ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Jupiter Nakshtra Transit: ರೋಹಿಣಿ ನಕ್ಷತ್ರಕ್ಕೆ ಗುರು ಪ್ರವೇಶ; ಈ 3 ರಾಶಿಯವರಿಗೆ ಹೆಚ್ಚಾಗಲಿದೆ ಸಂಪತ್ತು

Jupiter Nakshtra Transit: ರೋಹಿಣಿ ನಕ್ಷತ್ರಕ್ಕೆ ಗುರು ಪ್ರವೇಶ; ಈ 3 ರಾಶಿಯವರಿಗೆ ಹೆಚ್ಚಾಗಲಿದೆ ಸಂಪತ್ತು

Jupiter Nakshtra Transit: ಗುರು ರೋಹಿಣಿ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾರೆ. ಇದರ ಪರಿಣಾಮವಾಗಿ ಕೆಲವು ರಾಶಿಯವರಿಗೆ ಸಂಪತ್ತು ಹೆಚ್ಚಾಗುತ್ತದೆ. ಪ್ರಮುಖವಾಗಿ ಲಾಭ ಪಡೆಯಲಿರುವ ಮೂರು ರಾಶಿಯವರ ವಿವರ ಇಲ್ಲಿದೆ.

ರೋಹಿಣಿ ನಕ್ಷತ್ರಕ್ಕೆ ಗುರು ಪ್ರವೇಶ; ಈ 3 ರಾಶಿಯವರಿಗೆ ಎಲ್ಲಾ ಕಡೆಯಿಂದಲೂ ಲಾಭವೇ
ರೋಹಿಣಿ ನಕ್ಷತ್ರಕ್ಕೆ ಗುರು ಪ್ರವೇಶ; ಈ 3 ರಾಶಿಯವರಿಗೆ ಎಲ್ಲಾ ಕಡೆಯಿಂದಲೂ ಲಾಭವೇ

Jupiter Nakshtra Transit: 2024ರ ಮೇ 1 ರಂದು ಗುರು ವೃಷಭ ರಾಶಿಯನ್ನು ಪ್ರವೇಶಿಸಿದೆ. ಇಡೀ ವರ್ಷ ಇದೇ ರಾಶಿಯಲ್ಲೇ ಇರಲಿದ್ದಾನೆ. 12 ವರ್ಷಗಳ ನಂತರ ಗುರು ಗ್ರಹ ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಆದರೆ ಈ ವರ್ಷ ಗುರು ಒಟ್ಟು ನಾಲ್ಕು ನಕ್ಷತ್ರಗಳನ್ನು ಬದಲಾಯಿಸುತ್ತಾನೆ. ಇದರ ಪರಿಣಾಮವಾಗಿ ಮೇಷದಿಂದ ಮೀನ ರಾಶಿಯವರಿಗೆ ಶುಭ ಮತ್ತು ಅಶುಭ ಪರಿಣಾಮಗಳನ್ನು ನೀಡುತ್ತದೆ.

ಹಿಂದೂ ಕ್ಯಾಲೆಂಡರ್ ಪ್ರಕಾರ ಜೂನ್ 13 ರಂದು ಗುರು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಆಗಸ್ಟ್ 20ರವರೆಗೆ ಈ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಗುರು ಗ್ರಹ ರೋಹಿಣಿ ನಕ್ಷತ್ರಕ್ಕೆ ಪ್ರವೇಶಿಸುತ್ತಿರುವುದರಿಂದ ಕೆಲವು ರಾಶಿಯವರಿಗೆ ಉತ್ತಮ ಫಲಿತಾಂಶಗಳಿವೆ. ರೋಹಿಣಿ ನಕ್ಷತ್ರದ ಅಧಿಪತಿ ಚಂದ್ರ. ಈ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚಿನ ಮಾನಸಿಕ ಸ್ಱಿತರತೆಯನ್ನು ಹೊಂದಿರುತ್ತಾರೆ. ಅತ್ಯುತ್ತಮ ಬುದ್ಧಿವಂತಿಕೆಯುಳ್ಳವರಾಗಿರುತ್ತಾರೆ. ಮಾತುಗಳಿಂದ ಇತರರನ್ನು ಆಕರ್ಷಿಸುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಯಾವುದೇ ಟೀಕೆಗಳನ್ನು ಎದುರಿಸಿ, ಬಯಸಿದ್ದನ್ನು ಸಾಧಿಸುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅಂತಹ ನಕ್ಷತ್ರದಲ್ಲಿ ಶುಭ ಗ್ರಹವೆಂದು ಪರಿಗಣಿಸಲ್ಪಟ್ಟಿರುವ ಗುರುವಿನ ಆಗಮನವು ಅನೇಕ ಶುಭ ಸಂಗತಿಗಳನ್ನು ತರುತ್ತದೆ.

ಗುರು ರೋಹಿಣಿ ನಕ್ಷತ್ರಕ್ಕೆ ಹೋಗುವುದರಿಂದ ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ. ಹೊಸ ಆದಾಯ ಮಾರ್ಗಗಳು ಲಾಭ ತರುತ್ತವೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಪ್ರತಿಯೊಂದು ಕಾರ್ಯವು ನಿರೀಕ್ಷಿತ ಫಲಿತಾಂಶವನ್ನು ನೀಡುತ್ತದೆ. ಗುರು ರೋಹಿಣಿ ನಕ್ಷತ್ರಕ್ಕೆ ಪ್ರವೇಶಿಸುವುದರಿಂದ ಯಾವ ರಾಶಿಯವರಿಗೆ ಲಾಭವಿದೆ ಅನ್ನೋದನ್ನು ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಉತ್ತಮ ಫಲಿತಾಂಶಗಳಿವೆ. ಭೂಮಿ ಅಥವಾ ವಾಹನ ಖರೀದಿಗೆ ಅವಕಾಶ ಸಿಗಲಿದೆ. ಹೊಸ ಆದಾಯ ಮೂಲಕ ಹಣ ಸಂಪಾದಿಸುತ್ತಾರೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ವ್ಯಾಪಾರದಲ್ಲಿ ಲಾಭಗಳಿವೆ. ಸಂಪತ್ತುು ಹೆಚ್ಚಾಗುವ ಸಾಧ್ಯತೆಗಳಿವೆ. ನ್ಯಾಯಾಲಯದ ಪ್ರಕರಣಗಳಿಂದ ಮುಕ್ತಿ ಸಿಗುತ್ತದೆ. ನಿಮ್ಮ ಮನಸ್ಸಿಗೆ ಸಾಂತ್ವನ ನೀಡುವ ಒಳ್ಳೆಯ ಸುದ್ದಿಯನ್ನು ಮಕ್ಕಳು ನೀಡುತ್ತಾರೆ. ನೀವು ಭೌತಿಕ ಸೌಕರ್ಯಗಳೊಂದಿಗೆ ನಿಮ್ಮ ಜೀವನವನ್ನು ಸಂತೋಷದಿಂದ ಕಳೆಯುತ್ತೀರಿ.

ಕಟಕ ರಾಶಿ

ಗುರು ಗ್ರಹದ ಚಲನೆಯಿಂದ ಕಟಕ ರಾಶಿಯವರಿಗೆ ಅನಿರೀಕ್ಷಿತ ಲಾಭಗಳಿವೆ. ಹೊಸದಾಗಿ ಆದಾಯದ ಮಾರ್ಗ ಸೃಷ್ಟಿಯಾಗುತ್ತದೆ. ಉದ್ಯೋಗ ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಮನಸ್ಸು ಶಾಂತವಾಗಿರುತ್ತದೆ. ದೀರ್ಘಕಾಲದ ಅಡೆತಡೆಗಳು ನಿವಾರಣೆಯಾಗತ್ತವೆ. ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ವ್ಯಾಪಾರ ಪರಿಸ್ಥಿತಿಗಳು ಬಲವಾಗಿರುತ್ತವೆ. ವ್ಯಾಪಾರಸ್ಥರು ಹೊಸ ವ್ಯವಹಾರಗಳನ್ನು ಮಾಡುವ ಮೂಲಕ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದುತ್ತಾರೆ.

ತುಲಾ ರಾಶಿ

ರೋಹಿಣಿ ನಕ್ಷತ್ರಕ್ಕೆ ಗುರು ಸಂಕ್ರಮಣದಿಂದಾಗಿ ತುಲಾ ರಾಶಿಯವರಿಗೆ ಹೆಚ್ಚಿನ ಪ್ರಯೋಜನಗಳಿವೆ. ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಯಶಸ್ಸು ಕಾಣಲಿದ್ದಾರೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಇತರರೊಂದಿಗೆ ನಿಮ್ಮ ಸಂಬಂಧಗಳು ಸುಧಾರಿಸುತ್ತವೆ. ಒಡಹುಟ್ಟಿದವರೊಂದಿಗಿನ ಸಂಬಂಧಗಳು ಗಟ್ಟಿಯಾಗುತ್ತವೆ. ಅವರೊಂದಿಗೆ ಭಿನ್ನಾಭಿಪ್ರಾಯ ಮತ್ತು ಹೊಂದಾಣಿಕೆ ಮಾಡಿಕೊಳ್ಳುತ್ತೀರಿ. ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆ ಇದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)