ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜಾತಕದಲ್ಲಿ ದುರ್ಬಲ ಗ್ರಹಗಳಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ; ನವಗ್ರಹಗಳ ಕೃಪೆಗಾಗಿ ಹೀಗೆ ಮಾಡಿ

ಜಾತಕದಲ್ಲಿ ದುರ್ಬಲ ಗ್ರಹಗಳಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ; ನವಗ್ರಹಗಳ ಕೃಪೆಗಾಗಿ ಹೀಗೆ ಮಾಡಿ

ಜಾತಕದಲ್ಲಿ ಕೆಲವು ಪ್ರಬಲ ಗ್ರಹಗಳಿದ್ದರೆ, ಕೆಲವು ದುರ್ಬಲ ಗ್ರಹಗಳಿರುತ್ತವೆ. ಪ್ರಬಲ ಗ್ರಹಗಳಂತೆ ದುರ್ಬಲ ಗ್ರಹಗಳು ಸಹ ಸಮಸ್ಯೆಯನ್ನುಂಟು ಮಾಡುತ್ತವೆ. ಚರ್ಮ ರೋಗಗಳಿಂದ ಹಿಡಿದು, ಆರ್ಥಿಕ ನಷ್ಟದವರೆಗೆ ಪ್ರಭಾವ ಬೀರುತ್ತವೆ. ಈ ಲೇಖನದಲ್ಲಿ ದುರ್ಬಲ ಗ್ರಹಗಳಿಂದಾಗುವ ತೊಂದರೆಗಳ ಜೊತೆಗೆ ಪರಿಹಾರವನ್ನು ಸೂಚಿಸಲಾಗಿದೆ.

ಜಾತಕದಲ್ಲಿ ದುರ್ಬಲ ಗ್ರಹಗಳಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ; ನವಗ್ರಹಗಳ ಕೃಪೆಗಾಗಿ ಹೀಗೆ ಮಾಡಿ
ಜಾತಕದಲ್ಲಿ ದುರ್ಬಲ ಗ್ರಹಗಳಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ; ನವಗ್ರಹಗಳ ಕೃಪೆಗಾಗಿ ಹೀಗೆ ಮಾಡಿ

ಜಾತಕವು ನವಗ್ರಹಗಳನ್ನು ಒಳಗೊಂಡಿರುವ ಕೂಟವಾಗಿದೆ. ಅದು ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಗ್ರಹಗಳು, ನಕ್ಷತ್ರ, ಮತ್ತು ರಾಶಿಯನ್ನು ಒಳಗೊಂಡಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಜಾತಕದಲ್ಲಿ ಪ್ರಬಲ ಗ್ರಹಗಳಿರುವಂತೆ ದುರ್ಬಲ ಗ್ರಹಗಳೂ ಇವೆ. ಕೆಲವು ಗ್ರಹಗಳು ಪ್ರಭಾವಶಾಲಿಯಾಗಿದ್ದು ಒಳಿತು–ಕೆಡುಕುಗಳನ್ನುಂಟು ಮಾಡುತ್ತವೆ.

ಅದರಂತೆ ದುರ್ಬಲ ಗ್ರಹಗಳೂ ಸಹ ಪರಿಣಾಮವನ್ನು ಬೀರುತ್ತವೆ. ದುರ್ಬಲ ಗ್ರಹಗಳು ಚರ್ಮ ರೋಗದಿಂದ ಹಿಡಿದು ಆರ್ಥಿಕ ಕೊರತೆಯಂತಹ ವಿವಿಧ ಗಂಭೀರ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಅಂತಹ ದುರ್ಬಲ ಗ್ರಹಗಳಿಂದಾಗುವ ದುಷ್ಟಪರಿಣಾಮಗಳನ್ನು ಬಗೆಹರಿಸಿಕೊಳ್ಳಲು ಪರಿಹಾರಗಳನ್ನು ಹೇಳಲಾಗಿದೆ. ಜಾತಕದಲ್ಲಿ ಗ್ರಹಗಳು ದುರ್ಬಲವಾಗಿದ್ದರೆ ಪರಿಹಾರವೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

1. ಸೂರ್ಯ

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಸೂರ್ಯನ ಬಲದಿಂದಲೇ ವ್ಯಕ್ತಿಯ ಜಾತಕ ಮಹತ್ವವನ್ನು ಪಡೆದುಕೊಳ್ಳುತ್ತದೆ. ಸೂರ್ಯನು ಶಕ್ತಿ ಮತ್ತು ಜೀವನದ ಮೂಲವಾಗಿದ್ದಾನೆ. ಸೂರ್ಯನು ದುರ್ಬಲನಾಗಿದ್ದರೆ ತಲೆ, ಕಣ್ಣು, ಮತ್ತು ಮೂಳೆಗಳಂತಹ ದೇಹದ ಅಂಗಗಳಿಗೆ ಸಂಬಂಧಿಸಿದ ಸಮಸ್ಯೆಯನ್ನುಂಟು ಮಾಡಬಹುದು.

ಪರಿಹಾರ

* ಮಾಂಸಾಹಾರ ಮತ್ತು ಮಧ್ಯಪಾನದಿಂದ ದೂರವಿರಿ.

* ಗಾಢ ಬಣ್ಣದ ಬಟ್ಟೆ ದಾನ ಮಾಡಿ.

* ಯಾವುದೇ ಕೆಲಸಕ್ಕೆ ಹೊರಡುವ ಮೊದಲು ಒಂದು ಲೋಟ ಸಕ್ಕರೆ ಬೆರೆಸಿದ ನೀರು ಸೇವಿಸಿ.

2. ಚಂದ್ರ

ಚಂದ್ರನು ಭಾವನೆ, ಮನಸ್ಸು ಮತ್ತು ಅಂತಃಪ್ರಜ್ಞೆಯನ್ನು ಪ್ರತಿಪಾದಿಸುತ್ತಾನೆ. ಜಾತಕದಲ್ಲಿ ಚಂದ್ರನು ದುರ್ಬಲನಾಗಿದ್ದರೆ ಒತ್ತಡ, ಆತಂಕ, ಖಿನ್ನತೆ ಸೇರಿಂದತೆ ಮುಂತಾದ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ಪರಿಹಾರ

* ಹಾಲು ಮತ್ತು ಹಾಲಿನ ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಬೇಡಿ.

* ಪಕ್ಷಿಗಳನ್ನು ಪಂಜರದಲ್ಲಿಟ್ಟು ಸಾಕಬೇಡಿ.

* ಬೆಳ್ಳಿ ಪಾತ್ರೆಯಲ್ಲಿ ನೀರು ಕುಡಿಯಿರಿ.

* ತಂದೆ ತಾಯಿ ಆಶೀರ್ವಾದ ಪಡೆದುಕೊಳ್ಳಿ.

3. ಬುಧ

ಜಾತಕದಲ್ಲಿ ಬುಧ ಗ್ರಹದ ಸ್ಥಾನದ ಮೇಲೆ ವ್ಯಕ್ತಿಯ ಬುದ್ಧಿವಂತಿಕೆಯನ್ನು ಹೇಳಲಾಗುತ್ತದೆ. ಆದರೆ ಬುಧನ ಶಕ್ತಿ ಕ್ಷೀಣಿಸಿದ್ದರೆ ವ್ಯಕ್ತಿಯು ಚರ್ಮ ಮತ್ತು ಗಂಟಲಿನ ಸೋಂಕು ಮತ್ತು ನರ ದೌರ್ಬಲ್ಯದಂತಹ ಸಮಸ್ಯೆಗಳಿಗೆ ಕಾರಣನಾಗುತ್ತಾನೆ.

ಪರಿಹಾರ

* ಮಾಂಸಾಹಾರ ಮತ್ತು ಮದ್ಯಪಾನದಿಂದ ದೂರವಿರಿ.

* ಹೊಸ ಬಟ್ಟೆಗಳನ್ನು ತೊಳೆದ ನಂತರವೇ ಧರಿಸಿ. ಅದು ನಕಾರಾತ್ಮಕತೆಯನ್ನು ದೂರ ಮಾಡುತ್ತದೆ.

* ಬೆಳ್ಳಿಯ ಲೋಟದಲ್ಲಿ ನೀರು ಕುಡಿಯಿರಿ.

* ದೇವಸ್ಥಾನದಲ್ಲಿ ಅನ್ನ ಮತ್ತು ಹಾಲು ದಾನ ಮಾಡಿ.

4. ಮಂಗಳ

ಜಾತಕದಲ್ಲಿ ಮಂಗಳ ಗ್ರಹವು ದುರ್ಬಲವಾದರೆ ಅಪಘಾತ, ರಕ್ತಹೀನತೆ, ಶಸ್ತ್ರ ಚಿಕಿತ್ಸೆಯಂತಹ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಮತ್ತು ಆತ್ಮ ವಿಶ್ವಾಸ ಕುಗ್ಗಬಹುದು.

ಪರಿಹಾರ

* ಕೆಂಪು ಬಣ್ಣದ ಬಟ್ಟೆ ಮತ್ತು ಕೆಂಪು ಹವಳ ಧರಿಸಿ.

* ಹಸುಗಳಿಗೆ ಆಹಾರ ನೀಡಿ.

5. ಗುರು

ಗುರು ಗ್ರಹವನ್ನು ಸಮೃದ್ಧಿಯನ್ನು ದಯಪಾಲಿಸುವ ಗ್ರಹ ಎಂದು ಕರೆಯಲಾಗುತ್ತದೆ. ಗುರುವಿನ ದೃಷ್ಠಿ ಉತ್ತಮವಾಗಿದ್ದರೆ ಎಲ್ಲದರಲ್ಲೂ ಉನ್ನತಿಯನ್ನು ಕಾಣಬಹುದು ಎಂದು ಹೇಳಲಾಗುತ್ತದೆ. ಅದೇ ದುರ್ಬಲನಾದರೆ ಅನೇಕ ತೊಂದರೆಗಳನ್ನುಂಟು ಮಾಡುತ್ತಾನೆ.

ಪರಿಹಾರ

* ಚಿನ್ನದ ಆಭರಣ ಧರಿಸಿ.

* ಒಡಹುಟ್ಟಿದವರಿಗೆ ಸಹಾಯ ಮಾಡಿ.

* ತಂದೆಯ ವಸ್ತುಗಳನ್ನು ಮರು ಬಳಸಿ.

* ಅನಾಥರಿಗೆ, ಬಡವರಿಗೆ ಸಹಾಯ ಮಾಡಿ.

6. ಶನಿ

ಶನಿಯನ್ನು ಕರ್ಮದ ದೇವರು ಎಂದು ಕರೆಯಲಾಗುತ್ತದೆ. ಶನಿಯು ವ್ಯಕ್ತಿಗಳಿಗೆ ಅವರವರ ಕರ್ಮಗಳಿಗೆ ಅನುಸಾರವಾಗಿ ಪ್ರತಿಫಲವನ್ನು ನೀಡುತ್ತಾನೆ. ದುರ್ಬಲ ಶನಿ ಗ್ರಹದಿಂದ ಚರ್ಮ ಮತ್ತು ಮೂಳೆ ಸಮಸ್ಯೆ ಎದುರಾಗಬಹುದು.

ಪರಿಹಾರ

* ಶನಿವಾರದಂದು ಕಪ್ಪು ಎಳ್ಳು ಮತ್ತು ಎಳ್ಳೆಣ್ಣೆಯನ್ನು ದಾನ ಮಾಡಿ.

* ಕಪ್ಪು ಉದ್ದಿನ ಕಾಳನ್ನು ದಾನ ಮಾಡಿ.

* ನೀಲಮಣಿ ರತ್ನವನ್ನು ಧರಿಸಿ.

* ಗಾಢ ಬಣ್ಣದ ಬಟ್ಟೆಗಳನ್ನು ಧರಿಸಿ.

7. ಶುಕ್ರ

ಶುಕ್ರನು ಸಮೃದ್ಧಿಯನ್ನು ನೀಡುವ ದೇವರಾಗಿದ್ದಾನೆ. ಶುಕ್ರ ಗ್ರಹ ದುರ್ಬಲಗೊಂಡಾಗ ಮೂತ್ರಪಿಂಡದ ಕಲ್ಲುಗಳು, ಬಂಜೆತನ ಮತ್ತು ಮೂತ್ರದ ಸೋಂಕುಗಳಂತಹ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಪರಿಹಾರ

* ವಜ್ರದ ಆಭರಣಗಳನ್ನು ಧರಿಸಿ

* ಶುಕ್ರನಿಗೆ ಸಂಬಂಧಿಸಿದ ಮಂತ್ರವನ್ನು ಪಠಿಸಿ

* ಲಕ್ಷ್ಮಿ ದೇವಿಯನ್ನು ಪೂಜಿಸಿ. ಲಕ್ಷ್ಮಿಗೆ ಬಿಳಿ ಹೂವು, ಬಟ್ಟೆ ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.

* ಮಹಿಳೆಯರಿಗೆ ತುಪ್ಪ, ಸಕ್ಕರೆ ಅಥವಾ ಅಕ್ಕಿಯನ್ನು ದಾನ ಮಾಡಿ.

8. ರಾಹು

ಭ್ರಮೆ ಮತ್ತು ವಂಚನೆಯನ್ನು ಸಂಕೇತಿಸುವ ಗ್ರಹವಾಗಿದೆ. ಇದನ್ನು ನೆರಳು ಗ್ರಹವೆಂದೂ ಹೇಳಲಾಗುತ್ತದೆ. ಹೀಗಾಗಿ ರಾಹು ದುರ್ಬಲವಾದಾಗ ತೀವ್ರ ಪರಿಣಾಮಗಳಿಗೆ ಕಾರಣವಾಗಬಹುದು.

ಪರಿಹಾರ

* ಗೋಮೇಧಕ ರತ್ನದ ಆಭರಣವನ್ನು ಧರಿಸಿ.

* ರಾಹು ಗಾಯತ್ರಿ ಮಂತ್ರವನ್ನು ಪಠಿಸಿ.

* ದುರ್ಗಾ ದೇವಿಯನ್ನು ಪೂಜಿಸಿ.

* ಮೂಲಂಗಿ, ಸಾಸಿವೆ ಎಣ್ಣೆ ಅಥವಾ ನೀಲಿ ಬಣ್ಣದ ಬಟ್ಟೆಗಳನ್ನು ದಾನ ಮಾಡಿ.

* ಮೀನು ಅಥವಾ ಇರುವೆಗಳಿಗೆ ಗೋಧಿ ಹಿಟ್ಟು ಅಥವಾ ಬೆಲ್ಲವನ್ನು ಆಹಾರವಾಗಿ ನೀಡಿ.

9. ಕೇತು

ಕೇತು ಗ್ರಹವೂ ಸಹ ನೆರಳು ಗ್ರಹವಾಗಿದೆ. ಕೇತು ಗ್ರಹವು ಆಧ್ಯಾತ್ಮವನ್ನು ಪ್ರತಿನಿಧಿಸುವ ಗ್ರಹವಾಗಿದೆ. ಇದು ವ್ಯಕ್ತಿಯ ಹಿಂದಿನ ಕರ್ಮ ಮತ್ತು ಮೋಕ್ಷಗಳಿಗೆ ಸಂಬಂಧವನ್ನು ಹೊಂದಿದೆ. ಕೇತುವಿನ ದುರ್ಬಲತೆಯಿಂದ ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು.

ಪರಿಹಾರ

* ವೈಡೂರ್ಯ ರತ್ನವನ್ನು ಧರಿಸಿ.

* ಕೇತು ಮಂತ್ರಗಳನ್ನು ಪಠಿಸಿ.

* ಗಣಪತಿಯನ್ನು ಗರಿಕೆ, ಮೋದಕ ಮತ್ತು ತೆಂಗಿನಕಾಯಿ ಅರ್ಪಿಸಿ ಪೂಜೆ ಮಾಡಿ.

* ಅಗತ್ಯವಿರುವವರಿಗೆ ಹೊದಿಕೆಗಳನ್ನು ದಾನ ಮಾಡಿ.

ಜಾತಕದಲ್ಲಿರುವ ದುರ್ಬಲ ಗ್ರಹಗಳಿಗೆ ಪರಿಹಾರಗಳು ಎಲ್ಲರಿಗೂ ಒಂದೇ ರೀತಿಯಾಗಿರುವುದಿಲ್ಲ. ಅದಕ್ಕಾಗಿ ನಿಮ್ಮ ಜಾತಕವನ್ನು ಉತ್ತಮ ಜ್ಯೋತಿಷಿಗಳಿಗೆ ತೋರಿಸಿ. ಅವರು ಸೂಚಿಸುವ ಪರಿಹಾರಗಳನ್ನು ಕೈಗೊಳ್ಳಿ.

ಬರಹ: ಅರ್ಚನಾ ಹೆಗ್ಡೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.