿಯನ್ನು ಎದುರಿಸಬಲ್ಲರು. ವಿದ್ಯಾರ್ಥಿ ಜೀವನದಲ್ಲಿ ಎಲ್ಲರಿಗೂ ಸ್ಪೂರ್ತಿಯಾಗಿ ಬಾಳುತ್ತಾರೆ. ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಇವರ ತೀರ್ಮಾನಗಳಿಗೆ ಎಲ್ಲರೂ ಬದ್ದರಾಗಬೇಕಾಗುತ್ತದೆ.

ಅನಾವಶ್ಯಕವಾಗಿ ಬೇರೆಯವರ ಹಣಕಾಸಿನ ವಿಚಾರದಲ್ಲಿ ಸಲಹೆ ನೀಡಿ ಸಂದಿಗ್ದಕ್ಕೆ ಒಳಗಾಗುತ್ತಾರೆ. ತಮ್ಮ ತಪ್ಪನ್ನು ಮರೆ ಮಾಚುತ್ತಾರೆ. ಗೆಲ್ಲುವವರೆಗೂ ಆರಂಭಿಸಿದ ಕೆಲಸವನ್ನು ನಿಲ್ಲಿಸುವುದಿಲ್ಲ. ವೈವಾಹಿಕ ಜೀವನದಲ್ಲಿ ಇವರ ಮಾತೇ ಅಂತಿಮವಾಗುತ್ತದೆ. ದಾಂಪತ್ಯದಲ್ಲಿ ಪರಸ್ಪರ ಉತ್ತಮ ಅನುಬಂಧ ಇರುತ್ತದೆ. ರುಚಿಯಾದ ಆಹಾರವನ್ನು ಸೇವಿಸುತ್ತಾರೆ. ದೀಘಕಾಲದ ಪ್ರವಾಸ ಇಷ್ಟಪಡುತ್ತಾರೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಮಕ್ಕಳ ಜೊತೆ ಮಕ್ಕಳ ರೀತಿ ಬಾಳುತ್ತಾರೆ. ಕುಟುಂಬದವರ ಆಸೆ ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನ ಪಡುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.