ಉತ್ತಮ ಆರೋಗ್ಯದಿಂದ ಉದ್ಯೋಗದಲ್ಲಿ ಹೊಂದಾಣಿಕೆಯವರೆಗೆ; ಸೂರ್ಯನಮಸ್ಕಾರದಿಂದ ಈ ರಾಶಿಗಳಿಗೆ ಇಷ್ಟೊಂದು ಲಾಭಗಳಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಉತ್ತಮ ಆರೋಗ್ಯದಿಂದ ಉದ್ಯೋಗದಲ್ಲಿ ಹೊಂದಾಣಿಕೆಯವರೆಗೆ; ಸೂರ್ಯನಮಸ್ಕಾರದಿಂದ ಈ ರಾಶಿಗಳಿಗೆ ಇಷ್ಟೊಂದು ಲಾಭಗಳಿವೆ

ಉತ್ತಮ ಆರೋಗ್ಯದಿಂದ ಉದ್ಯೋಗದಲ್ಲಿ ಹೊಂದಾಣಿಕೆಯವರೆಗೆ; ಸೂರ್ಯನಮಸ್ಕಾರದಿಂದ ಈ ರಾಶಿಗಳಿಗೆ ಇಷ್ಟೊಂದು ಲಾಭಗಳಿವೆ

ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಕೆಲವೊಂದು ಯೋಗಾಸಗಳು ನಮಗೆ ನೆರವಾಗುತ್ತವೆ. ಸೂರ್ಯ ನಮಸ್ಕಾರದಿಂದ ಯಾವ ರಾಶಿಯವರಿಗೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ತಿಳಿಯಿರಿ.

ಸೂರ್ಯ ನಮಸ್ಕಾರದಿಂದ ಯಾವ ರಾಶಿಯವರಿಗೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ತಿಳಿಯಿರಿ
ಸೂರ್ಯ ನಮಸ್ಕಾರದಿಂದ ಯಾವ ರಾಶಿಯವರಿಗೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ತಿಳಿಯಿರಿ

ದಿನಕರ: ದಾತು ಆರೋಗ್ಯಂ ಎಂಬ ಮಾತಿದೆ. ಅಂದರೆ ಸೂರ್ಯನಿಂದ ನಮಗೆ ಉತ್ತಮ ಆರೋಗ್ಯ ದೊರೆಯುತ್ತದೆ. ಆದರೆ ಕೇವಲ ಆರೋಗ್ಯವಲ್ಲದೆ ಸಮಾಜದಲ್ಲಿ ಉತ್ತಮ ಕೀರ್ತಿ ಪ್ರತಿಷ್ಠೆ ದೊರೆಯುವುದೂ ಸೂರ್ಯನ ಪೂಜೆಯಿಂದಲೆ. ಮನೆತನದ ಆಸ್ತಿಯ ವಿಚಾರದಲ್ಲಿನ ವಾದ ವಿವಾದಗಳು ಸಹ ಸೂರ್ಯನಿಂದ ತಿಳಿಯಬಹುದು. ಸೂರ್ಯನ ಪೂಜೆಯಿಂದ ತಂದೆಯ ಜೊತೆಯಲ್ಲಿ ಉತ್ತಮ ಅನುಬಂಧ ಇರುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಹೊಂದಾಣಿಕೆ ಏರ್ಪಡುತ್ತದೆ. ಆದರೆ ಪ್ರತಿಯೊಂದು ರಾಶಿಗಳಿಗೂ ಪ್ರತ್ಯೇಕವಾದ ಫಲಗಳು ದೊರೆಯುತ್ತವೆ.

ಸೂರ್ಯದೇವರನ್ನು ಆರಾಧಿಸಲು ಅನೇಕವಾದ ಮಾರ್ಗಗಳಿವೆ. ಇದರಿಲ್ಲಿನ ಸುಲಭವಾದ ಮಾರ್ಗ ಎಂದರೆ ಸೂರ್ಯ ನಮಸ್ಕಾರ. ಸೂರ್ಯನಮಸ್ಕಾರದಿಂದ ದೈಹಿಕ ಶಕ್ತಿಯು ಹೆಚ್ಚುತ್ತದೆ. ಆತ್ಮವಿಶ್ವಾಸವನ್ನು ಗಳಿಸಲು ಸಾಧ್ಯವಾಗುತ್ತದೆ. ಸೂರ್ಯೋದಯದ ವೇಳೆಯಲ್ಲಿ ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ದೇಹದಲ್ಲಿನ ಸೋಂಕು ಸಹ ಮರೆಯಾಗುತ್ತದೆ. ಮೇಷ, ಸಿಂಹ, ವೃಶ್ಚಿಕ ಮತ್ತು ಧನg ರಾಶಿಗಳಿಗಳು ಮತ್ತು ಲಗ್ನದಲ್ಲಿ ಜನಿಸಿರುವವರಿಗೆ ಸೂರ್ಯನಮಸ್ಕಾರದಿಂದ ವಿಶೇಷ ಅನುಕೂಲತೆಗಳು ದೊರೆಯುತ್ತವೆ. ಇದರೊಂದಿಗೆ ಪ್ರತಿನಿತ್ಯ ಶ್ರೀ ಆದಿತ್ಯ ಹೃದಯವನ್ನು ಪಠಿಸುವುದು ಅಥವಾ ಕೇಳುವುದು ಬಲು ಮುಖ್ಯ.

ಸೂರ್ಯ ನಮಸ್ಕಾರದಿಂದ ಮೇಷ ರಾಶಿಯವರಿಗೆ ಏನೆಲ್ಲಾ ಪ್ರಯೋಜನಗಳಿವೆ

ಮೇಷ ರಾಶಿಯವರಿಗೆ ತಮ್ಮ ಆರೋಗ್ಯದಲ್ಲಿ ಸ್ಥಿರತೆ ಕಂಡು ಬರುತ್ತದೆ. ಮಕ್ಕಳ ವಿಚಾರದಲ್ಲಿ ಯಾವುದೇ ಯೋಚನೆ ಇರುವುದಿಲ್ಲ. ಮಕ್ಕಳ ಜೊತೆಯಲ್ಲಿ ಉತ್ತಮ ಅನುಬಂಧ ಇರುತ್ತದೆ. ಮಕ್ಕಳ ಆರೋಗ್ಯವು ಉತ್ತಮವಾಗಿರುತ್ತದೆ. ಸಾಮಾನ್ಯವಾಗಿ ಇವರು ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಸೂರ್ಯ ನಮಸ್ಕಾರದಿಂದ ಆತ್ಮವಿಶ್ವಾಸವು ಹೆಚ್ಚುತ್ತದೆ. ಯಾವುದೇ ಕೆಲಸವನ್ನು ಆತಂಕವಿಲ್ಲದೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ತಮ್ಮ ಆತುರ ಮತ್ತು ಕೋಪದ ಮನಸ್ಥಿತಿಯನ್ನು ಹತೋಟಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಸೋದರರು ಇವರ ಮಕ್ಕಳಿಗೆ ಉತ್ತಮ ಅನುಕೂಲವನ್ನು ಕಲ್ಪಿಸುತ್ತಾರೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ.

ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಸಿಂಹ ರಾಶಿ ಅಥವಾ ಸಿಂಹ ಲಗ್ನದಲ್ಲಿ ಜನಿಸಿದವರಿಗೆ ನಿರೀಕ್ಷಿತ ಫಲಿತಾಂಶಗಳು ದೊರೆಯುತ್ತದೆ. ಜೀವನದಲ್ಲಿ ಎದುರಾಗುವ ಅಡೆ ತಡೆಗಳನ್ನು ಎದುರಿಸಿ ಶುಭಫಲಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಧಿಕಾರಿಗಳಿಗೆ ತಮ್ಮ ಸಹೋದ್ಯೋಗಿಗಳ ಸಹಕಾರವು ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಕುಟುಂಬ ವರ್ಗದ ಮತ್ತು ಬಂಧು ಬಳಗದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಮುಖ್ಯಪಾತ್ರವಹಿಸುತ್ತಾರೆ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಸಹ ಇರುವುದಿಲ್ಲ. ಆದರೆ ಆಹಾರ ಸೇವನೆಯ ಬಗ್ಗೆ ಮಾತ್ರ ಎಚ್ಚರಿಕೆ ವಹಿಸಬೇಕು. ಉದ್ಯೋಗದಲ್ಲಿ ಸಮಯಕ್ಕೆ ತಕ್ಕಂತೆ ಅನುಕೂಲತೆಗಳು ದೊರೆಯುತ್ತವೆ.

ವೃಶ್ಚಿಕ ರಾಶಿಯವರಿಗೆ ಉದ್ಯೋಗದಲ್ಲಿನ ಸಮಸ್ಯೆಗಳು ಮರೆಯಾಗುತ್ತವೆ

ವೃಶ್ಚಿಕ ರಾಶಿಯವರು ಸೂರ್ಯ ನಮಸ್ಕಾರವನ್ನು ಮಾಡುವುದು ಅತಿ ಮುಖ್ಯವಾಗುತ್ತದೆ. ಉದ್ಯೋಗದಲ್ಲಿನ ಸಮಸ್ಯೆಗಳು ಮರೆಯಾಗಿ ನಿರೀಕ್ಷಿತ ಮಟ್ಟವನ್ನು ತಲುಪಲು ಸಾಧ್ಯವಾಗುತ್ತದೆ. ಸ್ವಂತ ವ್ಯಾಪಾರ ಉದ್ಯಮಗಳನ್ನು ಸ್ಥಾಪಿಸಿದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಸ್ವಂತ ಮನೆ ಕಟ್ಟಿಸುವ ಅಥವಾ ಕೊಳ್ಳುವ ಗುರಿಯನ್ನು ತರುಪಲು ಸಾಧ್ಯವಾಗುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ವ್ಯವಹರಿಸುವ ಮನಸ್ಸು ಉಂಟಾಗುತ್ತದೆ. ಇದರಿಂದಾಗಿ ಕೇವಲ ಕುಟುಂಬವಲ್ಲದೆ ಸಮಾಜದಲ್ಲಿಯೂ ನಾಯಕತ್ವದ ಹೊಣೆಗಾರಿಕೆ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಆತ್ಮಶಕ್ತಿ ಹೆಚ್ಚುತ್ತದೆ. ಕಲಿಕೆಯ ಬಗ್ಗೆ ವಿಶೇಷ ಆಸಕ್ತಿಯು ಮೂಡುತ್ತದೆ. ಸಣ್ಣಪುಟ್ಟ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುವುದಿಲ್ಲ. ದೊಡ್ಡ ಪ್ರಮಾಣದ ಉದ್ದಿಮೆಯನ್ನು ಸಹ ಸ್ಥಾಪಿಸುವ ಸಾಧ್ಯತೆಗಳು ಹೆಚ್ಚುತ್ತವೆ.

ಈ ರಾಶಿಯವರಿಗೆ ಆರಂಭಿಸಿದ ಕೆಲಸಗಳಲ್ಲಿ ಯಶಸ್ಸು ಸಿಗುತ್ತೆ

ಧನು ರಾಶಿಯವರು ಸೂರ್ಯ ನಮಸ್ಕಾರ ಮಾಡುವುದರಿಂದ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಸುಲಭವಾಗಿ ಯಶಸ್ಸು ದೊರೆಯುತ್ತದೆ. ಸಮಾಜದಲ್ಲಿ ಗೌರವದ ಸ್ಥಾನಮಾನವು ಲಭಿಸುತ್ತದೆ. ತಂದೆಯ ಜೊತೆಯಲ್ಲಿ ಹೊಂದಾಣಿಕೆಯಿಂದ ಬಾಳುವರು. ಯಾವುದೇ ಎಡರು ತೊಡರುಗಳು ಜೀವನದಲ್ಲಿ ಎದುರಾದರೂ ಅದನ್ನು ಗೆಲ್ಲುವ ಸಾಮರ್ಥ್ಯ ದೊರೆಯುತ್ತದೆ. ಉತ್ತಮ ಆದಾಯ ದೊರೆಯುತ್ತದೆ. ಆರೋಗ್ಯವನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಒಂದಕ್ಕಿಂತಲೂ ಹೆಚ್ಚಿನ ಆದಾಯದ ಮೂಲಗಳಿರುತ್ತವೆ. ಸಮಾಜ ಸೇವೆ ಮಾಡುವಲ್ಲಿ ಮೊದಲಿಗರಾಗುತ್ತಾರೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳಿಗೆ ಬದ್ಧರಾಗುವಿರಿ. ಮಕ್ಕಳ ಜೊತೆಯಲ್ಲಿ ಉತ್ತಮ ಅನುಬಂಧ ಇರುತ್ತದೆ. ದಾಂಪತ್ಯ ಜೀವನದಲ್ಲಿ ಯಾವುದೇ ರೀತಿಯ ತೊಂದರೆ ಕಂಡು ಬರುವುದಿಲ್ಲ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವುದರಲ್ಲಿ ಸಂತಸ ಕಾಣುತ್ತಾರೆ.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.