ಕನ್ನಡ ಸುದ್ದಿ  /  Astrology  /  Horoscope Double Gajakesari Yoga These Zodiac Signs Get Benefits After Holi 2024 Astrology Mgb

ಡಬಲ್​ ಗಜಕೇಸರಿ ಯೋಗ; ಈ ಮೂರು ರಾಶಿಯವರಿಗೆ ಲಾಭವೋ ಲಾಭ

Double Gajakesari Yoga: ಹೋಳಿ ಹಬ್ಬದ ಬಳಿಕ ತುಲಾ ರಾಶಿಯಲ್ಲಿ ದ್ವಿಗುಣ ಗಜಕೇಸರಿ ಯೋಗ ರೂಪುಗೊಳ್ಳಲಿದ್ದು, ಇದರಿಂದ ಮೂರು ರಾಶಿಯವರು ಪ್ರಯೋಜನ ಪಡೆಯಲಿದ್ದಾರೆ.

ಗಜಕೇಸರಿ ಯೋಗ (ಪ್ರಾತಿನಿಧಿಕ ಚಿತ್ರ)
ಗಜಕೇಸರಿ ಯೋಗ (ಪ್ರಾತಿನಿಧಿಕ ಚಿತ್ರ)

ಗಜಕೇಸರಿ ಯೋಗವು ಅಪಾರ ಶಕ್ತಿ, ಜ್ಞಾನ, ಖ್ಯಾತಿ ಮತ್ತು ಸಂಪತ್ತನ್ನು ನೀಡುತ್ತದೆ. ಜಾತಕದಲ್ಲಿ ದ್ವಿಗುಣ ಗಜಕೇಸರಿ ಯೋಗ ಬಹಳ ಮುಖ್ಯ. ಇದು ಆರ್ಥಿಕ ಸಮೃದ್ಧಿ, ಉನ್ನತ ಶಿಕ್ಷಣ ಮತ್ತು ನಾಯಕತ್ವದ ಗುಣಗಳನ್ನು ಸುಧಾರಿಸುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುವಂತೆ ಮಾಡುತ್ತದೆ. ಹೋಳಿ ನಂತರ ತುಲಾ ರಾಶಿಯಲ್ಲಿ ದ್ವಿಗುಣ ಗಜಕೇಸರಿ ಯೋಗ ರೂಪುಗೊಳ್ಳಲಿದೆ.

ಏನಿದು ಡಬಲ್ ಗಜಕೇಸರಿ ಯೋಗ?

ವೈದಿಕ ಜ್ಯೋತಿಷ್ಯದ ಪ್ರಕಾರ, ಜನ್ಮ ಕುಂಡಲಿಯಲ್ಲಿ ಚಂದ್ರ ಮತ್ತು ಗುರುಗಳ ಸ್ಥಾನವನ್ನು ಅವಲಂಬಿಸಿ ಗಜಕೇಸರಿ ಯೋಗವನ್ನು ನಿಶ್ಚಯ ಮಾಡಬೇಕಾಗುತ್ತದೆ. ಚಂದ್ರನಿಂದ ಗುರುವು ಪ್ರಥಮ, ಚತುರ್ಥ, ಸಪ್ತಮ ಅಥವಾ ದಶಮ ಭಾವಗಳಲ್ಲಿ ಇದ್ದಲ್ಲಿ ಅದನ್ನು ಗಜಕೇಸರಿ ಯೋಗ ಎಂದು ಕರೆಯುತ್ತೇವೆ. ಚಂದ್ರನೊಂದಿಗೆ ಒಂದು ರಾಶಿಯಲ್ಲಿ ಎರಡು ಗ್ರಹಗಳು ಸಂಧಿಸಿದಾಗ ಡಬಲ್​ ಗಜಕೇಸರಿ ಯೋಗ ಉಂಟಾಗುತ್ತದೆ.

ಹೋಳಿ ಹುಣ್ಣಿಮೆ ಅಂದರೆ ಮಾರ್ಚ್​ 25 ರಂದು ಚಂದ್ರನು ಕೇತುವಿನೊಡನೆ ಕನ್ಯಾರಾಶಿಯಲ್ಲಿರುತ್ತಾನೆ. ಹೋಳಿ ನಂತರ ಮಾರ್ಚ್ 27 ರಂದು ಚಂದ್ರನು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ತುಲಾ ರಾಶಿಯಲ್ಲಿ ಬುಧ ಮತ್ತು ಗುರು ನಾಲ್ಕನೇ ಮನೆಯಲ್ಲಿ ಸಾಗಲಿದ್ದು, ಆ ಸಮಯದಲ್ಲಿ ಚಂದ್ರನೂ ಅವರನ್ನು ಭೇಟಿಯಾಗುತ್ತಾನೆ. ಇದರ ಫಲವೇ ದ್ವಿಗುಣ ಗಜಕೇಸರಿ ಯೋಗ. ಈ ಯೋಗವು ಕೆಲವು ರಾಶಿಗಳಿಗೆ ಅತ್ಯುತ್ತಮ ಫಲಿತಾಂಶಗಳನ್ನು ಮತ್ತು ಡಬಲ್ ಲಾಭವನ್ನು ನೀಡಲಿದೆ.

ವೃಷಭ ರಾಶಿ: ಈ ರಾಶಿಯ ಹನ್ನೆರಡನೇ ಮನೆಯಲ್ಲಿ ಚಂದ್ರ ಸಂಚರಿಸುತ್ತಾನೆ. ಈ ಸಂದರ್ಭಗಳಲ್ಲಿ ನೀವು ಹೂಡಿಕೆ ಮಾಡಿದರೆ ಅದರಿಂದ ನೀವು ಲಾಭವನ್ನು ಪಡೆಯುತ್ತೀರಿ. ನಿಮ್ಮ ಪ್ರೇಮ ಜೀವನ ಅದ್ಭುತವಾಗಿರುತ್ತದೆ. ಪ್ರೇಮ ವಿವಾಹವಾಗುವ ಸಂಭವವಿದೆ. ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ.

ತುಲಾ ರಾಶಿ: ತುಲಾ ರಾಶಿಯಲ್ಲಿಯೇ ಚಂದ್ರ, ಗುರು ಮತ್ತು ಬುಧ ಸಂಯೋಗವಾಗಲಿದೆ. ಇದರಿಂದ ನಿಮಗೆ ಆರ್ಥಿಕ ಲಾಭವಿದೆ. ಈ ಸಮಯದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಬಹಳ ಕಾಲ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಶಿವನ ಕೃಪೆಯಿಂದ ಯಶಸ್ಸು ಸಿಗುತ್ತದೆ. ಉನ್ನತ ಶಿಕ್ಷಣವನ್ನು ಮುಂದುವರಿಸಲು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಇದು ಉತ್ತಮ ಸಮಯ. ವಿವಾಹವಾಗುವ ಸಾಧ್ಯತೆಗಳಿವೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಪತಿ-ಪತ್ನಿಯರ ನಡುವಿನ ಸಮಸ್ಯೆಗಳು ಬಗೆಹರಿಯಲಿವೆ.

ಮಕರ ರಾಶಿ: ಡಬಲ್ ಗಜಕೇಸರಿ ಯೋಗವು ಮಕರ ರಾಶಿಯವರಿಗೆ ಹಠಾತ್ ಮತ್ತು ಅನಿರೀಕ್ಷಿತ ಆರ್ಥಿಕ ಲಾಭವನ್ನು ತರುವ ಸಾಧ್ಯತೆಯಿದೆ. ವ್ಯಾಪಾರ, ಉದ್ಯೋಗದಲ್ಲಿ ಹೆಚ್ಚಿನ ಲಾಭವಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಈ ಸಮಯವು ಅನುಕೂಲಕರವಾಗಿದೆ. ಸಂಗಾತಿಯೊಂದಿಗಿನ ಸಮಸ್ಯೆಗಳು ದೂರವಾಗುತ್ತವೆ. ಆದಾಯದ ಹೊಸ ಮಾರ್ಗಗಳು ಹೊರಹೊಮ್ಮುತ್ತವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.