ಶಿವನಿಗೆ ಇಷ್ಟವಾದ ಮೂರು ರಾಶಿಗಳಿವು: ಶ್ರಾವಣ ಮಾಸದಲ್ಲಿ ಈ ರಾಶಿಗಳಿಗೆ ಒಲಿಯಲಿದೆ ಮಿತಿಯಿಲ್ಲದಷ್ಟು ಸಂಪತ್ತು
ಸದ್ಯಕ್ಕೆ ವಿಷ್ಣುವು ನಿದ್ರೆಯಲ್ಲಿರುವುದರಿಂದ ಮುಂದಿನ ನಾಲ್ಕು ತಿಂಗಳು ಶಿವನು ಜಗತ್ತನ್ನು ಪಾಲಿಸುತ್ತಾನೆ. ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸಿದರೆ ಸುಖ, ಸಂತೋಷ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲ ಈ ಮಾಸದಲ್ಲಿ ತುಲಾ ಸೇರಿದಂತೆ 3 ರಾಶಿಗಳ ಜನರು ಶಿವನ ಆಶೀರ್ವಾದ ಗಳಿಸುತ್ತಾರೆ.
ಸನಾತನ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಬಹಳ ಮಹತ್ವವಿದೆ. ಮಹಾದೇವನಿಗೆ ಇಷ್ಟವಾದ ತಿಂಗಳು ಶ್ರಾವಣ ಮಾಸ. ಮಹಾದೇವನನ್ನು ಭಕ್ತಿಯಿಂದ ಆರಾಧಿಸುವುದರಿಂದ ಜೀವನದಲ್ಲಿ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂಬುದು ಭಕ್ತರ ನಂಬಿಕೆ. ಶ್ರಾವಣ ಮಾಸದಿಂದ ಸುಮಾರು 4 ತಿಂಗಳ ಕಾಲ ಶಿವನು, ವಿಷ್ಣುವಿನ ಸ್ಥಾನದಲ್ಲಿದ್ದು ಜಗತ್ತನ್ನು ಪಾಲಿಸುತ್ತಾನೆ.
ಸೃಷ್ಟಿಯ ಜವಾಬ್ದಾರಿ ಭಗವಾನ್ ಶಿವನ ಹೆಗಲ ಮೇಲೆ ಬೀಳುತ್ತದೆ. ದೇವಶಯನಿ ಏಕಾದಶಿಯಿಂದ ಭಗವಾನ್ ವಿಷ್ಣುವು 4 ತಿಂಗಳ ಕಾಲ ಯೋಗ ನಿದ್ರೆಗೆ ಜಾರುತ್ತಾನೆ. ಈ ವೇಳೆ ಶಿವನು ಸೃಷ್ಟಿಯನ್ನು ಪಾಲಿಸುತ್ತಾನೆ. ಈ ಸಮಯದಲ್ಲಿ ಭಕ್ತರು ಶಿವನನ್ನು ಬಹಳ ಭಕ್ತಿಯಿಂದ ಆರಾಧಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯವರನ್ನು ಶಿವನು ವಿಶೇಷವಾಗಿ ಆಶೀರ್ವದಿಸುತ್ತಾನೆ. ಈ ರಾಶಿಯವರಿಗೆ ದೇವರ ಆಶೀರ್ವಾದ ಸದಾ ಇರುತ್ತದೆ. ಭೋಲೆನಾಥನಿಗೆ ಪ್ರಿಯವಾದ ಮಾಸದಲ್ಲಿ ಶಿವನನ್ನು ಭಕ್ತಿಯಿಂದ ಪೂಜಿಸುವುದರಿಂದ ಎಲ್ಲರ ಇಷ್ಟಾರ್ಥಗಳು ಈಡೇರುತ್ತವೆ. ಈ ಶ್ರಾವಣ ಮಾಸದಲ್ಲಿ ಶಿವನು ಯಾವ ರಾಶಿಯವರಿಗೆ ಆಶೀರ್ವದಿಸುತ್ತಾನೆ ನೋಡೋಣ.
ತುಲಾ ರಾಶಿ
ತುಲಾ ರಾಶಿಯವರಿಗೆ ಶಿವನ ಅಪಾರ ಅನುಗ್ರಹವಿದೆ. ಈ ರಾಶಿ ಎಂದರೆ ಮಹಾದೇವನಿಗೆ ಬಹಳ ಇಷ್ಟ. ಭಗವಾನ್ ಶಿವನ ಮೆಚ್ಚಿನ ಚಿಹ್ನೆಯಾಗಿರುವುದರಿಂದ, ತುಲಾ ರಾಶಿಯವರು ಭಗವಂತನನ್ನು ಮೆಚ್ಚಿಸಲು ಹೆಚ್ಚು ಕಷ್ಟಪಡುವುದಿಲ್ಲ. ತುಲಾ ರಾಶಿಯನ್ನು ಶುಕ್ರನು ಆಳುತ್ತಾನೆ . ಆದ್ದರಿಂದ ಈ ಚಿಹ್ನೆಗೆ ಸೇರಿದ ಜನರು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. ಜೀವನದಲ್ಲಿ ಕಷ್ಟಗಳು ಎದುರಾದಾಗ ಶಿವ ಚಾಲೀಸವನ್ನು ಪಠಿಸುವುದರಿಂದ ಸಂತೋಷ ಮತ್ತು ಶಾಂತಿ ಸಿಗುತ್ತದೆ. ನಿಯಮಿತ ಧ್ಯಾನ ಮತ್ತು ಶಿವ ದೇವಾಲಯಗಳಿಗೆ ಭೇಟಿ ನೀಡುವುದು ನಿಮ್ಮ ಆಧ್ಯಾತ್ಮಿಕ ಬಂಧವನ್ನು ಸುಧಾರಿಸುತ್ತದೆ. ಆಂತರಿಕ ಶಾಂತಿ ದೊರೆಯುತ್ತದೆ.
ಕುಂಭ ರಾಶಿ
ಶಿವನಿಗೆ ಇಷ್ಟವಾದ ಚಿಹ್ನೆಗಳಲ್ಲಿ ಕುಂಭ ರಾಶಿ ಕೂಡಾ ಒಂದು. ಶನಿಯು ಕುಂಭ ರಾಶಿಯನ್ನು ಆಳುವ ಗ್ರಹವಾಗಿದೆ. ಕುಂಭ ರಾಶಿಯವರು ಕಷ್ಟದ ಸಂದರ್ಭಗಳನ್ನು ಸಹ ಸುಲಭವಾಗಿ ಜಯಿಸಬಹುದು. ಈ ರಾಶಿಯ ಜನರು ಯಾವಾಗಲೂ ಶಿವನ ಆಶೀರ್ವಾದವನ್ನು ಹೊಂದಿರುತ್ತಾರೆ. ಕುಂಭ ರಾಶಿಯವರು ಸೋಮವಾರ ಮತ್ತು ಶನಿವಾರ ಶಿವ ಚಾಲೀಸವನ್ನು ಪಠಿಸಬೇಕು. ಇದು ಶಿವನನ್ನು ಮೆಚ್ಚಿಸುವುದಲ್ಲದೆ ಶನಿಯ ಸಾಡೆ ಸತಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ . ಶಿವನ ಕೃಪೆ ಇದ್ದರೆ ಶನಿಯ ಆಶೀರ್ವಾದ ಸಿಗುತ್ತದೆ. ಕಷ್ಟಗಳಿಂದ ಮುಕ್ತಿ ದೊರೆಯುತ್ತದೆ.
ಮಕರ ರಾಶಿ
ಶನಿಯು ಮಕರ ರಾಶಿಯನ್ನು ಕೂಡಾ ಆಳುತ್ತಾನೆ. ಮಕರ ರಾಶಿಯವರು ಬಹಳ ಶ್ರಮ ಜೀವಿಗಳು. ಇದು ಶಿವನ ಮೆಚ್ಚಿನ ರಾಶಿಚಕ್ರ ಚಿಹ್ನೆಗಳಲ್ಲಿ ಒಂದಾಗಿದೆ. ಮಕರ ರಾಶಿಯವರು ಶಿವನನ್ನು ಮೆಚ್ಚಿಸಲು ಹೆಚ್ಚು ಶ್ರಮಪಡಬೇಕಾಗಿಲ್ಲ. ಈ ರಾಶಿಯವರು ಭಗವಾನ್ ಶಿವನನ್ನು ಪೂಜಿಸುವ ಮೂಲಕ ಮತ್ತು ಶಿವಲಿಂಗಕ್ಕೆ ಜಲಾಭಿಷೇಕ ಮಾಡುವುದರಿಂದ ಕೆಲಸದಲ್ಲಿ ಯಶಸ್ವಿಯಾಗುವಿರಿ, ಉತ್ತಮ ಅವಕಾಶಗಳು ನಿಮಗೆ ಒಲಿದು ಬರಲಿದೆ. ಶಿವನ ಆರಾಧನೆಯಿಂದ ಈ ರಾಶಿಯ ಮೇಲೆ ಶನಿಯ ದುಷ್ಟ ಪ್ರಭಾವವೂ ಕಡಿಮೆಯಾಗುತ್ತದೆ. ಆದ್ದರಿಂದಲೇ ಶನಿಯ ಆಶೀರ್ವಾದ ಪಡೆಯಲು ಮಹಾದೇವನನ್ನೂ ಪೂಜಿಸಬೇಕೆಂದು ಎಂದು ಹೇಳಲಾಗುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.