ಹೆಬ್ಬೆರಳಿನ ಮೇಲ್ಭಾಗ ಒಳಗೆ ಸೇರಿಕೊಂಡಂತೆ ಇದೆಯಾ? ಸ್ವಂತ ವ್ಯಾಪಾರದಲ್ಲಿ ಉತ್ತಮ ಆದಾಯ, ನಿಮ್ಮ ರಾಶಿ ಭವಿಷ್ಯ ಹೀಗಿದೆ
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈ ಬೆರಳುಗಳು ಪ್ರತ್ಯೇಕವಾದ ಗ್ರಹಗಳಿಂದ ಸೂಚಿಸಲ್ಪಡುತ್ತದೆ. ಪ್ರತಿಯೊಂದು ಬೆರಳಗಳು ಒಂದೊಂದು ಗ್ರಹದ ಪ್ರಭಾವಕ್ಕೆ ಒಳಗಾಗುತ್ತದೆ. ಹೆಬ್ಬೆರಳಿನ ಮಹತ್ವ ಏನು? ಹೆಬ್ಬೆರಳಿನ ಮೇಲ್ಭಾಗ ಒಳಗೆ ಸೇರಿಕೊಂಡಂತೆ ಇದ್ದರೆ ಜೀವನಲ್ಲಿದನ ಲಾಭ, ನಷ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ. (ಬರಹ: ಎಚ್. ಸತೀಶ್ ಜ್ಯೋತಿಷಿ)
ಕೆಲವರ ಹೆಬ್ಬೆರಳಿನ ಮೇಲ್ಭಾಗವು ಒಳಗೆ ಸೇರಿಕೊಂಡಂತೆ ಕಂಡು ಬರುತ್ತದೆ. ಇಂತಹವರು ಸಾಮಾನ್ಯವಾಗಿ ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಇವರು ಗುಟ್ಟಾಗಿ ಹಣವನ್ನು ಸಂಪಾದಿಸುತ್ತಾರೆ. ಯಾರೊಂದಿಗೂ ಪ್ರೀತಿ ವಿಶ್ವಾಸದಿಂದ ಬೆರೆಯದೆ ತಮ್ಮದೇ ಆದ ಹಾದಿಯಲ್ಲಿ ನಡೆಯುತ್ತಾರೆ. ಇವರಿಗೆ ಏಕಾಂಗಿತನ ಎಂದರೆ ಬಲು ಇಷ್ಟ. ಮನರಂಜನೆಯ ಕಡೆ ಗಮನ ನೀಡುವುದಿಲ್ಲ. ಇವರಲ್ಲಿ ಹುದುಗಿರುವ ಪ್ರತಿಭೆಯು ಹೊರಬರಲು ಹೆಚ್ಚಿನ ಪ್ರಯತ್ನವನ್ನು ಪಡಲೇಬೇಕು ಬೇರೆಯವರ ಸಹಾಯ ಸಹಕಾರವಿಲ್ಲದೆ ಯಾವುದೇ ಕೆಲಸವನ್ನು ಮಾಡಲಾಗುವುದಿಲ್ಲ.
ನೆರೆಹೊರೆಯವರ ಜೊತೆ ಅನಾವಶ್ಯಕವಾಗಿ ಕಿರಿಕಿರಿ ಮಾಡಿಕೊಳ್ಳುತ್ತಾರೆ. ಮೊದಲು ತಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ಆನಂತರ ಬೇರೆಯವರ ಬಗ್ಗೆ ಗಮನಹರಿಸುತ್ತಾರೆ. ಚಿಕ್ಕವಯಸ್ಸಿನಲ್ಲಿಯೇ ಇವರು ಜವಾಬ್ದಾರಿಯುತ ಸ್ಥಾನಮಾನಕ್ಕೆ ಏರುತ್ತಾರೆ. ಬೇರೆಯವರ ಮೇಲೆ ಅಧಿಕಾರ ಚಲಾಯಿಸುವಲ್ಲಿ ಸಫಲರಾಗುತ್ತಾರೆ. ಅನಾವಶ್ಯಕ ಭಿನ್ನಾಭಿಪ್ರಾಯಗಳು ಎಲ್ಲರೊಂದಿಗೆ ಇರುತ್ತವೆ. ಮಾಡಿದ ತಪ್ಪನ್ನು ಮರೆಮಾಡಿ ಎಲ್ಲರ ಮನಸ್ಸನ್ನು ತಮ್ಮ ಕಡೆ ಸೆಳೆದುಕೊಳ್ಳುತ್ತಾರೆ. ಇವರ ವಿದ್ಯಾಭ್ಯಾಸವು ಸರಳವಾಗಿ ಸಾಗುತ್ತದೆ.
ಉದ್ಯೋಗದ ವಿಚಾರದಲ್ಲಿ ಇವರಿಗೆ ಸಂತೃಪ್ತಿ ಇರುವುದಿಲ್ಲ. ಇವರ ವಿದ್ಯೆಗೆ ತಕ್ಕಂತೆ ಉದ್ಯೋಗವು ದೊರೆಯಲಾರದು. ಬೇರೆಯವರ ಅದೀನದಲ್ಲಿ ಮನಸ್ಸಿಲ್ಲದೆ ಹೋದರು ಕೆಲಸ ಮಾಡಬೇಕಾಗುತ್ತದೆ. ಇವರಿಗೆ ನಿರಾಸೆಯು ಅತಿಯಾದಾಗ ಸುತ್ತಮುತ್ತಲು ಇರುವವರ ಮೇಲೆ ತಮ್ಮ ದರ್ಪ ತೋರಿಸುತ್ತಾರೆ. ಆದರೆ ಮನಸ್ಸಿನಲ್ಲಿ ಒಂದು ರೀತಿಯ ಭಯ ಇರುತ್ತದೆ. ವಿವಾದವು ಎದುರಾಗುವ ವೇಳೆ ಬುದ್ಧಿವಂತಿಕೆಯಿಂದ ಅದರಿಂದ ದೂರವಾಗುತ್ತಾರೆ.
ನಿರೀಕ್ಷಿಸಿದಷ್ಟು ಆದಾಯವು ದೊರೆಯುವುದಿಲ್ಲ
ಸ್ವತಂತ್ರವಾಗಿ ವ್ಯಾಪಾರ ವ್ಯವಹಾರ ಆರಂಭಿಸಿದಲ್ಲಿ ಯಾರ ಸಲಹೆಯನ್ನು ಕೇಳುವುದಿಲ್ಲ. ಇವರು ನಿರೀಕ್ಷಿಸಿದಷ್ಟು ಆದಾಯವು ದೊರೆಯುವುದಿಲ್ಲ. ಇವರದೇ ಆಗ ತಪ್ಪಿನಿಂದ ಹಣದ ಕೊರತೆಯನ್ನು ಎದುರಿಸುತ್ತಾರೆ. ಕೈಯಲ್ಲಿ ಇರುವ ಹಣವನ್ನು ಖರ್ಚು ಮಾಡುವವರೆಗೂ ಇವರಿಗೆ ಸಮಾಧಾನ ಇರುವುದಿಲ್ಲ. ಉದ್ಯೋಗದಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಇಷ್ಟಪಡುವುದಿಲ್ಲ. ಒಂದೇ ರೀತಿಯ ಜೀವನ ಮತ್ತು ಒಂದೇ ರೀತಿಯ ಉದ್ಯೋಗ ನಡೆಸುತ್ತಾರೆ. ರಾಜಕೀಯ ಕ್ಷೇತ್ರದಲ್ಲಿ ಇವರಿಗೆ ಉತ್ತಮ ಹೆಸರು ಮತ್ತು ಕೀರ್ತಿ ಲಭಿಸುತ್ತದೆ. ಕುಟುಂಬದ ಹಣಕಾಸಿನ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ.
ಇವರ ಮಕ್ಕಳು ಇವರ ಗುಣ ಧರ್ಮಗಳನ್ನೇ ಹೊಂದಿರುತ್ತಾರೆ. ಇವರುಗಳು ಚಿಕ್ಕ ವಯಸ್ಸಿನಲ್ಲಿ ಹಣ ಗಳಿಸಲು ಆರಂಭಿಸುತ್ತಾರೆ. ಇರುವ ಹಣವು ಖರ್ಚಾದ ಮೇಲೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಆದರೂ ಬುದ್ಧಿವಂತಿಕೆಯಿಂದ ತಮಗೆ ಅವಶ್ಯಕತೆ ಇರುವಷ್ಟು ಹಣವನ್ನು ಸಂಪಾದಿಸುತ್ತಾರೆ. ಹಣದ ಸಹಾಯ ಮಾಡುತ್ತಾರೆ. ಆದರೆ ಯಾರಿಗೂ ಸಾಲವಾಗಿ ಹಣವನ್ನು ನೀಡುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯವಿರುತ್ತದೆ.
ಪಾರುಗಾರಿಕೆಯ ವ್ಯಾಪಾರವನ್ನು ಇಷ್ಟಪಡುವುದಿಲ್ಲ. ಒಂದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಹಣ ಗಳಿಸುವ ಗುರಿ ಇರುತ್ತದೆ. ಮಧ್ಯ ವಯಸ್ಸು ಜಾರಿದ ನಂತರ ಇವರ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ದಾಂಪತ್ಯಜೀವನ ಸುಧೀರ್ಘವಾಗಿರುತ್ತದೆ. ಸಂಗಾತಿ ಮತ್ತು ಮಕ್ಕಳ ಹೊರತಾಗಿ ಬೇರೆಯಾರನ್ನು ಇವರು ನಂಬುವುದಿಲ್ಲ. ಹಣಕಾಸಿನ ನಿರ್ವಹಣೆಯನ್ನು ಮಕ್ಕಳಿಗೂ ತಿಳಿಸುವುದಿಲ್ಲ. ಒಟ್ಟಿನಲ್ಲಿ ಸದಾ ಕಾಲ ಇವರು ಏನಾದರೂ ಒಂದು ವಿಚಾರದಲ್ಲಿ ಚಿಂತೆಯನ್ನು ಮಾಡುತ್ತಾರೆ. ಹೊಂದಾಣಿಕೆಯ ಗುಣವನ್ನು ಬೆಳೆಸಿಕೊಂಡಲ್ಲಿ ಜೀವನದಲ್ಲಿ ಯಾವುದೇ ರೀತಿಯ ತೊಂದರೆ ಎದುರಾಗುವುದಿಲ್ಲ.
(ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)