ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜುಲೈ 31ರವರೆಗೆ 2 ಬಾರಿ ಲಕ್ಷ್ಮೀನಾರಾಯಣ ಯೋಗ; ಈ 3 ರಾಶಿಯವರ ಅದೃಷ್ಟ ಬದಲು, ಆಕಸ್ಮಿಕ ಧನಲಾಭ

ಜುಲೈ 31ರವರೆಗೆ 2 ಬಾರಿ ಲಕ್ಷ್ಮೀನಾರಾಯಣ ಯೋಗ; ಈ 3 ರಾಶಿಯವರ ಅದೃಷ್ಟ ಬದಲು, ಆಕಸ್ಮಿಕ ಧನಲಾಭ

ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಜುಲೈ ತಿಂಗಳಲ್ಲಿ ಕರ್ಕಾಟಕ ಮತ್ತು ಸಿಂಹ ರಾಶಿಯಲ್ಲಿ ಬುಧ ಹಾಗೂ ಶುಕ್ರನ ಸಂಯೋಗದಿಂದ ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳುತ್ತದೆ. ಇದರಿಂದ ಮೂರು ರಾಶಿಚಕ್ರ ಚಿಹ್ನೆಗಳಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ.

ಲಕ್ಷ್ಮೀನಾರಾಯಣ ಯೋಗ; ಈ 3 ರಾಶಿಯವರ ಅದೃಷ್ಟ ಬದಲು
ಲಕ್ಷ್ಮೀನಾರಾಯಣ ಯೋಗ; ಈ 3 ರಾಶಿಯವರ ಅದೃಷ್ಟ ಬದಲು

ಗ್ರಹಗಳ ರಾಶಿಚಕ್ರ ಮತ್ತು ನಕ್ಷತ್ರ ಬದಲಾವಣೆಗಳ ವಿದ್ಯಮಾನವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಅನೇಕ ಬಾರಿ ಒಂದೇ ರಾಶಿಚಕ್ರ ಚಿಹ್ನೆಯಲ್ಲಿ ಗ್ರಹಗಳ ಸಂಚಾರವು ಕೆಲವೊಂದು ಕಾಕತಾಳೀಯಗಳನ್ನು ಮತ್ತು ರಾಜಯೋಗವನ್ನು ಸೃಷ್ಟಿಸುತ್ತದೆ. ಇದು ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯವರೆಗಿನ ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಬಹಳ ಶುಭ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದ ಲೆಕ್ಕಾಚಾರಗಳ ಪ್ರಕಾರ, ಜುಲೈ ತಿಂಗಳಲ್ಲಿ ಲಕ್ಷ್ಮೀ ನಾರಾಯಣ ಯೋಗವು ಎರಡು ಬಾರಿ ರೂಪುಗೊಳ್ಳುತ್ತದೆ. ಗ್ರಹಗಳ ಅಧಿಪತಿ ಬುಧ ಜೂನ್ 29ರಿಂದ ಕರ್ಕಾಟಕ ರಾಶಿಯಲ್ಲಿ ಕುಳಿತಿದ್ದಾನೆ. ಜುಲೈ 19ರವರೆಗೂ ಇದೇ ರಾಶಿಚಕ್ರದಲ್ಲಿ ಇರುತ್ತಾನೆ. ಇದೇ ಸಮಯದಲ್ಲಿ, 2024ರ ಜುಲೈ 7ರಂದು, ಸಂಪತ್ತನ್ನು ನೀಡುವ ಶುಕ್ರ ಕೂಡ ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದಾನೆ. ಹೀಗಾಗಿ ಕರ್ಕಾಟಕ ರಾಶಿಯಲ್ಲಿ ಬುಧ-ಶುಕ್ರನ ಸಂಯೋಗವು ಲಕ್ಷ್ಮೀ ನಾರಾಯಣ ಯೋಗವನ್ನು ಸೃಷ್ಟಿಸುತ್ತದೆ.

ಹಿಂದೂ ಪಂಚಾಂಗದ ಪ್ರಕಾರ, ಜುಲೈ 19ರಂದು ಬುಧ ಗ್ರಹವು ಮತ್ತೆ ರಾಶಿಯನ್ನು ಬದಲಾಯಿಸುತ್ತದೆ. ಅದು ಸಿಂಹ ರಾಶಿಯಲ್ಲಿ ಸಂಚರಿಸುತ್ತದೆ. ನಂತರ ಜುಲೈ 31ರಂದು ಶುಕ್ರ ಗ್ರಹ ಕೂಡಾ ಸಿಂಹ ರಾಶಿಗೆ ಬರುತ್ತದೆ. ಈ ಕಾರಣದಿಂದಾಗಿ, ಜುಲೈ ತಿಂಗಳಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗವು ಕರ್ಕಾಟಕ ಮತ್ತು ಸಿಂಹ ರಾಶಿಯಲ್ಲಿ ಬುಧ-ಶುಕ್ರನ ಸಂಯೋಗದೊಂದಿಗೆ ಎರಡು ಬಾರಿ ರೂಪುಗೊಳ್ಳುತ್ತದೆ.

ಈ ಅಪರೂಪದ ಬೆಳವಣಿಗೆಯಿಂದ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಪ್ರಯೋಜನಕಾರಿಯಾಗಲಿದೆ. ಇದರಿಂದ ಸಂಪತ್ತು, ಸಂತೋಷ ಮತ್ತು ಅದೃಷ್ಟ ಹೆಚ್ಚಾಗುತ್ತದೆ. ಒಂದು ವೇಳೆ ಹಣಕಾಸಿನ ಸಮಸ್ಯೆ ಹೆಚ್ಚಾಗಿದ್ದರೆ, ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.

ಲಕ್ಷ್ಮೀ ನಾರಾಯಣ ಯೋಗವು ಯಾವ ರಾಶಿಚಕ್ರ ಚಿಹ್ನೆಗಳಿಗೆ ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ.

ಕರ್ಕಾಟಕ ರಾಶಿ

ಲಕ್ಷ್ಮೀ ನಾರಾಯಣ ಯೋಗದಿಂದ, ಕರ್ಕಾಟಕ ರಾಶಿಚಕ್ರದ ಜನರಿಗೆ ಶುಭವಾಗುತ್ತದೆ. ಇವರಿಗೆ ಧನಕನಕ ಗಳಿಸುವ ಅವಕಾಶ ಇರುತ್ತವೆ. ಹಣದ ಸಮಸ್ಯೆಗಳು ದೂರವಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಇದರಿಂದ ಜೀವನಶೈಲಿಯಲ್ಲೂ ಸುಧಾರಣೆಯಾಗಲಿದೆ. ಸುಖ ಜೀವನ ನಿಮ್ಮದಾಗುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಕೌಟುಂಬಿಕ ಜೀವನವು ಆನಂದಮಯವಾಗಿರುತ್ತದೆ. ಹೊಸ ಕೆಲಸದ ಆರಂಭಕ್ಕೆ ಶುಭಕಾಲ.

ಸಿಂಹ ರಾಶಿ

ಎರಡು ಬಾರಿ ಲಕ್ಷ್ಮೀ ನಾರಾಯಣ ಯೋಗದಿಂದಾಗಿ ಸಿಂಹ ರಾಶಿ ಜನರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ದೀರ್ಘಕಾಲದವರೆಗೆ ಕೈಸೇರದ ಹಣ ಮರಳಲಿದೆ. ಕಾನೂನು ವಿಷಯಗಳಲ್ಲಿ ಜಯ ನಿಮ್ಮದಾಗುತ್ತದೆ. ನ್ಯಾಯಾಲಯದಲ್ಲಿದ್ದ ಪ್ರಕರಣಗಳಿಂದ ಪರಿಹಾರ ಪಡೆಯುವಿರಿ. ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವ್ಯಕ್ತಿತ್ವ ಸುಧಾರಿಸುವ ಜೊತೆಗೆ ಸಮಾಜದಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಲಕ್ಷ್ಮೀ ನಾರಾಯಣ ಯೋಗದ ಶುಭಫಲಗಳಿಂದಾಗಿ ವೃಶ್ಚಿಕ ರಾಶಿಯವರ ಕನಸುಗಳು ನನಸಾಗುತ್ತವೆ. ವ್ಯವಹಾರದಲ್ಲಿ ಲಾಭವಾಗಲಿದೆ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಆಕಸ್ಮಿಕ ಆರ್ಥಿಕ ಲಾಭದ ಸಾಧ್ಯತೆ ಇರುತ್ತದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಈ ಸಮಯದಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ಸಿಗಬಹುದು. ಪ್ರೇಮ ಸಂಬಂಧಗಳಲ್ಲಿ ಪ್ರೀತಿ ಹೆಚ್ಚುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.