ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಇಂದು ನಿಮ್ಮ ದಿನ ಹೇಗಿರಲಿದೆ? ಯಾವ ರಾಡಿಕ್ಸ್‌ ಸಂಖ್ಯೆವರಿಗೆ ಏನು ಫಲ ದೊರೆಯಲಿದೆ?

ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಇಂದು ನಿಮ್ಮ ದಿನ ಹೇಗಿರಲಿದೆ? ಯಾವ ರಾಡಿಕ್ಸ್‌ ಸಂಖ್ಯೆವರಿಗೆ ಏನು ಫಲ ದೊರೆಯಲಿದೆ?

ಜ್ಯೋತಿಷ್ಯದಂತೆಯೇ, ಸಂಖ್ಯಾಶಾಸ್ತ್ರವು ಸಹ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಪ್ರತಿ ಹೆಸರಿನ ಪ್ರಕಾರ ರಾಶಿಚಕ್ರ ಚಿಹ್ನೆ ಇರುವಂತೆಯೇ, ಸಂಖ್ಯಾಶಾಸ್ತ್ರದಲ್ಲಿ ಪ್ರತಿ ಸಂಖ್ಯೆಗೆ ಅನುಗುಣವಾಗಿ ಸಂಖ್ಯೆಗಳಿವೆ. ಸಂಖ್ಯಾಶಾಸ್ತ್ರದ ಪ್ರಕಾರ ಯಾವ ರಾಡಿಕ್ಸ್‌ ನಂಬರ್‌ನವರಿಗೆ ಇಂದು ದಿನ ಹೇಗಿರಲಿದೆ ನೋಡೋಣ.

ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಇಂದು ನಿಮ್ಮ ದಿನ ಹೇಗಿರಲಿದೆ? ಯಾವ ರಾಡಿಕ್ಸ್‌ ಸಂಖ್ಯೆವರಿಗೆ ಏನು ಫಲ ದೊರೆಯಲಿದೆ?
ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಇಂದು ನಿಮ್ಮ ದಿನ ಹೇಗಿರಲಿದೆ? ಯಾವ ರಾಡಿಕ್ಸ್‌ ಸಂಖ್ಯೆವರಿಗೆ ಏನು ಫಲ ದೊರೆಯಲಿದೆ?

ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ರಾಡಿಕ್ಸ್‌ ಸಂಖ್ಯೆಯನ್ನು ಕಂಡುಹಿಡಿಯಲು, ನಿಮ್ಮ ಜನ್ಮ ದಿನಾಂಕವನ್ನು ಕೂಡಬಹುದು. ಉದಾಹರಣೆಗೆ ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು ರಾಡಿಕ್ಸ್ ಸಂಖ್ಯೆ 7 ಅನ್ನು ಹೊಂದಿರುತ್ತಾರೆ. ಇಂದು (ಜೂನ್ 22) ನಿಮ್ಮ ದಿನ ಹೇಗಿದೆ ನೋಡಿ.

ರಾಡಿಕ್ಸ್ 1: ಮೊದಲಿಗಿಂತ ನಿಮ್ಮ ಪರಿಸ್ಥಿತಿ ಸುಧಾರಿಸುತ್ತಿದೆ. ನೀವು ಮೊದಲಿಗಿಂತ ಸ್ವಲ್ಪ ಹೆಚ್ಚು ಧನಾತ್ಮಕವಾಗಿರುತ್ತೀರಿ. ಇನ್ನಷ್ಟು ಸಕಾರಾತ್ಮಕ ಬದಲಾವಣೆಗಳನ್ನು ಆನಂದಿಸಲಿದ್ದೀರಿ.

ರಾಡಿಕ್ಸ್ 2: ಈ ಸಂಖ್ಯೆಯವರಿಗೆ ಇಂದು ಒಳ್ಳೆ ದಿನವಾಗಿದೆ. ಭವಿಷ್ಯದ ಬಗ್ಗೆ ಹೆಚ್ಚಿನ ಯೋಚನೆ ಬೇಡ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ಆತ್ಮವಿಶ್ವಾಸ ಬಹಳ ಮುಖ್ಯ. ನಿಮ್ಮ ಕನಸುಗಳು, ಆಲೋಚನೆಗಳ ಕಡೆ ಗಮನ ಕೊಡಿ, ಏಕೆಂದರೆ ಅವು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ.

ರಾಡಿಕ್ಸ್ 3: ಈ ಜನರು ತಮ್ಮ ಕೋಪವನ್ನು ನಿಯಂತ್ರಿಸಬೇಕು. ನಿಮ್ಮ ಕೆಲಸದ ಮೇಲೆ ಗಮನವಿರಲಿ. ಶೀಘ್ರದಲ್ಲೇ ವಿಷಯಗಳು ಒಂದು ಹಂತಕ್ಕೆ ಬರಲಿದೆ.

ರಾಡಿಕ್ಸ್ 4: ಇಂದು ಅತಿಥಿಯೊಬ್ಬರು ನಿಮಗೆ ತಿಳಿಸದೆಯೇ ಮನೆಗೆ ಬಂದು ಕೆಲವು ದಿನಗಳವರೆಗೆ ನಿಮ್ಮೊಂದಿಗೆ ಇರುವ ಸಾಧ್ಯತೆ ಇದೆ. ನಿಮಗೆ ಒಳ್ಳೆಯ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಮೊದಲೇ ಆಯೋಜಿಸಿದ್ದ ಪ್ರವಾಸವನ್ನು ಮುಂದೂಡುವ ಸಾಧ್ಯತೆಯಿದೆ.

ರಾಡಿಕ್ಸ್ 5: ಖರ್ಚು ವೆಚ್ಚದ ಮೇಲೆ ಗಮನ ಇರಲಿ. ಆರ್ಥಿಕ ಸಮಸ್ಯೆಯಿಂದಾಗಿ ನೀವು ಕೆಲವು ಪ್ರಮುಖ ಕಾರ್ಯಗಳನ್ನು ಮುಂದೂಡಬೇಕಾಗಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಪ್ರಯಾಣದಿಂದ ಆಯಾಸವಾಗುತ್ತದೆ. ಇಂದು ಯಾವುದೇ ಆಸ್ತಿ ವ್ಯವಹಾರದಲ್ಲಿ ಭಾಗಿಯಾಗಬೇಡಿ.

ರಾಡಿಕ್ಸ್ 6: ಕುಟುಂಬದ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ. ಸ್ನೇಹಿತರು ಅಥವಾ ಕುಟುಂಬದೊಂದಿಗೆ ಸಂತೋಷದದಿಂದ ಕಾಲ ಕಳೆಯಲಿದ್ದೀರಿ. ಯಾವುದೇ ವಿಚಾರವಾಗಲೀ ಬಹಳ ಯೋಚಿಸಿ ನಿರ್ಧಾರ ಕೈಗೊಳ್ಳಿ.

ರಾಡಿಕ್ಸ್ 7: ವಿದೇಶದಲ್ಲಿ ಕೆಲಸ ಬಯಸುವವರು ಒಳ್ಳೆಯ ಸುದ್ದಿಯನ್ನು ಕೇಳಬಹುದು. ಕೆಲಸದ ಸ್ಥಳದಲ್ಲಿ ನೀವು ಕೆಲವು ಸಮಸ್ಯೆಗೆ ಒಳಗಾಗಬಹುದು. ಆದರೂ ಅದನ್ನು ನಿಭಾಯಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ನಿಮ್ಮಿಂದ ದೂರದಲ್ಲಿರುವ ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗಲು ನೀವು ಹಂಬಲಿಸುವಿರಿ. ಉತ್ತಮ ಆರೋಗ್ಯ ನಿಮ್ಮದಾಗಲಿದೆ.

ರಾಡಿಕ್ಸ್ 8: ಆರೋಗ್ಯದ ಕಡೆ ಗಮನ ಇರಲಿ, ನಿಮ್ಮ ಹೆಲ್ತ್‌ ಬಗ್ಗೆ ಇತರರು ನೀಡುವ ಸಲಹೆಯನ್ನು ಪರಿಗಣಿಸಿ. ಈ ರಾಡಿಕ್ಸ್‌ ನಂಬರ್‌ನ ಕೆಲವರು ತಮ್ಮ ಪ್ರೀತಿಪಾತ್ರರನ್ನು ಭೇಟಿ ಮಾಡಲು ವಿದೇಶಕ್ಕೆ ಪ್ರಯಾಣಿಸಬಹುದು. ಆಸ್ತಿ ಮೇಲೆ ಮಾಡು ಹೂಡಿಕೆ ಉತ್ತಮ ಲಾಭವನ್ನು ನೀಡುತ್ತದೆ.

ಸಂಖ್ಯೆ 9: ವಿಶೇಷ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಾಧ್ಯತೆಯಿದೆ. ಕುಟುಂಬದೊಂದಿಗೆ ಹೊರ ಹೋಗಿ ಸಂತೋಷದಿಂದ ಕಾಲ ಕಳೆಯಲಿದ್ದೀರಿ. ವಿವಿಧ ಮೂಲಗಳಿಂದ ಆದಾಯ ಬರಲಿದೆ. ಕುಟುಂಬದ ಬೆಂಬಲ ದೊರೆಯಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.