ದ್ವಾದಶ ರಾಶಿಗಳ ಪ್ರೇಮ ಭವಿಷ್ಯ ಜುಲೈ 29: ಸಂಗಾತಿಯ ಜೊತೆ ಲಾಂಗ್ ಡ್ರೈವ್ ಹೋಗಲಿದ್ದೀರಿ, ಅನಗತ್ಯ ವಾದಗಳಿಂದ ದೂರವಿರಿ
Love and Relationship Horoscope 29 July 2024: ಲವ್ ಲೈಫ್ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚು. ನಿತ್ಯವೂ ದಿನ ಭವಿಷ್ಯ ಓದುವವರ ಪೈಕಿ ಬಹಳಷ್ಟು ಜನ ಇಂದು ಹೇಗಿದೆ ಲವ್ ಲೈಫ್ ಅಂತ ಒಮ್ಮೆ ಕಣ್ಣಾಡಿಸುತ್ತಾರೆ. ಅಂದ ಹಾಗೆ, ಜುಲೈ 29 ರಂದು ದ್ವಾದಶ ರಾಶಿಗಳ ಲವ್ ಲೈಫ್ ಹೀಗಿದೆ ನೋಡಿ.
ದ್ವಾದಶ ರಾಶಿಗಳ ಪ್ರೇಮ ಭವಿಷ್ಯ: ನಿತ್ಯ ಬದುಕಿನ ಪ್ರೀತಿ, ಪ್ರೇಮ, ಪ್ರಣಯ ಬಹಳ ಮುದ ನೀಡುವಂಥದ್ದು. ಆ ಸಂಬಂಧದಲ್ಲೊಂದು ಕಾತರ, ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಹಲವರು ದಿನ ಭವಿಷ್ಯದಲ್ಲಿ ಪ್ರೀತಿ–ಪ್ರೇಮ–ಪ್ರಣಯದ ಬಗ್ಗೆ ಗಮನಿಸುತ್ತಾರೆ. ಇಂದು ಲವ್ ಲೈಫ್ ಹೇಗಿದೆ ಎಂದು ಹುಡುಕಾಡಿ ಮನದ ಆತಂಕ, ದುಗುಡ ತಣಿಸುವ ಪ್ರಯತ್ನ ಮಾಡುತ್ತಾರೆ. ರಾಶಿಫಲಗಳಿಗೆ ಅನುಗುಣವಾಗಿ ಆಯಾ ರಾಶಿಗಳ ಈ ದಿನದ (ಜುಲೈ 29) ಲವ್ ಲೈಫ್ ಹೇಗಿದೆ ಎಂದು ಗಮನಿಸೋಣ. ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಮೇಷ
ಇಂದು ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ವಿರಸಕ್ಕೆ ಕಾರಣವಾಗಬಹುದು. ಮಾತಿನ ಮೇಲೆ ನಿಗಾ ಇರಲಿ, ಸಮಾಧಾನದಿಂದ ಆಲಿಸುವ ಗುಣ ಬೆಳೆಸಿಕೊಳ್ಳಿ. ಚಿಕ್ಕ ವಿಷಯವೇ ದೊಡ್ಡದಾಗಿ ಬ್ರೇಕಪ್‌ಗೆ ಕಾರಣವಾಗಬಹುದು. ಸಿಂಗಲ್ ಇರುವವರು ಮಿಂಗಲ್ ಆಗುವ ಸಾಧ್ಯತೆ ಇದೆ. ವಿವಾಹಿತ ಮಹಿಳೆಯರು ದಾಂಪತ್ಯದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಕಿರಿಕಿರಿ ಅನುಭವಿಸಬಹುದು.
ವೃಷಭ
ಪ್ರೇಮ ಜೀವನದ ಸಮಸ್ಯೆಗಳನ್ನು ಪರಿಹರಿಸುವುದು ನಿಮ್ಮ ಆದ್ಯತೆಯಾಗಿರಲಿ. ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಡಿನ್ನರ್ ಅಥವಾ ಲಾಂಗ್ ಡ್ರೈವ್‌ಗೆ ಆಯೋಜಿಸಿ. ಪ್ರೀತಿ ವಿಚಾರಕ್ಕೆ ಪೋಷಕರು ಒಪ್ಪಿಗೆ ಸೂಚಿಸಬಹುದು. ಮಾಜಿ ಪ್ರೇಮಿಯೊಂದಿಗಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳುತ್ತೀರಿ.
ಮಿಥುನ
ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಿರಿ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ. ಸಂಗಾತಿಯೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ನಿಮ್ಮ ಪ್ರೇಮಿಯೊಂದಿಗೆ ನೀವು ಲಾಂಗ್ ಡ್ರೈವ್ ಹೋಗಬಹುದು. ಅಲ್ಲದೆ, ಸಂಗಾತಿಗೆ ಸ್ವಲ್ಪ ವೈಯಕ್ತಿಕ ಸ್ಥಳವನ್ನು ನೀಡಿ ಮತ್ತು ಸಂಬಂಧಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮೂರನೇ ವ್ಯಕ್ತಿಯ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಡಿ.
ಕಟಕ
ಪ್ರೇಮಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಿ. ನಿಮ್ಮ ಪ್ರೇಮ ಸಂಬಂಧದಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸಲು ಬಿಡಬೇಡಿ. ವಿವಾಹಿತರು ಸಂಗಾತಿಯೊಂದಿಗೆ ತಮ್ಮ ಹಿಂದಿನ ಸಂಬಂಧದ ಬಗ್ಗೆ ಚರ್ಚಿಸದೇ ಇರುವುದು ಉತ್ತಮ, ಇದು ಮನಸ್ತಾಪಕ್ಕೆ ಕಾರಣವಾಗಬಹುದು ಎಚ್ಚರ.
ಸಿಂಹ
ನಿಮ್ಮ ಸಂಗಾತಿಯನ್ನು ಕಾಳಜಿ, ಗೌರವದಿಂದ ನೋಡಿಕೊಳ್ಳಿ. ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ರೈಲು ಅಥವಾ ಕೆಫೆಟೇರಿಯಾದಲ್ಲಿ ಒಟ್ಟಿಗೆ ಸಮಯ ಕಳೆಯಬಹುದು. ವಿವಾಹಿತ ಮಹಿಳೆಯರು ಗರ್ಭ ಧರಿಸುವ ಹೆಚ್ಚಿನ ಅವಕಾಶಗಳನ್ನು ಹೊಂದಿದ್ದಾರೆ. ಅತ್ತೆ-ಮಾವನ ಜೊತೆ ಸಮಸ್ಯೆಗಳು ಎದುರಾಗಬಹುದು.
ಕನ್ಯಾ
ಪ್ರೀತಿ ವಿಚಾರದಲ್ಲಿ ಮನಸ್ತಾಪಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಿ. ನಿಮ್ಮಷ್ಟದ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ನಿಮ್ಮ ಪ್ರೇಮಿ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಬೇಕೆಂದು ಬಯಸುತ್ತಾರೆ, ಅವರಿಗಾಗಿ ಸಮಯ ಮೀಸಲಿಡಿ. ಸಂಗಾತಿಯ ಜೊತೆ ಜಗಳ ತಪ್ಪಿಸಿ. ನೀವು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಲು ಬಯಸಿದರೆ, ಈ ಬಗ್ಗೆ ಪೋಷಕರ ಜೊತೆ ಮಾತನಾಡುವುದು ಉತ್ತಮ.
ತುಲಾ
ಸಂವಹನದ ಕೊರತೆಯು ಪ್ರೀತಿ ಜೀವನದಲ್ಲಿ ತೊಂದರೆಗೆ ಕಾರಣವಾಗಬಹುದು. ಸಿಂಗಲ್ ಆಗಿ ಇರುವವರು ತಮ್ಮ ಪ್ರೀತಿಪಾತ್ರರಿಗೆ ಪ್ರಪೋಸ್ ಮಾಡಲು ಇಂದು ಉತ್ತಮ ದಿನವಲ್ಲ. ಕೆಲವು ಪ್ರೇಮ ವ್ಯವಹಾರಗಳು ಅಪಾಯಕಾರಿಯಾಗಬಹುದು. ನಿಮ್ಮ ಅಭಿಪ್ರಾಯಗಳನ್ನು ಪ್ರೇಮಿಯ ಮೇಲೆ ಹೇರಬೇಡಿ.
ವೃಶ್ಚಿಕ
ಪ್ರೀತಿ ಜೀವನದಲ್ಲಿ ಸಂತೋಷವಾಗಿರಿ. ಉಪಯೋಗಕ್ಕೆ ಬಾರದ ಸಂಭಾಷಣೆಗಳತ್ತ ಗಮನ ಕೊಡದಿರಿ. ನಿಮ್ಮ ಜೀವನಕ್ಕೆ ಹೊಸ ವ್ಯಕ್ತಿಯ ಆಗಮನವಾಗಬಹುದು. ಸಂಬಂಧದಲ್ಲಿರುವವರು ಮತ್ತು ಮದುವೆಯಾಗಲು ಸಿದ್ಧರಿರುವವರು ಹಿರಿಯರ ಒಪ್ಪಿಗೆಯೊಂದಿಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಿ.
ಧನು
ಧನು ರಾಶಿಯವರಿಗೆ ಪ್ರೀತಿ ವಿಚಾರದಲ್ಲಿ ಇಂದು ಉತ್ತಮ ದಿನ. ವಿಶೇಷ ವ್ಯಕ್ತಿಯೊಬ್ಬರನ್ನು ನೀವು ಭೇಟಿ ಮಾಡಲಿದ್ದೀರಿ. ವಿವಾಹಿತ ಮಹಿಳೆಯರು ತಮ್ಮ ಸಂಗಾತಿಯೊಂದಿಗೆ ವಾದಿಸುವುದರಿಂದ ದೂರವಿರಬೇಕು, ವೈವಾಹಿಕ ಜೀವನದಲ್ಲಿ ರಾಜಿ ಮಾಡಿಕೊಳ್ಳುವುದು ಉತ್ತಮ.
ಮಕರ
ಪ್ರೀತಿ ವಿಚಾರದಲ್ಲಿನ ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚುವಂತೆ ಮಾಡುತ್ತದೆ. ಆದರೆ ಅನಗತ್ಯ ವಾದಗಳನ್ನು ತಪ್ಪಿಸಿ. ದಿನಾಂತ್ಯಕ್ಕೂ ಮೊದಲು ನಿಮ್ಮಿಬ್ಬರ ನಡುವಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ. ಜೊತೆಯಾಗಿ ಲಂಚ್ ಅಥವಾ ಡಿನ್ನರ್‌ಗೆ ಹೋಗಿ. ವಿವಾಹಿತ ಮಕರ ರಾಶಿಯವರು ಮೂರನೇ ವ್ಯಕ್ತಿಯ ಹಸ್ತಕ್ಷೇಪ ನಿಮ್ಮ ದಾಂಪತ್ಯದಲ್ಲಿ ನುಸುಳುದಂತೆ ನೋಡಿಕೊಳ್ಳಬೇಕು.
ಕುಂಭ
ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ಪ್ರೀತಿ ಜೀವನವನ್ನು ಸ್ಥಿರವಾಗಿರಿಸಿಕೊಳ್ಳಿ. ಸಣ್ಣ ಸಮಸ್ಯೆಗಳು ಇರಬಹುದು, ಆದರೆ ಅವು ಪ್ರಣಯ ಸಂಬಂಧದ ಮೇಲೆ ಪರಿಣಾಮ ಬೀರಲು ಬಿಡಬೇಡಿ. ವಿವಾಹಿತ ಮಹಿಳೆಯರು ಜೀವನದಲ್ಲಿ ವಿಷಯಗಳನ್ನು ನಿರ್ಧರಿಸಲು ಮೂರನೇ ವ್ಯಕ್ತಿಗೆ ಅವಕಾಶ ನೀಡಬಾರದು. ನಿಮ್ಮ ದಾಂಪತ್ಯಕ್ಕೆ ನೀವೇ ಸೂತ್ರದಾರರು ನೆನಪಿರಲಿ.
ಮೀನ
ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಕ್ಷಣಗಳನ್ನು ಕಳೆಯಲಿದ್ದೀರಿ. ಇಂದು ರಾತ್ರಿ ಲಾಂಗ್ ಡ್ರೈವ್ ಹೋಗುವ ಸಾಧ್ಯತೆ ಇದೆ. ಕೆಲಸ ಅಥವಾ ಕಾಲೇಜ್‌ನಲ್ಲಿ ಯಾರಾದರೂ ಪ್ರಪೋಸ್ ಮಾಡಬಹುದು. ಆದರೆ ವಿವಾಹಿತರು ಕಚೇರಿಯಲ್ಲಿ ಪ್ರಣಯದಲ್ಲಿ ತೊಡಗಬಾರದು. ದೂರವಿರುವ ಸಂಬಂಧಗಳಿಗೆ ಇಂದು ಹೆಚ್ಚಿನ ಸಂವಹನದ ಅಗತ್ಯವಿರುತ್ತದೆ. ಸಂಗಾತಿಗೆ ಹತ್ತಿರವಾಗುವ ಪ್ರಯತ್ನ ಮಾಡಿ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಆಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.