ಏಕಾಗ್ರತೆ, ಶಿಕ್ಷಣದಲ್ಲಿ ಉತ್ತಮ ಫಲ ಪಡೆಯಲು ವಿದ್ಯಾರ್ಥಿಗಳ ರಾಶಿಗನುಗುಣವಾಗಿ ಇಲ್ಲಿದೆ ಮಂತ್ರಗಳು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಏಕಾಗ್ರತೆ, ಶಿಕ್ಷಣದಲ್ಲಿ ಉತ್ತಮ ಫಲ ಪಡೆಯಲು ವಿದ್ಯಾರ್ಥಿಗಳ ರಾಶಿಗನುಗುಣವಾಗಿ ಇಲ್ಲಿದೆ ಮಂತ್ರಗಳು

ಏಕಾಗ್ರತೆ, ಶಿಕ್ಷಣದಲ್ಲಿ ಉತ್ತಮ ಫಲ ಪಡೆಯಲು ವಿದ್ಯಾರ್ಥಿಗಳ ರಾಶಿಗನುಗುಣವಾಗಿ ಇಲ್ಲಿದೆ ಮಂತ್ರಗಳು

Mantra for Students: ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳ ಆಯಾ ರಾಶಿಗಳಿಗನುಗುಣವಾಗಿ ಮಂತ್ರಗಳು ಇಲ್ಲಿವೆ. (ಲೇಖನ: ಎಚ್‌. ಸತೀಶ್‌, ಜ್ಯೋತಿಷಿ)

ವಿದ್ಯಾರ್ಥಿಗಳ ರಾಶಿಗನುಗುಣವಾಗಿ ಮಂತ್ರಗಳು (ಪ್ರಾತಿನಿಧಿಕ ಚಿತ್ರ)
ವಿದ್ಯಾರ್ಥಿಗಳ ರಾಶಿಗನುಗುಣವಾಗಿ ಮಂತ್ರಗಳು (ಪ್ರಾತಿನಿಧಿಕ ಚಿತ್ರ)

ಕನ್ನಡದಲ್ಲಿ "ಮಂತ್ರಕ್ಕೆ ಮಾವಿನಕಾಯಿ ಬೀಳುವುದಿಲ್ಲ" ಎಂಬ ಗಾದೆಯ ಮಾತೊಂದಿದೆ. ಯಾವುದೇ ವಿಚಾರದಲ್ಲಿನ ಉತ್ತಮ ಸಾಧನೆಗಾಗಿ ಮಂತ್ರ ತಂತ್ರದ ಜೊತೆಯಲ್ಲಿ ನಮ್ಮ ಪ್ರಯತ್ನವೂ ಅತ್ಯಗತ್ಯ. ಒಂದೇ ರಾಶಿಯಲ್ಲಿ ಜನಿಸಿದರೂ ಒಬ್ಬರ ರೀತಿ ನೀತಿ ಒಂದೇ ರೀತಿ ಇರುವುದಿಲ್ಲ. ಆದರೆ ಪ್ರತಿಯೊಬ್ಬರ ಮಾನಸಿಕ ಸ್ಥಿತಿ ಮಾತ್ರ ಸ್ವಲ್ಪ ಮಟ್ಟಿಗಾದರೂ ಒಂದೇ ರೀತಿ ಇರುತ್ತದೆ. ಈ ಕೆಳಕಂಡ ಪರಿಹಾರಗಳು ಕೇವಲ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಿರುತ್ತದೆ.

ಮೇಷ

ಮೇಷ ರಾಶಿಯವರು ಆತುರದ ಸ್ವಭಾವದವರಾಗಿರುತ್ತಾರೆ. ಆತ್ಮಸ್ಥೈರ್ಯ ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ದುಡುಕದೆ ಕಲಿಕೆಯಲ್ಲಿ ಮುಂದುವರೆಯಬೇಕು. ಪರೀಕ್ಷೆ ಬರೆದ ನಂತರ ಮನರಂಜನೆಯತ್ತ ಮನ ಕೊಡುವಿರಿ. ಆದ್ದರಿಂದ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕಾಗುತ್ತದೆ. ರವಿಯಿಂದ ಇವರು ಉತ್ತಮ ಫಲಗಳನ್ನು ಪಡೆಯುತ್ತಾರೆ. ಇವರಿಗೆ ಈ ಕೆಳಕಂಡ ಮಂತ್ರವು ಉತ್ತಮ ಫಲವನ್ನು ನೀಡುತ್ತದೆ. ಗುರು ಗ್ರಹದ ಅನುಗ್ರಹವೂ ಅತಿ ಮುಖ್ಯ.

ಆದಿದೇವ ನಮಸ್ತುಭ್ಯಂ ಪ್ರಸೀದ ಮಭಾಸ್ಕರ ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಸ್ತುತೇ||

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ ।ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ॥

ವೃಷಭ

ಇವರು ಮಾಡುವ ಪ್ರತಿ ಕೆಲಸವೂ ಮನಮೋಹಕವಾಗಿರಬೇಕು ಎಂದು ಬಯಸುತ್ತಾರೆ. ಆದ್ದರಿಂದ ಇವರ ಬರವಣಿಗೆ ಅತಿ ನಿಧಾನವಾಗಿರುತ್ತದೆ. ಆದ್ದರಿಂದ ಇವರು ಸಮಯಕ್ಕೆ ತಕ್ಕಂತೆ ವರ್ತಿಸಿ ಯಶಸ್ಸನ್ನು ಗಳಿಸಬೇಕು. ಇವರ ಜಾತಕದಲ್ಲಿ ಬುಧ ಮತ್ತು ಶನಿ ಗ್ರಹಗಳ ಪ್ರಭಾವವು ವಿದ್ಯಾರ್ಥಿಗಳ ಮೇಲೆ ಅಧಿಕವಾಗಿರುತ್ತದೆ. ಈ ಕೆಳಕಂಡ ಮಂತ್ರಗಳಿಂದ ಅವರ ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳು ಮೂಡುತ್ತವೆ.

ವಾಸುದೇವಂ ಹೃಷೀಕೇಶಂ ವಾಮನಂ ಜಲಶಾಯಿನಮ್ ।ಜನಾರ್ದನಂ ಹರಿಂ ಕೃಷ್ಣಂ ಶ್ರೀವಕ್ಷಂ ಗರುಡಧ್ವಜಮ್||

ವಜ್ರಪಂಜರ ನಾಮೇದಂ ಯೋ ರಾಮಕವಚಂ ಸ್ಮರೇತ್ ।ಅವ್ಯಾಹತಾಜ್ಞಃ ಸರ್ವತ್ರ ಲಭತೇ ಜಯಮಂಗಳಮ್ ॥

ಮಿಥುನ

ಇವರು ಯಾವುದೇ ವಿಚಾರವನ್ನು ಆಳವಾಗಿ ಅಭ್ಯಾಸ ಮಾಡುವುದಿಲ್ಲ. ಆತುರವು ಇರುವುದಿಲ್ಲ. ಕೇವಲ ತಮಗೆ ಇಷ್ಟ ಬಂದ ಅಂಶಗಳನ್ನು ಅಷ್ಟೇ ಓದುತ್ತಾರೆ. ಇವರಿಗೆ ಉತ್ತಮ ಸಹಕಾರದ ಅವಶ್ಯಕತೆ ಇರುತ್ತದೆ. ಇವರ ಮೇಲೆ ಮುಖ್ಯವಾಗಿ ಶುಕ್ರ ಮತ್ತು ಶನಿಯ ಪ್ರಭಾವ ಇರುತ್ತದೆ. ಇವರು ಪಠಿಸ ಬೇಕಾದ ಮಂತ್ರಗಳು ಕೆಳಕಂಡಂತಿವೆ.

ಅನ್ನಪೂರ್ಣೇ ಸದಾಪೂರ್ಣೇ ಶಂಕರ-ಪ್ರಾಣವಲ್ಲಭೇ ।ಜ್ಞಾನ-ವೈರಾಗ್ಯ-ಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ||

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ।ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ||

ಕಟಕ

ಇವರು ಆತುರದ ಸ್ವಭಾವದವರು. ಆದರೆ ಬೇರೆಯವರ ಬುದ್ಧಿವಾದವನ್ನು ಕೇಳುತ್ತಾರೆ. ವಿದ್ಯಾಭ್ಯಾಸದಲ್ಲಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದರೆ ಶಾಂತಿ ಸಹನೆಯಿಂದ ಅಭ್ಯಾಸದಲ್ಲಿ ಮುಂದುವರೆಯಬೇಕು. ಆತುರದಿಂದ ಓದುವುದನ್ನು ಅರ್ಧಕ್ಕೆ ನಿಲ್ಲಿಸಬಾರದು. ಇವರ ಮೇಲೆ ಮುಖ್ಯವಾಗಿ ಕುಜ ಮತ್ತು ಗುರುವಿನ ಪ್ರಭಾವವು ಇರಲಿದೆ. ಇವರಿಗೆ ಈ ಕೆಳಕಂಡ ಮಂತ್ರಗಳಿಂದ ಶುಭ ಫಲಗಳು ದೊರೆಯಲಿವೆ.

ದ್ವಿಷಡ್ಭುಜಂ ದ್ವಾದಶದಿವ್ಯನೇತ್ರಂ ತ್ರಯೀತನುಂ ಶೂಲಮಸೀ ದಧಾನಮ್ ।ಶೇಷಾವತಾರಂ ಕಮನೀಯರೂಪಂ ಸುಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ||

ಅಭೀಷ್ಟಫಲದಂ ವಂದೇ ಸರ್ವಜ್ಞಂ ಸುರಪೂಜಿತಮ್ ।ಅಕ್ಷಮಾಲಾಧರಂ ಶಾಂತಂ ಪ್ರಣಮಾಮಿ ಬೃಹಸ್ಪತಿಮ್ ||

ಸಿಂಹ

ಇವರಲ್ಲಿ ಗೆಲ್ಲಲೇ ಬೇಕೆಂಬ ಹಠವಿರುತ್ತದೆ. ಹಾಗೆಯೇ ತಾನೊಬ್ಬನೇ ಸರಿ ಎಂಬ ತಪ್ಪು ಭಾವನೆಯು ಇರುತ್ತದೆ. ಎಲ್ಲರೊಡನೆ ಪ್ರೀತಿಯಿಂದ ವಿಶ್ವಾಸದಿಂದ ನಡೆದುಕೊಂಡರೆ ಸಹಪಾಠಿಗಳ ಸಹಕಾರ ದೊರೆಯುತ್ತದೆ. ಈ ರಾಶಿಯ ಮೇಲೆ ಗುರು ಮತ್ತು ಕುಜ ಗ್ರಹಗಳ ಪ್ರಭಾವ ಇರುತ್ತದೆ ಇವರಿಗೆ ಈ ಕೆಳಕಂಡ ಮಂತ್ರಗಳಿಂದ ಉಪಯುಕ್ತ ಫಲಗಳು ದೊರೆಯುತ್ತವೆ

ದ್ವಿಷಡ್ಭುಜಂ ದ್ವಾದಶದಿವ್ಯನೇತ್ರಂ ತ್ರಯೀತನುಂ ಶೂಲಮಸೀ ದಧಾನಮ್ ।ಶೇಷಾವತಾರಂ ಕಮನೀಯರೂಪಂ ಸುಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ||

ಅಭೀಷ್ಟಫಲದಂ ವಂದೇ ಸರ್ವಜ್ಞಂ ಸುರಪೂಜಿತಮ್ ।ಅಕ್ಷಮಾಲಾಧರಂ ಶಾಂತಂ ಪ್ರಣಮಾಮಿ ಬೃಹಸ್ಪತಿಮ್||

ಕನ್ಯಾ

ಇವರುಗಳು ಓದುವ ವೇಳೆಯಲ್ಲಿಯೂ ಬೇರೆಯವರನ್ನು ಟೀಕಿಸುತ್ತಾರೆ. ಅನಾವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಆದ್ದರಿಂದ ಏಕಾಂಗಿಯಾಗಿ ಪ್ರತ್ಯೇಕ ಕೊಠಡಿಯಲ್ಲಿ ಅಭ್ಯಾಸ ಮಾಡುವುದು ಒಳ್ಳೆಯದು. ಇದರಿಂದಾಗಿ ಕಲಿತ ವಿಚಾರವು ಬಹುಕಾಲ ನೆನಪಿನಲ್ಲಿ ಉಳಿಯುವುದು. ಉತ್ತಮ ಫಲಗಳು ದೊರೆಯುತ್ತದೆ. ಇವರ ಮೇಲೆ ಶನಿ ಮತ್ತು ಶುಕ್ರ ಗ್ರಹಗಳ ಪ್ರಭಾವ ಹೆಚ್ಚಿನದಾಗಿರುತ್ತದೆ. ಆದ್ದರಿಂದ ಕೆಳಕಂಡ ಮಂತ್ರಗಳಿಂದ ಹೆಚ್ಚಿನ ಫಲಗಳನ್ನು ಪಡೆಯಬಹುದು.

ಹನುಮಾನಂಜನಾಸೂನುಃ ವಾಯುಪುತ್ರೋ ಮಹಾಬಲಃ ।ರಾಮೇಷ್ಟಃ ಫಲ್ಗುಣಸಖಃ ಪಿಂಗಾಕ್ಷೋಮಿತವಿಕ್ರಮಃ ॥

ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಳಿನೇ ।ನಮೋ ದೀರ್ಘಾಯ ಶುಷ್ಕಾಯ ಕಾಲದಂಷ್ಟ್ರ ನಮೋಸ್ತು ತೇ

ತುಲಾ

ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ಆದರೆ ಮುದ್ರಣಗೊಂಡ ಪಾಠದಲ್ಲಿಯೂ ತಪ್ಪನ್ನು ಕಂಡು ಹಿಡಿಯುವುದು ಇವರ ವಿಶೇಷತೆ. ಆದ್ದರಿಂದ ಓದುವ ರೀತಿ ನೀತಿ ಸರಿ ಇದೆಯೋ ಇಲ್ಲವೋ ಎಂಬ ಜಂಜಾಟದಲ್ಲಿ ಸಮಯ ವ್ಯರ್ಥ ಮಾಡುತ್ತಾರೆ. ಆದ್ದರಿಂದ ಇವರಿಗೆ ಬುದ್ಧಿವಂತ ಸಹಪಾಠಿಗಳ ಸಹವಾಸ ಅತ್ಯಗತ್ಯ. ಮೂರ್ನಾಲ್ಕು ಜನರ ಜೊತೆಯಲ್ಲಿ ಕುಳಿತು ಓದುವುದರಲ್ಲಿ ಹರ್ಷ ಕಾಣುತ್ತಾರೆ. ಇವರ ಮೇಲೆ ಶನಿ ಮತ್ತು ಬುಧ ಗ್ರಹಗಳ ಪ್ರಭಾವ ಹೆಚ್ಚಾಗಿರುತ್ತದೆ. ಈ ಕೆಳಕಂಡ ಮಂತ್ರಗಳಿಂದ ಉತ್ತಮ ಫಲ ಇವರಿಗೆ ದೊರೆಯುತ್ತದೆ.

ಉದಧಿಕ್ರಮಣಶ್ಚೈವ ಸೀತಾಶೋಕವಿನಾಶಕಃ ।ಲಕ್ಷ್ಮಣ ಪ್ರಾಣದಾತಾಚ ದಶಗ್ರೀವಸ್ಯ ದರ್ಪಹಾ ॥

ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ ।ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್||

ವೃಶ್ಚಿಕ

ನಮ್ಮ ರೀತಿ ನೀತಿಯೇ ಸರಿ ಎಂಬ ಹಠ ಇವರಲ್ಲಿ ಇರುತ್ತದೆ. ಇವರ ಮಾತಿಗೆ ಎಲ್ಲರ ಸಹಮತ ದೊರೆಯುತ್ತದೆ. ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೆ ಬೆರೆತರೆ ಅದರ ಲಾಭ ಇವರಿಗಿರುತ್ತದೆ. ತಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಬಲು ಮುಖ್ಯ. ಇವರ ಮೇಲೆ ಗುರು ಮತ್ತು ಚಂದ್ರ ಗ್ರಹಗಳ ಪ್ರಭಾವವು ಸದಾ ಇರಲಿದೆ. ಈ ಕೆಳಕಂಡ ಮಂತ್ರಗಳಿಂದ ಉತ್ತಮ ಫಲಗಳನ್ನು ಇವರು ಪಡೆಯಬಹುದು.

ಅಭೀಷ್ಟಫಲದಂ ವಂದೇ ಸರ್ವಜ್ಞಂ ಸುರಪೂಜಿತಮ್ ।ಅಕ್ಷಮಾಲಾಧರಂ ಶಾಂತಂ ಪ್ರಣಮಾಮಿ ಬೃಹಸ್ಪತಿಮ್||

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ।ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ||

ಧನಸ್ಸು

ಸ್ಥಿರವಾದ ಮನಸ್ಸು ಇವರಿಗೆ ಇರುವುದಿಲ್ಲ. ಆದರೆ ಒಳ್ಳೆಯ ಮನಸ್ಸಿರುತ್ತದೆ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಸಾಧನೆ ಮಾಡುವ ಗುರಿ ಇವರಿಗಿರುತ್ತದೆ. ಗುರು ಹಿರಿಯರಿಗೆ ವಿಶೇಷವಾದ ಗೌರವ ನೀಡುವುದರಿಂದ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಇವರ ಮೇಲೆ ಹಿರಿಯರು ಗಮನ ಇರಿಸುವುದು ಒಳ್ಳೆಯದು. ಇವರ ಮೇಲೆ ಕುಜ ಮತ್ತು ರವಿ ಗ್ರಹಗಳ ಪ್ರಭಾವವು ಸದಾಕಾಲ ಇರುತ್ತದೆ. ಇವರಿಗೆ ಈ ಕೆಳಕಂಡ ಮಂತ್ರಗಳಿಂದ ವಿದ್ಯಾಭ್ಯಾಸದಲ್ಲಿ ಶುಭ ಫಲಗಳು ದೊರೆಯಲಿವೆ.

ದ್ವಿಷಡ್ಭುಜಂ ದ್ವಾದಶದಿವ್ಯನೇತ್ರಂ ತ್ರಯೀತನುಂ ಶೂಲಮಸೀ ದಧಾನಮ್ ।ಶೇಷಾವತಾರಂ ಕಮನೀಯರೂಪಂ ಸುಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ

ತಂ ಸೂರ್ಯಂ ಜಗತಾಂ ನಾಧಂ ಜ್ನಾನ ವಿಜ್ನಾನ ಮೋಕ್ಷದಂ ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ

ಮಕರ

ಕ್ರಿಯಾಶೀಲ ಮನಸ್ಸಿರುತ್ತದೆ. ಆದರೆ ಓದಿನಲ್ಲಿ ಉತ್ಸಾಹವಿರುವುದಿಲ್ಲ. ಬೇರೆಯವರಿಂದ ಒಳ್ಳೆಯ ಪ್ರೋತ್ಸಾಹ ಮತ್ತು ಸ್ಪೂರ್ತಿ ಬೇಕಾಗುತ್ತದೆ. ಇವರ ಜ್ಞಾಪಕ ಶಕ್ತಿ ವಿಶೇಷವಾಗಿರುತ್ತದೆ. ಒಮ್ಮೆ ಮನಸ್ಸಿಟ್ಟು ಓದಿದಲ್ಲಿ ಸಂಪೂರ್ಣ ಅರ್ಥ ಮಾಡಿಕೊಳ್ಳವರು. ಸದಾಕಾಲ ಓದುವ ಜನ ಇವರಲ್ಲ. ಇವರ ಮೇಲೆ ಶುಕ್ರ ಮತ್ತು ಬುಧ ಗ್ರಹಗಳ ಪ್ರಭಾವವಿರುತ್ತದೆ. ಈ ಕೆಳಕಂಡ ಮಂತ್ರಗಳಿಂದ ಇವರಿಗೆ ಶುಭಫಲಗಳು ದೊರೆಯುತ್ತವೆ.

ಅನ್ನಪೂರ್ಣೇ ಸದಾಪೂರ್ಣೇ ಶಂಕರ-ಪ್ರಾಣವಲ್ಲಭೇ ।ಜ್ಞಾನ-ವೈರಾಗ್ಯ-ಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ ||

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ ।ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಕುಂಭ

ಇವರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಉದಾಹರಣೆಗೆ ಓದುವ ವಿಚಾರವೊಂದು, ಯೋಚನೆ ಮಾಡುವ ವಿಚಾರ ಒಂದು. ಇದರಿಂದಾಗಿ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಶ್ರದ್ಧೆಯು ಬೇಕಾಗುತ್ತದೆ. ಇವರಿಗೆ ಉತ್ತಮ ಸ್ನೇಹಿತರ ಸಹಾಯ ಸಹವಾಸ ಮುಖ್ಯವಾಗುತ್ತದೆ. ಇವರ ಮೇಲೆ ಬುಧ ಮತ್ತು ಶುಕ್ರ ಗ್ರಹಗಳ ಪ್ರಭಾವ ಸದಾ ಇರುತ್ತದೆ. ಈ ಕೆಳಕಂಡ ಮಂತ್ರಗಳಿಂದ ಹೆಚ್ಚಿನ ಫಲಗಳನ್ನು ಪಡೆಯಬಹುದು.

ವಾಸುದೇವಂ ಹೃಷೀಕೇಶಂ ವಾಮನಂ ಜಲಶಾಯಿನಮ್ ।ಜನಾರ್ದನಂ ಹರಿಂ ಕೃಷ್ಣಂ ಶ್ರೀವಕ್ಷಂ ಗರುಡಧ್ವಜಮ್||

ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋಕವಿನಾಶಿನಿ ರತ್ನಮಯೇಮಣಿಮಯ ಭೂಷಿತ ಕರ್ಣವಿಭೂಷಣ, ಶಾಂತಿ ಸಮಾವೃತ ಹಾಸ್ಯಮುಖೇ ।ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ ||

ಮೀನ

ಇವರ ಮನಸ್ಸು ಎಲ್ಲರ ಗಮನ ಸೆಳೆಯುತ್ತದೆ. ಎಲ್ಲರೊಂದಿಗೆ ಆತ್ಮೀಯರೊಂದಿಗೆ ಸ್ನೇಹ ಪ್ರೀತಿಯಿಂದ ವರ್ತಿಸುವರು. ಇದರಿಂದಾಗಿ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಇವರ ಮೇಲೆ ಚಂದ್ರ ಮತ್ತು ಕುಜರ ಪ್ರಭಾವವು ಅಧಿಕವಾಗಿರುತ್ತದೆ. ಈ ಕೆಳಕಂಡ ಮಂತ್ರವನ್ನು ಪಠಿಸುವುದರಿಂದ ಹೆಚ್ಚಿನ ಶುಭಫಲಗಳು ದೊರೆಯಲ್ಲಿವೆ.

ಯಾ ಕುಂದೇಂದು ತುಷಾರಹಾರಧವಳಾ ಯಾ ಶುಭ್ರವಸ್ತ್ರಾವೃತಾ ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ ||

ಯಾ ಬ್ರಹ್ಮಾಚ್ಯುತ ಶಂಕರಪ್ರಭೃತಿಭಿರ್ದೇವೈಸ್ಸದಾ ಪೂಜಿತಾಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ ||

ಇಷ್ಟಾರ್ಥಸಿದ್ಧಿಪ್ರದಮೀಶಪುತ್ರಂ ಇಷ್ಟಾನ್ನದಂ ಭೂಸುರಕಾಮಧೇನುಮ್ ।ಗಂಗೋದ್ಭವಂ ಸರ್ವಜನಾನುಕೂಲಂ ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ||

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.