ಕನ್ನಡ ಸುದ್ದಿ  /  Astrology  /  Horoscope Holi 2024 Lucky Zodiac Signs Due To Special Yoga On Holi Astrology Mgb

ಹೋಳಿ ಹಬ್ಬದಂದು 4 ಶುಭ ಯೋಗಗಳು: ಕಲರ್​ಫುಲ್ ಆಗಿರತ್ತೆ ಈ ರಾಶಿಯವರ ಜೀವನ

Holi Lucky Zodiac Signs: ಹೋಳಿ ಹಬ್ಬದ ದಿನದಂದು ನಾಲ್ಕು ಶುಭ ಯೋಗಗಳು ರೂಪುಗೊಳ್ಳಲಿದೆ. ಇದರ ಪರಿಣಾಮದಿಂದಾಗಿ ನಾಲ್ಕು ರಾಶಿಯವರಿಗೆ ಶುಭದಿನಗಳು ಪ್ರಾರಂಭವಾಗಲಿವೆ. ಹಾಗಾದ್ರೆ ಬನ್ನಿ ಯಾವ ರಾಶಿಯವರಿಗೆ ಈ ಅದೃಷ್ಟವಿದೆ ಎಂದು ನೋಡೋಣ.

ಹೋಳಿ ರಾಶಿಭವಿಷ್ಯ (ಪ್ರಾತಿನಿಧಿಕ ಚಿತ್ರ)
ಹೋಳಿ ರಾಶಿಭವಿಷ್ಯ (ಪ್ರಾತಿನಿಧಿಕ ಚಿತ್ರ)

ಹೋಳಿ ಹಬ್ಬ ಬಂತು. ಈ ವರ್ಷ ಹೋಳಿ ಹಬ್ಬವು ಬಹಳ ವಿಶೇಷವಾಗಿದೆ. ಏಕೆಂದರೆ ಮಾರ್ಚ್​ 25ರಂದು ಹೋಳಿ ಹಬ್ಬದ ದಿನ 4 ಶುಭ ಯೋಗಗಳು ರೂಪುಗೊಳ್ಳಲಿದೆ. ಅವ್ಯಾವುವೆಂದರೆ ಶಶ ಯೋಗ, ಬುಧಾದಿತ್ಯ ರಾಜಯೋಗ, ಧನಶಕ್ತಿ ಯೋಗ ಮತ್ತು ಗ್ರಹಣ ಯೋಗ. ಈ ಎಲ್ಲಾ ಯೋಗಗಳ ಸಂಯೋಜನೆಯು ಅನೇಕ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಪೈಕಿ ನಾಲ್ಕು ರಾಶಿಯವರಿಗೆ ಮಂಗಳಕರವಾಗಿದ್ದು, ಶುಭಫಲವಿದೆ.

ಬುಧಾದಿತ್ಯ ರಾಜಯೋಗವು ಮೀನ ರಾಶಿಯಲ್ಲಿ ಸೂರ್ಯ ಮತ್ತು ಬುಧ ಸಂಯೋಗದಿಂದ ಉಂಟಾಗುತ್ತದೆ. 30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಶನಿಯು ಶಶ ರಾಜಯೋಗವನ್ನು ರೂಪಿಸುತ್ತಿದ್ದಾನೆ. ಇದರೊಂದಿಗೆ ಸಂಪತ್ತು ನೀಡುವ ಶುಕ್ರ ಮತ್ತು ಮಂಗಳ ಕುಂಭ ರಾಶಿಯಲ್ಲಿ ಸಂಯೋಗವಾಗಲಿದೆ. ಇದರಿಂದ ಧನ ಶಕ್ತಿ ಯೋಗ ರೂಪುಗೊಳ್ಳಲಿದೆ. ಇವೆಲ್ಲವೂ ಸೇರಿಕೊಂಡು ಈ ಬಾರಿಯ ಹೋಳಿಯನ್ನು ಹೆಚ್ಚು ವಿಶೇಷವಾಗಿಸುತ್ತದೆ. ಇವುಗಳ ಜೊತೆಗೆ ಹೋಳಿಯಂದು ಚಂದ್ರಗ್ರಹಣ ಬಂಧಿರುವುದರಿಂದ ಗ್ರಹಣ ಯೋಗ ಕೂಡ ಉಂಟಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣ ಯೋಗವನ್ನು ಅಶುಭವೆಂದು ಪರಿಗಣಿಸಲಾಗಿದೆ. ಆದರೆ ಇದು ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಹೊಂದಿದೆ. ಈ ಗ್ರಹಣ ಯೋಗದ ಪ್ರಭಾವದಿಂದ ನಾಲ್ಕು ರಾಶಿಯವರಿಗೆ ಅದೃಷ್ಟ ಒಲಿಯಲಿದೆ. ಈ ಎಲ್ಲಾ ಯೋಗಗಳು ಒಟ್ಟುಗೂಡುವುದರಿಂದ, ಈ 4 ರಾಶಿಯ ಜನರು ವರ್ಣರಂಜಿತ ಜೀವನವನ್ನು ಆನಂದಿಸುತ್ತಾರೆ.

ವೃಷಭ ರಾಶಿ

ವೃಷಭ ರಾಶಿಯವರ ಅದೃಷ್ಟ ಹೆಚ್ಚಲಿದೆ. ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ಪಿತ್ರಾರ್ಜಿತ ಸಂಪತ್ತನ್ನು ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ಲಾಭ ಇರುತ್ತದೆ. ವ್ಯಾಪಾರದಲ್ಲಿ ದ್ವಿಗುಣ ಲಾಭವಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ.

ಸಿಂಹ ರಾಶಿ

ಹೋಳಿ ನಂತರ ಸಿಂಹ ರಾಶಿಯವರು ಹಠಾತ್ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಇರುತ್ತದೆ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದಲ್ಲಿ ಫಲಪ್ರದ ಆದಾಯವನ್ನು ಸಿಗಲಿದೆ. ಹಣವನ್ನು ಗಳಿಸುವ ಅವಕಾಶಗಳನ್ನು ತರುತ್ತದೆ. ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಸಂತೋಷವಾಗಿರುತ್ತೀರಿ. ಉದ್ಯೋಗದಲ್ಲಿ ಮೇಲುಗೈ ಸಾಧಿಸುವಿರಿ. ದಾನ ಮಾಡುವಿರಿ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಭೂಮಿ ಖರೀದಿಸುವ ಸಾಧ್ಯತೆ ಇದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳು ಸಿಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆಯನ್ನು ಕಾಣುತ್ತಾರೆ. ಕುಟುಂಬ ಸಂಬಂಧಗಳು ಬಲಗೊಳ್ಳುತ್ತವೆ. ನಿಮ್ಮ ಸಂಗಾತಿಯಿಂದ ನೀವು ಅಂತ್ಯವಿಲ್ಲದ ಪ್ರೀತಿಯನ್ನು ಪಡೆಯುತ್ತೀರಿ. ನೆಮ್ಮದಿಯಿಂದ ಬದುಕು ಸಾಗಿಸುವಿರಿ. ಲಾಭದಾಯಕ ವ್ಯವಹಾರಗಳನ್ನು ಮಾಡುವಿರಿ. ವ್ಯವಹಾರದಲ್ಲಿ ನಿಮ್ಮ ಶ್ರಮ ನಿಮ್ಮನ್ನು ಉನ್ನತ ಸ್ಥಾನಕ್ಕೆ ತರುತ್ತದೆ. ನೀವು ಯಶಸ್ಸಿನತ್ತ ಸಾಗುವಿರಿ.

ಮೀನ ರಾಶಿ

ವ್ಯಾಪಾರ ಕ್ಷೇತ್ರದಲ್ಲಿ ಅಭಿವೃದ್ಧಿ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಲಾಭದಾಯಕ ಫಲಿತಾಂಶಗಳನ್ನು ಪಡೆಯುತ್ತಾರೆ. ಆಧ್ಯಾತ್ಮಿಕವಾಗಿ ಬಲಗೊಳ್ಳುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಸಂತೃಪ್ತಿಕರ ಜೀವನ ನಡೆಸುವಿರಿ. ಈ ಗ್ರಹಣ ಯೋಗವು ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.