ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗ: ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಫಲಾಫಲಗಳು ಹೀಗಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗ: ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಫಲಾಫಲಗಳು ಹೀಗಿವೆ

ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗ: ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಫಲಾಫಲಗಳು ಹೀಗಿವೆ

ಗ್ರಹಗಳ ಸಂಚಾರವು ಪ್ರತಿಯೊಂದು ರಾಶಿಯ ಮೇಲೆ ಪರಿಣಾಮ ಬೀರುವಂತೆಯೇ ಗ್ರಹಗಳ ಸಂಯೋಗವೂ ಶುಭಫಲಗಳ ಜೊತೆಗೆ ಸವಾಲುಗಳನ್ನು ನೀಡುತ್ತವೆ. ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗದಿಂದ ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಏನೆಲ್ಲಾ ಫಲಗಳಿವೆ ತಿಳಿಯಿರಿ.

ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗದಿಂದ ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಏನೆಲ್ಲಾ ಪಲಾಫಲಗಳು ಹೀಗಿವೆ ಎಂಬ
ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗದಿಂದ ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಏನೆಲ್ಲಾ ಪಲಾಫಲಗಳು ಹೀಗಿವೆ ಎಂಬ

ಸಿಂಹ ರಾಶಿಯಲ್ಲಿ ಕುಜ ಮತ್ತು ಕೇತುವಿನ ಸಂಯೋಗವು ಜೂನ್ 6 ರಿಂದ ಜುಲೈ ತಿಂಗಳ 28 ರವರೆಗು ಇರಲಿದೆ. ನಾಡಿ ಜೋತಿಷ್ಯದ ಪ್ರಕಾರ ಜನ್ಮಕುಂಡಲಿಯಲ್ಲಿ ಕುಜ ಮತ್ತು ಕೇತುವಿನ ಯುತಿ ಇದ್ದಲ್ಲಿ ಅದನ್ನು ಕುಜದೋಷ ಎಂದು ಪರಿಗಣಿಸುತ್ತೇವೆ. ಈ ಅವಧಿಯಲ್ಲಿ ಪತಿಯೊಂದು ರಾಶಿಗಳಿಗೂ ವಿಭಿನ್ನವಾದ ಫಲಗಳು ದೊರೆಯುತ್ತವೆ. ಈ ಅವಧಿಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಥವಾ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಪೂಜೆಯಿಂದ ಶುಭಫಲಗಳು ದೊರೆಯುತ್ತವೆ. ಕಿರಿ ಸೋದರಿ ಅಥವಾ ಕಿರಿ ಸೋದರನ ಜೊತೆಯಲ್ಲಿ ಅನಾವಶ್ಯಕ ವಾದ ವಿವಾದಗಳು ಉಂಟಾಗುವ ಸಾಧ್ಯತೆಗಳಿವೆ. ಮನೆತನದ ಭೂ ವಿವಾದವೂ ಅಂತಿಮ ಹಂತವನ್ನು ತಲುಪುತ್ತದೆ. ಆದ್ದರಿಂದ ಶಾಂತಿ ಸಹನೆಯಿಂದ ವರ್ತಿಸಿದಷ್ಟೂ ಶುಭಫಲಗಳನ್ನು ಪಡೆಯುವ ಸಾದ್ಯತೆಗಳು ಇರುತ್ತವೆ. ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗದಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ.

ಮೇಷ ರಾಶಿ

ಮನದಲ್ಲಿ ಯಾವುದೋ ಯೋಜನೆ ಮನೆ ಮಾಡಿರುತ್ತದೆ. ಆದ್ದರಿಂದ ನಿಮ್ಮಲ್ಲಿನ ಬುದ್ಧಿಶಕ್ತಿಯನ್ನು ಸಂಪೂರ್ಣ ಬಳಸಲು ಸಾಧ್ಯವಾಗುವುದಿಲ್ಲ. ಆತ್ಮಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಚಟುವಟಿಕೆಗಳ ಬಗ್ಗೆ ಹೆಚ್ಚು ಗಮನ ನೀಡುವಿರಿ. ವಿದ್ಯಾರ್ಥಿಗಳು ಮಾಡುವ ಸಣ್ಣ ಪುಟ್ಟ ತಪ್ಪುಗಳು ದೊಡ್ಡದಾಗಿ ಕಾಣುತ್ತವೆ. ಗರ್ಭಿಣಿಯರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಎಲ್ಲರನ್ನೂ ಸುಲಭವಾಗಿ ನಂಬುವುವಿರಿ. ಸ್ವಂತ ಪರಿಶ್ರಮದಿಂದ ಯಾವುದೇ ಕೆಲಸವನ್ನು ಸಾಧಿಸಲು ಸಾಧ್ಯವಾಗುತ್ತದೆ. ನಿಮ್ಮ ಮನಸ್ಸಿನ ಯೋಚನೆಗಳನ್ನು ಎಲ್ಲರಿಗೂ ತಿಳಿಸಲು ವಿಫಲರಾಗುವಿರಿ. ಸ್ವಾರ್ಥದ ಬುದ್ದಿ ಇಲ್ಲದೆ ಹೋದರೂ, ಮೊದಲ ಆದ್ಯತೆಯನ್ನು ಸ್ವಂತ ಕೆಲಸಗಳಿಗೆ ನೀಡುವಿರಿ. ಮಕ್ಕಳ ತಪ್ಪನ್ನು ಮನ್ನಿಸಿ ಎಲ್ಲರಿಗೂ ಮಾದರಿಯಾಗುವಂತೆ ಬೆಳೆಸುವಿರಿ. ಆಪತ್ತಿನ ಕಾಲದಲ್ಲಿ ನಿಮ್ಮ ತಂದೆಯವರ ಸಹಾಯ ಸಹಕಾರ ದೊರೆಯುತ್ತದೆ. ಕ್ರಮೇಣವಾಗಿ ನಿಮ್ಮ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಅನಿರೀಕ್ಷಿತ ಧನಲಾಭ ದೊರೆಯಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಒಳ್ಳೆಯದು.

ವೃಷಭ ರಾಶಿ

ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುವುದಿಲ್ಲ. ಗಡಿಬಿಡಿಯಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಪ್ರತಿಯೊಂದು ವಿಚಾರದಲ್ಲಿಯೂ ಗೆಲುವನ್ನು ನಿರೀಕ್ಷಿಸುವಿರಿ. ಆತ್ಮೀಯರ ಸಹಾಯದಿಂದ ಉದ್ಯೋಗದಲ್ಲಿ ನಿರೀಕ್ಷಿಸಿದ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ಸೋದರ ಸೋದರಿಯರ ನಡುವೆ ಉತ್ತಮ ಅನುಬಂಧ ಇರುವುದಿಲ್ಲ. ನಿಮ್ಮಲ್ಲಿ ಧೈರ್ಯ ಸಾಹಸ ಗುಣಗಳು ಇರುತ್ತವೆ. ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವವರೆಗೆ ವಿಶ್ರಾಂತಿಯನ್ನೂ ಪಡೆಯುವುದಿಲ್ಲ. ದಿನ ಕಳೆದಂತೆ ಶುಭ ಫಲಗಳು ದೊರೆಯುತ್ತವೆ. ಹಣಕಾಸಿನ ವಿಚಾರದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಕೂಡಿಟ್ಟ ಹಣವನ್ನು ಖರ್ಚು ಮಾಡಬೇಕಾದ ಸಂದರ್ಭ ಎದುರಾಗುತ್ತದೆ. ಕಷ್ಟ ನಷ್ಟಗಳಿಗೆ ಬೆದರುವುದಿಲ್ಲ. ಸ್ವಂತ ಉದ್ದಿಮೆ ಸ್ಥಾಪಿಸುವ ಗುರಿ ತಲುಪಲು ಆತ್ಮೀಯರ ಸಹಾಯ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಪ್ರಗತಿ ಲಭಿಸುತ್ತದೆ. ವಿವಾಹ ಕಾರ್ಯದಲ್ಲಿ ಅನಗತ್ಯ ವಿಳಂಬ ಉಂಟಾಗುತ್ತದೆ. ಭೂವಿವಾದದಲ್ಲಿ ನಿಮ್ಮ ಪರವಾಗಿ ಫಲಿತಾಂಶಗಳು ಲಭಿಸುತ್ತವೆ.

ಮಿಥುನ ರಾಶಿ

ದೈಹಿಕವಾಗಿ ದುರ್ಬಲರಾಗುವಿರಿ. ಆರೋಗ್ಯದ ಬಗ್ಗೆ ಅನಗತ್ಯ ಆತಂಕಕ್ಕೆ ಒಳಗಾಗುವಿರಿ. ಮನದಲ್ಲಿ ಅನಗತ್ಯ ಯೋಚನೆಗಳು ಕಾಣುತ್ತವೆ. ಒಳ್ಳೆಯ ಮಾತಿನಿಂದಾಗಿ ವಿರೋಧಿಗಳು ಸಹ ನಿಮ್ಮ ಸ್ನೇಹ ಸಂಬಂಧವನ್ನು ಬಯಸುತ್ತಾರೆ. ಲಿಂಗ ಬೇಧವಿಲ್ಲದೆ ಎಲ್ಲರೂ ಸೌಂಧರ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಸಮಯ ವ್ಯಯಿಸುತ್ತಾರೆ. ಕೈ ಕಾಲುಗಳಿಗೆ ಪೆಟ್ಟಾಗುವ ಸಂಭವವಿದೆ ಎಚ್ಚರಿಕೆ ಇರಲಿ. ಆಪತ್ತು ಕಣ್ಣೆದುರಿಗೇ ಇದ್ದರೂ ನಿಮ್ಮಲ್ಲಿನ ಧೈರ್ಯವು ಕಡಿಮೆಯಾಗುವುದಿಲ್ಲ. ನಿಮ್ಮ ಮನಸ್ಸಿಗೆ ಸರಿ ಎನಿಸುವ ಕೆಲಸ ಕಾರ್ಯಗಳನ್ನು ಮಾತ್ರ ಮಾಡಲಿಚ್ಚಿಸುವಿರಿ. ಸರಳವಾದ ಕೆಲಸ ಕಾರ್ಯಗಳನ್ನು ಸಹ ಸಂಕೀರ್ಣಗೊಳಿಸುವಿರಿ. ನಿಮ್ಮಲ್ಲಿನ ಹಠದ ಗುಣವು ಕುಟುಂಬದಲ್ಲಿ ಬೇಸರದ ಸನ್ನಿವೇಶವನ್ನು ಉಂಟುಮಾಡುತ್ತದೆ. ಅತಿಯಾದ ಆತ್ಮವಿಶ್ವಾಸವು ತಪ್ಪು ತೀರ್ಮಾನವನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ಅನಗತ್ಯ ಖರ್ಚು ವೆಚ್ಚಗಳು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಹಿರಿಯ ಸೋದರಿಯ ಜೀವನದಲ್ಲಿ ಕೌಟುಂಬಿಕ ಕಲಹಗಳು ಕಂಡುಬರಲಿವೆ. ಹಠದ ಬದಲು ದೃಢವಾದ ಸಂಕಲ್ಪದ ಅವಶ್ಯಕತೆ ಇದೆ.

ಕಟಕ ರಾಶಿ

ನಿಮ್ಮ ಕಟುವಾದ ಮಾತುಗಳು ಮತ್ತು ಅನಗತ್ಯ ಟೀಕೆಗಳು ಆತ್ಮೀಯರನ್ನು ನಿಮ್ಮಿಂದ ದೂರ ಮಾಡುತ್ತವೆ. ಹಣಕಾಸಿನ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ಆಪತ್ತಿನ ಸಮಯದಲ್ಲಿಯೂ ಬುದ್ದಿವಂತಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಮೊದಲ ಆದ್ಯತೆಯನ್ನು ನಿಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ನೀಡಿವಿರಿ. ಸಮಯವನ್ನು ವ್ಯರ್ಥಮಾಡದೆ ಯಾವುದಾದರೊಂದು ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ಹಣಕಾಸಿನ ಕೊರತೆಯಿದ್ದರೂ ಹಣಕಾಸಿನ ವ್ಯವಹಾರದಲ್ಲಿ ತೊಂದರೆ ಇರುವುದಿಲ್ಲ. ಲಾಭವಿಲ್ಲದ ಕೆಲಸ ಕಾರ್ಯಗಳಿಗೆ ಬೇರೆಯವರ ನೆರವನ್ನು ಪಡೆಯುವಿರಿ. ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪಲು ಸಹೋದ್ಯೋಗಿಗಳ ನೆರವು ದೊರೆಯುತ್ತದೆ. ಸಾಕು ಪ್ರಾಣಿಗಳಿಂದ ತೊಂದರೆ ಎದುರಾಗಬಹುದು. ಉದ್ಯೋಗ ಬದಲಾಯಿಸುವ ಆಶಯ ಇದ್ದಲ್ಲಿ ಸಾಧ್ಯವಾಗುತ್ತದೆ. ಆಡುವ ಮಾತಿನಲ್ಲಿ ಆವೇಶದ ಭಾವನೆ ಇರುತ್ತದೆ. ದಾಂಪತ್ಯದಲ್ಲಿ ಇದ್ದ ಮನಸ್ತಾಪವು ದೂರವಾಗುತ್ತದೆ. ಮನೆತನದ ಆಸ್ತಿಯ ವಿಚಾರದಲ್ಲಿ ನಿಮ್ಮ ತೀರ್ಮಾನಕ್ಕೆ ಎಲ್ಲರ ಒಪ್ಪಿಗೆ ದೊರೆಯುತ್ತದೆ.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.