ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೋ, ಇಲ್ಲವೋ ಪತ್ತೆ ಹಚ್ಚುವುದು ಹೇಗೆ? ಅವರನ್ನು ಹೋಗಲಾಡಿಸುವುದು ಹೇಗೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೋ, ಇಲ್ಲವೋ ಪತ್ತೆ ಹಚ್ಚುವುದು ಹೇಗೆ? ಅವರನ್ನು ಹೋಗಲಾಡಿಸುವುದು ಹೇಗೆ?

ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೋ, ಇಲ್ಲವೋ ಪತ್ತೆ ಹಚ್ಚುವುದು ಹೇಗೆ? ಅವರನ್ನು ಹೋಗಲಾಡಿಸುವುದು ಹೇಗೆ?

ಎಷ್ಟೋ ಬಾರಿ ಮನೆಯಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು ಉದ್ಬವಿಸುತ್ತವೆ. ಇದಕ್ಕೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ನೆಲೆಸಿರುವುದೇ ಕಾರಣವಿರಬಹುದು. ಮನೆಯಲ್ಲಿ ನಕಾರಾತ್ಮಕ ಅಂಶಗಳನ್ನು ಪತ್ತೆ ಹಚ್ಚುವುದು ಹೇಗೆ? ಅವುಗಳನ್ನು ಹೋಗಲಾಡಿಸಲು ಏನು ಪರಿಹಾರ? ಇಲ್ಲಿದೆ ಮಾಹಿತಿ.

ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೋ, ಇಲ್ಲವೋ ಪತ್ತೆ ಹಚ್ಚುವುದು ಹೇಗೆ? ಅವರನ್ನು ಹೋಗಲಾಡಿಸುವುದು ಹೇಗೆ?
ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೋ, ಇಲ್ಲವೋ ಪತ್ತೆ ಹಚ್ಚುವುದು ಹೇಗೆ? ಅವರನ್ನು ಹೋಗಲಾಡಿಸುವುದು ಹೇಗೆ? (PC: Unsplash)

ಪ್ರತಿಯೊಬ್ಬರೂ ತಾವು ಜೀವನದಲ್ಲಿ ಸಂತೋಷದಿಂದ ಬದುಕಬೇಕು. ಜೀವನದಲ್ಲಿ ಅಭಿವೃದ್ಧಿ ಹೊಂದಬೇಕು. ಯಾವ ಕಷ್ಟಗಳೂ ಇಲ್ಲದಂತೆ ಬದುಕಬೇಕು ಎಂಬ ಆಸೆ ಇರುತ್ತದೆ. ಜೀವನದಲ್ಲಿ ಕಷ್ಟ ಸುಖ ಸಾಮಾನ್ಯ. ಏನೇ ಕಷ್ಟ ಎದುರಾದರೂ ಅದನ್ನು ಎದುರಿಸಿ ಮುಂದೆ ಸಾಗಬೇಕು ಅನ್ನೋದು ಕೆಲವರ ಪಾಲಿಸಿ. ಆದರೆ ಕೆಲವರಿಗಂತೂ ಮೇಲಿಂದ ಮೇಲೆ ಕಷ್ಟಗಳು ಎದುರಾಗುತ್ತಲೇ ಇರುತ್ತದೆ.

ಎಲ್ಲಾ ಸರಿ ಇದ್ದರೂ ಏನೋ ಸರಿ ಇಲ್ಲ ಎನ್ನುವಂತೆ ಕೆಲವರಿಗೆ ಕಷ್ಟಗಳು ಬಿಟ್ಟು ಹೋಗುವುದೇ ಇಲ್ಲ. ಆದರೆ ಇದಕ್ಕೆಲ್ಲಾ ವಾಸ್ತು ದೋಷಗಳೂ ಕಾರಣವಿರಬಹುದು. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ನೆಲೆಸಿದ್ದರೆ ಅಲ್ಲಿ ಸಂತೋಷಕ್ಕೆ ಅವಕಾಶವೇ ಇರುವುದಿಲ್ಲ ಎಂಬಂತಾಗುತ್ತದೆ. ಹಾಗಾದರೆ ಮನೆಯಲ್ಲಿ ನಕಾರಾತ್ಮಕ ಅಂಶಗಳು ಇರುವುದನ್ನು ಹೇಗೆ ಕಂಡು ಹಿಡಿಯುವುದು. ಹಾಗೇ ಅವುಗಳನ್ನು ತೊಲಗಿಸುವುದು ಹೇಗೆ ನೋಡೋಣ.

  • ಮನೆಯ ಸದಸ್ಯರು ಕಾರಣವಿಲ್ಲದೆ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು, ಎಷ್ಟೇ ಬಾರಿ ವೈದ್ಯರನ್ನು ಭೇಟಿ ಮಾಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಇರುವುದು.
  • ಇನ್ನೇನು ಯಶಸ್ಸು ದೊರೆಯುತ್ತದೆ, ಒಳ್ಳೆ ಅವಕಾಶಗಳು ದೊರೆಯುತ್ತಿದೆ ಎಂದಾಗಲೇ ಕೊನೆಯ ಕ್ಷಣಗಳಲ್ಲಿ ಎಲ್ಲವೂ ಕೈ ತಪ್ಪಿ ಹೋಗುವುದು.

ಇದನ್ನೂ ಓದಿ:  ಮಿಥುನ ರಾಶಿಗೆ ಮಂಗಳ ಸಂಚಾರ; ಮೇಷ ಸೇರಿದಂತೆ ಈ 4 ರಾಶಿಯವರು ಎಲ್ಲಿ ಹೋದರೂ ಹಿಂಬಾಲಿಸಲಿದ್ದಾಳೆ ಅದೃಷ್ಟ ದೇವತೆ

  • ನೀವಾಗಲೀ, ಮನೆಯ ಸದಸ್ಯರಾಗಲೀ ಸದಾ ಆಲಸ್ಯದಿಂದ ಇರುವುದು, ಎಲ್ಲಾ ಅವಕಾಶಗಳು ಕಣ್ಣೆದುರು ಇದ್ದರೂ ಅದನ್ನು ನಿಭಾಯಿಸಲು ಸಾಧ್ಯವಾಗದೆ ಇರುವುದು
  • ಮನೆಯಲ್ಲಿ ಪ್ರತಿದಿನ ಜಗಳ ಆಗುವುದು, ಉಸಿರು ಕಟ್ಟುವಂತ ವಾತಾವರಣ ಎನಿಸುವುದು
  • ಮನಸ್ಸು ಸದಾ ನಕಾರಾತ್ಮಕ ಆಲೋಚನೆ ಮಾಡುವುದು ಅಥವಾ ಆತ್ಮಹತ್ಯೆಯ ಆಲೋಚನೆ ಮಾಡುವುದು
  • ಕುಟುಂಬದ ಸದಸ್ಯರ ವಿಚಿತ್ರ ವರ್ತನೆ, ಗುಂಪಿನಲ್ಲಿ ಅವರು ಪ್ರತ್ಯೇಕವಾಗಿರುವುದು
  • ಕುಟುಂಬದ ಸದಸ್ಯರ ನಡುವೆ ಎಲ್ಲವೂ ಸರಿ ಇದ್ದರೂ ಮನೆಯಲ್ಲಿ ಖುಷಿ ಇಲ್ಲದೆ ಇರುವುದು, ಸದಾ ನೀರಸ ವಾತಾವರಣ
  • ನಿಮ್ಮ ಮನೆಯ ಸಾಕು ಪ್ರಾಣಿಗಳು ಆಗಿಂದ್ದಾಗೆ ಸಾವನ್ನಪ್ಪುವುದು

ಇಂಥಹ ಸಂದರ್ಭಗಳಲ್ಲಿ ಮನೆಯಲ್ಲಿ ಖಂಡಿತ ನಕಾರಾತ್ಮಕ ಶಕ್ತಿಗಳು ಇವೆಯೆಂದೇ ಹೇಳಬಹುದು

ಕೆಲವೊಮ್ಮೆ ಇದಕ್ಕೆ ವಾಸ್ತುದೋಷವೂ ಕಾರಣವಿರಬಹುದು, ಆದರೆ ನೀವು ಸುಲಭವಾಗಿ ನೀವೇ ಪರಿಹಾರ ಕಂಡುಕೊಳ್ಳಬಹುದು.

ಪರಿಹಾರಗಳೇನು?

  • ಮನೆಯ ಸುತ್ತಮುತ್ತ, ಒಳಗೆ ಸದಾ ಸ್ಚಚ್ಛತೆಗೆ ಆದ್ಯತೆ ಕೊಡಿ, ಇದು ನಕಾರಾತ್ಮಕ ಅಂಶಗಳು ದೂರವಿರಲು ಸಹಾಯ ಮಾಡುತ್ತದೆ. ಮನೆಯಲ್ಲಿ ಸದಾ ಪಾಸಿಟಿವ್‌ ವೈಬ್ಸ್‌ ತುಂಬಿರುತ್ತದೆ.
  • ಬಾಗಿಲು, ಕಿಟಕಿಗಳನ್ನು ಸ್ವಚ್ಚಗೊಳಿಸಲು ನೀರಿನಿಂದಿಗೆ ನಿಂಬೆ ರಸ, ಉಪ್ಪು, ಬಿಳಿ ವಿನಿಗರ್‌ಗಳನ್ನು ಬಳಸಿ, ಮನೆ ಪ್ರವೇಶ ದ್ವಾರದ ಬಳಿ ಹರಳುಪ್ಪು ಇಡಿ.
  • ಗುರುವಾರ ಹೊರತುಪಡಿಸಿ, ಪ್ರತಿದಿನ ಮನೆ ಒರೆಸುವಾಗ ನೀರಿಗೆ ಸ್ವಲ್ಪ ಸಮುದ್ರ ಉಪ್ಪನ್ನು ಸೇರಿಸಿ, ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿ ತೊಲಗಲು ಬಹಳ ಉಪಕಾರಿಯಾಗಿದೆ.
  • ಮಕ್ಕಳು ಅಥವಾ ಹಿರಿಯರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಲ್ಲಿ ಒಂದು ಹಿಡಿ ಉಪ್ಪನ್ನು ತೆಗೆದುಕೊಂಡು ಅದನ್ನು 3 ಬಾರಿ ವ್ಯಕ್ತಿಯ ತಲೆಯಿಂದ ನಿವಾಳಿಸಿ ಎಸೆಯಬೇಕು.
  • ಕೆಂಪು ಬಟ್ಟೆಯಲ್ಲಿ ಒಂದಿಷ್ಟು ಉಪ್ಪನ್ನು ಸೇರಿಸಿ ಆ ಗಂಟನ್ನು ಕಚೇರಿಯಲ್ಲಿ ನೇತು ಹಾಕಿದರೆ ಇದು ದುಷ್ಟ ಕಣ್ಣುಗಳಿಂದ ಮನೆಯವರನ್ನು, ವ್ಯಾಪಾರವನ್ನು ರಕ್ಷಿಸುತ್ತದೆ.
  • ವಾಸ್ತುಶಾಸ್ತ್ರದ ಪ್ರಕಾರ, ಗಾಜು ಮತ್ತು ಉಪ್ಪು ಎರಡೂ ರಾಹುವಿನ ಅಂಶಗಳಾಗಿವೆ. ಆದ್ದರಿಂದ, ಮನೆಯಲ್ಲಿನ ಶೌಚಾಲಯ ಮತ್ತು ಸ್ನಾನಗೃಹದಲ್ಲಿ ಉಪ್ಪು ತುಂಬಿದ ಗಾಜಿನ ಲೋಟವನ್ನು ಇಡಬೇಕು. ಇದು ವಾಸ್ತು ದೋಷಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
  • ಪ್ರತಿದಿನ ಸಂಜೆ ಅಗರಬತ್ತಿ ಅಥವಾ ಧೂಪಗಳನ್ನು ಹಚ್ಚುವುದರಿಂದ ನಕಾರಾತ್ಮಕ ಶಕ್ತಿಗಳು ಮನೆ ಒಳಗೆ ಪ್ರವೇಶಿಸದಂತೆ ತಡೆಯುತ್ತದೆ.
  • ಬಣ್ಣಗಳು ಕೂಡಾ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಆದ್ದರಿಂದ ನಿಮ್ಮ ಮನೆಗೆ ಹಸಿರು, ಕೆಂಪು, ಹಳದಿ ಬಣ್ಣಗಳನ್ನು ಬಳಸಿ, ಆದರೆ ಕಪ್ಪು ಬಣ್ಣಗಳನ್ನು ಬಳಸಬೇಡಿ.
  • ಪಿರಮಿಡ್ ಯಂತ್ರಗಳು, ವಿಗ್ರಹಗಳು ಅಥವಾ ದೇವರ ಚಿತ್ರಗಳನ್ನು ಮನೆಯಲ್ಲಿ ಇಡುವುದು ಮಂಗಳಕರ ಶಕ್ತಿಯನ್ನು ಆಹ್ವಾನಿಸುತ್ತದೆ
  • ಘಂಟೆಗಳು, ಶಂಖಗಳು, ತಾಳಗಳಂತಹ ಶುಭ ಶಬ್ದಗಳನ್ನು ಪ್ರೋತ್ಸಾಹಿಸಬೇಕು. ಇವುಗಳ ಸದ್ದು ನಕಾರಾರತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ. ಚೈನೀಸ್‌ ವಾಸ್ತುವಿನ ವಿಂಡ್‌ಚೈಮ್‌ಗಳನ್ನು ಕೂಡಾ ನೀವು ಮನೆಗೆ ತರಬಹುದು.

ಇದನ್ನೂ ಓದಿ: ಅಶುಭವಲ್ಲ, ಶುಭ ಫಲಗಳನ್ನೂ ನೀಡಲಿದ್ದಾನೆ ರಾಹು; ಈ ಎರಡೂ ರಾಶಿಗಳೆಂದರೆ ರಾಹುವಿಗೆ ಇನ್ನಿಲ್ಲದ ಪ್ರೀತಿ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.