Birth Date: 6ನೇ ತಾರೀಕು ಹುಟ್ಟಿದೋರು ಬೇರೆಯವರನ್ನು ಮೆಚ್ಚಿಸುವ ಪ್ರಯತ್ನ ಮಾಡಲ್ಲ; ನಿಮಗಿದೆ ಧೈರ್ಯ ಸಾಹಸದ ಗುಣ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Birth Date: 6ನೇ ತಾರೀಕು ಹುಟ್ಟಿದೋರು ಬೇರೆಯವರನ್ನು ಮೆಚ್ಚಿಸುವ ಪ್ರಯತ್ನ ಮಾಡಲ್ಲ; ನಿಮಗಿದೆ ಧೈರ್ಯ ಸಾಹಸದ ಗುಣ

Birth Date: 6ನೇ ತಾರೀಕು ಹುಟ್ಟಿದೋರು ಬೇರೆಯವರನ್ನು ಮೆಚ್ಚಿಸುವ ಪ್ರಯತ್ನ ಮಾಡಲ್ಲ; ನಿಮಗಿದೆ ಧೈರ್ಯ ಸಾಹಸದ ಗುಣ

Birth Date Astrology: 6ನೇ ತಾರೀಕು ಹುಟ್ಟಿದವರ ಗುಣ-ಜೀವನದ ಕುರಿತು ಜ್ಯೋತಿಷಿ: ಎಚ್‌. ಸತೀಶ್‌ ಅವರು ನೀಡಿದ ಮಾಹಿತಿ ಇಲ್ಲಿದೆ.

ಜನ್ಮದಿನಾಂಕ ಭವಿಷ್ಯ (ಪ್ರಾತಿನಿಧಿಕ ಚಿತ್ರ)
ಜನ್ಮದಿನಾಂಕ ಭವಿಷ್ಯ (ಪ್ರಾತಿನಿಧಿಕ ಚಿತ್ರ)

ಯಾವುದೇ ತಿಂಗಳ 5ನೇ ತಾರೀಕು ಹುಟ್ಟಿದವರು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವಿರಿ. ಆದರೆ ನಿಮ್ಮ ಮನಸ್ಸಿಗೆ ಬೇಸರ ಉಂಟುಮಾಡಿದಲ್ಲಿ ಶಾಶ್ವತವಾಗಿ ಅವರಿಂದ ದೂರವಾಗುವಿರಿ. ಕಷ್ಟನಷ್ಟಗಳಿಗೆ ಹೆದರುವುದಿಲ್ಲ. ಸೋಲಿನ ಭಯವಿರುವುದಿಲ್ಲ. ಗೆಲುವಿನ ಹಾದಿಯಲ್ಲಿ ನಡೆಯುವುದೆಂದರೆ ಬಲು ಪ್ರೀತಿ. ಹಿರಿಯರು ಅದರಲ್ಲಿಯು ಹಿರಿಯ ಸೋದರ ಅಥವಾ ಸೋದರಿಯ ಜೊತೆ ಉತ್ತಮ ಸಂಬಂಧ ಇರುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡಲು ಇಷ್ಟಪಡುವಿರಿ. ಬೇರೊಬ್ಬರನ್ನು ಮೆಚ್ಚಿಸುವ ಪ್ರಯತ್ನವನ್ನೇ ಮಾಡುವುದಿಲ್ಲ. ವಾದ ಮಾಡುವುದನ್ನು ಇಷ್ಟಪಡುವುದಿಲ್ಲ.

ಚಿಕ್ಕ ವಯಸ್ಸಿನಿಂದಲೇ ಹಠದ ಬುದ್ಧಿ ಇವರಲ್ಲಿ ಇರುತ್ತದೆ. ಎಂತಹ ಕಷ್ಟ ಎದುರಾರು ಮನಸ್ಸಿಗೆ ಇಷ್ಟವಾಗುವ ವಸ್ತುಗಳನ್ನು ಪಡೆಯುವರು. ಇಷ್ಟವಾಗುವ ಕೆಲಸ ಕಾರ್ಯಗಳು ಮಾಡುವರು. ಒಟ್ಟಾರೆ ತಮಗೆ ಇಷ್ಟ ಎನಿಸುವ ರೀತಿ ಜೀವನವನ್ನು ನಡೆಸುವರು. ಬಹುತೇಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವರು. ಸೋದರ ಅಥವಾ ಸೋದರಿಯಿಂದ ಉತ್ತಮ ಸಹಾಯ ಸಹಕಾರ ದೊರೆಯುತ್ತದೆ. ಚಿಕ್ಕ ವಯಸ್ಸಿನಲ್ಲಿ ಸ್ವಂತ ವಾಹನ ಇರುತ್ತದೆ. ಕುಟುಂಬದ ಅಥವಾ ಬಂಧು ವರ್ಗದ ಮಂಗಳ ಕಾರ್ಯದಲ್ಲಿಇವರು ಭಾಗವಹಿಸುತ್ತಾರೆ. ಪರೋಪಕಾರ ಮಾಡುವುದೆಂದರೆ ಬಲು ಇಷ್ಟ. ಆದರೆ ಇವರ ಮನಸ್ಸನ್ನು ಗೆಲ್ಲುವುದು ಕಷ್ಟ. ಸ್ವಂತ ಆಸ್ತಿಯ ಒಡೆಯರಾಗುವಿರಿ.

ಈ ದಿನಾಂಕದಂದು ಜನಿಸಿದ ಹೆಣ್ಣು ಮಕ್ಕಳಿಗೆ ವಿಶೇಷವಾದ ಗುಣವಿರುತ್ತದೆ. ಅವರಲ್ಲಿರುವ ಧೈರ್ಯ ಸಾಹಸದ ಗುಣ ಎಲ್ಲರಿಗೂ ಮಾದರಿಯಾಗುತ್ತದೆ. ಅಧಿಕ ಕೆಲಸ ಕಾರ್ಯದ ನಡುವೆ ವಿಶ್ರಾಂತಿಯನ್ನು ಪಡೆಯುವರು. ರುಚಿಕರವಾದ ಭೋಜನವನ್ನು ಇಷ್ಟಪಡುವರು. ಆದರೆ ಅತಿಯಾಗಿ ಆಹಾರ ಸೇವಿಸಿ ಆರೋಗ್ಯವನ್ನು ಕೆಡಿಸಿಕೊಳ್ಳುವುದಿಲ್ಲ. ಪ್ರತಿಯೊಂದು ವಿಚಾರದಲ್ಲಿಯೂ ಇತಿಮಿತಿ ಇರಲಿದೆ. ದೈಹಿಕವಾಗಿ ಶಕ್ತಿಶಾಲಿಯಾಗಿ ಇರಲು ಬಯಸುವರು. ಕಷ್ಟ ನಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವರು. ಆದಾಯ ಕಡಿಮೆ ಇದ್ದರೂ ಹಣವನ್ನು ಉಳಿಸುವ ಬುದ್ದಿ ಇವರಲ್ಲಿ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿ ಅನಾರೋಗ್ಯವಿರುತ್ತದೆ. ಕ್ರಮೇಣವಾಗಿ ಉತ್ತಮ ಆರೋಗ್ಯವನ್ನು ಗಳಿಸುತ್ತಾರೆ.

ಚಿಕ್ಕ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ಹೊರುವಿರಿ. ಬಂಧು ಮಿತ್ರರ ಜೊತೆರ ಉತ್ತಮ ಸಂಬಂಧವನ್ನು ಬೆಳೆಸುವಿರಿ. ಯಾರಿಗೂ ಸುಲಭವಾಗಿ ಹಣ ಸಹಾಯ ಮಾಡುವುದಿಲ್ಲ. ಎಲ್ಲರನ್ನೂ ಸುಲಭವಾಗಿ ನಂಬುವ ಜನರಲ್ಲ. ದುಡಿದು ತಿನ್ನುವ ಜನರನ್ನು ಕಂಡಲ್ಲಿ ಹೆಚ್ಚಿನ ಗೌರವವಿರುತ್ತದೆ. ಆತ್ಮೀಯ ಜನರೊಂದಿಗೆ ಬಾಳಲು ಇಷ್ಟವಿರುತ್ತದೆ. ಯಾರೊಂದಿಗೂ ವಾದ ವಿವಾದವನ್ನು ಉಂಟು ಮಾಡುವುದಿಲ್ಲ. ಆದರೆ ಒಮ್ಮೆ ಮನಸ್ಸಿಗೆ ಬೇಸರವಾದರೆ ಅವರೊಂದಿಗೆ ಸಂಧಾನ ನಡೆಸುವುದಿಲ್ಲ. ಇವರಿಗೆ ಸಣ್ಣ ಪ್ರಮಾಣದ ಸಹಾಯ ಮಾಡಿದರೂ ಅವರಿಗೆ ಚಿರಋಣಿಯಾಗಿರುತ್ತಾರೆ. ಪ್ರಯತ್ನಕ್ಕೆ ತಕ್ಕಂತಹ ಪ್ರತಿಫಲ ದೊರೆಯುತ್ತದೆ ಎಂಬ ಅರಿವು ಇವರಿರುತ್ತದೆ.

ಕಡಿಮೆ ಬಂಡವಾಳದ ವ್ಯಾಪಾರ ವ್ಯವಹಾರಗಳನ್ನು ಆರಂಭಿಸುತ್ತಾರೆ. ಲಾಭದಲ್ಲಿ ಕೊರತೆ ಉಂಟಾದರೆ ಬೇರೊಂದು ವ್ಯಾಪಾರವನ್ನು ಅವಲಂಬಿಸುತ್ತಾರೆ. ಇವರ ಕೆಲಸ ಕಾರ್ಯಗಳಲ್ಲಿ ಆತ್ಮೀಯರು ಸಂಪೂರ್ಣ ಸಹಕಾರ ನೀಡುತ್ತಾರೆ. ದೇಶವಿದೇಶ ಸುತ್ತುವುದೆಂದರೆ ಬಲು ಪ್ರೀತಿ. ಯಾವುದೇ ಕೆಲಸ ಆರಂಭಿಸಿದರು ಆರಂಭದಲ್ಲಿ ಅಡ್ಡಿ ಆತಂಕಗಳು ಎದುರಾಗುತ್ತವೆ. ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಕೆಲಸಗಳನ್ನು ಮಾಡುತ್ತಾರೆ. ಪ್ರತಿಯೊಂದು ರೀತಿಯ ಕೆಲಸ ಕಾರ್ಯಗಳ ಬಗ್ಗೆ ಅರಿವು ಇರುತ್ತದೆ. ವಿದೇಶದಲ್ಲಿ ಉಳಿಯಲು ಸಾಧ್ಯವಾಗುವುದಿಲ್ಲ. ಇವರ ರೀತಿ ನೀತಿಯನ್ನು ಕಂಡು ಅಸೂಯೆ ಪಡುವ ಜನರು ಇರುತ್ತಾರೆ.

ವಿದ್ಯೆಗಿಂತಲೂ ಒಳ್ಳೆಯ ಬುದ್ಧಿಶಕ್ತಿ ಇರುತ್ತದೆ. ಹಣವನ್ನು ಉಳಿತಾಯ ಮಾಡುವ ಯೋಚನೆ ಇರುವುದಿಲ್ಲ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಆದರೆ ಮಕ್ಕಳೊಂದಿಗೆ ಉತ್ತಮ ಸಂಬಂಧ ಕಾಣದು. ಸ್ವಂತ ಭೂಮಿ ಮತ್ತು ಮನೆ ಇರುತ್ತದೆ. ಹೆಚ್ಚಿನ ಹಣ ಬಂದರೆ ಅದರಿಂದ ಮನೆ ಅಥವಾ ಜಮೀನನ್ನು ಕೊಳ್ಳುವ ಜನ. ದಾಂಪತ್ಯದಲ್ಲಿ ಅನಾವಶ್ಯಕ ವಾದ ವಿವಾದಗಳು ಎದುರಾಗಲಿವೆ. ಆದರೆ ತಪ್ಪನ್ನು ಕ್ಷಮಿಸುವ ಕಾರಣ ಯಾವುದೇ ತೊಂದರೆ ಉಂಟಾಗದು. ಕಷ್ಟ ನಷ್ಟಗಳು ಒಂದರ ಹಿಂದೆ ಬರಬಹುದು.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.