ಜೂನ್ 6 ಅಮಾವಾಸ್ಯೆಯಂದು ರೂಪುಗೊಳ್ಳಲಿದೆ ಪಂಚಗ್ರಹ ಕೂಟ; 7 ರಾಶಿಯವರಿಗೆ ಶುಭ ಫಲ, ಉಳಿದವರಿಗೆ ಕಷ್ಟ ಕಾಲ
ಜೂನ್ 6, ಗುರುವಾರ ಜ್ಯೇಷ್ಠ ಅಮಾವಾಸ್ಯೆ ಇದ್ದು ಪಂಚಗ್ರಹ ಕೂಟ ರೂಪುಗೊಳ್ಳಲಿದೆ. ಈ ಗ್ರಹಗಳ ಸಂಕ್ರಮಣದಿಂದ ಕೆಲವೊಂದು ರಾಶಿಯವರಿಗೆ ಶುಭ ಫಲಗಳು ದೊರೆತರೆ ಕೆಲವರ ಜೀವನದಲ್ಲಿ ಶತ್ರು ಕಾಟ, ಅನಾರೋಗ್ಯ ಕಾಡಲಿದೆ. ಯಾವ ರಾಶಿಯವರಿಗೆ ಏನು ಲಾಭ ನೋಡೋಣ.
ಪಂಚಗ್ರಹ ಕೂಟಮಿ 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ಗ್ರಹವು ಯಾವುದೇ ರಾಶಿಯಲ್ಲಿ ಮತ್ತೊಂದು ಗ್ರಹವನ್ನು ಸೇರಿಕೊಂಡರೆ, ಆ ಗ್ರಹದ ಸಂಯೋಜನೆಯು ಕೆಲವು ವಿಶೇಷ ಫಲಿತಾಂಶಗಳನ್ನು ನೀಡುತ್ತದೆ. ಪಂಚಾಂಗಕರ್ತ, ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಮಾತನಾಡಿ, ಈ ಗ್ರಹಗಳ ಸಂಕ್ರಮಣವು ಯಾವ ರೀತಿಯ ಫಲಗಳನ್ನು ನೀಡಲಿದೆ ಎಂದು ವಿವರಿಸಿದ್ದಾರೆ.
ಒಂದೇ ರಾಶಿಯಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಗ್ರಹಗಳಿದ್ದರೆ ಅವುಗಳನ್ನು ವಿಶೇಷ ಎಂದು ಹೇಳಲಾಗುತ್ತದೆ. ಒಂದೇ ರಾಶಿಯಲ್ಲಿ 5 ಗ್ರಹಗಳಿದ್ದರೆ ಅದು ಪಂಚಗ್ರಹ ಕೂಟಮಿ ಎನ್ನಲಾಗುತ್ತದೆ. ಒಂದೇ ರಾಶಿಯಲ್ಲಿ ಐದು ಗ್ರಹಗಳು ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ಸಂಭವಿಸುತ್ತದೆ. ಈ ರೀತಿಯ ಗ್ರಹಗಳ ಸಂಯೋಜನೆಯಿಂದ ಕೆಲವು ರಾಶಿಯವರಿಗೆ ಶುಭ, ಕೆಲವರಿಗೆ ಅಶುಭ ಫಲಗಳನ್ನು ನೀಡುತ್ತದೆ.
ಜೂನ್ 6, ಅಮಾವಾಸ್ಯೆಯಂದು ರೂಪುಗೊಳ್ಳಲಿದೆ ಪಂಚಗ್ರಹ ಕೂಟ
ಜೂನ್ 6 ವೈಶಾಖ ಮಾಸದ ಅಮವಾಸ್ಯೆಯಂದು ಚಂದ್ರನು ರೋಹಿಣಿ ನಕ್ಷತ್ರದಲ್ಲಿ ಇರುತ್ತಾನೆ. ಅಲ್ಲದೆ ರವಿ ಚಂದ್ರರು ವೃಷಭ ರಾಶಿಯಲ್ಲಿ ಕೂಡಿರುತ್ತಾರೆ. ಶುಭ ಗ್ರಹಗಳಾದ ಬುಧ, ಗುರು , ಶುಕ್ರ, ಸೂರ್ಯ ಮತ್ತು ಚಂದ್ರರು ಪಂಚಗ್ರಹ ರಾಶಿಯನ್ನು ರಚಿಸುವುದು ಬಹಳ ವಿಶೇಷವಾಗಿದೆ.
ಈ ಮೈತ್ರಿಯು ವೃಷಭ ರಾಶಿಯಲ್ಲಿ ರೂಪುಗೊಳ್ಳುತ್ತದೆ . ಇದರ ಪರಿಣಾಮ ವೃಷಭ, ಕರ್ಕಾಟಕ, ಸಿಂಹ, ಕನ್ಯಾ, ವೃಶ್ಚಿಕ, ಮಕರ, ಮೇಷ ರಾಶಿಯವರಿಗೆ ಉತ್ತಮ ಫಲ ದೊರೆಯಲಿದೆ. ಈ ಪಂಚಗ್ರಹ ಕೂಟದ ದಿನದಂದು ಶುಭ ಮುಹೂರ್ತದಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಿದರೆ ಆ ಕಾರ್ಯವು ವಿಶೇಷ ಫಲಿತಾಂಶವನ್ನು ನೀಡುತ್ತದೆ.
ಪಂಚಗ್ರಹ ಕೂಟದಿಂದ ಯಾವ ರಾಶಿಯವರಿಗೆ ಏನು ಫಲ?
ಮೇಷ: ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಧನ ಯೋಗ , ಕೌಟುಂಬಿಕ ಸೌಕರ್ಯ ಮತ್ತು ಸಂತೋಷ ಹೆಚ್ಚಾಗುತ್ತದೆ.
ವೃಷಭ ರಾಶಿ : ಈ ಯೋಗದಿಂದ ಜನ್ಮ ರಾಶಿಯಲ್ಲಿ ಬಹಳ ಸಂತೋಷ ತರುತ್ತದೆ ಜೊತೆಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ.
ಮಿಥುನ : ಈ ಮೈತ್ರಿಯ ಪ್ರಭಾವದಿಂದ ಖರ್ಚು ಹೆಚ್ಚಾಗುತ್ತದೆ.
ಕರ್ಕಾಟಕ ರಾಶಿ: ಪಂಚಗ್ರಹ ಮೈತ್ರಿಯು ಧನಲಾಭ ಮತ್ತು ಉದ್ಯೋಗ ಅಭಿವೃದ್ಧಿಯನ್ನು ತರುತ್ತದೆ.
ಸಿಂಹ ರಾಶಿ: ಈ ರಾಶಿಯವರ ಉದ್ಯೋಗದಲ್ಲಿ ಅಭಿವೃದ್ಧಿಯಾಗುತ್ತದೆ, ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ.
ಕನ್ಯಾ: ಧನಲಾಭವಿದೆ, ವ್ಯಾಪಾರ ಅಭಿವೃದ್ಧಿಯಾಗಲಿದೆ, ಜೀವನದಲ್ಲಿ ನೆಮ್ಮದಿ ಇರುತ್ತದೆ.
ತುಲಾ: ಅಷ್ಟಮದಲ್ಲಿ ಪಂಚಗ್ರಹ ಕೂಟಮಿ ರಚನೆಯಿಂದ ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ, ಆರೋಗ್ಯ ಸಮಸ್ಯೆ ಉಲ್ಬಣಿಸುತ್ತದೆ.
ವೃಶ್ಚಿಕ: ಕೌಟುಂಬಿಕ ನೆಮ್ಮದಿ ದೊರೆಯಲಿದೆ.
ಧನು: ಶತ್ರು ಬಾಧೆ ಬಹಳ ಇದೆ, ಪ್ರತಿ ಹೆಜ್ಜೆಯಲ್ಲೂ ನೀವು ಬಹಳ ಎಚ್ಚರಿಕೆಯಿಂದ ಇರಬೇಕು.
ಮಕರ: ಆರೋಗ್ಯದಲ್ಲಿ ಬದಲಾವಣೆ ಕಂಡು ಬರಲಿದೆ . ಕೌಟುಂಬಿಕ ನೆಮ್ಮದಿ ದೊರೆಯಲಿದೆ.
ಕುಂಭ: ಗ್ರಹಗಳ ಸ್ಥಾನ ಬದಲಾವಣೆಯಿಂದ ನಿಮ್ಮ ಜೀವನದಲ್ಲಿ ಶುಭ ಫಲಿತಾಂಶಗಳು ದೊರೆಯುತ್ತದೆ.
ಮೀನ: ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಜಾಗ್ರತೆಯಿಂದ ಇರಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.