ದ್ವಾದಶ ರಾಶಿಗಳ ಪ್ರೇಮ ಭವಿಷ್ಯ ಜುಲೈ 25: ಕೋಪಗೊಂಡ ಸಂಗಾತಿಯ ಖುಷಿಗಾಗಿ ಉಡುಗೊರೆ ನೀಡಲಿದ್ದೀರಿ, ಈ ರಾಶಿಯವರಿಗೆ ಇಂದು ಲವ್ ಬ್ರೇಕ್ ಆಗಲಿದೆ
Love and Relationship Horoscope 25 July 2024: ಲವ್ ಲೈಫ್ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚು. ನಿತ್ಯವೂ ದಿನ ಭವಿಷ್ಯ ಓದುವವರ ಪೈಕಿ ಬಹಳಷ್ಟು ಜನ ಇಂದು ಹೇಗಿದೆ ಲವ್ ಲೈಫ್ ಅಂತ ಒಮ್ಮೆ ಕಣ್ಣಾಡಿಸುತ್ತಾರೆ. ಅಂದ ಹಾಗೆ, ಜುಲೈ 25 ರಂದು ದ್ವಾದಶ ರಾಶಿಗಳ ಲವ್ ಲೈಫ್ ಹೀಗಿದೆ ನೋಡಿ.
ದ್ವಾದಶ ರಾಶಿಗಳ ಪ್ರೇಮ ಭವಿಷ್ಯ: ನಿತ್ಯ ಬದುಕಿನ ಪ್ರೀತಿ ಪ್ರೇಮ ಪ್ರಣಯ ಬಹಳ ಮುದ ನೀಡುವಂಥದ್ದು. ಆ ಸಂಬಂಧದಲ್ಲೊಂದು ಕಾತರ, ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಅನೇಕರು ದಿನ ಭವಿಷ್ಯದಲ್ಲಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಗಮನಿಸುತ್ತಾರೆ. ಇಂದು ಲವ್ ಲೈಫ್ ಹೇಗಿದೆ ಎಂದು ಹುಡುಕಾಡಿ ಮನದ ಆತಂಕ, ದುಗುಡ ತಣಿಸುವ ಪ್ರಯತ್ನ ಮಾಡುತ್ತಾರೆ. ರಾಶಿಫಲಗಳಿಗೆ ಅನುಗುಣವಾಗಿ ಆಯಾ ರಾಶಿಗಳ ಈ ದಿನದ (ಜುಲೈ 25) ಲವ್ ಲೈಫ್ ಹೇಗಿದೆ ಎಂದು ಗಮನಿಸೋಣ. ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಮೇಷ ರಾಶಿ
ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಇಂದು ಹೊರಗೆ ಹೋಗುವ ಪ್ಲ್ಯಾನ್ ಮಾಡಬಹುದು, ಇದರಿಂದ ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ಖುಷಿಯಾಗುತ್ತೀರಿ. ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ವ್ಯಕ್ತಪಡಿಸಲು ಇಂದು ಸೂಕ್ತ ದಿನ. ನಿಮ್ಮ ಸಂಗಾತಿ ನಿಮ್ಮ ಪ್ರೀತಿಯನ್ನು ಸ್ವೀಕರಿಸುತ್ತಾರೆ.
ವೃಷಭ ರಾಶಿ
ಇಂದು ನಿಮ್ಮ ಪ್ರೇಮಿ ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ. ನಿಮ್ಮ ಸಂಗಾತಿ ನಿಮ್ಮೊಂದಿಗೆ ಹೊರಗೆ ಹೋಗಲು ಇಷ್ಟ ಪಡಬಹುದು. ಇಂದು, ಬಹಳ ಸಮಯದ ನಂತರ, ನಿಮ್ಮ ಸಂಗಾತಿಯೊಂದಿಗೆ ನೀವು ಸಂತೋಷವಾಗಿರುತ್ತೀರಿ. ಇಂದು ನಿಮಗೆ ಉತ್ತಮ ದಿನವಾಗಿರಲಿದೆ.
ಮಿಥುನ ರಾಶಿ
ಇಂದು ನಿಮ್ಮ ಸಂಗಾತಿಯು ನಿಮ್ಮೊಂದಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಬಯಸುತ್ತಾರೆ ಆದರೆ ಕೆಲವು ವಿಷಯಗಳ ಬಗ್ಗೆ ಮೌನವಾಗಿರುತ್ತಾರೆ. ಅವರು ನಿಮ್ಮಿಂದ ದೊಡ್ಡ ನಿರೀಕ್ಷೆಗಳನ್ನು ಹೊಂದಿದ್ದಾರೆ. ನಿಮ್ಮ ಸಂಗಾತಿಯ ಮಾತುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು.
ಕಟಕ ರಾಶಿ
ಇಂದು ನಿಮ್ಮ ಸಂಗಾತಿ ತನ್ನ ತಪ್ಪಿಗಾಗಿ ನಿಮ್ಮಲ್ಲಿ ಕ್ಷಮೆ ಕೇಳಬಹುದು. ಪ್ರೀತಿಗೆ ಇದು ತುಂಬಾ ಒಳ್ಳೆಯ ಸಮಯ. ಹಳೆಯ ಸಮಸ್ಯೆಗಳನ್ನು ನಿರ್ಲಕ್ಷಿಸಿ ಮತ್ತು ನಿಮ್ಮ ಸಂಗಾತಿಯ ತಪ್ಪುಗಳನ್ನು ಕ್ಷಮಿಸಿ, ಇದರಿಂದ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ಇಂದು ನಿಮ್ಮ ಸಂಗಾತಿ ನಿಮಗೆ ಬಹಳಷ್ಟು ಪ್ರೀತಿಯನ್ನು ನೀಡುತ್ತಾರೆ.
ಸಿಂಹ ರಾಶಿ
ಇಂದು ನಿಮ್ಮ ಸಂಗಾತಿ ನಿಮ್ಮಿಂದ ದೂರವಾಗಬಹುದು. ಬಹುಶಃ ನಿಮ್ಮೊಂದಿಗೆ ತನ್ನ ಸಂಬಂಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ನಿಮ್ಮ ವಿಚಾರದಲ್ಲಿ ತನ್ನ ವರ್ತನೆಯನ್ನು ಬದಲಾಯಿಸುತ್ತಿದ್ದಾರೆ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದುಕೊಂಡು ಖುಷಿಯಿಂದಿರಿ, ಖಿನ್ನತೆ ಇತ್ಯಾದಿಗಳನ್ನು ತಪ್ಪಿಸಲು ಪ್ರಯತ್ನಿಸಿ.
ಕನ್ಯಾ ರಾಶಿ
ಇಂದು ನಿಮ್ಮ ಸಂಗಾತಿ ನಿಮ್ಮೊಂದಿಗೆ ಸಮಯ ಕಳೆಯಲಿದ್ದಾರೆ. ಇಂದು ಅವರು ನಿಮ್ಮ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಬಹುದು, ಸಂಗಾತಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ಸಣ್ಣ ಪುಟ್ಟ ಮನಸ್ತಾಪಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡದಿರಿ.
ತುಲಾ ರಾಶಿ
ಇಂದು ನಿಮ್ಮ ಸಂಗಾತಿ ನಿಮ್ಮೊಂದಿಗೆ ದುಃಖ, ಅಸಮಾಧಾನ ತೋರುತ್ತಾರೆ. ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ನಿಮ್ಮ ತಪ್ಪುಗಳಿಂದಾಗಿ ನಿಮ್ಮ ಸಂಗಾತಿ ಸ್ವಲ್ಪ ಅಸಮಾಧಾನಗೊಳ್ಳಬಹುದು. ನಿಮ್ಮ ಸಂಗಾತಿಯೊಂದಿಗೆ ಮನ ಬಿಚ್ಚಿ ಮಾತನಾಡುವುದು ಒಳ್ಳೆಯದು. ಅವರ ಮನಸ್ಸಿಗೆ ಏನಾದರೂ ನೋವುಂಟಾಗಿದ್ದರೆ, ಅದಕ್ಕಾಗಿ ನೀವು ಅವರನ್ನು ಕ್ಷಮಿಸಿ ಎಂದು ಕೇಳಲು ಹಿಂಜರಿಯದಿರಿ.
ವೃಶ್ಚಿಕ ರಾಶಿ
ಇಂದು ನಿಮ್ಮ ಸಂಗಾತಿಯ ಆರೋಗ್ಯ ಏರುಪೇರಾಗಲಿದೆ. ಅಂತಹ ಸಮಯದಲ್ಲಿ ನೀವು ಅವರೊಂದಿಗೆ ಇರುವುದು ಬಹಳ ಮುಖ್ಯ. ಈ ಸಮಯದಲ್ಲಿ ನಿಮ್ಮ ಸಂಗಾತಿ ನಿಮ್ಮೊಂದಿಗೆ ಇರಲು ಬಯಸುತ್ತಾರೆ. ನಿಮ್ಮ ಜೊತೆಗಿನ ಒಡನಾಟದಿಂದ ಅವರ ಆರೋಗ್ಯ ಸುಧಾರಿಸಬಹುದು. ಇದರಿಂದ ನಿಮ್ಮ ಸಂಬಂಧವೂ ಬಲಗೊಳ್ಳುತ್ತದೆ.
ಧನಸ್ಸು ರಾಶಿ
ನಿಮ್ಮ ಸಂಗಾತಿಯೊಂದಿಗೆ ಇಂದು ನಿಮಗೆ ಉತ್ತಮ ದಿನವಾಗಲಿದೆ. ಇಂದು ನಿಮ್ಮ ಸಂಗಾತಿ ನೀವು ಹೇಳಿದ ಎಲ್ಲಾ ಮಾತನ್ನೂ ಸ್ವೀಕರಿಸುತ್ತಾರೆ. ಇಂದು ನೀವಿಬ್ಬರೂ ಒಟ್ಟಿಗೆ ಸಮಯ ಕಳೆಯುತ್ತೀರಿ. ಈ ದಿನ ನಿಮ್ಮ ಪ್ರೀತಿ ಜೀವನದ ಪ್ರಮುಖ ದಿನವಾಗಲಿದೆ.
ಮಕರ ರಾಶಿ
ಇಂದು ನಿಮ್ಮ ಸಂಗಾತಿಯೊಂದಿಗೆ ಹೊರಗೆ ಹೋಗಬಹುದು. ನಿಮ್ಮ ಪ್ರೀತಿಪಾತ್ರರಿಗೆ ಇಂದು ಪ್ರೇಮ ನಿವೇದನೆ ಮಾಡಲಿದ್ದೀರಿ. ಇಂದು ನಿಮಗೆ ಒಳ್ಳೆಯ ದಿನ. ನಿಮ್ಮ ಹುಡುಗ/ಹುಡುಗಿ ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ.
ಕುಂಭ ರಾಶಿ
ಇಂದು ನಿಮ್ಮ ಪಾಲುದಾರರೊಂದಿಗೆ ಶಾಪಿಂಗ್ ಹೋಗಬಹುದು, ಇದು ನಿಮ್ಮ ಸಂಗಾತಿಗೆ ಸಂತೋಷ ನೀಡುತ್ತದೆ. ಇಂದು ನಿಮ್ಮ ಸಂಗಾತಿಯೊಂದಿಗೆ ನೀವು ಕಳೆದ ಉತ್ತಮ ದಿನವಾಗಲಿದೆ. ಮೊದಲಿಗಿಂತ ನಿಮ್ಮ ಪ್ರೀತಿ ಇನ್ನಷ್ಟು ಗಟ್ಟಿಯಾಗಲಿದೆ.
ಮೀನ ರಾಶಿ
ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಆದರೆ ಇದು ಕ್ಷಣಿಕ, ಮನಸ್ತಾಪ ಉಂಟಾದರೂ ಒಟ್ಟಿಗೆ ಕಾಲ ಕಳೆಯಲಿದ್ದೀರಿ. ನಿಮ್ಮ ಕೋಪಗೊಂಡ ಸಂಗಾತಿಯನ್ನು ಸಮಾಧಾನಪಡಿಸಲು, ನೀವು ಅವರಿಗೆ ಉಡುಗೊರೆ ನೀಡಬಹುದು, ಅದು ನಿಮ್ಮ ಸಂಗಾತಿಗೆ ಖುಷಿ ನೀಡುತ್ತದೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಆಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.