ವೃಷಭ ರಾಶಿಯಲ್ಲಿ ಕುಜನ ಸಂಚಾರದಿಂದ ದ್ವಾದಶ ರಾಶಿಗಳಿಗೆ ಮಿಶ್ರ ಫಲ; ಕೌಟುಂಬಿಕ ಕಲಹ, ಈ ರಾಶಿಯವರಿಗೆ ಭೂವಿವಾದದಲ್ಲಿ ಜಯ-horoscope mars transit in taurus till august 26th mangala sankramana effect on all zodiac signs ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃಷಭ ರಾಶಿಯಲ್ಲಿ ಕುಜನ ಸಂಚಾರದಿಂದ ದ್ವಾದಶ ರಾಶಿಗಳಿಗೆ ಮಿಶ್ರ ಫಲ; ಕೌಟುಂಬಿಕ ಕಲಹ, ಈ ರಾಶಿಯವರಿಗೆ ಭೂವಿವಾದದಲ್ಲಿ ಜಯ

ವೃಷಭ ರಾಶಿಯಲ್ಲಿ ಕುಜನ ಸಂಚಾರದಿಂದ ದ್ವಾದಶ ರಾಶಿಗಳಿಗೆ ಮಿಶ್ರ ಫಲ; ಕೌಟುಂಬಿಕ ಕಲಹ, ಈ ರಾಶಿಯವರಿಗೆ ಭೂವಿವಾದದಲ್ಲಿ ಜಯ

ಮಂಗಳ ಗ್ರಹವು ಸದ್ಯಕ್ಕೆ ವೃಷಭ ರಾಶಿಯಲ್ಲಿ ನೆಲೆಸಿದೆ. ಆಗಸ್ಟ್‌ 26ವರೆಗೂ ಕುಜ ಇದೇ ರಾಶಿಯಲ್ಲಿ ನೆಲೆಸಿದ್ದು ದ್ವಾದಶ ರಾಶಿಗಳಿಗೆ ವಿವಿಧ ಫಲಗಳನ್ನು ನೀಡಲಿದ್ದಾನೆ. ಕೆಲವರಿಗೆ ಕೌಟುಂಬಿಕ ಸಮಸ್ಯೆ ಕಾಡುತ್ತದೆ, ಕೆಲವರಿಗೆ ವಿದೇಶದಲ್ಲಿ ಉದ್ಯೋಗ ದೊರೆಯುತ್ತದೆ. ಇದೇ ರೀತಿ ಯಾವ ರಾಶಿಯವರಿಗೆ ಏನು ಫಲ ನೋಡೋಣ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ವೃಷಭ ರಾಶಿಯಲ್ಲಿ ಕುಜನ ಸಂಚಾರದಿಂದ ದ್ವಾದಶ ರಾಶಿಗಳಿಗೆ ಮಿಶ್ರ ಫಲ; ಕೌಟುಂಬಿಕ ಕಲಹ, ಈ ರಾಶಿಯವರಿಗೆ ಭೂವಿವಾದದಲ್ಲಿ ಜಯ
ವೃಷಭ ರಾಶಿಯಲ್ಲಿ ಕುಜನ ಸಂಚಾರದಿಂದ ದ್ವಾದಶ ರಾಶಿಗಳಿಗೆ ಮಿಶ್ರ ಫಲ; ಕೌಟುಂಬಿಕ ಕಲಹ, ಈ ರಾಶಿಯವರಿಗೆ ಭೂವಿವಾದದಲ್ಲಿ ಜಯ

ಜುಲೈ 12 ರಂದು ಕುಜನು ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಆಗಸ್ಟ್ ತಿಂಗಳ 26 ರವರೆಗೂ ಕುಜ ಅದೇ ರಾಶಿಯಲ್ಲಿ ಸಂಚರಿಸುತ್ತಾನೆ. ಇದರಿಂದ ಮೇಷದಿಂದ ಮೀನವರೆಗೂ ಪ್ರತಿಯೊಂದು ರಾಶಿಗಳಿಗೂ ಪ್ರತ್ಯೇಕವಾದ ಫಲಗಳು ದೊರೆಯುತ್ತವೆ.

ಮೇಷ

ಕುಟುಂಬದಲ್ಲಿ ಪರಸ್ಪರ ಭಿನ್ನಾಬಿಪ್ರಾಯ ಇರುತ್ತದೆ. ಕೌಟುಂಬಿಕ ಜೀವನದಲ್ಲಿ ಬೇಸರದ ಸನ್ನಿವೇಶ ಎದುರಾಗುತ್ತದೆ. ಉದ್ಯೋಗದ ಕಾರಣದಿಂದ ಪರಸ್ಥಳಕ್ಕೆ ತೆರಳುವಿರಿ. ಆರೋಗ್ಯದ ತೊಂದರೆ ಇರುವುದಿಲ್ಲ. ಯಾರ ಮೇಲೆಯೂ ನಂಬಿಕೆ ಇರದು. ಹೊಸ ವಾಹನ ಕೊಳ್ಳಲು ಯೋಜಿಸುವಿರಿ. ಬಂಧು ವರ್ಗದವರಿಂದ ದೂರ ಉಳಿಯುವಿರಿ. ವಿದೇಶ ಪ್ರಯಾಣ ಮಾಡುವ ಅವಕಾಶ ಲಭಸುತ್ತದೆ. ಒತ್ತಡದ ಕಾರಣ ಹೆದರಿಕೆಯ ಗುಣವಿರುತ್ತದೆ. ಹೊಸ ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕಗಳು ಎದುರಾಗುತ್ತದೆ. ಅತುರದ ಸ್ವಭಾವ ಇರುತ್ತದೆ. ಬೇರೆಯವರಿಂದ ಮೋಸ ಹೋಗುವ ಸಾಧ್ಯತೆಗಳಿವೆ. ಆಡುವ ಮಾತಿನ ಬಗ್ಗೆ ಎಚ್ಚರಿಕೆ ಇರಲಿ.

ವೃಷಭ

ಜೀವನಲ್ಲಿನ ಲೋಪದೋಷಗಳನ್ನು ತಾವಾಗಿಯೇ ಸರಿಪಡಿಸಿಕೊಳ್ಳುವಿರಿ. ಹಣಕಾಸಿನ ವ್ಯವಹಾರಗಳು ಸರಾಗವಾಗಿ ಸಾಗುತ್ತದೆ. ಕುಟುಂಬದಲ್ಲಿ ಅನಾವಶ್ಯಕ ವಾದ ವಿವಾದಗಳು ಉಂಟಾಗುತ್ತವೆ. ವೈಭೋಗದ ಜೀವನ ಇಷ್ಟ ಪಡುವಿರಿ. ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇರುತ್ತದೆ. ಒಲ್ಲದ ಮನಸ್ಸಿನಿಂದ ಬಂಧುವೊಬ್ಬರನ್ನು ಭೇಟಿ ಮಾಡಬೇಕಾಗುತ್ತದೆ. ಕುಟುಂಬದಲ್ಲಿ ಭೂವಿವಾದವೊಂದು ಪರಿಹಾರಗೊಳ್ಳುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಯಾರೊಂದಿಗೂ ಜಗಳ ಕದನದಲ್ಲಿ ತೊಡಗುವಿರಿ. ಬುದ್ಧಿ ಮತ್ತು ಶಕ್ತಿಯ ಮುಂದೆ ತಾಳ್ಮೆ ಸೋತು ಹೋಗುತ್ತದೆ. ಸಹನೆಯಿಂದ ಇದ್ದಷ್ಟೂ ಒಳಿತು. ಆರಂಭದಲ್ಲಿ ಕ್ರಮೇಣವಾಗಿ ತೊಂದರೆಗಳು ಮರೆಯಾಗಲಿವೆ.

ಮಿಥುನ

ವಿಧ್ಯಾರ್ಥಿಗಳು ಕಾರ್ಯಸಾಧನೆಗೆ ಪ್ರಥಮ ಆಧ್ಯತೆ ನೀಡುವರು. ಹೆಚ್ಚಿನ ಖರ್ಚಿನ ಕಾರಣ ಹಣದ ಕೊರತೆ ಇರುತ್ತದೆ. ಕಣ್ಣಿನ ತೊಂದರೆ ಇದ್ದರೂ ವೈದ್ಯಕೀಯ ಚಿಕಿತ್ಸೆಯಿಂದ ಸಮಸ್ಯೆ ನಿವಾರಣೆ ಆಗುತ್ತದೆ. ತಾಳ್ಮೆಯಿಂದ ಇದ್ದರೂ ಕೆಲವೊಮ್ಮೆ ಕೋಪದಿಂದ ವರ್ತಿಸುವಿರಿ. ಕೆಲಸ ಕಾರ್ಯಗಳಲ್ಲಿ ಅದೃಷ್ಟದಿಂದ ಯಶಸ್ಸು ಗಳಿಸುವಿರಿ. ದೊರೆಯುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಲ್ಲಿರಿ. ಬಂಧು ಬಳಗದವರೊಂದಿಗೆ ಉತ್ತಮ ಬಾಂಧವ್ಯ ಉಂಟಾಗುತ್ತದೆ. ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ. ಸೋದರ ಮಾವನ ಜೊತೆಯಲ್ಲಿ ವಿವಾದ ಇರುತ್ತದೆ. ಕುಟುಂಬದ್ದಲ್ಲಿ ನಿಮ್ಮ ಮಾತೇ ಅಂತಿಮವಾಗುತ್ತದೆ. ಅನಿರೀಕ್ಷಿತ ಜವಾಬ್ದಾರಿಗಳು ಬೇಸರ ಮೂಡಿಸುತ್ತದೆ.

ಕಟಕ

ಚರ್ಮದ ತೊಂದರೆ ಗುಣಮುಖವಾಗುತ್ತದೆ. ದೇಹದ ತೂಕ ಹೆಚ್ಚುತ್ತದೆ. ಆದಾಯದಲ್ಲಿ ಪ್ರಗತಿ ಕಂಡುಬರುತ್ತದೆ. ಕೈಕಾಲುಗಳಲ್ಲಿ ನೋವು ಇರುತ್ತದೆ. ಯೋಗ ಮತ್ತು ದೈಹಿಕ ವ್ಯಾಯಾಮದಿಂದ ದೈಹಿಕರಾಗಿ ಸದೃಢತೆಯನ್ನು ಪಡೆಯುವಿರಿ. ನಿಮ್ಮಲ್ಲಿರುವ ಬುದ್ಧಿವಂತಿಕೆಯನ್ನು ಬಳಸಿದಲ್ಲಿ ಯಶಸ್ಸನ್ನು ಗಳಿಸುವಿರಿ. ಸಭೆ ಸಮಾರಂಭಗಳಲ್ಲಿ ಉನ್ನತ ಪ್ರಾತಿನಿತ್ಯ ಗಳಿಸುವಿರಿ. ಅತಿಯಾದ ಹಣದ ಆಸೆ ಇರುವುದಿಲ್ಲ. ಮನಸ್ಸಿನಲ್ಲಿ ಯಾವುದಾದರೊಂದು ವಿಚಾರದ ಬಗ್ಗೆ ಯೋಚನೆ ಇರುತ್ತದೆ. ಕೋಪದ ಮೇಲೆ ನಿಯಂತ್ರಣ ಸಾಧಿಸುವಿರಿ. ಗಣ್ಯವ್ಯಕ್ತಿಯೊಬ್ಬರ ಪರಿಚಯವಾಗುತ್ತದೆ. ಆರೋಗ್ಯದಲ್ಲಿ ತೊಂದರೆ ಇರುತ್ತದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಬಾಳಬೇಕು.

ಸಿಂಹ

ಐಷಾರಾಮಿ ಜೀವನವನ್ನು ನಡೆಸುವಿರಿ. ಕುಟುಂಬದ ಜೊತೆ ದಿನ ಕಳೆಯಲು ಇಷ್ಟ ಪಡುವಿರಿ. ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗುತ್ತವೆ. ಉದ್ಯೋಗದಲ್ಲಿ ಯಾವುದೇ ಅಡಚಣೆ ಇರದು. ಪಿತ್ತದ ದೋಷವಿರುತ್ತದೆ. ತಂದೆಯ ಜೊತೆ ಪ್ರೀತಿ ವಿಶ್ವಾಸವು ಮರುಕಳಿಸುತ್ತವೆ. ಸಣ್ಣ ಪುಣ್ಣ ವಿಚಾರಗಳಿಗೂ ಕೋಪಗೊಳ್ಳುವಿರಿ. ಕೆಲವೊಮ್ಮೆ ಸೇಡಿನ ಪ್ರವೃತ್ತಿ ತೋರುವಿರಿ. ಕಣ್ಣಿಗೆ ಪೆಟ್ಟು ಬೀಳುವ ಸಾಧ್ಯತೆಗಳಿವೆ. ಕುಟುಂಬದ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಲಿವೆ. ವಿದ್ಯಾರ್ಥಿಗಳು ಶ್ರಮದಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ವಂಶದ ಆಸ್ತಿಯಲ್ಲಿ ವಿವಾದವೊಂದು ಎದುರಾಗಲಿದೆ. ಆತಿಯಾದ ಆತ್ಮವಿಶ್ವಾಸ ಬೇಡ. ಕುಟುಂಬದ ಹಿರಿಯರ ಸಲಹೆಗಳನ್ನು ಪಾಲಿಸುವ ಕಾರಣ ತೊಂದರೆ ಇರದು.

ಕನ್ಯಾ

ವಿಶ್ವಾಸ ಮತ್ತು ಬುದ್ಧಿವಂತಿಕೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ವನ್ನು ಗಳಿಸುವಿರಿ. ಹಣದ ತೊಂದರೆ ಇರುವುದಿಲ್ಲ. ಸೋದರರಲ್ಲಿ ಉತ್ತಮ ಒಡನಾಟ ಇರಲಿದೆ. ಸೋದರಿಗೆ ಅನಿರೀಕ್ಷಿತ ಧನಲಾಭವಿದೆ. ಸಮಾಜದಲ್ಲಿ ಉನ್ನತ ಸ್ಥಾನ ದೊರೆಯುತ್ತದೆ. ಉದ್ಯೋಗದ ಸಮಸ್ಯೆ ದೂರವಾಗುತ್ತದೆ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ತಾಳ್ಮೆಯಿಂದ ವರ್ತಿಸುವಿರಿ. ಉಷ್ಣ ವಾಯುವಿನ ದೋಷ ಇರುತ್ತದೆ. ಸ್ವಗೃಹ ಭೂಲಾಭವಿದೆ. ತಾಯಿಯವರ ಆರೋಗ್ಯದಲ್ಲಿ ಪ್ರಗತಿ ಕಂಡುಬರುತ್ತದೆ. ಯಾರಿಂದಲೂ ಹಣದ ಸಹಾಯ ಬಯಸುವುದಿಲ್ಲ. ವಿದೇಶದಲ್ಲಿ ಉದ್ಯೋಗ ಲಭಿಸುವ ಸಾಧ್ಯತೆಗಳಿವೆ.

ತುಲಾ

ಎಲ್ಲರ ವಿಶ್ವಾಸ ಗಳಿಸುವಿರಿ. ಆರಂಭಿಸುವ ಕೆಲಸ ಕಾರ್ಯಗಳನ್ನು ಬುದ್ಧಿವಂತಿಕೆಯಿಂದ ಪೂರ್ಣಗೊಳಿಸುವಿರಿ. ಅನಿರೀಕ್ಷಿತ ಫಲಿತಾಂಶಗಳು ಗಲಿಬಿಲಿಗೆ ಒಳಗಾಗುವಿರಿ. ಹಣದ ತೊಂದರೆ ಬಾರದು. ಸೋದರರ ನಡುವಿನ ಮನಸ್ತಾಪ ಕೊನೆಯಾಗಲಿದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಧನಲಾಭವಿದೆ. ಸಮಾಜದಲ್ಲಿ ಉನ್ನತ ಸ್ಥಾನ ಮಾನ ದೊರೆಯುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ತಾಳ್ಮೆಯಿಂದ ವರ್ತಿಸುವಿರಿ. ಉಷ್ಣವಾಯುವಿನ ದೋಷ ಇರುತ್ತದೆ. ತಾಯಿಗೆ ತವರು ಮನೆಯಿಂದ ಹಣದ ಸಹಾಯ ದೊರೆಯುತ್ತದೆ. ಸೋದರಿಗೆ ವಿದೇಶದಲ್ಲಿ ಉದ್ಯೋಗ ಲಭಿಸುವ ಸಾಧ್ಯತೆಗಳಿವೆ. ಹೊಸ ವಾಹನ ಕೊಳ್ಳುವಿರಿ.

ವೃಶ್ಚಿಕ

ದಿನನಿತ್ಯದ ಜೀವನಲ್ಲಿ ಧನಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ನಿಮ್ಮಲ್ಲಿನ ಹಣಕಾಸಿನ ಕೊರತೆಯು ಕಡಿಮೆ ಆಗುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಇರುತ್ತದೆ. ಉದ್ಯೋಗಲ್ಲಿ ಅನಾವಶ್ಯಕ ವಾದ ವಿವಾದಗಳು ಉಂಟಾಗುತ್ತವೆ. ವೈಭೋಗದ ಜೀವನವನ್ನು ಇಷ್ಟ ಪಡುವಿರಿ. ಬಂಧುವೊಬ್ಬರ ಭೇಟಿಯಿಂದ ಅನುಕೂಲತೆ ಉಂಟಾಗಲಿವೆ. ಕುಟುಂಬಕ್ಕೆ ಸೇರಿದ ಭೂವಿವಾದವೊಂದು ಪರಿಹಾರಗೊಳ್ಳುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ತಪ್ಪನ್ನು ಮನ್ನಿಸದೆ ಜಗಳ ಕದನದಲ್ಲಿ ತೊಡಗುವಿರಿ. ನಿಮ್ಮಲ್ಲಿರುವ ಬುದ್ಧಿ ಮತ್ತು ಶಕ್ತಿಯ ಮುಂದೆ ತಾಳ್ಮೆ ಸೋತು ಹೋಗುತ್ತದೆ. ಸಹನೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ.

ಧನಸ್ಸು

ಮಕ್ಕಳ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ನಿಮಗೆ ಕಣ್ಣಿನ ದೋಷ ಇರುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಉತ್ತಮ ಆದಾಯವಿದ್ದರೂ ಖರ್ಚು ವೆಚ್ಚಗಳು ಹೆಚ್ಚಾಗಿರುತ್ತವೆ. ಸಮಯಕ್ಕೆ ತಕ್ಕಂತೆ ಬುದ್ಧಿ ಚಾತುರ್ಯದಿಂದ ಸಮಸ್ಯೆಯಿಂದ ಪಾರಾಗುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಬದಲಾಯಿಸದೆ ಯಶಸ್ಸು ಗಳಿಸುವಿರಿ. ಆದಾಯದಲ್ಲಿ ಇದ್ದ ಕೊರತೆ ಕಡಿಮೆಯಾಗುತ್ತದೆ. ಮುಂಗೋಪ ಕಡಿಮೆ ಮಾಡಿಕೊಂಡಲ್ಲಿ ಕೆಲಸ ಕಾರ್ಯಗಳಲ್ಲಿ ಆತ್ಮೀಯರ ಸಹಾಯ ದೊರೆಯುತ್ತದೆ. ಉತ್ತಮ ಅವಕಾಶ ದೊರೆಯುವ ಕಾರಣ ಉದ್ಯೋಗವನ್ನು ಬದಲಾಯಿಸುವಿರಿ. ವಿದ್ಯಾರ್ಥಿಗಳಿಗೆ ಶುಭಫಲಗಳು ದೊರೆಯುತ್ತವೆ.

ಮಕರ

ನಿಮ್ಮಲ್ಲಿನ ಹೊಂದಾಣಿಕೆಯ ಉದ್ಯೋಗಲ್ಲಿನ ತೊಂದರೆಯನ್ನು ದೂರ ಮಾಡುತ್ತದೆ.. ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುವುದಿಲ್ಲ. ನಿಮ್ಮ ಕಾರ್ಯಕ್ಷಮತೆಗೆ ತಕ್ಕ ಪ್ರಶಂಸೆ ಲಭಿಸುತ್ತದೆ. ಸಮಯ ವ್ಯರ್ಥ ಮಾಡದೆ ಕೆಲಸ ಕಾರ್ಯಗಳಲ್ಲಿ ಮುಂದುವರೆಯುವಿರಿ. ಉದ್ಯೋಗದ ಸಲುವಾಗಿ ವಿದೇಶ ಪ್ರಯಾಣ ಮಾಡುವಿರಿ. ಸಂಗಾತಿಗೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ದುರಾಸೆ ಇರುವುದಿಲ್ಲ. ತಾನಾಗಿಯೇ ದೊರೆವ ಅನುಕೂಲತೆಯನ್ನು ಸಂತಸದಿಂದ ಪಡೆಯುವಿರಿ. ಸವಿಯಾಗಿ ಮಾತನಾಡಿ ಹಣದ ಸಹಾಯ ಪಡೆಯುವಿರಿ. ಪುರಾತನ ಮನೆಯನ್ನು ನವೀಕರಿಸುವಿರಿ. ಸಂಗಾತಿಯೊಂದಿಗೆ ಪಾಲುಗಾರಿಕೆಯಲ್ಲಿ ಭೂಸಂಬಂದಿತ ವ್ಯಾಪಾರವನ್ನು ಆರಂಭಿಸುವಿರಿ. ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಸಾಕ್ಷೀದಾರರಾದಲ್ಲಿ ತೊಂದರೆ ಎದುರಾಗುತ್ತದೆ.

ಕುಂಭ

ಸದ್ದಿಲ್ಲದೆ ಸಮಾಜದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆಯುವಿರಿ. ಕಷ್ಟವಿಲ್ಲದೆ ಕೆಲಸ ಕಾರ್ಯಗಳನ್ನು ಮಾಡಬಲ್ಲಿರಿ. ಯಾರೊಂದಿಗೂ ಮನದ ವಿಚಾರವನ್ನು ತಿಳಿಸುವುದಿಲ್ಲ. ಐಷಾರಾಮಿ ವಾಹನವನ್ನು ಕೊಳ್ಳುವಿರಿ. ಎಲ್ಲರೂ ನಿಮ್ಮ ಸ್ನೇಹ ಸಂಬಂದವನ್ನು ಬಯಸಿ ಬರುತ್ತಾರೆ. ತಪ್ಪನ್ನು ಮನ್ನಿಸುವ ಕ್ಷಮಾಗುಣದಿಂದ ಬಂಧುವರ್ಗದ ಮನ ಗೆಲ್ಲುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನವನ್ನು ದೊರೆಯುತ್ತದೆ. ಸೋದರನಿಗೆ ಹಣಕಾಸಿನ ಸಹಾಯ ಮಾಡುವಿರಿ. ಶೀತ ವಾಯುವಿನ ದೋಷವಿರುತ್ತದೆ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗುವ ಸಂಭವವಿದೆ. ಹಾಡುಗಾರರು ಮತ್ತು ಸಂಗೀತ ಬಲ್ಲವರಿಗೆ ಶುಭವಿದೆ.

ಮೀನ

ಉತ್ತಮ ಆದಾಯದಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಆದರೆ ತಪ್ಪಾದ ನಿರ್ಧಾರಗಳಿಂದ ಮುಖ್ಯವಾದ ಕೆಲಸವೊಂದು ಮುಂದೂಡಲ್ಪಡುತ್ತದೆ. ಅತಿಯಾದ ಖರ್ಚು ವೆಚ್ಚಗಳಿಂದ ಹಣದ ಕೊರತೆಯನ್ನು ಎದುರಿಸುವಿರಿ. ಸಂತಾನ ಲಾಭವಿದೆ. ವಿದ್ಯಾರ್ಥಿಗಳು ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಬೇಸಾಯಗಾರರಿಗೆ ಉತ್ತಮ ಆದಾಯ ಇರುತ್ತದೆ. ವ್ಯಾಪಾರೋದ್ದೇಶಕ್ಕಾಗಿ ನಾಲ್ಕು ಚಕ್ರದ ವಾಹನವನ್ನು ಕೊಳ್ಳುವಿರಿ. ದೈನಂದಿನ ಜೀವನದಲ್ಲಿ ಬಳಸುವ ಚೂಪಾದ ವಸ್ತುಗಳಿಂದ ತೊಂದರೆ ಉಂಟಾಗಬಹುದು. ಧಾರ್ಮಿಕ ಕೇಂದ್ರಗಳಲ್ಲಿ ಅನ್ನದಾನ ಮಾಡುವಿರಿ. ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ರಾಜಕೀಯ ಸೇರಲು ಉತ್ತಮ ವೇದಿಕೆ ದೊರೆಯುತ್ತದೆ. ದಿಟ್ಟವಾದ ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನಿಸಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.