ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವ್ಯಕ್ತಿಯ ಭವಿಷ್ಯವನ್ನ ಕೈ ಬೆರಳುಗಳೂ ತಿಳಿಸುತ್ತವೆ; ಹೆಬ್ಬೆರಳು ಸಮತಟ್ಟಾಗಿದ್ದರೆ ಅದೃಷ್ಟವೇ? ಜ್ಯೋತಿಷ್ಯಶಾಸ್ತ್ರದಲ್ಲಿ ಇರುವ ಅರ್ಥ ಹೀಗಿದೆ

ವ್ಯಕ್ತಿಯ ಭವಿಷ್ಯವನ್ನ ಕೈ ಬೆರಳುಗಳೂ ತಿಳಿಸುತ್ತವೆ; ಹೆಬ್ಬೆರಳು ಸಮತಟ್ಟಾಗಿದ್ದರೆ ಅದೃಷ್ಟವೇ? ಜ್ಯೋತಿಷ್ಯಶಾಸ್ತ್ರದಲ್ಲಿ ಇರುವ ಅರ್ಥ ಹೀಗಿದೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈ ಬೆರಳುಗಳು ಪ್ರತ್ಯೇಕವಾದ ಗ್ರಹಗಳಿಂದ ಸೂಚಿಸಲ್ಪಡುತ್ತದೆ. ಪ್ರತಿಯೊಂದು ಬೆರಳಗಳು ಒಂದೊಂದು ಗ್ರಹದ ಪ್ರಭಾವಕ್ಕೆ ಒಳಗಾಗುತ್ತದೆ. ಹೆಬ್ಬೆರಳು ಸಮತಟ್ಟಾಗಿದ್ದರೆ ಮಹತ್ವ ಏನು? ಈ ಬೆರಳಿಗೆ ಇರುವ ಬೇರೆ ಹೆಸರುಗಳೇನು? ಇಲ್ಲಿದೆ ಮಾಹಿತಿ. (ಬರಹ: ಎಚ್. ಸತೀಶ್ ಜ್ಯೋತಿಷಿ)

ವ್ಯಕ್ತಿಯ ಭವಿಷ್ಯವನ್ನ ಕೈ ಬೆರಳುಗಳೂ ತಿಳಿಸುತ್ತವೆ; ಹೆಬ್ಬೆರಳು ಸಮತಟ್ಟಾಗಿದ್ದರೆ ಅದೃಷ್ಟವೇ? ಜ್ಯೋತಿಷ್ಯಶಾಸ್ತ್ರದಲ್ಲಿ ಇರುವ ಅರ್ಥ ಹೀಗಿದೆ
ವ್ಯಕ್ತಿಯ ಭವಿಷ್ಯವನ್ನ ಕೈ ಬೆರಳುಗಳೂ ತಿಳಿಸುತ್ತವೆ; ಹೆಬ್ಬೆರಳು ಸಮತಟ್ಟಾಗಿದ್ದರೆ ಅದೃಷ್ಟವೇ? ಜ್ಯೋತಿಷ್ಯಶಾಸ್ತ್ರದಲ್ಲಿ ಇರುವ ಅರ್ಥ ಹೀಗಿದೆ

ಹೆಬ್ಬೆರಳು ಸಮತಟ್ಟಾಗಿದ್ದರೆ ಇವರ ಜೀವನವು ಎಲ್ಲರಿಗೂ ಮಾರ್ಗದರ್ಶಕವಾಗುತ್ತದೆ. ಜೀವನದಲ್ಲಿ ಶುಭಫಲಗಳು ದೊರಕಾಗ ಹುಚ್ಚೆದ್ದು ಕುಣಿಯುವುದಿಲ್ಲ. ಹಾಗೆಯೇಕಷ್ಟ ಕಾರ್ಪಣ್ಯಗಳು ಎದುರಾದಾಗ ಬೆದರಿ ಕೂಡುವುದು ಇಲ್ಲ. ಪ್ರತಿಯೊಂದು ವಿಚಾರವನ್ನು ಸವಾಲಾಗಿಯೇ ಸ್ವೀಕರಿಸಿ ಯಶಸ್ಸನ್ನು ಗಳಿಸುತ್ತಾರೆ.ತಮ್ಮವರು ಬೇರೆಯವರು ಎಂಬ ಭೇದ ಭಾವ ತೋರುವುದಿಲ್ಲ. ಸಾಮಾನ್ಯವಾಗಿ ಇವರು ಪ್ರೀತಿ ವಿಶ್ವಾಸದಿಂದಲೇ ಬೆಳೆಯುತ್ತಾರೆ. ಆದರೆ ಯಾವುದು ಇವರ ಜೀವನದಲ್ಲಿ ಅತಿಯಾಗುವುದಿಲ್ಲ. ಸ್ವಾರ್ಥ ಇರುವುದಿಲ್ಲ. ಬಾಲ್ಯದಿಂದಲೇ ಇವರು ಸಮತೋಲನದಲ್ಲಿ ತಮ್ಮ ಜೀವನವನ್ನು ಕಾಯ್ದುಕೊಂಡು ಬರುತ್ತಾರೆ. ಯಾವುದೇ ಪ್ರಭಾವಕ್ಕೂ ಒಲಿಯುವುದಿಲ್ಲ. ಬೇರೆಯವರ ಮಾತನ್ನು ಕೇಳುವುದು ಇಲ್ಲ. ಆದರೆ ತಮ್ಮ ಇಚ್ಛೆಯಂತೆ ನಡೆಯಲು ಬೇರೆಯವರನ್ನು ಹುರಿದುಂಬಿಸುತ್ತಾರೆ. ಇವರಿಗೆ ಸ್ವತಂತ್ರವಾಗಿ ಜೀವನ ಮಾಡುವುದೆಂದರೆ ಬರಿ ಇಷ್ಟ. ಆದರೆ ಅದು ಸಾಧ್ಯವಾಗದ ಮಾತು.

ಮಕ್ಕಳಾಗಿದ್ದಾಗಲೇ ತಂದೆ ತಾಯಿಯರನ್ನು ಅವಲಂಬಿಸುವುದಿಲ್ಲ. ತಮ್ಮ ಕೆಲಸವನ್ನು ತಾವೇ ಪೂರೈಸಿಕೊಂಡು ಸಣ್ಣಪುಟ್ಟ ಉದ್ಯೋಗದಲ್ಲಿ ತೊಡಗಿ ಸ್ವತಂತ್ರ ಜೀವನವನ್ನೇ ನಡೆಸುತ್ತಾರೆ. ಚಿಕ್ಕಂದಿನಲ್ಲಿಯೇ ತಮ್ಮ ಕೈಲಾದಂತೆ ಎಲ್ಲರಿಗೂ ಸಹಾಯ ಮಾಡುವರು. ವಿದ್ಯಾಭ್ಯಾಸದಲ್ಲಿ ಅತಿ ಉನ್ನತಮಟ್ಟವನ್ನು ತಲುಪುವುದಿಲ್ಲ ಅಥವಾ ಅತಿ ಕಡಿಮೆ ಮಟ್ಟವನ್ನು ಒಪ್ಪುವುದು ಇಲ್ಲ. ವಿದ್ಯಾಭ್ಯಾಸದಲ್ಲಿ ತನ್ನದೇ ಆದ ಹಾದಿಯ ನಡೆಯುತ್ತಾರೆ. ವಿವಾಹವಾದ ನಂತರ ಕುಟುಂಬದವರಿಂದ ದೂರ ಹೋಗದೆ ಪ್ರಸಕ್ತ ಸನ್ನಿವೇಶಕ್ಕೆ ಸಂಗಾತಿಯ ಮನಸ್ಸನ್ನು ಬದಲಾಯಿಸುವಿರಿ. ಹೆಣ್ಣು ಮಕ್ಕಳಿಗೆ ಉತ್ತಮ ಆದಾಯವಿರುತ್ತದೆ. ಆದರೆ ಗಂಡು ಮಕ್ಕಳು ಕೆಲವೊಮ್ಮೆ ಅತಂತ್ರ ಸನ್ನಿವೇಶವನ್ನು ಎದುರಿಸುತ್ತಾರೆ.

ದುರಾಭ್ಯಾಸ, ದುರಾಸೆಯೂ ಇರುವುದಿಲ್ಲ

ಎಷ್ಟೇ ಕಷ್ಟ ಬಂದರೂ ಬೇರೆಯವರ ಬಳಿ ಸಾಲವನ್ನು ತೆಗೆದುಕೊಳ್ಳುವುದಿಲ್ಲ. ಇರುವ ಅನುಕೂಲತೆಯಲ್ಲಿಯೇ ಸೊಗಸಾದ ಜೀವನವನ್ನು ನಡೆಸುತ್ತಾರೆ. ಸಾಮಾನ್ಯವಾಗಿ ಇವರಿಗೆ ಯಾವುದೇ ದುರಾಭ್ಯಾಸವಿರುವುದಿಲ್ಲ. ದುರಾಸೆಯೂ ಇರುವುದಿಲ್ಲ. ಹಾಸಿಗೆ ಇರುವಷ್ಟು ಕಾಲು ಚಾಚು ಎಂಬ ವಾದ ಇವರದು. ಕೆಲವರಂತೂ ಮಧ್ಯ ವಯಸ್ಸು ದಾಟಿದ ನಂತರ ವಿದ್ಯಾಭ್ಯಾಸಕ್ಕೆ ಅನುವಾಗುತ್ತಾರೆ. ಒಮ್ಮೆ ಇವರು ತೆಗೆದುಕೊಂಡ ತೀರ್ಮಾನವನ್ನು ಎಂದಿಗೂ ಬದಲಿಸುವುದಿಲ್ಲ. ಇವರಿಗೆ ಕೃಷಿಗಾರಿಕೆಯಲ್ಲಿ ಆಸಕ್ತಿ ಇರುತ್ತದೆ. ಆದರೆ ಜೀವನೋಪಾಯಕ್ಕಾಗಿ ಇದನ್ನು ಅವಲಂಬಿಸುವುದಿಲ್ಲ. ಕೇವಲ ಮನಸ್ಸಿನ ತೃಪ್ತಿಗಾಗಿ ಕೃಷಿಯನ್ನು ಓಲೈಸುತ್ತಾರೆ. ಇವರ ಬಳಿ ವಾಹನ ಇರುವುದಿಲ್ಲ. ಒಂದು ವೇಳೆ ಇದ್ದರೆ ಅದು ಐಷಾರಾಮಿ ವಾಹನ ವಾಗಿರುತ್ತದೆ. ಇವರ ಸಂಗಾತಿಯ ಬಳಿ ಉತ್ತಮ ಹಣವಿದ್ದರೂ ಅದನ್ನು ಬಯಸುವುದಿಲ್ಲ. ಕೇವಲ ತನ್ನ ಸ್ವಂತ ಶಕ್ತಿಯ ಮೇಲೆ ಹಣವನ್ನು ಸಂಪಾದಿಸಿ ಬಾಳುವ ಜನರು ಇವರಾಗುತ್ತಾರೆ.

ಚಿಕ್ಕ ವಯಸ್ಸಿನಲ್ಲಿ ವಿವಾಹವಾಗುತ್ತದೆ. ಇಲ್ಲದೇ ಹೋದರೆ ಮಧ್ಯ ವಯಸ್ಸಿನ ನಂತರ ವಿವಾಹವಾಗುತ್ತದೆ. ಇವರ ಮನಸ್ಸಿಗೆ ಒಪ್ಪುವ ವ್ಯಕ್ತಿಯೇ ಇವರನ್ನು ವರಿಸುತ್ತಾರೆ. ಬಂಧು ಬಳಗದವರಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಅನಾವಶ್ಯಕವಾಗಿ ಎಲ್ಲಿಗೂ ಪ್ರಯಾಣ ಬೆಳೆಸುವುದಿಲ್ಲ. ಯಾವುದೇ ಲಾಭವಿಲ್ಲದೆ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ. ವಿವಾಹವಾದ ನಂತರ ಕುಟುಂಬದ ಪ್ರಮುಖ ಜವಾಬ್ದಾರಿಯನ್ನು ತಾವಾಗಿಯೇ ವಹಿಸಿಕೊಳ್ಳುತ್ತಾರೆ. ಆದರೆ ತಾವು ಮಾಡಬೇಕಾದ ಕೆಲಸ ಕಾರ್ಯಗಳನ್ನು ಬೇರೆಯವರಿಗೆ ನೀಡುವುದಿಲ್ಲ. ಅಷ್ಟಲ್ಲದೆ ಯಾವುದೇ ಪ್ರಭಾವಕ್ಕೆ ಒಳಗಾಗಿ ಬೇರೆಯವರ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ.

ಆದರೆ ಬೇರೆಯವರ ಯಶಸ್ವಿಗಾಗಿ ಶತಾಯು ಗತಾಯ ಪ್ರಯತ್ನಿಸುತ್ತಾರೆ. ಆರಂಭಿಸಿದ ಕೆಲಸ ಕಾರ್ಯಗಳನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ. ಸ್ವಲ್ಪ ಕಷ್ಟವೆನಿಸಿದರು ನಿಧಾನವಾದರೂ ಅದನ್ನು ಪೂರ್ಣಗೊಳಿಸುವಲ್ಲಿ ಸಂತೋಷವನ್ನು ಕಾಣುತ್ತಾರೆ. ಇವರಿಗೆ ಒಳ್ಳೆಯ ಸಂತಾನವಿರುತ್ತದೆ. ಇವರ ಮನಸ್ಸೇ ಇವರ ಮಕ್ಕಳಿಗೂ ಬರುತ್ತದೆ. ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ. ಬೇರೆಯವರಿಂದ ಬುದ್ಧಿವಾದ ಹೇಳಿಸಿಕೊಳ್ಳುವುದು ಇವರಿಗೆ ಇಷ್ಟವಾಗದ ವಿಚಾರ. ವಯಸ್ಸಾದ ಮೇಲೆ ತಮ್ಮ ಜವಾಬ್ದಾರಿಗಳನ್ನು ಪೂರೈಸುತ್ತಾರೆ. ಪ್ರೀತಿ ವಿಶ್ವಾಸವನ್ನು ತೋರುವ ಜನರೊಂದಿಗೆ ಜೀವನವನ್ನು ಕಳೆಯುತ್ತಾರೆ. ಆದರೆ ಮಕ್ಕಳ ಪ್ರೀತಿ ವಿಶ್ವಾಸದಲ್ಲಿ ಕೊರತೆ ಕಾಣುವುದಿಲ್ಲ. ಒಟ್ಟಾರೆ ಇವರು ಯೋಚನೆ ಇಲ್ಲದೆ ಜೀವನ ನಡೆಸುತ್ತಾರೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.