ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತಂದೆಯರ ದಿನಾಚರಣೆಗೆ ಒಂದೇ ದಿನ ಬಾಕಿ; ನಿಮ್ಮ ಪ್ರೀತಿಯ ಅಪ್ಪನ ರಾಶಿಗೆ ಅನುಗುಣವಾಗಿ ಈ ಗಿಫ್ಟ್‌ಗಳನ್ನು ಕೊಡಬಹುದು

ತಂದೆಯರ ದಿನಾಚರಣೆಗೆ ಒಂದೇ ದಿನ ಬಾಕಿ; ನಿಮ್ಮ ಪ್ರೀತಿಯ ಅಪ್ಪನ ರಾಶಿಗೆ ಅನುಗುಣವಾಗಿ ಈ ಗಿಫ್ಟ್‌ಗಳನ್ನು ಕೊಡಬಹುದು

ಜೂನ್‌ 16, ಭಾನುವಾರದಂದು ವಿಶ್ವಾದ್ಯಂತ ಫಾದರ್ಸ್‌ ಡೇ ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ನಿಮಗಾಗಿ ತ್ಯಾಗ ಮಾಡಿದ, ಜೀವನ ಸವೆಸಿದ ಅಪ್ಪನಿಗೆ ಏನಾದರೂ ಕೊಡಬೇಕಲ್ಲವೇ. ನಿಮ್ಮ ತಂದೆಯ ರಾಶಿಗೆ ಅನುಗುಣವಾಗಿ ಅವರು ಇಷ್ಟಪಡುವ ಈ ಉಡುಗೊರೆಗಳನ್ನು ನೀಡಬಹುದು.

ತಂದೆಯರ ದಿನಾಚರಣೆಗೆ ಒಂದೇ ದಿನ ಬಾಕಿ; ನಿಮ್ಮ ಲವ್ಲಿ ಡ್ಯಾಡಿಯ ರಾಶಿಗೆ ಅನುಗುಣವಾಗಿ ಈ ಗಿಫ್ಟ್‌ಗಳನ್ನು ಕೊಡಬಹುದು
ತಂದೆಯರ ದಿನಾಚರಣೆಗೆ ಒಂದೇ ದಿನ ಬಾಕಿ; ನಿಮ್ಮ ಲವ್ಲಿ ಡ್ಯಾಡಿಯ ರಾಶಿಗೆ ಅನುಗುಣವಾಗಿ ಈ ಗಿಫ್ಟ್‌ಗಳನ್ನು ಕೊಡಬಹುದು (PC: Pixabay)

ಪ್ರತಿ ವರ್ಷ ಜೂನ್‌ನಲ್ಲಿ ಫಾದರ್ಸ್‌ ಡೇ ಆಚರಿಸಲಾಗುತ್ತದೆ. ಪ್ರಪಂಚದ ಎಲ್ಲಾ ತಂದೆಯರಿಗೆ ಮೀಸಲಾದ ಈ ದಿನ ಅವರಿಗೆ ಇಷ್ಟವಾದ ಅಡುಗೆ ಮಾಡಿಕೊಡುವ ಮೂಲಕ, ಅವರಿಗೆ ಇಷ್ಟವಾದ ಸ್ಥಳಗಳಿಗೆ ಹೋಗುವ ಮೂಲಕ, ಅವರು ಮೆಚ್ಚಿದ ಉಡುಗೊರೆಗಳನ್ನ ನೀಡುವ ಮೂಲಕ ಆಚರಿಸಲು ಮಕ್ಕಳು ಕಾಯುತ್ತಿದ್ದಾರೆ. ಈ ಬಾರಿ ಜೂನ್‌ 16, ಭಾನುವಾರ ತಂದೆಯಂದಿರ ದಿನವನ್ನು ಆಚರಿಸಲಾಗುತ್ತಿದೆ.

ನಿಮ್ಮ ಜೀವನದ ರಿಯಲ್‌ ಹೀರೋಗೆ ಯಾವ ಗಿಫ್ಟ್‌ ನೀಡಬಹುದು ಎಂದು ಯೋಚಿಸುತ್ತಿದ್ದರೆ, ರಾಶಿಗೆ ಅನುಗುಣವಾಗಿ ಈ ಉಡುಗೊರೆಗಳನ್ನು ಪ್ಲ್ಯಾನ್‌ ಮಾಡಬಹುದು.

ಮೇಷ ರಾಶಿ

ನಿಮ್ಮ ತಂದೆ ಮೇಷ ರಾಶಿಗೆ ಸೇರಿದವರಾಗಿದ್ದರೆ ಅವರು ಸಾಹಸಪ್ರಿಯರು ಎಂಬುದನ್ನು ಮರೆಯಬೇಡಿ. ಅವರು ಸದಾ ಉತ್ಸಾಹಿಗಳಾಗಿರುತ್ತಾರೆ. ಸದಾ ಒಂದಲ್ಲಾ ಒಂದು ಕೆಲಸ ಮಾಡುವಲ್ಲಿ ಸಕ್ರಿಯರಾಗಿರುತ್ತಾರೆ. ಮೇಷ ರಾಶಿಯ ಪುರುಷರು, ಸಾಹಸವನ್ನು ಇಷ್ಟಪಡುತ್ತಾರೆ. ಆದ್ದರಿಂದ ಅವರಿಗೆ ಫಿಟ್ನೆಸ್‌ಗೆ ಸಂಬಂಧಿಸಿದಂತೆ ಉಡುಗೊರೆಗಳನ್ನು ನೀಡಬಹುದು. ಜಿಪ್‌ ಲೈನಿಂಗ್‌, ರಾಕ್‌ ಕ್ಲೈಂಬಿಗ್‌, ಟ್ರೆಕ್ಕಿಂಗ್‌ಗೆ ಅನುಕೂಲವಾಗುವಂಥ ಶೂಸ್‌, ಫಿಟ್ನೆಸ್‌ ಕಿಟ್‌ ಸೇರಿದಂತೆ ಯಾವುದೇ ವಸ್ತುಗಳನ್ನು ನೀವು ಗಿಫ್ಟ್‌ ಆಗಿ ನೀಡಬಹುದು.

ವೃಷಭ ರಾಶಿ

ಈ ರಾಶಿಗೆ ಸೇರಿದವರು ಜೀವನದ ಪ್ರತಿಯೊಂದು ಹಂತವನ್ನೂ ಎಂಜಾಯ್‌ ಮಾಡಲು ಬಯಸುತ್ತಾರೆ. ಇವರು ಭೋಜನಪ್ರಿಯರು ಕೂಡಾ. ಆದ್ದರಿಂದ ನಿಮ್ಮ ತಂದೆ ಇಷ್ಟಪಡುವ ಆಹಾರವನ್ನು ನಿಮ್ಮ ಕೈಯಾರೆ ಮಾಡಿಕೊಡಿ. ಅಥವಾ ಒಂದೊಳ್ಳೆ ರೆಸ್ಟೋರೆಂಟ್‌ಗೆ ಊಟಕ್ಕೆ ಕರೆದೊಯ್ಯಿರಿ. ಇವಿಷ್ಟೇ ಅಲ್ಲದೆ ಅವರಿಗೆ ವಾಚ್‌, ವ್ಯಾಲೆಟ್‌ಗಳನ್ನು ಗಿಪ್ಟ್‌ ಮಾಡಬಹುದು.

ಮಿಥುನ ರಾಶಿ

ಈ ರಾಶಿಯವರು ಸದಾ ಹೊಸತನ್ನು ಕಲಿಯಲು ಉತ್ಸುಕರಾಗಿರುತ್ತಾರೆ. ಆದ್ದರಿಂದ ಆನ್‌ಲೈನ್‌, ಮ್ಯಾಗಜಿನ್‌ ಚಂದಾದಾರಿಕೆ ಮಾಡಿಸಬಹುದು. ಇದಕ್ಕೆ ಅನುಕೂಲವಾಗುವಂತೆ ಅವರಿಗೆ ಸ್ಮಾರ್ಟ್‌ ಫೋನ್‌, ಟಾಬ್ಲೆಟ್‌ನಂಥ ಸಾಧನವನ್ನು ಗಿಫ್ಟ್‌ ಆಗಿ ನೀಡಬಹುದು. ಅವರು ಓದುವುದನ್ನು ಇಷ್ಟಪಟ್ಟರೆ ಅವರಿಗೆ ಕಾಂದಂಬರಿ ಪುಸ್ತಕಗಳನ್ನು ಕೂಆ ಗಿಫ್ಟ್‌ ಆಗಿ ನೀಡಬಹುದು. ನೆನಪುಗಳನ್ನು ಜೋಪಾನವಾಗಿರಿಸಲು ಫೊಟೋ ಆಲ್ಬಂಗಳನ್ನು ಕೂಡಾ ನೀಡಬಹುದು.

ಕಟಕ ರಾಶಿ

ಇವರು ಸಾಮಾನ್ಯವಾಗಿ ಭಾವುಕ ಜೀವಿಗಳು. ಇವರು ತಮ್ಮ ಕುಟುಂಬವನ್ನು ಬಹಳ ಕಾಳಜಿ ಮಾಡುತ್ತಾರೆ. ಹಾಗೇ ಕುಟುಂಬದೊಂದಿಗೆ ಬಹಳ ಅಟ್ಯಾಚ್‌ಮೆಂಟ್‌ ಹೊಂದಿರುತ್ತಾರೆ. ಇವರಿಗೆ ನೀವು ನೆನಪುಗಳನ್ನು ಸಿಹಿಯಾಗಿಸುವ ಫೋಟೋ ಆಲ್ಬಂ ನೀಡಬಹುದು. ಇವರಿಗೆ ಹೊಸ ರುಚಿ ಅಡುಗೆ ಮಾಡುವುದು ಎಂದರೆ ಬಹಳ ಇಷ್ಟ. ಆದ್ದರಿಂದ ಅಡುಗೆ ಮನೆಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಇವರಿಗೆ ನೀಡಬಹುದು.

ಸಿಂಹ ರಾಶಿ

ಸಿಂಹ ರಾಶಿಯವರು ಬಹಳ ಆತ್ಮವಿಶ್ವಾಸದಿಂದ ಇರುವಂಥವರು. ಇವರು ಗೌರವಯುತ ಭಾವನೆಗಳನ್ನು ಇಷ್ಟಪಡುವ ಉಡುಗೊರೆಗಳನ್ನು ಬಹಳ ಇಷ್ಟಪಡುತ್ತಾರೆ. ಇವರಿಗೆ ಸಂಗೀತ ಕೂಡಾ ಬಹಳ ಇಷ್ಟವಾಗುತ್ತದೆ. ಆದ್ದರಿಂದ ಯಾವುದಾದರೂ ಸಂಗೀತ ಕಚೇರಿಗೆ ಹೋಗಲು ಟಿಕೆಟ್‌ ಬುಕ್‌ ಮಾಡಿಕೊಡಿ. ನೀವೇ ಮಾಡಿದಂತೆ ಪೇಂಟಿಂಗ್‌ಗಳನ್ನು ಉಡುಗೊರೆಯನ್ನಾಗಿ ನೀಡಬಹುದು. ಅವರಿಗಾಗಿ ಒಂದು ಪುಟ್ಟ ಸ್ಪೋರ್ಟ್‌ ಇವೆಂಟ್‌ ಆಯೋಜಿಸಿ, ಟ್ರೋಫಿಯನ್ನೂ ಕೊಡಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರು ಆರೋಗ್ಯಕ್ಕೆ ಬಹಳ ಆದ್ಯತೆ ನೀಡುವವರು. ಇವರಿಗೆ ಟ್ರಾಕ್‌ ಸೂಟ್‌, ಸ್ಮಾರ್ಟ್‌ ವಾಚ್‌ ಸೇರಿದಂತೆ ಫಿಟ್ನೆಸ್‌ಗೆ ಸಂಬಂಧಿಸಿದ ಉಡುಗೊರೆಗಳನ್ನು ನೀಡಬಹುದು.

ತುಲಾ ರಾಶಿ

ಇವರು ಮನೆ, ಡ್ರೆಸ್‌ ಯಾವುದೇ ವಿಚಾರದಲ್ಲಾದರೂ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಆದ್ದರಿಂದ ಇವರಿಗೆ ಮನೆಯ ಶೋಕೇಶ್‌ನಲ್ಲಿ ಇಡಲು ವಿಭಿನ್ನ ಕಲಾಕೃತಿಗಳು, ಅಥವಾ ಇನ್ನಿತರ ಅಪರೂಪದ ಉಡುಗೊರೆಗಳನ್ನು ನೀಡಬಹುದು. ಅವರಿಗೆ ಇಷ್ಟವಾದ ವೈನ್‌ ಬಾಟಲ್‌ ನೀಡಬಹುದು. ಫೊಟೋ ಆಲ್ಬಂ ಕೂಡಾ ನೀಡಬಹುದು.

ವೃಶ್ಚಿಕ ರಾಶಿ

ಈ ರಾಶಿಯವರು ಬಹಳ ಎಮೋಷನಲ್‌ ಆಗಿರುತ್ತಾರೆ. ಇವರು ಚಿಂತನಶೀಲ ಉಡುಗೊರೆಗಳು ಎಂದರೆ ಇಷ್ಟ. ಆದ್ದರಿಂದ ಇವರಿಗೆ ಐತಿಹಾಸಿಕ, ವೈಜ್ಞಾನಿಕ ಕಾದಂಬರಿಗಳನ್ನು ಓದಲು ನೀಡಬಹುದು. ಇವರಿಗೆ ಚೆಸ್‌ ಸೆಟ್‌, ಪಜಲ್‌ಗಳನ್ನು ಕೊಡಬಹುದು. ಇವರು ಏಕಾಂತವನ್ನು ಹೆಚ್ಚು ಇಷ್ಟಪಡುವುದರಿಂದ ಅವರು ಮನೆಯಲ್ಲಿ ರಿಲಾಕ್ಸ್‌ ಆಗಲು ಪರಿಮಳಯುಕ್ತ ಕ್ಯಾಂಡಲ್‌ಗಳನ್ನು ನೀಡಿ.

ಧನಸ್ಸು ರಾಶಿ

ಈ ರಾಶಿಗೆ ಸೇರಿದ ಅಪ್ಪಂದಿರು ಸಾಹಸಮಯ ಮತ್ತು ಸದಾ ಟ್ರಾವೆಲ್‌ ಮಾಡಲು ಇಷ್ಟಪಡುತ್ತಾರೆ. ಆದ್ದರಿಂದ ಇವರಿಗೆ ಪ್ರಯಾಣಿಸಲು ಸೈಕಲ್‌, ಸ್ಕೂಟರ್‌ನಂಥ ಗಿಫ್ಟ್‌ಗಳು, ಟ್ರಾವೆಲ್‌ ಬ್ಯಾಗ್‌, ಕ್ಯಾಂಪಿಂಗ್‌, ಸೈಕಲ್‌ ಬ್ಯಾಗ್‌, ಮೊಬೈಲ್‌ ಬ್ಯಾಗ್‌, ಪಾಸ್‌ಪೋರ್ಟ್‌ ಹೋಲ್ಡರ್‌, ಪಾಕೆಟ್‌ ಚಾರ್ಜರ್‌, ಸೇರಿದಂತೆ ಟ್ರಾವೆಲ್‌ಗೆ ಬೇಕಾದ ವಸ್ತುಗಳನ್ನು ನೀಡಬಹುದು. ಅಥವಾ ನೀವೇ ಜೊತೆಯಾಗಿ ಹೋಗಿ ಏರ್‌ ಬಲೂನ್‌ ಟ್ರಿಪ್‌ ಮಾಡಿಸಬಹುದು. ಸಾಹಸಮಯ ಕ್ರೀಡೆ ಆಯೋಜಿಸುವ ಜಾಗಕ್ಕೂ ಕರೆದೊಯ್ಯಬಹುದು.

ಮಕರ ರಾಶಿ

ಇವರು ಐಷಾರಾಮಿ ಉಡುಗೊರೆಗಳನ್ನು ಹೆಚ್ಚಾಗಿ ಬಯಸುತ್ತಾರೆ. ಇವರು ಕೆಲಸದಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಒಂದೊಳ್ಳೆ ವಾಚ್‌, ಬ್ರೀಫ್‌ಕೇಸ್‌ ನೀಡಿ. ಐಷಾರಾಮಿ ರೆಸಾರ್ಟ್‌, ಸ್ಪಾಗೆ ಕರೆದೊಯ್ಯಿರಿ. ಕಾಫಿ ಮೆಷೀನ್‌, ವೈನ್‌ ನೀಡಿ ವೀಕೆಂಡನ್ನು ಅವರೊಂದಿಗೆ ಕಳೆಯಬಹುದು.

ಕುಂಭ ರಾಶಿ

ಇವರು ಹೆಚ್ಚಾಗಿ ತಂತ್ರಜ್ಞಾನದ ಬಗ್ಗೆ ಹೆಚ್ಚು ಆಸಕ್ತರಾಗಿರುತ್ತಾರೆ. ಸ್ಮಾರ್ಟ್ ಹೋಮ್ ಅಸಿಸ್ಟೆಂಟ್ ಅಥವಾ ವಿಆರ್ ಹೆಡ್‌ಸೆಟ್ ಅನ್ನು ಉಡುಗೊರೆಯಾಗಿ ನೀಡಿ. ಕುಂಭ ರಾಶಿಯವರು ಕಲಿಕೆ ಮತ್ತು ಹೊಸ ಆಲೋಚನೆಗಳನ್ನು ಇಷ್ಟಪಡುತ್ತಾರೆ, ಆದ್ದರಿಂದ ಆನ್‌ಲೈನ್ ಕೋರ್ಸ್ ಅಥವಾ ಅತ್ಯಾಧುನಿಕ ಪುಸ್ತಕವನ್ನು ಕೊಡುವುದು ಬೆಸ್ಟ್‌ ಆಯ್ಕೆಯಾಗಿದೆ. ಕಸ್ಟಮ್-ಮುದ್ರಿತ ಟೀ ಶರ್ಟ್ ನೀಡಬಹುದು. ಅವರನ್ನು ಸೈನ್ಸ್‌ ಮ್ಯೂಸಿಯಂಗೆ ಕೂಡಾ ಕರೆದೊಯ್ಯಬಹುದು.

ಮೀನ ರಾಶಿ

ಈ ರಾಶಿಯ ತಂದೆಯಂದಿರು ದಯೆ, ಸೃಜನಶೀಲ ಮನಸ್ಥಿತಿಯವರು. ಅವರು ಕಲಾತ್ಮಕ ಉಡುಗೊರೆಗಳನ್ನು ಇಷ್ಟಪಡುತ್ತಾರೆ. ಅವರ ಸೃಜನಶೀಲತೆಯನ್ನು ಪ್ರೇರೇಪಿಸಲು ಒಂದೊಳ್ಳೆ ಪೇಂಟಿಂಗ್‌ ನೀಡಬಹುದು. ಮೀನ ರಾಶಿಯವರು ಸಂಗೀತವನ್ನು ಇಷ್ಟಪಡುತ್ತಾರೆ, ಆದ್ದರಿಂದ ಉತ್ತಮ ಗುಣಮಟ್ಟದ ಹೆಡ್‌ಫೋನ್‌ಗಳನ್ನು ಕೊಡಬಹುದು. ಸ್ಪಾ ಪ್ಯಾಕೇಜ್ ಅಥವಾ ರಿಲಾಕ್ಸಿಂಗ್‌ ಆರೊಮ್ಯಾಟಿಕ್ ತೈಲಗಳು ಕೂಡಾ ಇವರಿಗೆ ಇಷ್ಟವಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.