ಮಿಥುನ ರಾಶಿಯಲ್ಲಿ ಸೂರ್ಯ, ಬುಧ, ಶುಕ್ರ ಸಂಯೋಗ; ತ್ರಿಗ್ರಾಹಿ ಯೋಗದಿಂದ ಈ ರಾಶಿಯವರಿಗೆ ಆರ್ಥಿಕ ಲಾಭ, ಕೆಲವರಿಗೆ ಕೆಲಸದಲ್ಲಿ ಅಡಚಣೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಿಥುನ ರಾಶಿಯಲ್ಲಿ ಸೂರ್ಯ, ಬುಧ, ಶುಕ್ರ ಸಂಯೋಗ; ತ್ರಿಗ್ರಾಹಿ ಯೋಗದಿಂದ ಈ ರಾಶಿಯವರಿಗೆ ಆರ್ಥಿಕ ಲಾಭ, ಕೆಲವರಿಗೆ ಕೆಲಸದಲ್ಲಿ ಅಡಚಣೆ

ಮಿಥುನ ರಾಶಿಯಲ್ಲಿ ಸೂರ್ಯ, ಬುಧ, ಶುಕ್ರ ಸಂಯೋಗ; ತ್ರಿಗ್ರಾಹಿ ಯೋಗದಿಂದ ಈ ರಾಶಿಯವರಿಗೆ ಆರ್ಥಿಕ ಲಾಭ, ಕೆಲವರಿಗೆ ಕೆಲಸದಲ್ಲಿ ಅಡಚಣೆ

ಜೂನ್ 12 ರಂದು ಶುಕ್ರ ಜೂನ್ 14 ರಂದು, ಗ್ರಹಗಳ ಅಧಿಪತಿ ಬುಧ ಜೂನ್ 15 ರಂದು ಸೂರ್ಯನು ಮಿಥುನ ರಾಶಿಯನ್ನು ಪ್ರವೇಶಿಸುತ್ತಾರೆ. ಈ ಮೂರೂ ಗ್ರಹಗಳ ಸಂಯೋಜನೆಯಿಂದ ತ್ರಿಗ್ರಾಹಿ ಯೋಗ ಉಂಟಾಗಲಿದ್ದು ಕೆಲವು ರಾಶಿಗೆ ಅನುಕೂಲ, ಕೆಲವರಿಗೆ ಸಮಸ್ಯೆ ಉಂಟಾಗಲಿದೆ.

ಮಿಥುನ ರಾಶಿಯಲ್ಲಿ ಸೂರ್ಯ, ಬುಧ, ಶುಕ್ರ ಸಂಯೋಗ; ತ್ರಿಗ್ರಾಹಿ ಯೋಗದಿಂದ ಈ ರಾಶಿಯವರಿಗೆ ಆರ್ಥಿಕ ಲಾಭ, ಕೆಲವರಿಗೆ ಕೆಲಸದಲ್ಲಿ ಅಡಚಣೆ
ಮಿಥುನ ರಾಶಿಯಲ್ಲಿ ಸೂರ್ಯ, ಬುಧ, ಶುಕ್ರ ಸಂಯೋಗ; ತ್ರಿಗ್ರಾಹಿ ಯೋಗದಿಂದ ಈ ರಾಶಿಯವರಿಗೆ ಆರ್ಥಿಕ ಲಾಭ, ಕೆಲವರಿಗೆ ಕೆಲಸದಲ್ಲಿ ಅಡಚಣೆ

ಜ್ಯೋತಿಷ್ಯದಲ್ಲಿ, ಸೂರ್ಯ, ಬುಧ ಮತ್ತು ಶುಕ್ರನ ಸಂಯೋಜನೆಯನ್ನು ವಿಶೇಷವೆಂದು ಪರಿಗಣಿಸಲಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಈ ಮೂರು ಮುಖ್ಯ ಗ್ರಹಗಳು ಮಿಥುನ ರಾಶಿಯನ್ನು ಪ್ರವೇಶಿಸಲಿವೆ. ಸೂರ್ಯನು ಮಿಥುನ ರಾಶಿಯನ್ನು ಪ್ರವೇಶಿಸಿದ ಕ್ಷಣ ಮಿಥುನ ರಾಶಿಯಲ್ಲಿ ತ್ರಿಗ್ರಾಹಿ ಯೋಗ ಉಂಟಾಗುತ್ತದೆ. ಪ್ರಸ್ತುತ ಈ ಮೂರು ಗ್ರಹಗಳು ವೃಷಭ ರಾಶಿಯಲ್ಲಿವೆ. ಜೂನ್ 12 ರಂದು ಶುಕ್ರವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ನಂತರ ಜೂನ್ 14 ರಂದು, ಗ್ರಹಗಳ ಅಧಿಪತಿ ಬುಧ ಪ್ರವೇಶಿಸುತ್ತಾನೆ. ಅಂತಿಮವಾಗಿ, ಜೂನ್ 15 ರಂದು ಸೂರ್ಯನು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರೊಂದಿಗೆ ಜೂನ್ 15 ರಿಂದ ಮಿಥುನ ರಾಶಿಯಲ್ಲಿ ಮೂರು ಗ್ರಹಗಳ ಸಂಯೋಗ ಆಗಲಿದೆ.

ಈ ಮೂರು ಗ್ರಹಗಳು ಮಿಥುನ ರಾಶಿಯನ್ನು ಪ್ರವೇಶಿಸಿದ ಸಮಯದಲ್ಲಿ ತ್ರಿಗ್ರಾಹಿ ಯೋಗದ ಪ್ರಭಾವದಿಂದ ಕೆಲವು ರಾಶಿಚಕ್ರ ಚಿಹ್ನೆಗಳ ಭವಿಷ್ಯವು ಬದಲಾಗಲಿದೆ. ಕೆಲವೇ ದಿನಗಳಲ್ಲಿ, ತ್ರಿಗ್ರಾಹಿ ಯೋಗವು ಮತ್ತೊಮ್ಮೆ ಸಂಭವಿಸುತ್ತದೆ. ಈ ಸಮಯದಲ್ಲಿ ಕೆಲವೊಂದು ರಾಶಿಗಳಿಗೆ ವಿವಿಧ ರೀತಿಯ ಫಲಗಳು ದೊರೆಯುತ್ತದೆ.

ತುಲಾ ರಾಶಿ

ಬುಧ, ಶುಕ್ರ ಮತ್ತು ಸೂರ್ಯನ ಸಂಯೋಜನೆಯು ತುಲಾ ರಾಶಿಯವರಿಗೆ ಬಹಳ ಅನುಕೂಲಕರವಾಗಿದೆ. ಗ್ರಹಗಳು ಪಥವನ್ನು ಬದಲಾಯಿಸುವುದರಿಂದ, ಈ ರಾಶಿಯವರ ಮನಸ್ಸು ದಾನ ಧರ್ಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತದೆ. ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ. ವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸಬಹುದು. ಪ್ರೇಮ ಜೀವನವು ಬಹಳ ಸುಧಾರಿಸಲಿದೆ. ಕಷ್ಟದ ಸಮಯದಲ್ಲಿ ಕುಟುಂಬ ಸದಸ್ಯರು ಬೆಂಬಲ ನೀಡುತ್ತಾರೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಸೂರ್ಯನ ಪ್ರವೇಶದಿಂದ ನಿಮಗೆ ಆರ್ಥಿಕವಾಗಿ ಅನುಕೂಲವಾಗುತ್ತದೆ

ಮಿಥುನ ರಾಶಿ

ಶುಕ್ರ, ಬುಧ ಮತ್ತು ಸೂರ್ಯ ಮಿಥುನ ರಾಶಿಯಲ್ಲಿ ಸಂಯೋಗವಾಗುವುದರಿಂದ ಉತ್ತಮ ಫಲಿತಾಂಶ ದೊರೆಯಲಿದೆ. ಆದಾಯವನ್ನು ಹೆಚ್ಚಿಸಲು ಹಲವು ಹೊಸ ಮಾರ್ಗಗಳಿವೆ. ಈ ತಿಂಗಳು ನೀವು ಎಲ್ಲಾ ವಿಷಯಗಳಲ್ಲಿ ಯಶಸ್ವಿಯಾಗುತ್ತೀರಿ. ಜೀವನದಲ್ಲಿ ಕೆಲವು ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುವಿರಿ. ನೀವು ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಗುಣಮಟ್ಟದ ಸಮಯ ಕಳೆಯುತ್ತೀರಿ. ಉದ್ಯೋಗ ವ್ಯವಹಾರಗಳಿಗೆ ಇದು ಅನುಕೂಲಕರ ಸಮಯ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಹೊಸ ವಿಷಯಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಸೂರ್ಯ , ಶುಕ್ರ ಮತ್ತು ಬುಧ ಸಂಯೋಜನೆಯು ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ಬಹಳ ಧನಾತ್ಮಕವಾಗಿ ವರ್ತಿಸುತ್ತೀರಿ. ಪ್ರತಿ ಕಾರ್ಯದಲ್ಲೂ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ದತ್ತಿ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸುವಿರಿ. ಆರೋಗ್ಯ ವೃದ್ಧಿಸುತ್ತದೆ. ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಕೌಟುಂಬಿಕ ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಹೂಡಿಕೆಗಳು ಲಾಭದಾಯಕವಾಗಿದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ.

ಮೂರು ಗ್ರಹಗಳ ಸಂಯೋಜನೆಯಿಂದಾಗಿ ಈ ರಾಶಿಗಳು ಸಮಸ್ಯೆ ಎದುರಿಸುವ ಸಾಧ್ಯತೆ 

 

ಮಕರ ರಾಶಿ

ಮಕರ ರಾಶಿಯವರಿಗೆ ತಾಳ್ಮೆಯ ಕೊರತೆ ಇರಲಿದೆ. ಸ್ವಯಂ ನಿಯಂತ್ರಣ ಅತ್ಯಗತ್ಯ. ಶೈಕ್ಷಣಿಕ ಕೆಲಸದಲ್ಲಿ ಅಡಚಣೆ ಉಂಟಾಗಲಿದೆ. ಕೆಲಸದ ಸ್ಥಳದಲ್ಲಿ ಬಹಳ ಒತ್ತಡ ಎದುರಿಸಲಿದ್ದೀರಿ. ಆದಾಯದಲ್ಲಿ ಅಡಚಣೆ ಉಂಟಾಗಲಿದೆ. ವೆಚ್ಚಗಳು ಹೆಚ್ಚಾಗುತ್ತವೆ.

ಕುಂಭ ರಾಶಿ

ಆತ್ಮ ವಿಶ್ವಾಸ ಕಡಿಮೆಯಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ನಿಮ್ಮ ಸಂಪತ್ತು ಕ್ಷೀಣಿಸುವ ಅಪಾಯವಿದೆ . ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ವೆಚ್ಚವೂ ಹೆಚ್ಚಾಗುತ್ತದೆ.

ಮೀನ ರಾಶಿ

ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಆತ್ಮ ವಿಶ್ವಾಸ ಕಡಿಮೆಯಾಗುತ್ತದೆ. ಅತಿಯಾದ ಕೋಪದಿಂದ ದೂರವಿರಬೇಕು. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಕೆಲಸದಲ್ಲಿ ವರ್ಗಾವಣೆ ಆಗುವ ಸಾಧ್ಯತೆ ಇದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.