ವ್ಯಕ್ತಿಯ ಭವಿಷ್ಯವನ್ನ ಕೈ ಬೆರಳುಗಳೂ ತಿಳಿಸುತ್ತವೆ; ಹೆಬ್ಬೆರಳಿಗೆ ಸಂಬಂಧಿಸಿದಂತೆ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿರುವುದೇನು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವ್ಯಕ್ತಿಯ ಭವಿಷ್ಯವನ್ನ ಕೈ ಬೆರಳುಗಳೂ ತಿಳಿಸುತ್ತವೆ; ಹೆಬ್ಬೆರಳಿಗೆ ಸಂಬಂಧಿಸಿದಂತೆ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿರುವುದೇನು?

ವ್ಯಕ್ತಿಯ ಭವಿಷ್ಯವನ್ನ ಕೈ ಬೆರಳುಗಳೂ ತಿಳಿಸುತ್ತವೆ; ಹೆಬ್ಬೆರಳಿಗೆ ಸಂಬಂಧಿಸಿದಂತೆ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿರುವುದೇನು?

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈ ಬೆರಳುಗಳು ಪ್ರತ್ಯೇಕವಾದ ಗ್ರಹಗಳಿಂದ ಸೂಚಿಸಲ್ಪಡುತ್ತದೆ. ಪ್ರತಿಯೊಂದು ಬೆರಳಗಳು ಒಂದೊಂದು ಗ್ರಹದ ಪ್ರಭಾವಕ್ಕೆ ಒಳಗಾಗುತ್ತದೆ. ಹೆಬ್ಬೆರಳಿನ ಮಹತ್ವ ಏನು? ಈ ಬೆರಳಿಗೆ ಇರುವ ಬೇರೆ ಹೆಸರುಗಳೇನು? ಇಲ್ಲಿದೆ ಮಾಹಿತಿ. (ಬರಹ: ಎಚ್. ಸತೀಶ್ ಜ್ಯೋತಿಷಿ)

ವ್ಯಕ್ತಿಯ ಭವಿಷ್ಯವನ್ನ ಕೈ ಬೆರಳುಗಳೂ ತಿಳಿಸುತ್ತವೆ; ಹೆಬ್ಬೆರಳಿಗೆ ಸಂಬಂಧಿಸಿದಂತೆ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿರುವುದೇನು?
ವ್ಯಕ್ತಿಯ ಭವಿಷ್ಯವನ್ನ ಕೈ ಬೆರಳುಗಳೂ ತಿಳಿಸುತ್ತವೆ; ಹೆಬ್ಬೆರಳಿಗೆ ಸಂಬಂಧಿಸಿದಂತೆ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿರುವುದೇನು?

ನಾಲ್ಕು ಬೆರಳುಗಳಂತೆ ಹೆಬ್ಬೆರಳು ಸಹ ಬಲು ಮುಖ್ಯವಾಗುತ್ತದೆ. ಪ್ರತಿಯೊಂದು ಬೆರಳನ್ನು ಮೂರು ಭಾಗಗಳನ್ನಾಗಿ ಮಾಡುತ್ತೇವೆ. ಅದರಲ್ಲಿಯೂ ಹೆಬ್ಬೆರಳು ಮೂರು ರೀತಿಯ ಭಾಗಗಳ ಅನ್ವಯ ಒಬ್ಬ ವ್ಯಕ್ತಿಯ ಗುಣ ಧರ್ಮವನ್ನು ನಿರೂಪಿಸುತ್ತದೆ. ಹೆಬ್ಬೆರಳಿನ ಉಗುರಿನ ತುದಿಯಲ್ಲಿರುವ ರೇಖೆಯನ್ನು ಅನ್ನರೇಖೆ ಎಂದು ಕರೆಯುತ್ತೇವೆ. ಈ ಭಾಗವು ಉಬ್ಬಿದ್ದಲ್ಲಿ ಅವರಿಗೆ ಹೆಚ್ಚಿನ ಮನಸ್ಥೈರ್ಯ ಇರುತ್ತದೆ. ಸಾಮಾನ್ಯವಾಗಿ ಇವರು ಬೇರೆಯವರನ್ನು ಅವಲಂಬಿಸದೆ ಸ್ವತಂತ್ರವಾಗಿ ಜೀವನವನ್ನು ನಡೆಸುತ್ತಾರೆ. ಬೇರೆಯವರಿಗೆ ಸಹಾಯ ಮಾಡದೆ ಹೋದರು ಇವರಿಂದ ಯಾವುದೇ ತೊಂದರೆ ಆಗದು.

ಹೀಗೆ ಹೆಬ್ಬೆರಳು ಇರುವವರು ಹಣಕಾಸಿನ ವಿಚಾರದಲ್ಲಿ ತಮಗೆ ಅವಶ್ಯಕತೆ ಇದ್ದಷ್ಟು ಹಣವನ್ನು ಸಂಪಾದಿಸಬಲ್ಲರು. ಹಾಗೆಯೇ ಜೀವನವನ್ನು ಹಗುರಾಗಿ ತೆಗೆದುಕೊಳ್ಳುವುದು ಇಲ್ಲ. ಇವರ ಮಾತುಕತೆ ಎಲ್ಲರಿಗೂ ಇಷ್ಟ ಅನಿಸುತ್ತದೆ. ಕುಟುಂಬದ ವಿಚಾರವಾಗಲಿ ಅಥವಾ ಬೇರೆಯವರ ವಿಚಾರವಾಗಲಿ ಸಮಸ್ಯೆಗಳನ್ನು ಸಂದಾನದಿಂದ ಪರಿಹರಿಸುವುದು ಇವರಿಗೆ ಸಾಧ್ಯವಾಗುತ್ತದೆ. ಸಮಾಜ ಸೇವೆ ಮಾಡುವ ಆಸೆ ಇರುತ್ತದೆ. ಆದರೆ ತಮ್ಮ ಜೀವನವನ್ನುಕಷ್ಟಕ್ಕೆ ನೂಕಿ ಬೇರೆಯವರಿಗೆ ಸಹಾಯ ಮಾಡುವುದಿಲ್ಲ.

ಇವರು ಯಾರನ್ನೂ ನಿರಾಸೆಗೊಳಿಸುವುದಿಲ್ಲ

ಸೋಮಾರಿ ತನವಿರುವ ಜನರಿಂದ ದೂರವಿರುತ್ತಾರೆ. ಇವರ ರೀತಿ ನೀತಿಗೆ ಒಪ್ಪುವ ಜನರಿದ್ದರೆ ತಮ್ಮೊಂದಿಗೆ ಯಶಸ್ಸಿನ ಓಟದಲ್ಲಿ ಕರೆದುಕೊಂಡು ಹೋಗುತ್ತಾರೆ. ತಾವಾಗಿಯೇ ಯಾರಿಗೂ ಸಹಾಯ ಮಾಡುವುದಿಲ್ಲ. ಹಾಗೆಯೇ ಯಾರನ್ನೂ ನಿರಾಸೆಗೊಳಿಸುವುದಿಲ್ಲ. ಇವರ ವಿಚಿತ್ರವಾದ ಸ್ವಭಾವವೆಂದರೆ ಶತ್ರುಗಳನ್ನು ಮಿತ್ರರಂತೆ ಕಾಣುತ್ತಾರೆ. ಹಾಗೆಯೇ ಮಿತ್ರರನ್ನು ಶತ್ರುಗಳಂತೆ ಕಾಣುತ್ತಾರೆ. ಸುಲಭವಾಗಿ ಯಾರನ್ನು ಇವರು ನಂಬುವುದಿಲ್ಲ. ಕುಟುಂಬಕ್ಕೆ ಸಂಬಂಧಪಟ್ಟ ಹಣಕಾಸಿನ ವಿಚಾರದಲ್ಲಿ ಎಲ್ಲರನ್ನೂ ದೂರವಿಡುತ್ತಾರೆ.

ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನುಸಣ್ಣ ವಯಸ್ಸಿನಲ್ಲಿ ವಹಿಸಿಕೊಳ್ಳುತ್ತಾರೆ. ತಂದೆ ತಾಯಿ ಮಾತ್ರವಲ್ಲವೇ ಕುಟುಂಬದ ಎಲ್ಲಾ ಹಿರಿಯರನ್ನು ಗೌರವದಿಂದ ಕಾಣುತ್ತಾರೆ. ಯಾವುದೇ ಕುಟುಂಬದ ಕೊನೆಯ ಮಗ ಅಥವಾ ಮಗಳಿಗೆ ಇಂತಹ ಲಕ್ಷಣಗಳಿರುತ್ತವೆ. ಅವರ ಕುಟುಂಬವು ಸದಾಕಾಲ ಸುಖ ಸಂತೋಷದಿಂದ ಬಾಳುತ್ತದೆ. ಇವರು ಯಾರೊಂದಿಗೂ ಜಗಳವಾಡುವುದಿಲ್ಲ. ಬುದ್ಧಿವಂತಿಕೆಯಿಂದ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ. ಕೇವಲ ಹಣ ಒಂದೇ ಜೀವನವಲ್ಲ ಎಂಬ ವಾದ ಇವರದು. ಈ ರೀತಿ ಎಲ್ಲರಿಗೂ ಬುದ್ದಿವಾದ ಹೇಳುತ್ತಾರೆ.

ಆದರೆ ಜೀವನದ ಮುಖ್ಯ ಉದ್ದೇಶ ನಂಬಿದವರನ್ನು ಕಾಪಾಡುವುದು ಎಂದು ನಂಬಿರುತ್ತಾರೆ. ಇವರ ಮನಸ್ಸಿನಲ್ಲಿರುವ ವಿಚಾರವನ್ನು ಯಾರು ಬೇಕಾದರೂ ಸುಲಭವಾಗಿ ತಿಳಿಯಬಹುದು. ಇವರ ಜೀವನ ಒಂದು ರೀತಿಯ ತೆರೆದ ಪುಸ್ತಕ ಎಂದು ಹೇಳಬಹುದು. ಬಾಳ ಸಂಗಾತಿ ಮತ್ತು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತಾರೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲಾ ರೀತಿಯ ಕಸರತ್ತನ್ನು ಮಾಡುತ್ತಾರೆ. ಆದರೆ ಇವರ ಆಹಾರ ಸೇವನೆಯ ಹವ್ಯಾಸವು ಬದಲಾಗುವುದಿಲ್ಲ. ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಕಾರಣ ಮನಸ್ಸಿನಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ವಂಶದಲ್ಲಿಯೇ ಇವರಿಗೆ ವಿಶೇಷವಾದ ಬುದ್ಧಿ ಇರುತ್ತದೆ. ಇವರ ಮಟ್ಟವನ್ನು ದಾಟುವುದಿರಲಿ ತಲುಪಲು ಸಹ ಯಾರಿಂದಲೂ ಸಾಧ್ಯವಾಗುವುದಿಲ್ಲ. ಎಲ್ಲರನ್ನೂ ಸಮಾನ ಭಾವನೆಯಿಂದ ಕಾಣುವ ಮನಸ್ಸು ಇವರಿಗೆ ಇರುತ್ತದೆ. ಧಾರ್ಮಿಕ ಕಾರ್ಯ ವಿಧಿಗಳನ್ನು ಅತಿಯಾದ ಶ್ರದ್ಧೆಯಿಂದ ನಿರ್ವಹಿಸುತ್ತಾರೆ.

ಯಾರ ಮೇಲೂ ಅನಾವಶ್ಯಕವಾಗಿ ತಮ್ಮ ಮನಸ್ಸಿನ ಅಭಿಪ್ರಾಯವನ್ನು ಹೇರುವುದಿಲ್ಲ. ಹಾಗೆಯೇ ಒಂದೇ ರೀತಿಯ ಜೀವನವನ್ನು ಇಷ್ಟಪಡುವುದಿಲ್ಲ. ಜೀವನದಲ್ಲಿ ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸುತ್ತಾರೆ. ತಮ್ಮ ಕೌಟುಂಬಿಕ ಜೀವನವು ಸುಖಮಯವಾಗಿರಲು ಸದಾಕಾಲ ಪ್ರಯತ್ನಿಸುತ್ತಾರೆ. ತಮ್ಮ ಪಾಲಿನ ಜವಾಬ್ದಾರಿಯನ್ನು ಬೇರೆಯವರಿಗೆ ಹೊರೆಸುವುದಿಲ್ಲ. ವಯಸ್ಸಾದ ನಂತರವೂ ಬೇರೆಯವರನ್ನು ಅವಲಂಬಿಸದೆ ಸ್ವತಂತ್ರವಾದ ಜೀವನವನ್ನು ನಡೆಸುವರು. ಇಳಿ ವಯಸಿನಲ್ಲಿ ಸಂತುಷ್ಟ ಜೀವನ ನಡೆಸಲು ಹಣವನ್ನು ಉಳಿಸಲು ಸಫಲರಾಗುವರು. ಮಕ್ಕಳ ಒಳ್ಳೆಯತನದ ನಡುವೆಯೂ ಮತ್ತು ಅವರ ಒತ್ತಡದ ನಡುವೆಯೂ ಬಹಳ ಸಂಗಾತಿಯೊಂದಿಗೆ ದೂರವಿದ್ದು ಬಾಳುತ್ತಾರೆ. ಮಕ್ಕಳ ಸುಖಿ ಸಂಸಾರವನ್ನು ಕಂಡು ಸದಾಕಾಲ ಸಂತಸ ಸಂಭ್ರಮದಿಂದ ಇರುತ್ತಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.