Mars Retrograde: ಮಿಥುನ ರಾಶಿಯಲ್ಲಿ ಮಂಗಳನ ಹಿಮ್ಮುಖ ಚಲನೆ: ವೃಷಭ, ಕುಂಭ ಸೇರಿ 3 ರಾಶಿಯವರು ಅದೃಷ್ಟವಂತರು, ಹೀಗಿರುತ್ತೆ ಶುಭಫಲಗಳು
Mars Retrograde 2025: ಸಾಮಾನ್ಯವಾಗಿ ಗ್ರಹಗಳು ಹಿಮ್ಮುಖವಾದಾಗ ಕೆಲವೊಂದು ರಾಶಿಯವರು ಸವಾಲಿನ ದಿನಗಳನ್ನು ಎದುರಿಸುತ್ತಾರೆ. ಆದರೆ ಮಿಥುನ ರಾಶಿಯಲ್ಲಿ ಮಂಗಳನ ಹಿಮ್ಮುಖ ಸಂಚಾರವು ಮೂರು ರಾಶಿಯವರಿಗೆ ಶುಭಫಲಗಳನ್ನು ತರಲಿದೆ. ಮಂಗಳನ ಬದಲಾವಣೆಯಿಂದ ಯಾವ ರಾಶಿಚಕ್ರ ಚಿಹ್ನೆಗಳು ಅದೃಷ್ಟವನ್ನು ಹೊಂದಲಿವೆ ಎಂಬುದನ್ನು ತಿಳಿಯೋಣ.
Mars Retrograde 2025: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಾನವನ್ನು ಬದಲಾಯಿಸುತ್ತವೆ. ರಾಶಿ ಸಂಕ್ರಮಣದ ಕೆಲವೊಂದು ಸಂದರ್ಭಗಳಲ್ಲಿ ಹಿಮ್ಮುಖವಾಗಿಯೂ ಸಂಚರಿಸುತ್ತವೆ. ಇದೀಗ ಮಿಥುನ ರಾಶಿಯಲ್ಲಿ ಮಂಗಳನು ಹಿಮ್ಮುಖನಾಗಿ ಚಲಿಸಲಿದ್ದಾನೆ. ಇದು ಮಂಗಳನಿಂದ ಆಗುತ್ತಿರುವ ವರ್ಷದ ಮೊದಲ ರಾಶಿಯ ಸ್ಥಾನ ಬದಲಾವಣೆಯಾಗಿದೆ. ಹಿಮ್ಮುಖ ಸ್ಥಿತಿಯಲ್ಲಿ ಮಂಗಳನು ಹೇಳಿಕೊಳ್ಳುವಂಥ ಶುಭ ಫಲಿತಾಂಶಗಳನ್ನು ನೀಡುವುದಿಲ್ಲ, ಆದರೆ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಶುಭ ಫಲಿತಾಂಶಗಳನ್ನು ನೀಡುತ್ತಾನೆ.
ಮಂಗಳ ಗ್ರಹವು 2024ರ ಡಿಸೆಂಬರ್ 7 ರಂದು ಹಿಮ್ಮುಖವಾಗಿತ್ತು. 2025ರ ಫೆಬ್ರವರಿ 24 ರವರೆಗೆ ಇದೇ ಸ್ಥಿತಿಯಲ್ಲಿ ಸಾಗುತ್ತಾನೆ. ಆ ನಂತರ ನೇರವಾಗುತ್ತಾನೆ. ಇದಕ್ಕೂ ಮುನ್ನ ಅಂದರೆ 2025ರ ಜನವರಿ 21 ರಂದು ಮಂಗಳನು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಮಂಗಳನ ಈ ಬದಲಾವಣೆಯಿಂದ ಯಾವ ರಾಶಿಚಕ್ರ ಚಿಹ್ನೆಗಳು ಆಶೀರ್ವಾದ ಪಡೆಯುತ್ತವೆ, ಯಾವ ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆಯ ಫಲಿತಾಂಶಗಳಿವೆ ಎಂಬುದನ್ನು ತಿಳಿಯೋಣ.
ಮಂಗಳನಿಂದ ಯಾವ ರಾಶಿಚಕ್ರ ಚಿಹ್ನೆಗಳಿಗೆ ಹೆಚ್ಚು ಶುಭಫಲಗಳಿವೆ?
ವೃಷಭ ರಾಶಿ: ಈ ರಾಶಿಯವರು ಮಂಗಳನ ಹಿಮ್ಮುಖ ಚಲನೆಯಿಂದ ಅದೃಷ್ಟವನ್ನು ಪಡೆಯುತ್ತಾರೆ. ಮಂಗಳನು ಈ ರಾಶಿಯವರ ಸಂಪತ್ತಿನ ಮನೆಯಲ್ಲಿ ಸಂಚರಿಸುತ್ತಾನೆ. ಈ ಸಮಯದಲ್ಲಿ ವೃಷಭ ರಾಶಿಯವರ ಉದ್ಯೋಗ ಪರಿಸ್ಥಿತಿ ಸುಧಾರಿಸಲಿದೆ. ವಿವಿಧ ಮೂಲಗಳಿಂದ ನಿಮಗೆ ಹಣ ಬರುತ್ತದೆ. ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಕೊಟ್ಟ ಸಾಲವನ್ನು ಮರು ಪಾವತಿ ಮಾಡಲು ಸಾಧ್ಯವಾಗುತ್ತದೆ. ವ್ಯವಹಾರದಲ್ಲಿನ ಸವಾಲುಗಳು ಕಡಿಮೆಯಾಗಿ ಲಾಭವನ್ನು ಕಾಣುತ್ತೀರಿ.
ತುಲಾ ರಾಶಿ: ಮಂಗಳನ ಹಿಮ್ಮುಖ ಸಂಚಾರವು ನಿಮ್ಮ ರಾಶಿಚಕ್ರ ಚಿಹ್ನೆಯ ಒಂಬತ್ತನೇ ಮನೆಯಲ್ಲಿ ನಡೆಯಲಿದೆ. ಈ ಸಮಯದಲ್ಲಿ ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತೆ. ಅಂದುಕೊಂಡಂತೆ ಕೆಲಸಗಳು ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಒತ್ತಡದ ದಿನಗಳು ದೂರವಾಗುತ್ತವೆ. ಕುಟುಂಬದಲ್ಲಿ ಹಿರಿಯ ಆರೋಗ್ಯ ಸುಧಾರಿಸಲಿದೆ. ಹೊಸ ಯೋಜನೆಗಳನ್ನು ರೂಪಿಸಲಿದ್ದೀರಿ.
ಕುಂಭ ರಾಶಿ: ಪ್ರೀತಿಯ ಜೀವನದ ಎಲ್ಲಾ ತೊಂದರೆಗಳನ್ನು ಕೊನೆಗೊಳಿಸುವ ಮೂಲಕ ಸಕಾರಾತ್ಮಕ ಬೆಳವಣಿಗೆಗಳನ್ನು ಕಾಣುತ್ತೀರಿ. ಸಂಬಂಧವು ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಹೊಂದಿಕೊಳ್ಳುತ್ತೀರಿ, ಅದೃಷ್ಟದಿಂದಾಗಿ ಆರೋಗ್ಯವೂ ಉತ್ತಮವಾಗಿರುತ್ತದೆ. ಶಕ್ತಿಯ ಮಟ್ಟವು ಹೆಚ್ಚಾಗಿರುತ್ತದೆ. ಖರ್ಚುಗಳು ಕಡಿಮೆಯಾಗಿ ಆದಾಯದಲ್ಲಿ ಹೆಚ್ಚಳವನ್ನು ಕಾಣುತ್ತೀರಿ. ಅಧ್ಯಾತ್ಮದಲ್ಲೂ ಆಸಕ್ತಿ ಹೆಚ್ಚಾಗುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)