Lucky Zodiac Signs: ಶುಕ್ರ-ಚಂದ್ರ ಸಂಯೋಗ: 6 ರಾಶಿಯವರ ಬಾಳಲ್ಲಿ ಹರುಷ, ಅದೃಷ್ಟ-horoscope lucky zodiac signs due to venus moon conjunction in aquarius shukra chandra samyoga in kumbha rashi mgb ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Lucky Zodiac Signs: ಶುಕ್ರ-ಚಂದ್ರ ಸಂಯೋಗ: 6 ರಾಶಿಯವರ ಬಾಳಲ್ಲಿ ಹರುಷ, ಅದೃಷ್ಟ

Lucky Zodiac Signs: ಶುಕ್ರ-ಚಂದ್ರ ಸಂಯೋಗ: 6 ರಾಶಿಯವರ ಬಾಳಲ್ಲಿ ಹರುಷ, ಅದೃಷ್ಟ

Venus-Moon Conjunction: ಶುಕ್ರ ಮತ್ತು ಚಂದ್ರ ಇಬ್ಬರು ಕುಂಭ ರಾಶಿಯಲ್ಲಿದ್ದು, ಇವರಿಬ್ಬರ ಸಂಯೋಗದಿಂದ ಯಾವೆಲ್ಲಾ ರಾಶಿಗಳಿಗೆ ಲಾಭವಿದೆ ಎಂದು ನೋಡೋಣ.

ಶುಕ್ರ (ಪ್ರಾತಿನಿಧಿಕ ಚಿತ್ರ)
ಶುಕ್ರ (ಪ್ರಾತಿನಿಧಿಕ ಚಿತ್ರ)

ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತು, ಖ್ಯಾತಿ, ಸಂತೋಷ, ಸಮೃದ್ಧಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಚಂದ್ರನು ಭಾವನೆಗಳು, ಮನಸ್ಸು ಮತ್ತು ಸೂಕ್ಷ್ಮತೆಯನ್ನು ಸಂಕೇತಿಸುತ್ತಾನೆ ಎಂದು ಹೇಳಲಾಗುತ್ತದೆ. ಸದ್ಯ ಶುಕ್ರನು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಮಾರ್ಚ್ 8ರ ರಾತ್ರಿ ಚಂದ್ರನು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಕುಂಭ ರಾಶಿಯಲ್ಲಿ ಚಂದ್ರ ಮತ್ತು ಶುಕ್ರರ ಸಂಯೋಜನೆಯು ಕೆಲವರಿಗೆ ಅದೃಷ್ಟವನ್ನು ತರುತ್ತದೆ.

ಜಾತಕದಲ್ಲಿ ಶುಕ್ರನ ಸ್ಥಾನ ಬಲವಾಗಿದ್ದರೆ ದಂಪತಿ ಮತ್ತು ಪ್ರೇಮಿಗಳ ನಡುವೆ ಪ್ರೀತಿ ಬಲವಾಗಿರುತ್ತದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಪ್ರೀತಿ ಹೆಚ್ಚುತ್ತದೆ. ಶುಕ್ರನು ಈ ತಿಂಗಳು ತನ್ನ ಸ್ಥಾನವನ್ನು ಎರಡು ಬಾರಿ ಬದಲಾಯಿಸಲಿದ್ದಾನೆ. ಶಿವರಾತ್ರಿಯ ಒಂದು ದಿನ ಮೊದಲು ಕುಂಭ ರಾಶಿಯನ್ನು ಪ್ರವೇಶಿಸಿದನು. ಮತ್ತೆ ಮಾರ್ಚ್ 31 ರಂದು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸಲಿದ್ದಾರೆ. ಸದ್ಯ ಶುಕ್ರ ಮತ್ತು ಚಂದ್ರನ ಸಂಯೋಗದಿಂದ ಯಾವೆಲ್ಲಾ ರಾಶಿಗಳಿಗೆ ಲಾಭವಿದೆ ಎಂದು ನೋಡೋಣ.

ಮೇಷ ರಾಶಿ: ಶುಕ್ರ ಮತ್ತು ಚಂದ್ರನ ಸಂಯೋಜನೆಯು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಮೇಷ ರಾಶಿಯವರಿಗೆ ಉತ್ತಮ ಸಮಯವನ್ನು ನೀಡುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಪ್ರಗತಿಗೆ ಅವಕಾಶವಿದೆ. ನೆಮ್ಮದಿಯ ಜೀವನ ನಡೆಸುವಿರಿ. ಹೂಡಿಕೆಗಳು ಉತ್ತಮ ಆದಾಯವನ್ನು ನೀಡುತ್ತವೆ. ಕುಟುಂಬ ಮತ್ತು ಸ್ನೇಹಿತರೊಂದಿಗಿನ ಸಂಬಂಧಗಳ ನಡುವೆ ಪ್ರೀತಿ ಬೆಳೆಯುತ್ತದೆ.

ಮಿಥುನ ರಾಶಿ: ವೃತ್ತಿಜೀವನದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಎದುರಾಗುವ ಸವಾಲುಗಳನ್ನು ಜಯಿಸುವರು. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಪ್ರೇಮ ಸಂಬಂಧದಲ್ಲಿ ಮಾಧುರ್ಯವಿರಲಿದೆ. ಒಂಟಿ ಜನರ ಜೀವನದಲ್ಲಿ ಹೊಸ ವ್ಯಕ್ತಿ ಬರುವರು.

ಕನ್ಯಾರಾಶಿ: ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿ ಬರುತ್ತಾರೆ. ಮದುವೆ ಪ್ರಸ್ತಾಪಗಳು ಬರಲಿವೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹೊಸ ಕೆಲಸದ ಆಫರ್ ಬರುತ್ತದೆ. ಹಣದ ಹರಿವಿನ ಹೊಸ ಮಾರ್ಗಗಳು ಸೃಷ್ಟಿಯಾಗಲಿವೆ. ಸಂತೋಷವಾಗಿರುವಿರಿ.

ತುಲಾ ರಾಶಿ: ವೃತ್ತಿರಂಗದಲ್ಲಿ ಪ್ರಗತಿ ಕಾಣುವಿರಿ. ಹಣವನ್ನು ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ಪೂರ್ವಿಕರ ಆಸ್ತಿಯಿಂದ ಸಂಪತ್ತು ಹೆಚ್ಚುತ್ತದೆ. ಸಮಾಜದಲ್ಲಿ ಗೌರವ, ಕೀರ್ತಿ, ಪ್ರತಿಷ್ಠೆ ಹೆಚ್ಚಲಿದೆ. ಕೆಲಸದ ಹೊರೆ ಕಡಿಮೆ ಆಗಲಿದೆ. ಕೆಲಸದ ಸ್ಥಳದಲ್ಲಿ ಸೌಹಾರ್ದ ವಾತಾವರಣವಿರುತ್ತದೆ.

ಧನು ರಾಶಿ: ವ್ಯಾಪಾರ ಪರಿಸ್ಥಿತಿಯು ಬಲವಾಗಿರುತ್ತದೆ. ಜೀವನದಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ. ಪ್ರೇಮ ಸಂಬಂಧದಲ್ಲಿ ಮಾಧುರ್ಯವಿರುತ್ತದೆ. ಆರೋಗ್ಯ ಸುಧಾರಿಸುತ್ತದೆ. ಸಂಪತ್ತು ಹೆಚ್ಚುತ್ತದೆ.

ಕುಂಭ ರಾಶಿ: ಶುಕ್ರ ಮತ್ತು ಚಂದ್ರನ ಸಂಯೋಗವು ಕುಂಭ ರಾಶಿಯಲ್ಲಿಯೇ ಆಗಿದೆ. ಪರಿಣಾಮವಾಗಿ ಈ ರಾಶಿಯವರಆತ್ಮ ವಿಶ್ವಾಸವು ಹೆಚ್ಚಾಗುತ್ತದೆ. ಜೀವನವು ಭೌತಿಕ ಸೌಕರ್ಯಗಳೊಂದಿಗೆ ಕಳೆಯುತ್ತದೆ. ದೀರ್ಘಕಾಲದ ಸಮಸ್ಯೆಗಳು ಮಾಯವಾಗುತ್ತವೆ. ಸಂಗಾತಿಯ ಸಹಕಾರದಿಂದ ಮನಸ್ಸು ಸಂತೋಷವಾಗುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.