ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹಣ, ಉದ್ಯೋಗ ಏನುಂಟು ಏನಿಲ್ಲ; ವೃಷಭ ಸೇರಿದಂತೆ ಈ ನಾಲ್ಕೂ ರಾಶಿಯವರಿಗೆ ಚತುರ್ಗ್ರಾಹಿ ಯೋಗ ತರಲಿದೆ ಜಾಕ್‌ಪಾಟ್‌

ಹಣ, ಉದ್ಯೋಗ ಏನುಂಟು ಏನಿಲ್ಲ; ವೃಷಭ ಸೇರಿದಂತೆ ಈ ನಾಲ್ಕೂ ರಾಶಿಯವರಿಗೆ ಚತುರ್ಗ್ರಾಹಿ ಯೋಗ ತರಲಿದೆ ಜಾಕ್‌ಪಾಟ್‌

ಮೇ 31 ರಂದು ಬುಧನ ವೃಷಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಈಗಾಗಲೇ ಗುರು, ಶುಕ್ರ, ಸೂರ್ಯ ಇದೇ ರಾಶಿಯಲ್ಲಿ ಇದ್ದು ಈಗ ಬುಧನೂ ಸೇರುವುದರಿಂದ ಚತುರ್ಗ್ರಾಹಿ ಯೋಗ ರೂಪುಗೊಳ್ಳಲಿದೆ. ಇದರಿಂದ ವೃಷಭ ಸೇರಿದಂತೆ 4 ರಾಶಿಯವರಿಗೆ ಹಿಂದೆಂದೂ ಕಾಣದಂತ ಅದೃಷ್ಟ ಕೂಡಿ ಬರಲಿದೆ.

ಹಣ, ಉದ್ಯೋಗ ಏನುಂಟು ಏನಿಲ್ಲ; ವೃಷಭ ಸೇರಿದಂತೆ ಈ ನಾಲ್ಕೂ ರಾಶಿಯವರಿಗೆ ಚತುರ್ಗ್ರಾಹಿ ಯೋಗ ತರಲಿದೆ ಜಾಕ್‌ಪಾಟ್‌
ಹಣ, ಉದ್ಯೋಗ ಏನುಂಟು ಏನಿಲ್ಲ; ವೃಷಭ ಸೇರಿದಂತೆ ಈ ನಾಲ್ಕೂ ರಾಶಿಯವರಿಗೆ ಚತುರ್ಗ್ರಾಹಿ ಯೋಗ ತರಲಿದೆ ಜಾಕ್‌ಪಾಟ್‌

ವೈದಿಕ ಜ್ಯೋತಿಷ್ಯದಲ್ಲಿ, ಗ್ರಹಗಳ ಅಧಿಪತಿ ಬುಧನು ಬುದ್ಧಿವಂತಿಕೆ, ವಿವೇಚನೆ, ಸಂಪತ್ತು, ಮಾತು, ಸಂತೋಷದ ಪ್ರತೀಕ ಎಂದು ನಂಬಲಾಗಿದೆ. ಬುಧ ಸಂಕ್ರಮಣದಿಂದ ವಿವಿಧ ರಾಶಿಚಕ್ರದ ಜನರಿಗೆ ವಿವಿಧ ಫಲಗಳು ದೊರೆಯಲಿದೆ. ಮೇ ಅಂತ್ಯದಲ್ಲಿ ಬುಧನು ಮತ್ತೊಮ್ಮೆ ತನ್ನ ರಾಶಿಯನ್ನು ಬದಲಿಸುತ್ತಿದ್ದಾನೆ.

ಮೇ 31 ರಂದು, ಬುಧನು ಶುಕ್ರನ ಸ್ವಂತ ರಾಶಿಯಾದ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಜೂನ್ 14ರವರೆಗೆ ಈ ರಾಶಿಯಲ್ಲಿರುತ್ತಾರೆ. ಗ್ರಹಗಳಲ್ಲಿ ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾದರೆ, ಬುಧನು ಅತ್ಯಂತ ವೇಗವಾಗಿ ಸಾಗುವ ಗ್ರಹ. ಬುಧನು ಹೋಗಲಿರುವ ವೃಷಭ ರಾಶಿಯಲ್ಲಿ ಈಗಾಗಲೇ ಗುರು, ಗುರು, ಗ್ರಹಗಳ ರಾಜ ಸೂರ್ಯ ಮತ್ತು ಸಂಪತ್ತು ನೀಡುವ ಶುಕ್ರ ಇದ್ದಾರೆ. ವೃಷಭ ರಾಶಿಯಲ್ಲಿ ಬುಧ ಸಂಕ್ರಮಣದಿಂದ ಅನೇಕ ರಾಜಯೋಗಗಳು ಉಂಟಾಗಲಿವೆ.

ಬುಧಾದಿತ್ಯ ರಾಜಯೋಗವು ಬುಧ ಮತ್ತು ಸೂರ್ಯನ ಜೊತೆಗೂಡಿ ರೂಪುಗೊಳ್ಳಲಿದೆ. ಶುಕ್ರನು ಲಕ್ಷ್ಮೀ ನಾರಾಯಣ ಯೋಗವನ್ನು ಸೃಷ್ಟಿಸುತ್ತಾನೆ. ಅಲ್ಲದೆ, ಶುಕ್ರ ಮತ್ತು ಗುರು ಒಟ್ಟಿಗೆ ಈಗಾಗಲೇ ಗಜಲಕ್ಷ್ಮಿ ರಾಜಯೋಗವನ್ನು ರಚಿಸಿದ್ದಾರೆ. ಅಷ್ಟೇ ಅಲ್ಲ, ಒಂದೇ ರಾಶಿಯಲ್ಲಿ ನಾಲ್ಕು ಗ್ರಹಗಳು ಮನೆ ಮಾಡಿವೆ. ಬುಧ, ಗುರು, ಸೂರ್ಯ ಮತ್ತು ಶುಕ್ರರು ಸೇರಿ ಚತುರ್ಗ್ರಾಹಿ ಯೋಗವನ್ನು ರೂಪಿಸುತ್ತಾರೆ. ಇದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ 14 ದಿನಗಳವರೆಗೆ ಅದ್ಭುತವಾದ ಅನುಕೂಲಗಳನ್ನು ನೀಡುತ್ತದೆ. ಅವರಿಗೆ ಭೌತಿಕ ಸೌಲಭ್ಯಗಳು ಹೆಚ್ಚುತ್ತವೆ. ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ನಿಮ್ಮದಾಗುತ್ತದೆ. ಬುಧ ಸಂಕ್ರಮಣದಿಂದ ಯಾವ ರಾಶಿಯವರು ಯಾವ ರೀತಿ ಪ್ರಗತಿ ಹೊಂದಲಿದ್ದಾರೆ ನೋಡೋಣ.

ವೃಷಭ ರಾಶಿ

ವೃಷಭ ರಾಶಿಗೆ ನಾಲ್ಕು ರಾಜಯೋಗಗಳು ಕೂಡಾ ಬಹಳ ಪ್ರಯೋಜನಾಕಾರಿಯಾಗಿದೆ. ಮೇ 31ರಿಂದ ವೃಷಭ ರಾಶಿಯವರಿಗೆ ಚತುರ್ಗ್ರಾಹಿ ಯೋಗದಿಂದ ಬಹಳ ಅದೃಷ್ಟ ಒಲಿದು ಬರಲಿದೆ. ಇದರಿಂದ ನೀವು ಪ್ರತಿಯೊಂದು ಪ್ರಯತ್ನದಲ್ಲಿ ಯಶಸ್ವಿಯಾಗುತ್ತೀರಿ. ವ್ಯಾಪಾರದಲ್ಲಿ ಲಾಭವಿರುತ್ತದೆ. ಹೊಸ ಆದಾಯ ಮಾರ್ಗಗಳು ಸೃಷ್ಟಿಯಾಗಲಿವೆ. ಸಂಪತ್ತು ಹೆಚ್ಚುತ್ತದೆ. ಉತ್ತಮ ಸಂಬಳದೊಂದಿಗೆ ಹೊಸ ಉದ್ಯೋಗ ದೊರೆಯುತ್ತದೆ. ಸರ್ಕಾರಿ ನೌಕರರಿಗೆ ಬಡ್ತಿ ದೊರೆಯುತ್ತದೆ.

ಕನ್ಯಾರಾಶಿ

ಕನ್ಯಾ ರಾಶಿಯವರಿಗೆ ಬುಧ ಸಂಕ್ರಮಣದಿಂದ ಉಂಟಾಗುವ ಮೂರು ರಾಜಯೋಗಗಳು ಕೂಡಾ ಒಳ್ಳೆ ಫಲವನ್ನು ನೀಡುತ್ತದೆ. ಇದು ಜೀವನದಲ್ಲಿ ಅನೇಕ ಪ್ರಮುಖ ಬದಲಾವಣೆಗಳನ್ನು ತರುತ್ತದೆ. ಆದಾಯದ ಮೂಲಗಳ ನಡುವೆ ಸಮತೋಲ ಸಾಧಿಸಬಹುದು. ಹಣದ ಹರಿವಿನ ಹೊಸ ಮಾರ್ಗಗಳು ನಿಮಗೆ ಸುಗಮವಾಗಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ.

ಧನು ರಾಶಿ

ರಾಜಯೋಗಗಳ ಪ್ರಭಾವದಿಂದ, ಧನು ರಾಶಿ ಹಣಕಾಸಿನ ವಿಷಯಗಳಲ್ಲಿ ಅದೃಷ್ಟಶಾಲಿಯಾಗುತ್ತಾರೆ. ಲಕ್ಷ್ಮಿ ದೇವಿಯ ಅನುಗ್ರಹದಿಂದ ಸಂಪತ್ತು ಮತ್ತು ಧಾನ್ಯ ಸಂಗ್ರಹವಾಗುತ್ತವೆ. ಆದಾಯ ಹೆಚ್ಚಲಿದೆ. ಅವಿವಾಹಿತರಿಗೆ ಮದುವೆ ನಿಶ್ಚಯವಾಗುವ ಸಾಧ್ಯತೆ ಇದೆ. ಶುಭ ಸುದ್ದಿ ಕೇಳಲಿದ್ದೀರಿ. ಕುಟುಂಬ ಸದಸ್ಯರೊಂದಿಗೆ ಪುಣ್ಯ ಕ್ಷೇತ್ರಗಳಿಗೆ ತೆರಳುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ.

ಮಕರ ರಾಶಿ

ಮಕರ ರಾಶಿಯವರು ಬುಧ ಸಂಕ್ರಮಣದಿಂದ ಉತ್ತಮ ಲಾಭವನ್ನು ಪಡೆಯುತ್ತಾರೆ. ಹಣ ಗಳಿಸಲು ನಿಮ್ಮ ಎದುರು ಹಲವು ಸುವರ್ಣಾವಕಾಶಗಳಿವೆ. ಸಂಬಂಧ ಸುಧಾರಿಸುತ್ತದೆ. ಸಂಗಾತಿಯ ಬೆಂಬಲ ದೊರೆಯುತ್ತದೆ. ಉದ್ಯೋಗಿಗಳಿಗೆ ಬಡ್ತಿ ಅಥವಾ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವರು ಉದ್ಯೋಗ ಬದಲಿಸಬಹುದು. ಈ ವೇಳೆ ನಿಮ್ಮ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆ ಇದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)