ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬುಧ-ಶುಕ್ರ ಸಂಯೋಗದಿಂದ ಲಕ್ಷ್ಮೀ ನಾರಾಯಣ ಯೋಗ; ವಿಷ್ಣು, ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಲಿದ್ದಾರೆ ಈ 3 ರಾಶಿಯವರು

ಬುಧ-ಶುಕ್ರ ಸಂಯೋಗದಿಂದ ಲಕ್ಷ್ಮೀ ನಾರಾಯಣ ಯೋಗ; ವಿಷ್ಣು, ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಲಿದ್ದಾರೆ ಈ 3 ರಾಶಿಯವರು

Lakshmi Narayana Yoga: ಜೂನ್‌ 12 ರಂದು ಶುಕ್ರ ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಇಂದು ( ಜೂನ್‌ 14) ಬುಧ ಕೂಡಾ ಮಿಥುನ ರಾಶಿಗೆ ಹೋಗಲಿದ್ದಾನೆ. ಇದರಿಂದ ಲಕ್ಷ್ಮೀ ನಾರಾಯಣ ಯೋಗ ರೂಪುಗೊಳ್ಳಲಿದ್ದು ಸಿಂಹ ಸೇರಿ 3 ರಾಶಿಯವರಿಗೆ ಲಕ್ಷ್ಮೀ ನಾರಾಯಣರ ಆಶೀರ್ವಾದ ದೊರೆಯಲಿದೆ.

ಬುಧ-ಶುಕ್ರ ಸಂಯೋಗದಿಂದ ಲಕ್ಷ್ಮೀ ನಾರಾಯಣ ಯೋಗ; ವಿಷ್ಣು, ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಲಿದ್ದಾರೆ ಈ 3 ರಾಶಿಯವರು
ಬುಧ-ಶುಕ್ರ ಸಂಯೋಗದಿಂದ ಲಕ್ಷ್ಮೀ ನಾರಾಯಣ ಯೋಗ; ವಿಷ್ಣು, ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಲಿದ್ದಾರೆ ಈ 3 ರಾಶಿಯವರು

ಲಕ್ಷ್ಮೀ ನಾರಾಯಣ ಯೋಗ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನಗಳು ನೇರವಾಗಿ ಅಥವಾ ಪರೋಕ್ಷವಾಗಿ ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತವೆ. ಜೂನ್ ತಿಂಗಳಲ್ಲಿ ಎರಡು ಪ್ರಮುಖ ಗ್ರಹಗಳ ಸಂಯೋಗವು ಬಹಳ ಮಂಗಳಕರ ಯೋಗವನ್ನು ಸೃಷ್ಟಿಸಲಿದೆ. ಜೂನ್ 14 ರಿಂದ, ಬುಧವು ತನ್ನ ಸ್ವಂತ ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಶುಕ್ರ 2 ದಿನಗಳ ಹಿಂದೆಯೇ, ಅಂದರೆ ಜೂನ್‌ 12 ರಂದು ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ.

ಬುಧ ಬುದ್ಧಿವಂತಿಕೆಯನ್ನು ನೀಡುತ್ತದೆ. ಶುಕ್ರನು ಸಂಪತ್ತು, ಆಕರ್ಷಣೆ, ಲಾಭ, ಸೌಂದರ್ಯಕ್ಕೆ ಅಧಿಪತಿಯಾಗಿದ್ದಾನೆ. ಈ ಎರಡು ಗ್ರಹಗಳ ಸಂಯೋಜನೆಯು ಕೆಲವು ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಬುಧ ಮತ್ತು ಶುಕ್ರರ ಸಂಯೋಗದಿಂದ ಲಕ್ಷ್ಮೀ ನಾರಾಯಣ ಯೋಗ ರೂಪುಗೊಳ್ಳಲಿದೆ . ಜ್ಯೋತಿಷ್ಯದಲ್ಲಿ ಈ ಯೋಗಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ ಯೋಗ ಇದ್ದರೆ ಸಂಪತ್ತು, ಕೀರ್ತಿ, ಐಶ್ವರ್ಯ, ಆರೋಗ್ಯ ಸಿಗುತ್ತದೆ.

ಮಿಥುನ ರಾಶಿಯಲ್ಲಿ ಲಕ್ಷ್ಮೀನಾರಾಯಣ ಯೋಗದ ರಚನೆಯಿಂದಾಗಿ, 3 ರಾಶಿಗಳ ಜನರು ವಿಷ್ಣು ಮತ್ತು ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯುತ್ತಾರೆ . ಇವರು ಎಂದಿಗೂ ಹಣದ ಕೊರತೆ ಎದುರಿಸುವುದಿಲ್ಲ. ಈ ಯೋಗದ ಪ್ರಭಾವದಿಂದ ಸುಮಾರು 15 ದಿನಗಳವರೆಗೆ ರಾಶಿಯವರ ಸಂಪತ್ತು ಹೆಚ್ಚಲಿದೆ. ಲಕ್ಷ್ಮೀ ನಾರಾಯಣ ಯೋಗದಿಂದ ಯಾವ ರಾಶಿಗೆ ಏನು ಅನುಕೂಲ ನೋಡೋಣ.

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಬುಧ ಮತ್ತು ಶುಕ್ರನ ಸಂಯೋಗದಿಂದ ಉಂಟಾಗುವ ಲಕ್ಷ್ಮೀನಾರಾಯಣ ಯೋಗದಿಂದ ಸ್ವತಃ ಮಿಥುನ ರಾಶಿಯವರು ಬಹಳ ಪ್ರಯೋಜನ ಪಡೆದಿದ್ದಾರೆ. ಈ ಯೋಗದಿಂದ ಮಿಥುನ ರಾಶಿಯವರು ಸಂಪತ್ತಿಗೆ ಒಡೆಯರಾಗಲಿದ್ದಾರೆ. ವ್ಯಾಪಾರ, ಉದ್ಯಮಿಗಳಿಗೆ ಇದು ಸೂಕ್ತ ಸಮಯ. ಈ ರಾಶಿಯವರು ದೀರ್ಘಾವಧಿ ಸಾಲಗಳಿಂದ ಸುಲಭವಾಗಿ ಮುಕ್ತಿ ಹೊಂದಲಿದ್ದಾರೆ. ಕುಟುಂಬದ ಸದಸ್ಯರು ತಮ್ಮ ಪ್ರೀತಿಪಾತ್ರರ ಜೊತೆ ಪ್ರವಾಸಕ್ಕೆ ಹೋಗುತ್ತಾರೆ. ಹಣ ಹೂಡಿಕೆ ಮಾಡಲು ಉತ್ತಮ ಸಮಯ. ಆಸ್ತಿ ಖರೀದಿಸಲಿದ್ದೀರಿ. ವ್ಯಾಪಾರದಲ್ಲಿ ಲಾಭವು ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನೀವು ಕೈ ಹಾಕುವ ಯಾವುದೇ ಕಾರ್ಯದಲ್ಲಿ ನೀವು ಯಶಸ್ವಿಯಾಗುತ್ತೀರಿ .

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಲಕ್ಷ್ಮೀನಾರಾಯಣ ಯೋಗವು ಬಹಳ ಅನುಕೂಲವಾಗಿದೆ. ಸರ್ಕಾರಿ ಕೆಲಸ ಮಾಡುವವರಿಗೆ ಈ ಸಮಯದಲ್ಲಿ ಒಳ್ಳೆ ಸುದ್ದಿ ಸಿಗಲಿದೆ. ವ್ಯಾಪಾರ ಮಾಡುವ ಜನರು ಲಾಭ ಪಡೆಯುತ್ತಾರೆ. ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿದೆ. ಧಾರ್ಮಿಕ ಚಟುವಟಿಕೆಗಳು ಮತ್ತು ಆಧ್ಯಾತ್ಮಿಕ ತೀರ್ಥಯಾತ್ರೆಗಳನ್ನು ಕೈಗೊಳ್ಳಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ ಉಂಟಾಗಲಿದೆ. ಶುಕ್ರನ ಶುಭ ಪ್ರಭಾವದಿಂದ ಶುಭ ಕಾರ್ಯಗಳು ನಡೆದು ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಈ ಅವಧಿಯಲ್ಲಿ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಬುಧ ಮತ್ತು ಶುಕ್ರನ ಸಂಯೋಗವು ಉತ್ತಮ ಫಲ ನೀಡುತ್ತದೆ. ಈ ಅವಧಿಯು ನಿಮಗೆ ಬಹಳ ಶುಭವಾಗಿದೆ. ಸ್ವಂತ ಉದ್ಯಮ ನಡೆಸುವವರಿಗೆ ಗ್ರಹಗಳ ಪ್ರಭಾವದಿಂದ ದೊಡ್ಡ ಪ್ರಮಾಣದ ಆದಾಯ ಬರುವ ಸಾಧ್ಯತೆ ಇದೆ. ಇದುವರೆಗೂ ನೀವು ಅನುಭವಿಸಿದ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ. ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗುತ್ತದೆ. ಒತ್ತಡವನ್ನು ನಿವಾರಿಸುತ್ತದೆ. ಸಂತೋಷವಾಗಿರಲು ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲಿದ್ದೀರಿ. ಷೇರು ಮಾರುಕಟ್ಟೆಯಲ್ಲಿ ಆದಾಯ ಮತ್ತು ಲಾಭದಲ್ಲಿ ಹೆಚ್ಚಳವಾಗಲಿದೆ. ವೃತ್ತಿ ಜೀವನದಲ್ಲಿ ಕೂಡಾ ಸಾಕಷ್ಟು ಬದಲಾವಣೆಗಳಾಗಲಿವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.