ಈ 4 ವಸ್ತುಗಳನ್ನು ಬೇರೆಯವರಿಂದ ಉಚಿತವಾಗಿ ತೆಗೆದುಕೊಳ್ಳಬೇಡಿ; ಅನಾರೋಗ್ಯ, ಆರ್ಥಿಕ ಸಮಸ್ಯೆಗೆ ಕಾರಣವಾಗಬಹುದು
Astrology Tips: ಜ್ಯೋತಿಷ್ಯದ ಪ್ರಕಾರ, ಈ ವಸ್ತುಗಳನ್ನು ನೀವು ಬೇರೆಯವರಿಂದ ಉಚಿತವಾಗಿ ಪಡೆದರೆ ತೊಂದರೆಗಳನ್ನು ಖರೀದಿಸಿದಂತಾಗುತ್ತದೆ. ಅನಾರೋಗ್ಯ, ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಕೆಲವೊಮ್ಮೆ ನಮಗೆ ಅಗತ್ಯವಿದ್ದಾಗ, ಇತರರಿಂದ ಏನನ್ನಾದರೂ ಎರವಲು ಪಡೆಯುತ್ತೇವೆ ಅಥವಾ ನಮಗೆ ತಿಳಿದಿರುವ ಯಾರನ್ನಾದರೂ ಕೇಳುತ್ತೇವೆ. ಆದರೆ ಯಾವುದೇ ಸಂದರ್ಭದಲ್ಲೂ ನಾವು ಕೆಲವು ವಸ್ತುಗಳನ್ನು ಉಚಿತವಾಗಿ ಪಡೆಯಬಾರದು. ಅಂತಹ ವಸ್ತುಗಳನ್ನು ಮನೆಗೆ ತರುವುದು ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. ಗ್ರಹಗಳು ಮತ್ತು ಜ್ಯೋತಿಷ್ಯದಂತೆ, ವಾಸ್ತು ಕೂಡ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ತರಲು ಸಹಾಯ ಮಾಡುತ್ತದೆ.
ನಾವು ಮಾಡುವ ಕೆಲಸದಲ್ಲಿ ಯಾವುದು ತಪ್ಪು ಮತ್ತು ಯಾವುದು ಸರಿ ಎಂದು ವಾಸ್ತು ಹೇಳುತ್ತದೆ. ಕೆಲವು ತಪ್ಪುಗಳನ್ನು ಮಾಡುವುದು ತೊಂದರೆಗಳಿಗೆ ಕಾರಣವಾಗಬಹುದು. ಅನೇಕ ಜನರು ಕೆಲವೊಂದು ಸಂದರ್ಭಗಳಲ್ಲಿ ಇತರರಿಂದ ಕೆಲವು ವಸ್ತುಗಳನ್ನು ಉಚಿತವಾಗಿ ಪಡೆಯುತ್ತಾರೆ. ಕೆಲವು ವಸ್ತುಗಳನ್ನು ಇತರರಿಂದ ಉಚಿತವಾಗಿ ತೆಗೆದುಕೊಳ್ಳಬಾರದು ಎಂದು ಜ್ಯೋತಿಷ್ಯ ಹೇಳುತ್ತದೆ. ನೀವು ಅವುಗಳನ್ನು ಇತರರಿಂದ ಉಚಿತವಾಗಿ ಖರೀದಿಸಿದರೆ, ತೊಂದರೆಗಳನ್ನು ಉಚಿತವಾಗಿ ಖರೀದಿಸಿದ್ದಂತಾಗುತ್ತದೆ. ಇದರಿಂದ ಆರ್ಥಿಕ ನಷ್ಟ, ಅನಾರೋಗ್ಯ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ.
1. ಉಪ್ಪು: ಎಂದಿಗೂ ಉಚಿತವಾಗಿ ಉಪ್ಪು ತರಬಾರದು. ಬೇರೆಯವರಿಂದ ಉಪ್ಪನ್ನು ಪಡೆಯಲು ಬಯಸಿದರೆ, ಅದರ ಬದಲು ಅವರಿಗೆ ಏನನ್ನಾದರೂ ಕೊಡಿ. ಏಕೆಂದರೆ ಉಪ್ಪು ಶನಿ ದೇವ ಮತ್ತು ಸೂರ್ಯನಿಗೆ ಸೇರಿದೆ, ಆದ್ದರಿಂದ ನೀವು ಉಪ್ಪನ್ನು ಉಚಿತವಾಗಿ ತಂದರೆ ಬಡತನವನ್ನು ಎದುರಿಸಬೇಕಾಗುತ್ತದೆ ಮತ್ತು ಸಾಲದ ಸುಳಿಗೆ ಸಿಲುಕುವ ಸಾಧ್ಯತೆಗಳು ಹೆಚ್ಚಿರುತ್ತವೆ.
2. ಖರ್ಚೀಫ್: ವಾಸ್ತು ಪ್ರಕಾರ, ಕರವಸ್ತ್ರವನ್ನು (ಖರ್ಚೀಫ್) ಸಹ ಯಾರಿಂದಲೂ ಉಚಿತವಾಗಿ ಖರೀದಿಸಬಾರದು. ಯಾರಿಗೂ ಉಡುಗೊರೆಯಾಗಿ ನೀಡಬಾರದು ಅಥವಾ ಇತರರ ಪಾಕೆಟ್ ಕರವಸ್ತ್ರವನ್ನು ಬಳಸಬಾರದು. ಇದು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
3. ಸೂಜಿ: ವಾಸ್ತು ಶಾಸ್ತ್ರದ ಪ್ರಕಾರ, ಬೇರೆಯರಿಂದ ಸೂಜಿಯನ್ನು ಉಚಿತವಾಗಿ ಪಡೆಯುವುದು ಸೂಕ್ತವಲ್ಲ. ಸೂಜಿಗಳು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಬಹುದು, ಬಂಧಗಳನ್ನು ಹಾನಿಗೊಳಿಸಬಹುದು ಹಾಗೂ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು.
4. ಶೂ ಮತ್ತು ಚಪ್ಪಲಿಗಳು: ಶೂ ಮತ್ತು ಚಪ್ಪಲಿಯನ್ನು ಬೇರೆಯವರಿಂದ ಉಚಿತವಾಗಿ ಪಡೆಯಬಾರದು. ಒಂದು ವೇಳೆ ಉಚಿತವಾಗಿ ಪಡೆದರೆ ತೊಂದರೆಗಳು ಇರುತ್ತವೆ. ನೀವು ಇತರರ ಶೂ ಮತ್ತು ಚಪ್ಪಲಿಗಳನ್ನು ಬಳಸಿದರೆ ಕೆಲಸದಲ್ಲಿ ಅಡೆತಡೆಗಳು, ಬಡತನ ಮತ್ತು ಒತ್ತಡದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
