Birth Date: ಜವಾಬ್ದಾರಿಯುತ ಜೀವನ, ಯಾರ ಮನಸ್ಸನ್ನು ನೋಯಿಸಲು ಬಯಸಲ್ಲ; 10ನೇ ತಾರೀಕು ಜನಿಸಿದವರ ಗುಣ-ಸ್ವಭಾವವಿದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Birth Date: ಜವಾಬ್ದಾರಿಯುತ ಜೀವನ, ಯಾರ ಮನಸ್ಸನ್ನು ನೋಯಿಸಲು ಬಯಸಲ್ಲ; 10ನೇ ತಾರೀಕು ಜನಿಸಿದವರ ಗುಣ-ಸ್ವಭಾವವಿದು

Birth Date: ಜವಾಬ್ದಾರಿಯುತ ಜೀವನ, ಯಾರ ಮನಸ್ಸನ್ನು ನೋಯಿಸಲು ಬಯಸಲ್ಲ; 10ನೇ ತಾರೀಕು ಜನಿಸಿದವರ ಗುಣ-ಸ್ವಭಾವವಿದು

Birth Date Astrology: 10ನೇ ತಾರೀಕು ಹುಟ್ಟಿದವರ ಗುಣ-ಜೀವನದ ಕುರಿತು ಜ್ಯೋತಿಷಿ ಎಚ್‌. ಸತೀಶ್‌ ಅವರು ನೀಡಿದ ಮಾಹಿತಿ ಇಲ್ಲಿದೆ.

ಜನ್ಮದಿನಾಂಕ ಭವಿಷ್ಯ (ಪ್ರಾತಿನಿಧಿಕ ಚಿತ್ರ)
ಜನ್ಮದಿನಾಂಕ ಭವಿಷ್ಯ (ಪ್ರಾತಿನಿಧಿಕ ಚಿತ್ರ)

ಯಾವುದೇ ತಿಂಗಳ 10ನೇ ತಾರೀಕು ಹುಟ್ಟಿದವರು ಮನೆಯವರು, ಸಂಬಂಧಿಕರು ಅಥವಾ ಹೊರಗಿನವರು ಎಂಬ ಭೇದವಿಲ್ಲದೆ ಎಲ್ಲರನ್ನು ಒಂದೇ ಭಾವನೆಯಿಂದ ಕಾಣುವಿರಿ. ಕೆಲಸ ಮಾಡದೆ ವೇಳೆ ಕಳೆಯುವುದು ಇವರಿಗೆ ಆಗದ ವಿಷಯ. ತಮಗೆ ಸಂಬಂಧಿಸದೆ ಹೋದರು ಕೆಲಸ ಮಾಡುವವರಿಗೆ ಸಹಾಯ ಮಾಡುವುದೇ ಇವರ ಹುಟ್ಟುಗುಣ. ಮನದಲ್ಲಿ ಇರುವ ವಿಚಾರಗಳನ್ನು ಎಲ್ಲರೊಡನೆ ಹಂಚಿಕೊಳ್ಳುವಿರಿ. ಉದಾರ ಮನಸ್ಸಿನಿಂದ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವಿರಿ. ಅತೀವ ಆತ್ಮಶಕ್ತಿಯಿಂದ ಎದುರಾಗುವ ಸವಾಲುಗಳನ್ನು ಜಯಿಸುವಿರಿ. ಕುಟುಂಬದ ಸದಸ್ಯರು ಸುಖ ಜೀವನ ನಡೆಸಲು ಕಾರಣರಾಗುವಿರಿ. ಯಾವ ವಿಚಾರದಲ್ಲಿಯೂ ಆಸೆ ಇರುವುದಿಲ್ಲ. ದುರಾಸೆಯ ಗುಣವು ಇರದು. ಸೋಲೋ ಗೆಲುವೋ ದೊರಕಿದ ಫಲಿತಾಂಶಗಳನ್ನು ಒಂದೇ ಮನಸ್ಸಿನಿಂದ ಸ್ವೀಕರಿಸಿ ಇತರರಿಗೆ ಮಾದರಿಯಾಗುವಿರಿ.

ಹೆಣ್ಣು ಮಕ್ಕಳಾದರೂ ಸರಿಯೇ ಇವರನ್ನು ಎದುರಿಸಿ ಗೆಲ್ಲಲು ಯಾರಿಗೂ ಸಾಧ್ಯವಾಗುವುದಿಲ್ಲ. ಕಾರಣ ಇವರಿಗೆ ಒಪ್ಪದ ವಿಚಾರಗಳನ್ನು ಮನಮುಟ್ಟುವಂತೆ ತಿಳಿಸಬೇಕು. ನಿರಾಸೆ ಮತ್ತು ಸೋಲಿಗೆ ತಕ್ಕ ಉತ್ತರವನ್ನು ನೀಡಬಲ್ಲರು. ನ್ಯಾಯ ನೀತಿಗೆ ಮತ್ತು ಕಾನೂನಿಗೆ ಗೌರವವನ್ನು ನೀಡುವಿರಿ. ಅನಾವಶ್ಯಕವಾಗಿ ಯಾರ ವೈಯಕ್ತಿಕ ವಿಚಾರದಲ್ಲೂ ಭಾಗಿಯಾಗುವುದಿಲ್ಲ, ಆದರೆ ಸೋಲುವ ವೇಳೆ ಗೆಲುವಿಗಾಗಿ ಯಾವುದೇ ಸಾಹಸವನ್ನು ಮಾಡಬಲ್ಲರಿ. ಸೂರ್ಯೋದಯದ ವೇಳೆಯಲ್ಲಿ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ.

ಆರಂಭದಲ್ಲಿ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗಬಹುದು. ಆದರೆ ಗೌರವವನ್ನು ಉಳಿಸಿಕೊಳ್ಳಲು ಹೆಚ್ಚಿನ ಪ್ರಯತ್ನದಿಂದ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವಿರಿ. ವಿವಾಹ ಇವರ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತದೆ. ಜವಾಬ್ದಾರಿಯುತ ಜೀವನವು ಆರಂಭವಾಗುವುದೆ. ವಿವಾಹವಾದ ನಂತರ ಹೆತ್ತವರು ಮತ್ತು ಸಂಗಾತಿಯ ನಡುವೆ ಉತ್ತಮ ಬಾಂಧವ್ಯ ರೂಪಿಸಲು ಪ್ರಯತ್ನಿಸುವಿರಿ. ಮನಸ್ಸಿಗೆ ಒಪ್ಪುವ ಸಂಗಾತಿ ಇವರಿಗೆ ದೊರೆಯುತ್ತಾರೆ. ಯಾವುದೋ ಒಂದೇ ರೀತಿಯ ಕೆಲಸ ಕಾರ್ಯಗಳನ್ನು ಮಾಡಲು ಇಚ್ಚಿಸುವುದಿಲ್ಲ. ಎರಡು ಅಥವಾ ಅದಕ್ಕಿಂತಲೂ ಹೆಚ್ಚಿನ ರೀತಿಯ ಉದ್ಯೋಗವನ್ನು ಮಾಡಲು ಇಷ್ಟಪಡುವಿರಿ.

ಹಣಕಾಸಿನ ವ್ಯವಹಾರದಲ್ಲಿ ಆಸಕ್ತಿ ಇರುವುದಿಲ್ಲ. ಯಾರ ಮನಸ್ಸನ್ನು ನೋಯಿಸುವ ಇಚ್ಛೆ ಇರುವುದಿಲ್ಲ. ಕಷ್ಟಕ್ಕೆಂದು ಕೊಟ್ಟ ಹಣವನ್ನು ಮರಳಿ ಕೇಳದ ಮಂದಿ ಇವರು. ದಾನ ಧರ್ಮಗಳನ್ನು ಪೂರ್ಣ ಮನಸ್ಸಿನಿಂದ ಮಾಡುತ್ತಾರೆ. ತಂದೆಯಿಂದ ಯಾವುದೇ ಅನುಕೂಲ ದೊರೆಯದೆ ಹೋದರು ಅವರ ಮೇಲೆ ಅಪರಿಮಿತ ಗೌರವವನ್ನು ತೋರುವರು. ಬೇರೆಯವರಿಗೆ ಕೆಲಸ ಕಾರ್ಯಗಳನ್ನು ಮಾಡಲು ಮಾದರಿ ವ್ಯಕ್ತಿಯಾಗಿ ನಿಲ್ಲುವರು. ಮಾಡುವ ಕೆಲಸ ಸಣ್ಣ ಪ್ರಮಾಣವಾದರೂ ಹೆಚ್ಚಿನ ಶ್ರದ್ಧೆಯಿಂದ ಮುಂದುವರೆಯುವರು. ಚಿಕ್ಕ ಮಕ್ಕಳ ಜೊತೆಯಲ್ಲಿ ವೇಳೆ ಕಳೆಯುವುದೆಂದರೆ ಇವರಿಗೆ ಬಲು ಪ್ರೀತಿ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ನೋವನ್ನೆಲ್ಲ ಮರೆಯುತ್ತಾರೆ.

ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಇವರಲ್ಲಿರುವ ವಿದ್ಯೆಯನ್ನೆಲ್ಲ ಬೇರೆಯವರಿಗೆ ಕಲಿಸಲು ಹಿಂಜರಿಯುವುದಿಲ್ಲ. ಇವರ ಮನಸ್ಸನ್ನು ಗೆದ್ದವರಿಗೆ ಜೀವನದಲ್ಲಿ ಯಾವುದೇ ಕಷ್ಟ ನಷ್ಟಗಳು ಎದುರಾಗುವುದಿಲ್ಲ. ಹಣಕಾಸಿನ ವ್ಯವಹಾರದಲ್ಲಿ ಆಸಕ್ತಿ ಇರುವುದಿಲ್ಲ. ಬೇರೆಯವರ ಮನಸ್ಸನ್ನು ನೋಯಿಸಿ ಜೀವನ ಮಾಡಲು ಇಷ್ಟಪಡುವುದಿಲ್ಲ. ವಯೋವೃದ್ಧರಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಒಂದೇ ರೀತಿಯ ಪ್ರೀತಿ, ವಿಶ್ವಾಸ, ಗೌರವವನ್ನು ತೋರಿಸುತ್ತಾರೆ. ಸಮಾಜ ಸೇವೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ತಾವಾಗಿಯೇ ಸಹಾಯ ಮಾಡಲು ಬಂದರೂ ಅದನ್ನು ತಿರಸ್ಕರಿಸಿ ಆತ್ಮವಿಶ್ವಾಸದಿಂದ ಮುಂದುವರೆಯುತ್ತಾರೆ. ಇವರ ಜೀವನದಲ್ಲಿ ಸೋಲೆಂಬುದು ಅತಿ ಕಡಿಮೆ.

ಬೇರೆಯವರಿಗೆ ತಿಳಿಯದಂತೆ ಜ್ಞಾನಾರ್ಜನೆ ಮಾಡುತ್ತಾರೆ. ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದು ಮತ್ತು ಬೇರೆಯವರ ತಪ್ಪನ್ನು ಮನ್ನಿಸುವುದು ಇವರಿಗೆ ಇಷ್ಟವಾದ ಕೆಲಸ. ಧಾರ್ಮಿಕ ಕೆಲಸಗಳಿಂದ ಸಮಾಜದಲ್ಲಿ ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳುತ್ತಾರೆ. ತಂದೆಗಿಂತಲೂ ತಾಯಿಯ ಮೇಲೆ ಪ್ರೀತಿ ಹೆಚ್ಚು. ಸ್ವಂತ ಮನೆ ಅಥವಾ ಸ್ವಂತ ವಾಹನವಿರುತ್ತದೆ. ಸರಳವಾದ ಜೀವನ ಇವರಿಗೆ ಇಷ್ಟವಾಗುವುದಿಲ್ಲ. ಐಷಾರಾಮಿ ಜೀವನ ಅಲ್ಲದೆ ಹೋದರೂ ಬೇರೆಯವರ ದೃಷ್ಟಿ ಬೀಳುವಂತೆ ಜೀವನ ನಡೆಸುತ್ತಾರೆ. ಸಾಲ ಮಾಡಿ ಆ ಹಣದಲ್ಲಿ ಜೀವನ ಮಾಡುವುದೆಂದರೆ ಭಯ. ಕೇವಲ ದೇವರಲ್ಲದೇ ವಯಸ್ಸಿನಲ್ಲಿ ದೊಡ್ಡವರಿಗೂ ಹೆದರುವ ಜನ ಇವರು. ಆದರೆ ಯಾವುದೇ ವಿಚಾರವಾದರೂ ಒಮ್ಮೆ ತೀರ್ಮಾನಿಸಿದರೆ ಮನಸ್ಸನ್ನು ಬದಲಿಸದೆ ಯಶಸ್ಸು ಗಳಿಸುವವರೆಗೂ ಹೋರಾಡುತ್ತಾರೆ.

ಲೇಖನ: ಎಚ್‌. ಸತೀಶ್‌, ಜ್ಯೋತಿಷಿ -ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.