ಸಾಮಾನ್ಯ ಜ್ಞಾನದಿಂದ ಆಧ್ಯಾತ್ಮಿಕ ಶಕ್ತಿಯವರೆಗೆ; ಮನುಷ್ಯನಲ್ಲಿರುವ 7 ಚಕ್ರಗಳ ಪ್ರಮುಖ ಪಾತ್ರ, ಮಹತ್ವ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಾಮಾನ್ಯ ಜ್ಞಾನದಿಂದ ಆಧ್ಯಾತ್ಮಿಕ ಶಕ್ತಿಯವರೆಗೆ; ಮನುಷ್ಯನಲ್ಲಿರುವ 7 ಚಕ್ರಗಳ ಪ್ರಮುಖ ಪಾತ್ರ, ಮಹತ್ವ ಹೀಗಿದೆ

ಸಾಮಾನ್ಯ ಜ್ಞಾನದಿಂದ ಆಧ್ಯಾತ್ಮಿಕ ಶಕ್ತಿಯವರೆಗೆ; ಮನುಷ್ಯನಲ್ಲಿರುವ 7 ಚಕ್ರಗಳ ಪ್ರಮುಖ ಪಾತ್ರ, ಮಹತ್ವ ಹೀಗಿದೆ

ಮನುಷ್ಯನ ದೇಹದಲ್ಲಿ ಮೂಲಾಧಾರದಿಂದ ಸಹಸ್ರಾರ ವರೆಗೆ 7 ಚಕ್ರಗಳಿರುತ್ತವೆ. ಒಂದೊಂದು ಚಕ್ರಕ್ಕೂ ಒಂದೊಂದು ಮಹತ್ವವಿದೆೆ. ಅದರ ವಿವರ ಇಲ್ಲಿದೆ.

ಮನುಷ್ಯನ ದೇಹದಲ್ಲಿರುವ 7 ಚಕ್ರಗಳ ಮಹತ್ವವನ್ನು ತಿಳಿಯಿರಿ
ಮನುಷ್ಯನ ದೇಹದಲ್ಲಿರುವ 7 ಚಕ್ರಗಳ ಮಹತ್ವವನ್ನು ತಿಳಿಯಿರಿ

ಬೆಂಗಳೂರು: ಹಿಂದೂ ಧರ್ಮದಲ್ಲಿ ಮನುಷ್ಯನ ದೇಹದಲ್ಲಿರುವ ಚಕ್ರಗಳಿಗೆ ತುಂಬಾ ಮಹತ್ವವಿದೆ. ಚಕ್ರ ಆಧಾರಿತ ಚಿಕಿತ್ಸೆಗಳು ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ. ಮನಸ್ಸು ಮತ್ತು ದೇಹವನ್ನ ಚೆನ್ನಾಗಿ ಅರ್ಥಮಾಡಿಕೊಳ್ಳಲು 7 ಚಕ್ರಗಳ ಬಗ್ಗೆ ತಿಳಿಯುವುದು ಬಹಳ ಅವಶ್ಯಕವಾಗಿದೆ. ಮಾನವ ಜೀವನದ ನಿರ್ದಿಷ್ಟ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಅಂಶಗಳನ್ನು ಇವು ಪ್ರತಿನಿಧಿಸುತ್ತವೆ.

7 ಚಕ್ರಗಳು ಯಾವುವು, ದೇಹದಲ್ಲಿ ಎಲ್ಲಿ ಇರುತ್ತವೆ, ಈ ಚಕ್ರಗಳ ವ್ಯವಸ್ಥೆ ಮತ್ತು ಅವುಗಳ ಚಿಹ್ನೆಗಳನ್ನು ಆಧಾರಿಸಿ ಜ್ಞಾನ, ಆರೋಗ್ಯ, ಸ್ಥಿರತೆ, ಸುರಕ್ಷತೆ ಹೀಗೆ ಫಲಗಳನ್ನು ಗುರುತಿಸಲಾಗಿದೆ. ಅದರ ವಿವರಗಳನ್ನು ನೋಡೋಣ.

ಮನುಷ್ಯನ ದೇಹದಲ್ಲಿರುವ 7 ಚಕ್ರಗಳು

  1. ಮೂಲಧಾರ ಅಥವಾ ಅಪಿಪಾಯ ಚಕ್ರ
  2. ಸ್ವಾಧಿಷ್ಥಾನ ಅಥವಾ ತ್ರಿಕಾಸ್ಥಿ ಚಕ್ರ
  3. ಮಣಿಪೂರ ಅಥವಾ ಸೌರ ಹೆಣಿಗೆಯ ಚಕ್ರ
  4. ಅನಾಹತ ಅಥವಾ ಹೃದಯ ಚಕ್ರ
  5. ವಿಶುದ್ಧ ಅಥವಾ ಗಂಟಲ ಚಕ್ರ
  6. ಅಜ್ಞಾ ಅಥವಾ ಭೂ ಚಕ್ರ
  7. ಸಹಸ್ರಾರ ಅಥವಾ ಮುಕುಟ ಚಕ್ರ

1. ಮೂಲಧಾರ ಚಕ್ರ

ಬೆನ್ನು ಮೂಳೆಯ ತಳದಲ್ಲಿರುವ ಮೂಲಧಾರ ಚಕ್ರವೆಂದು ಕರೆಯಲಾಗುತ್ತದೆ. ಏಳು ಚಕ್ರಗಳಲ್ಲಿ ಇದು ಮೊದಲನೆಯದಾಗಿದ್ದು, ಕೆಂಪು ಬಣ್ಣವನ್ನು ಪ್ರತಿನಿಧಿಸುತ್ತದೆ. ಭದ್ರತೆ, ಬದುಕುಳಿಯುವಂತ ಪ್ರವೃತ್ತಿ, ಛಲ, ಸಾಹಸದಂಥ ಅಂಶಗಳನ್ನು ನಿಯಂತ್ರಿಸುತ್ತದೆ. ಸ್ಥಿರತೆ ಮತ್ತು ಸುರಕ್ಷತೆಯನ್ನು ಅರ್ಥವೂ ಇದಾಗಿದೆ.

2. ಸ್ವಾಧಿಷ್ಠಾನ ಚಕ್ರ

ಜನನನಾಂಗದ ಹಿಂಭಾಗದಲ್ಲಿರುವ ಚಕ್ರವನ್ನು ಸ್ವಾಧಿಷ್ಠಾನ ಚಕ್ರ ಎಂದು ಪರಿಗಣಿಸಲಾಗಿದೆ. ಮಾನವನ ದೇಹದಲ್ಲಿರುವ 2ನೇ ಚಕ್ರ ಇದಾಗಿದ್ದು, ಸೃಜನಶೀಲತೆ, ಉತ್ಸಾಹ, ಆಸೆಗಳು ಹಾಗೂ ಪ್ರಣಯದ ವಿಷಯಗಳಿಗೆ ಸಂಬಂಧಿಸಿದ್ದು, ಭಾವನಾತ್ಮಕ ದಮನ ಅಥವಾ ಲೈಂಗಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

3. ಮಣಿಪೂರ ಚಕ್ರ

ಮಣಿಪೂರ ಚಕ್ರವು ಹೊಕ್ಕಳು ಪ್ರದೇಶಕ್ಕಿಂತ ಮೇಲ್ಭಾಗದಲ್ಲಿ ಇರುತ್ತದೆ. ವೈಯಕ್ತಿಕ ಶಕ್ತಿ, ಇಚ್ಛಾಶಕ್ತಿ, ಸ್ವಾಭಿಮಾನದ ಸಂಕೇತವಾಗಿದೆ. ಅಸೂದೆ, ಔದಾರ್ಯ, ಸಂತೋಷ ಮತ್ತು ದುರಾಸೆಯ ಭಾವನೆಗಳನ್ನು ಇದು ಒಳಗೊಂಡಿರುತ್ತದೆ. ಇದು ಹಳದಿ ಬಣ್ಣವನ್ನು ಪ್ರತಿನಿಧಿಸುತ್ತದೆ.

4. ಅನಾಹತ ಚಕ್ರ

ಮನುಷ್ಯ ಎದೆಯ ಮಧ್ಯದಲ್ಲಿರುವ ಚಕ್ರವನ್ನು ಅನಾಹತ ಚಕ್ರ ಅಥವಾ ಹೃದಯ ಚಕ್ರವೆಂದು ಕರೆಯಾಗುತ್ತದೆ. ಸಹಾನುಭೂತಿ, ಭಾವನಾತ್ಮಕವಾಗಿ ಗುಣಪಡಿಸುವಿಕೆಯನ್ನು ಇದು ಪ್ರತಿನಿಧಿಸುತ್ತದೆ. ಸ್ವಯಂ ಪ್ರೀತಿಯನ್ನು ಉತ್ತೇಜಿಸುತ್ತದೆ. ಹಸಿರು ಬಣ್ಣವನ್ನು ಪ್ರತಿನಿಧಿಸುತ್ತದೆ.

5. ವಿಶುದ್ಧ ಚಕ್ರ

ಗಂಟಲಿನ ಭಾಗದಲ್ಲಿರುವ ಚಕ್ರವನ್ನು ವಿಶುದ್ಧ ಅಥವಾ ಗಂಟಲ ಚಕ್ರವೆಂದು ಕರೆಯಲಾಗುತ್ತದೆ. ಇದು ಸಂಹವನ, ಸತ್ಯದ ಧ್ವನಿಯಾಗಿದೆ. ಸ್ಪಷ್ಟ, ಪ್ರಾಮಾಣಿಕ ಸಂವಹನ ಮತ್ತು ಸಮಗ್ರತೆಯೊಂದಿಗೆ ತನ್ನನ್ನು ತಾನು ವ್ಯಕ್ತಪಡಿಸುವ ಸಾಮರ್ಥ್ಯವನ್ನು ಈ ಚಕ್ರ ಹೊಂದಿದೆ.

6. ಅಜ್ಞಾ ಚಕ್ರ

ಅಜ್ಞಾ ಅಥವಾ ಮೂರನೇ ಕಣ್ಣಿನ ಚಕ್ರ ಮನುಷ್ಯನ ಹಣೆಯಲ್ಲಿರುತ್ತದೆ. ಗ್ರಹಿಕೆ, ಆಧ್ಯಾತ್ಮಿಕತೆ, ಜ್ಞಾನ ಹಾಗೂ ಅರಿವಿನ ಸಂಕೇತವಾಗಿದೆ. ಅತೀಂದ್ರಿಯ ಎನ್ನುವುದು ವ್ಯಕ್ತಿಗೆ ಇರುವ ಮೂರನೇ ಕಣ್ಣು ಎಂದು ಹೇಳಲಾಗಿದೆ.

7. ಸಹಸ್ರಾರ ಚಕ್ರ

ಸಹಸ್ರಾರ ಚಕ್ರವನ್ನು ಮುಕುಟ ಚಕ್ರ ಅಂತಲೂ ಕರೆಯಲಾಗುತ್ತದೆ. ಇದು ತಲೆಯ ಮೇಲ್ಭಾಗದಲ್ಲಿ ಇರುತ್ತದೆ. ಯಾವ ವ್ಯಕ್ತಿ ಸಹಸ್ರಾರ ಚಕ್ರದ ಪ್ರಭಾವಕ್ಕೆ ಒಳಗಾಗಿರುತ್ತಾನೋ ಅವನು ಹೆಚ್ಚಾಗಿ ಆನಂದವನ್ನು ಅನುಭವಿಸುತ್ತಾನೆ. ಆಧ್ಯಾತ್ಮಿಕ ಸಂಪರ್ಕ, ಜ್ಞಾನೋದಯದ ಸಂಕೇತವೇ ಮುಕುಟ ಚಕ್ರ. ಇದು ನೇರಳ ಅಥವಾ ಬಿಳಿ ಬಣ್ಣವನ್ನು ಪ್ರತಿನಿಧಿಸುತ್ತದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.