ಹೆಬ್ಬೆರಳಿನ ಗಾತ್ರದಿಂದಲೂ ತಿಳಿಯಬಹುದು ವ್ಯಕ್ತಿಗಳ ಸ್ವಭಾವ; ನೀವು, ನಿಮ್ಮ ಕುಟುಂಬದ ಸದಸ್ಯರು ಹೇಗೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹೆಬ್ಬೆರಳಿನ ಗಾತ್ರದಿಂದಲೂ ತಿಳಿಯಬಹುದು ವ್ಯಕ್ತಿಗಳ ಸ್ವಭಾವ; ನೀವು, ನಿಮ್ಮ ಕುಟುಂಬದ ಸದಸ್ಯರು ಹೇಗೆ?

ಹೆಬ್ಬೆರಳಿನ ಗಾತ್ರದಿಂದಲೂ ತಿಳಿಯಬಹುದು ವ್ಯಕ್ತಿಗಳ ಸ್ವಭಾವ; ನೀವು, ನಿಮ್ಮ ಕುಟುಂಬದ ಸದಸ್ಯರು ಹೇಗೆ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈ ಬೆರಳುಗಳು ಪ್ರತ್ಯೇಕವಾದ ಗ್ರಹಗಳಿಂದ ಸೂಚಿಸಲ್ಪಡುತ್ತದೆ. ಪ್ರತಿಯೊಂದು ಬೆರಳಗಳು ಒಂದೊಂದು ಗ್ರಹದ ಪ್ರಭಾವಕ್ಕೆ ಒಳಗಾಗುತ್ತದೆ. ಹೆಬ್ಬೆರಳಿನ ಮಹತ್ವ ಏನು? ಹೆಬ್ಬೆರಳು ಸಾಮಾನ್ಯಕ್ಕಿಂತ ಉದ್ದವಾಗಿದ್ದರೆ ಅವರ ಗುಣಲಕ್ಷಣ ಹೇಗಿರುತ್ತದೆ? ಇಲ್ಲಿದೆ ವಿವರ. (ಬರಹ: ಎಚ್. ಸತೀಶ್ ಜ್ಯೋತಿಷಿ)

ಹೆಬ್ಬೆರಳಿನ ಗಾತ್ರದಿಂದಲೂ ತಿಳಿಯಬಹುದು ವ್ಯಕ್ತಿಗಳ ಸ್ವಭಾವ; ನೀವು, ನಿಮ್ಮ ಕುಟುಂಬದ ಸದಸ್ಯರು ಹೇಗೆ?
ಹೆಬ್ಬೆರಳಿನ ಗಾತ್ರದಿಂದಲೂ ತಿಳಿಯಬಹುದು ವ್ಯಕ್ತಿಗಳ ಸ್ವಭಾವ; ನೀವು, ನಿಮ್ಮ ಕುಟುಂಬದ ಸದಸ್ಯರು ಹೇಗೆ? (PC: Unsplash)

ಸಾಮಾನ್ಯಕ್ಕಿಂತಲೂ ಅಂಗುಷ್ಟವು ಉದ್ದವಾಗಿದ್ದರೆ ಅಂತಹ ವ್ಯಕ್ತಿಗಳಿಗೆ ಉತ್ತಮ ಬುದ್ಧಿಶಕ್ತಿ ಇರುತ್ತದೆ. ಚಿಕ್ಕ ವಯಸ್ಸಿನಿಂದಲೇ ಇವರು ಬೇರೆಯವರನ್ನು ಅವಲಂಬಿಸದೆ ಜೀವನ ನಡೆಸುತ್ತಾರೆ. ಇವರಲ್ಲಿನ ಆತ್ಮವಿಶ್ವಾಸ ಬೇರೆಯವರ ಆಶ್ಚರ್ಯಕ್ಕೆ ಕಾರಣವಾಗುತ್ತದೆ. ಹತ್ತಾರು ಜನರಿಗೆ ಮಾಡಲಾಗದ ಕೆಲಸಗಳು ಇವರ ಪಾಲಿಗೆ ಅತಿ ಸುಲಭವಾಗುತ್ತವೆ. ಹಣ ಉಳಿಸಬೇಕೆಂಬ ಯೋಚನೆ ಇರುವುದಿಲ್ಲ. ಕಾರಣವೇನೆಂದರೆ ಅವಶ್ಯಕತೆಗೆ ತಕ್ಕಷ್ಟು ಹಣವನ್ನು ಸಂಪಾದಿಸಬಲ್ಲ ವಿಶ್ವಾಸ ಇವರಲ್ಲಿ ಇರುತ್ತದೆ. ಇವರು ಸುಳ್ಳು ಹೇಳುವುದಿಲ್ಲ. ಆದರೆ ಬೇರೆಯವರನ್ನು ಕಾಪಾಡಲು ಸುಳ್ಳು ಹೇಳುವಲ್ಲಿ ನಿಸ್ಸೀಮರು.

ಯಾವ ಕೆಲಸವನ್ನೂ ಬಾಕಿ ಉಳಿಸುವುದಿಲ್ಲ

ಇವರಿಗೆ ಗುರು ಹಿರಿಯರ ಮೇಲೆ ಹೆಚ್ಚಿನ ಭಕ್ತಿ ಇರುತ್ತದೆ. ತಪ್ಪು ಮಾಡಿದರೆ ಕೇಡು ಉಂಟಾಗುತ್ತದೆ ಎಂಬ ನಂಬಿಕೆಯಲ್ಲಿ ಬೆಳೆಯುತ್ತಾರೆ. ಇದರಿಂದಾಗಿ ತಮಗೆ ತಾವೇ ಹಲವಾರು ಕಟ್ಟುಪಾಡುಗಳನ್ನು ಹಾಕಿಕೊಳ್ಳುತ್ತಾರೆ. ತಪ್ಪು ಮಾಡಿದವರನ್ನು ಶಿಕ್ಷಿಸುವ ಬದಲು ಅವರ ಮನಸ್ಸನ್ನು ಪರಿವರ್ತಿಸಲು ಯಶಸ್ವಿಯಾಗುತ್ತಾರೆ. ಇವರ ಪಾಲಿಗೆ ಯಾವುದೇ ಕೆಲಸ ಕಾರ್ಯಗಳು ಅಸಾಧ್ಯ ಎನಿಸುವುದಿಲ್ಲ. ಏಕಾಂಗಿಯಾಗಿ ಮಾಡಲಾಗದ ಕೆಲಸ ಕಾರ್ಯಗಳನ್ನು ತಮ್ಮದೇ ಆದ ಗುಂಪಿನ ಸಹಾಯ ಸಹಕಾರದಿಂದ ಪೂರ್ಣಗೊಳಿಸುತ್ತಾರೆ. ಯಾವುದೇ ಕೆಲಸ ಕಾರ್ಯಗಳನ್ನು ಮುಂದೂಡುವುದಿಲ್ಲ. ಇಂದಿನ ಕೆಲಸವನ್ನು ಹಿಂದೆ ಮಾಡಬೇಕೆಂಬ ಹಂಬಲ ಇವರಿಗೆ ಇರುತ್ತದೆ.

ಕುಟುಂಬದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಿರಿ. ಪ್ರತಿಯೊಬ್ಬರ ಜವಾಬ್ದಾರಿಯನ್ನು ನಿಮ್ಮದೇ ಎಂದು ಭಾವಿಸುವ ಕಾರಣ ವಿಶ್ರಾಂತಿ ಎಂಬುದು ಮರೀಚಿಕೆಯಾಗುತ್ತದೆ. ಇವರಲ್ಲಿ ಸೇವಾ ಮನೋಭಾವನೆ ಇದ್ದರೂ ತಮ್ಮ ಕೆಲಸವನ್ನು ಬಲಿ ಕೊಟ್ಟು ಬೇರೆಯವರಿಗೆ ಸಹಾಯ ಮಾಡುವುದಿಲ್ಲ. ಇವರೊಂದಿಗೆ ಬಾಳುವವರಿಗೆ ಯಾವುದೇ ತೊಂದರೆ ಇರುವುದಿಲ್ಲ. ನಾಯಕತ್ವದ ಗುಣ ಇರುತ್ತದೆ. ಮುಂದಿನ ಜೀವನವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಬೇರೆಯವರನ್ನು ಮೆಚ್ಚಿಸದೆ ತಮಗೆ ತೃಪ್ತಿ ಆಗುವುದು ಇವರಿಗೆ ಮುಖ್ಯವಾಗುತ್ತದೆ. 

ವಿದ್ಯಾಭ್ಯಾಸದ ವಿಚಾರದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಆರಂಭದಲ್ಲಿ ಅಡ್ಡಿ ಆತಂಕ ಕಂಡು ಬಂದರೂ ತೊಂದರೆ ಆಗದು. ತಮ್ಮ ತಪ್ಪನ್ನು ತಾವು ತಿಳಿದುಕೊಳ್ಳುತ್ತಾರೆ. ಅವಶ್ಯವಿದ್ದರೆ ಮಾತ್ರ ಸ್ನೇಹ ಬೆಳೆಸುವ ಇವರು ಅವರಿಂದ ಒದಗಬಹುದಾದ ಸಹಾಯವನ್ನು ಪಡೆದುಕೊಳ್ಳುತ್ತಾರೆ. ಇವರಲ್ಲಿ ಸ್ವಾರ್ಥದ ಮನೋಭಾವನೆ ಇರುವುದಿಲ್ಲ. ಆದರೆ ಮೊದಲು ತಮ್ಮ ಕೆಲಸ ಕಾರ್ಯಗಳನ್ನು ಪೂರೈಸಿ, ನಂತರ ಬೇರೆಯವರ ಬೇಡಿಕೆಗಳನ್ನು ಪರಿಶೀಲಿಸುತ್ತಾರೆ. ಹಿರಿಯ ಅಧಿಕಾರಿಗಳಾಗಿದ್ದಲ್ಲಿ ಉನ್ನತ ಯಶಸ್ಸು ಲಭಿಸುತ್ತದೆ. ಸಾರ್ವಜನಿಕ ಜೀವನದಲ್ಲಿ ಇವರಿಗೆ ನಾಯಕತ್ವದ ಸ್ಥಾನಮಾನ ಲಭಿಸಲಿದೆ. ಇವರ ಸುತ್ತಮುತ್ತ ರಾಜಕೀಯದ ವಿಚಾರದಲ್ಲಿ ಅನಾವಶ್ಯಕ ವಿವಾದಗಳು ಇರುತ್ತದೆ.

ದಾಂಪತ್ಯ ಜೀವನ ಸಂತೋಷವಾಗಿರುತ್ತದೆ

ತಮ್ಮ ಆತ್ಮೀಯರೊಂದಿಗೆ ಮಾತ್ರವಲ್ಲದೆ, ಕುಟುಂಬದ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಹಿರಿಯರು ಒಪ್ಪುವವರ ಜೊತೆ ವಿವಾಹವಾಗುತ್ತಾರೆ. ಪ್ರೇಮ ವಿವಾಹದಲ್ಲಿ ಇವರಿಗೆ ಆಸಕ್ತಿ ಇರುವುದಿಲ್ಲ. ಉದ್ಯೋಗದಲ್ಲಿ ಸದಾ ಕಾಲ ಬದಲಾವಣೆಗಳನ್ನು ನಿರೀಕ್ಷಿಸುತ್ತಾರೆ. ಇಲ್ಲದೆ ಹೋದಲ್ಲಿ ಉದ್ಯೋಗ ಬದಲಿಸುತ್ತಾರೆ. ಪುರುಷರಿಗಿಂತ ಮಹಿಳೆಯರಿಗೆ ವಿಶೇಷ ಫಲಗಳು ದೊರೆಯುತ್ತವೆ. ತವರು ಮನೆಯಲ್ಲಿ ಮಾತ್ರವಲ್ಲದೆ ಗಂಡನ ಮನೆಯಲ್ಲೂ ಇವರಿಗೆ ಆಡಳಿತ ದೊರೆಯುತ್ತದೆ. ಇವರ ಮನಸ್ಸನ್ನು ಅರ್ಥ ಮಾಡಿಕೊಂಡು ನಡೆದುಕೊಳ್ಳುವ ಪತಿ ದೊರೆಯುತ್ತಾರೆ. ಇವರ ದಾಂಪತ್ಯ ಜೀವನವು ಸುಖ ಸಂತೋಷಗಳಿಂದ ತುಂಬಿರುತ್ತದೆ. ಇವರ ಮಧ್ಯೆ ಉಂಟಾಗುವ ಮನಸ್ತಾಪವು ಕ್ಷಣಿಕ ಮಾತ್ರ.

ಮಕ್ಕಳನ್ನು ಹೆಚ್ಚಿನ ಜವಾಬ್ದಾರಿಯಿಂದ ಬೆಳೆಸುವರು. ಕುಟುಂಬದಲ್ಲಿ ಪ್ರತಿಯೊಬ್ಬರನ್ನು ಸಮಾನ ಪ್ರೀತಿಯಿಂದ ನೋಡುವುದು ಇವರ ದೊಡ್ಡ ಗುಣ. ವಯಸ್ಸಾದ ಕಾಲದಲ್ಲಿ ಮಕ್ಕಳ ಆಶ್ರಯದಲ್ಲಿ ಸಂತೃಪ್ತಿ ಜೀವನವನ್ನು ನಡೆಸುತ್ತಾರೆ. ಬಹುತೇಕ ಜನರು ಬಂಧುಬಾಂಧವರಿಂದ ಅಂತರ ಕಾಯ್ದುಕೊಳ್ಳುತ್ತಾರೆ. ತಮ್ಮ ಕುಟುಂಬದವರನ್ನು ನಂಬುವಷ್ಟು ಬೇರೆಯವರನ್ನು ಇವರು ನಂಬುವುದಿಲ್ಲ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.