ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೃತಿಕಾ ನಕ್ಷತ್ರಕ್ಕೆ ಮಂಗಳ ಪ್ರವೇಶ; ಈ 3 ರಾಶಿಯವರಿಗೆ ಶ್ರೀಮಂತಿಕೆ, ಉನ್ನತ ಉದ್ಯೋಗ, ಸಂತೋಷ ಸೇರಿ ಭಾರಿ ಲಾಭ

ಕೃತಿಕಾ ನಕ್ಷತ್ರಕ್ಕೆ ಮಂಗಳ ಪ್ರವೇಶ; ಈ 3 ರಾಶಿಯವರಿಗೆ ಶ್ರೀಮಂತಿಕೆ, ಉನ್ನತ ಉದ್ಯೋಗ, ಸಂತೋಷ ಸೇರಿ ಭಾರಿ ಲಾಭ

ಜುಲೈ 8 ರಂದು ಗ್ರಹಗಳ ಅಧಿಪತಿಯಾದ ಮಂಗಳನು ಕೃತಿಕಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ವೃಷಭ ರಾಶಿಯ ಸೇರಿದಂತೆ ಪ್ರಮುಖವಾಗಿ 3 ರಾಶಿಯವರಿಗೆ ಭಾರಿ ಅದೃಷ್ಟದ ಲಾಭಗಳಿವೆ. ಆ ರಾಶಿಯವರು ಯಾರು ಅನ್ನೋದನ್ನು ತಿಳಿಯಿರಿ.

ಕೃತಿಕಾ ನಕ್ಷತ್ರಕ್ಕೆ ಮಂಗಳ ಪ್ರವೇಶ; ಈ 3 ರಾಶಿಯವರಿಗೆ ಶ್ರೀಮಂತಿಕೆ, ಉನ್ನತ ಉದ್ಯೋಗ, ಸಂತೋಷ ಸೇರಿ ಭಾರಿ ಲಾಭ
ಕೃತಿಕಾ ನಕ್ಷತ್ರಕ್ಕೆ ಮಂಗಳ ಪ್ರವೇಶ; ಈ 3 ರಾಶಿಯವರಿಗೆ ಶ್ರೀಮಂತಿಕೆ, ಉನ್ನತ ಉದ್ಯೋಗ, ಸಂತೋಷ ಸೇರಿ ಭಾರಿ ಲಾಭ

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನು ಶಕ್ತಿ, ಧೈರ್ಯ, ಶಕ್ತಿ, ಶೌರ್ಯ ಮತ್ತು ಆತ್ಮ ವಿಶ್ವಾಸದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಮಂಗಳನ ಪ್ರಭಾವವದಿಂದಾಗಿ ವ್ಯಕ್ತಿ ನಿರ್ಭೀತ ಮತ್ತು ಧೈರ್ಯಶಾಲಿಯಾಗುತ್ತಾನೆ. ಸವಾಲುಗಳನ್ನು ಧೈರ್ಯದಿಂದ ಎದುರಿಸಲಾಗುತ್ತಾನೆ ಎಂದು ನಂಬಲಾಗಿದೆ. ಜುಲೈ 8ರ ಬೆಳಿನ ಜಾವ 2.11ಕ್ಕೆ ಮಂಗಳ ಗ್ರಹ ಕೃತಿಕಾ ನಕ್ಷತ್ರವನ್ನು ಪರ್ವೇಶಿಸಿದ್ದಾನೆ. ಇದು 12 ರಾಶಿಯವರಿಗೆ ಮಂಗಳಕರ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಇದರ ಪರಿಣಾಮವಾಗಿ ಕೆಲವು ರಾಶಿಯವರಿಗೆ ಅದ್ಭುತ ಪ್ರಯೋಜನಗಳಿವೆ. ಕೃತಿಕಾ ನಕ್ಷತ್ರದಲ್ಲಿ ಮಂಗಳ ಸಂಚಾರದಿಂದ ಯಾವೆಲ್ಲಾ ರಾಶಿಯವರಿಗೆ ಲಾಭಗಳಿವೆ ಅನ್ನೋದನ್ನು ತಿಳಿಯೋಣ.

ವೃಷಭ ರಾಶಿ: ಈ ರಾಶಿಯವರಿಗೆ ಮಂಗಳ ಗ್ರಹ ಕೃತಿಕಾ ನಕ್ಷತ್ರದಲ್ಲಿನ ಸಂಚಾರವು ಹಲವು ಲಾಭಗಳನ್ನು ತರುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ಅನುಕೂಲಕರ ಸಮಯವಾಗಿದೆ. ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡಬಹುದು. ವಿದ್ಯಾರ್ಥಿಗಳು ಸ್ಪರ್ಧಾರ್ತ್ಮಕ ಪರೀಕ್ಷೆಗಳಲ್ಲಿ ಅಗಾಧ ಯಶಸ್ಸನ್ನು ಪಡೆಯುತ್ತಾರೆ. ಸಂಬಂಧಗಳಲ್ಲಿನ ಕಹಿ ದೂರವಾಗುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ಇರುತ್ತದೆ. ಉದ್ಯೋಗಸ್ಥರಿಗೆ ಉನ್ನತ ಅಧಿಕಾರಿಗಳಿಂದ ಬೆಂಬಲ ದೊರೆಯಲಿದೆ. ಶತ್ರುಗಳನ್ನು ನಿಮ್ಮ ಕೆಲಸಗಳ ಮೂಲಕವೇ ಸೋಲಿಸುತ್ತೀರಿ. ಜೀವನದಲ್ಲಿ ಸಂತೋಷ ಇರಲಿದೆ.

ಕನ್ಯಾ ರಾಶಿ: ಮಂಗಳ ರಾಶಿಯ ಕೃತಿಕಾ ನಕ್ಷತ್ರದಲ್ಲಿ ಸಂಚಾರವು ಕನ್ಯಾ ರಾಶಿಯವರಿಗೆ ಹಲವು ಪ್ರಯೋಜನಗಳನ್ನು ತಂದಿದೆ. ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳಾಗುತ್ತವೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಸಂಬಂಧಗಳಲ್ಲಿ ಉತ್ತಮ ಪರಸ್ಪರ ತಿಳುವಳಿಕೆ ಮತ್ತು ಸಮನ್ವಯ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಂಪತ್ತು ಮತ್ತು ಆಸ್ತಿಯಲ್ಲಿ ಹೆಚ್ಚಳದ ಸಾಧ್ಯತೆಗಳು ಇರುತ್ತವೆ.

ಕುಂಭ ರಾಶಿ: ಕೃತಿಕಾ ನಕ್ಷತ್ರದಲ್ಲಿ ಮಂಗಳನ ಪ್ರವೇಶದಿಂದ ಕುಂಭ ರಾಶಿಯವರಿಗೂ ಹಲವು ಲಾಭಗಳಿವೆ. ಇವರಿಗೆ ಜೀವನದಲ್ಲಿ ಧನಾತ್ಮಕತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಆಯ್ಕೆಯ ಕೆಲಸ ನಿಮಗೆ ಸಿಗುತ್ತದೆ. ಹಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ನ್ಯಾಯಾಲಯದಲ್ಲಿ ಜಯ ಸಿಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಪ್ರತಿಯೊಂದು ಕಾರ್ಯದಲ್ಲೂ ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ. ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಸಾಧಿಸುವಿರಿ. ಮಕ್ಕಳ ಕಡೆಯಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ವೃತ್ತಿಯಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಹಣದ ಒಳಹರಿವು ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಕೆಲಸದಲ್ಲಿನ ಅಡೆತಡೆಗಳು ದೂರವಾಗುತ್ತವೆ ಮತ್ತು ಆರೋಗ್ಯವು ಸುಧಾರಿಸುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.