ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  24 ದಿನಗಳ ಕಾಲ ಅಸ್ತಂಗತನಾಗಲಿರುವ ಬುಧ; 3 ರಾಶಿಯವರಿಗೆ ಹಣದ ಹೊಳೆ, ಕೆಲವರನ್ನು ಕಷ್ಟಕ್ಕೆ ದೂಡಲಿರುವ ಸಂವಹನ ದೇವತೆ

24 ದಿನಗಳ ಕಾಲ ಅಸ್ತಂಗತನಾಗಲಿರುವ ಬುಧ; 3 ರಾಶಿಯವರಿಗೆ ಹಣದ ಹೊಳೆ, ಕೆಲವರನ್ನು ಕಷ್ಟಕ್ಕೆ ದೂಡಲಿರುವ ಸಂವಹನ ದೇವತೆ

ಸಂವಹನ ದೇವತೆ ಎಂದೇ ಹೆಸರಾದ ಬುಧನು ಜೂನ್‌ 3 ರಿಂದ ವೃಷಭ ರಾಶಿಯಲ್ಲಿ ಅಸ್ತಂಗತ ಹಂತಕ್ಕೆ ಹೋಗಲಿದ್ದಾನೆ. ಮುಂದಿನ 24 ದಿನಗಳ ಕಾಲ ಇದೇ ಹಂತದಲ್ಲಿರುತ್ತಾನೆ. ಈ ಸಮಯದಲ್ಲಿ ಧನಸ್ಸು ಸೇರಿದಂತೆ ಇತರ ರಾಶಿಯವರಿಗೆ ಬುಧನು ಒಳಿತು ಮಾಡಿದರೆ ಮಿಥುನ ಸೇರಿದಂತೆ ಕೆಲವರಿಗೆ ಸಮಸ್ಯೆಗಳನ್ನು ನೀಡಲಿದ್ದಾನೆ.

24 ದಿನಗಳ ಕಾಲ ಅಸ್ತಂಗತನಾಗಲಿರುವ ಬುಧ; 3 ರಾಶಿಯವರಿಗೆ ಹಣದ ಹೊಳೆ, ಕೆಲವರನ್ನು ಕಷ್ಟಕ್ಕೆ ದೂಡಲಿರುವ ಸಂವಹನ ದೇವತೆ
24 ದಿನಗಳ ಕಾಲ ಅಸ್ತಂಗತನಾಗಲಿರುವ ಬುಧ; 3 ರಾಶಿಯವರಿಗೆ ಹಣದ ಹೊಳೆ, ಕೆಲವರನ್ನು ಕಷ್ಟಕ್ಕೆ ದೂಡಲಿರುವ ಸಂವಹನ ದೇವತೆ

ಬುಧ ದಹನ: ಬುಧವನ್ನು ಬುದ್ಧಿವಂತಿಕೆಯ ಗ್ರಹ ಎಂದು ಕರೆಯಲಾಗುತ್ತದೆ. ಗ್ರಹಗಳ ಅಧಿಪತಿ ಎಂದು ಪರಿಗಣಿಸಲ್ಪಟ್ಟ ಬುಧನು ಬಲಶಾಲಿಯಾಗಿದ್ದಾಗ, ವ್ಯಕ್ತಿಯು ಬುದ್ಧಿವಂತಿಕೆಯಿಂದ ವರ್ತಿಸುತ್ತಾನೆ. ಉತ್ತಮ ದೈಹಿಕ ಆರೋಗ್ಯ ದೊರೆಯುತ್ತದೆ. ವ್ಯಾಪಾರ ಉದ್ಯೋಗದಲ್ಲಿ ಉತ್ತಮ ಯಶಸ್ಸು ದೊರೆಯುತ್ತದೆ. ಯಾರ ಜಾತಕದಲ್ಲಿ ರಾಹು, ಕೇತು ಮತ್ತು ಮಂಗಳನ ಪ್ರಭಾವ ಇದೆಯೋ ಅವರ ಮೇಲೆ ಬುಧನು ಋಣಾತ್ಮಕ ಪರಿಣಾಮ ಬೀರುತ್ತಾನೆ.

ಬುಧ ಗ್ರಹವು ಪ್ರಸ್ತುತ ವೃಷಭ ರಾಶಿಯಲ್ಲಿ ಸಾಗುತ್ತಿದೆ . ಜೂನ್ 3 ರಿಂದ, ಅವರು ವೃಷಭ ರಾಶಿಯಲ್ಲಿ ಅಸ್ತಂಗತ ಹಂತಕ್ಕೆ ಹೋಗುತ್ತಾನೆ. ಸುಮಾರು 24 ದಿನಗಳವರೆಗೆ ಈ ಸ್ಥಾನದಲ್ಲಿ ಇರುತ್ತಾನೆ ಜೂನ್ 14 ರಂದು, ಬುಧನು ದಹನ ಚಿಹ್ನೆಯಾಗಿ ಮಿಥುನ ರಾಶಿಯನ್ನು ಪ್ರವೇಶಿಸಿ ಜೂನ್ 27 ರವರೆಗೆ ಇದೇ ಹಂತದಲ್ಲಿ ಮುಂದುವರೆಯುತ್ತಾನೆ. ಬುಧನು ವಾಣಿಜ್ಯ, ಆಲೋಚನೆ, ಬುದ್ಧಿವಂತಿಕೆ ಮತ್ತು ಸಂವಹನ ಕೌಶಲ್ಯಗಳ ಅಧಿಪತಿ ಎಂದು ಹೇಳಲಾಗುತ್ತದೆ. ಬುಧನ ಅಸ್ತಂಗತದಿಂದಾಗಿ ಕೆಲವು ರಾಶಿಯವರಿಗೆ ಶುಭ, ಕೆಲವರಿಗೆ ಸಮಸ್ಯೆಗಳು ಉಂಟಾಗುತ್ತದೆ.

ಸಂವಹನ ಕೌಶಲ್ಯದ ಆಡಳಿತಗಾರ ಬುಧ

ಬುಧನನ್ನು ಸಂವಹನ ಕೌಶಲ್ಯದ ಆಡಳಿತಗಾರ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಬುಧವು ದಹನದಲ್ಲಿದ್ದಾಗ, ಒಬ್ಬ ವ್ಯಕ್ತಿಯು ತನ್ನ ಆಲೋಚನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗುವುದಿಲ್ಲ. ಬುಧನು ವೃಷಭ ರಾಶಿಯನ್ನು ಪ್ರವೇಶಿಸಿದಾಗ ಕೆಲವರಲ್ಲಿ ಹಟಮಾರಿತನ ಅಧಿಕವಾಗಿರುತ್ತದೆ. ಅವರು ಹೊಸ ವಿಷಯಗಳನ್ನು ಕಲಿಯಲು ಕಷ್ಟಪಡುತ್ತಾರೆ. ಆದರೆ ಇತರರು ಸೃಜನಶೀಲ ವಿಚಾರಗಳೊಂದಿಗೆ ಕಠಿಣ ಸಮಸ್ಯೆಗಳನ್ನು ಸಹ ಪರಿಹರಿಸಲು ಸಮರ್ಥರಾಗುತ್ತಾರೆ. ಬುಧನ ದಹನದ ಸಮಯದಲ್ಲಿ ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸುವುದು ಒಳ್ಳೆಯದಲ್ಲ. ಏಕೆಂದರೆ ಅವರು ನಿರೀಕ್ಷಿತ ಫಲಿತಾಂಶಗಳನ್ನು ನೀಡದಿರಬಹುದು. ಬದಲಾಗಿ ನಷ್ಟವಾಗುವ ಸಂಭವವಿದೆ. ಬುಧನ ಅಂಸ್ತಂಗತ ಹಂತದ ಪರಿಣಾಮ ಯಾರಿಗೆ ಧನಾತ್ಮಕ ಫಲಿತಾಂಶಗಳು ದೊರೆಯುತ್ತದೆ? ಯಾರಿಗೆ ನಕಾರಾತ್ಮಕ ಫಲಿತಾಂಶಗಳು ದೊರೆಯುತ್ತದೆ ನೋಡೋಣ.

ಧನಸ್ಸು ರಾಶಿ

ಬುಧದ ದಹನವು ಧನು ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವರ್ಷಗಳಿಂದ ಬಾಕಿ ಉಳಿದಿರುವ ಕೆಲಸಗಳು ಈ ಸಮಯದಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ವಿವಿಧ ಮೂಲಗಳಿಂದ ಆದಾಯ ದೊರೆಯಲಿದೆ. ಮನೆ ಹಾಗೂ ಮನಸ್ಸಿನಲ್ಲಿ ಶಾಂತಿಯುತ ವಾತಾವಣ ಇರಲಿದೆ. ಕೆಲಸದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಬುಧನ ಅಸ್ತಂಗತ ಹಂತವು ಕನ್ಯಾ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ವೃತ್ತಿಯಲ್ಲಿ ಎಲ್ಲಾ ಕಾರ್ಯಗಳು ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳ ಬೆಂಬಲದೊಂದಿಗೆ ಪೂರ್ಣಗೊಳ್ಳುತ್ತವೆ. ಹಣಕಾಸಿನ ತೊಂದರೆಗಳು ಕ್ರಮೇಣ ಮಾಯವಾಗುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿದೇಶಕ್ಕೆ ಹೋಗುವ ಅವಕಾಶವೂ ಇದೆ.

ವೃಶ್ಚಿಕ ರಾಶಿ

ಬುಧ ಸಂಕ್ರಮಣದಿಂದ ವೃಶ್ಚಿಕ ರಾಶಿಯವರಿಗೆ ಆದಷ್ಟು ಲಾಭವಾಗಲಿದೆ . ಈ ರಾಶಿಯವರಿಗೆ ಆದಾಯ ಹೆಚ್ಚಾಗುತ್ತದೆ. ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಸಂತಸದ ಸುದ್ದಿ ದೊರೆಯಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತದೆ. ಮಿತ್ರನ ಸಹಾಯದಿಂದ ಜೀವನದಲ್ಲಿ ಕಷ್ಟಗಳು ದೂರವಾಗುತ್ತವೆ.

ಬುಧನ ಅಂಸ್ತಂಗತದಿಂದ ಮುಂದಿನ 24 ದಿನಗಳವರೆಗೆ ಸಮಸ್ಯೆ ಎದುರಿಸುವ ರಾಶಿಗಳು

ಮೇಷ ರಾಶಿ

ಮೇಷ ರಾಶಿಯ 3 ಮತ್ತು 6 ನೇ ಮನೆಯ ಅಧಿಪತಿ ಬುಧ. ಎರಡನೇ ಮನೆಯಲ್ಲಿ ಅವನು ದುರ್ಬಲನಾಗಿರುತ್ತಾನೆ. ಇದು ಹಣಕಾಸಿನ ವಿಷಯಗಳಲ್ಲಿ ಮತ್ತು ಇತರರೊಂದಿಗೆ ಮಾತನಾಡುವಲ್ಲಿ ಸವಾಲುಗಳನ್ನು ಉಂಟುಮಾಡುತ್ತದೆ. ಪರಿಣಾಮವಾಗಿ ಹಣದ ಕೊರತೆ ಮತ್ತು ವೈಯಕ್ತಿಕ ಸಂಬಂಧಗಳಲ್ಲಿ ಅಶಾಂತಿ ಉಂಟಾಗಬಹುದು. ವೃತ್ತಿ ವಿಷಯದಲ್ಲಿ ಸವಾಲುಗಳು ಇರುತ್ತವೆ. ಪ್ರಗತಿಗೆ ಅಡ್ಡಿ ಉಂಟಾಗಬಹುದು. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.

ವೃಷಭ ರಾಶಿ

ಬುಧದ ದಹನವು ವೃಷಭ ರಾಶಿಯ ಮೊದಲ ಮನೆಯಲ್ಲಿ ನಡೆಯುತ್ತದೆ. ಪರಿಣಾಮವಾಗಿ, ಈ ರಾಶಿಯವರ ಜೀವನದ ವಿವಿಧ ಅಂಶಗಳಲ್ಲಿ ಸವಾಲುಗಳು ಉದ್ಭವಿಸುತ್ತವೆ . ಹಣಕಾಸಿನ ವಿಷಯಗಳು, ವೈಯಕ್ತಿಕ ವ್ಯವಹಾರಗಳು ಮತ್ತು ವೈಯಕ್ತಿಕ ಬೆಳವಣಿಗೆಯಲ್ಲಿ ಎಲ್ಲಾ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಮಕ್ಕಳ ಕುರಿತಾದ ಕಾಳಜಿಗಳು ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ವೃತ್ತಿ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರುತ್ತದೆ. ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸುವಾಗ ತಾಳ್ಮೆಯಿಂದಿರುವುದು ಉತ್ತಮ. ವ್ಯಾಪಾರದ ದೃಷ್ಟಿಯಿಂದ ಸಾಧಾರಣ ಲಾಭ ಇರುತ್ತದೆ. ಹಣಕಾಸಿನ ಆದಾಯವಿದ್ದರೂ ಉಳಿತಾಯದ ಕೊರತೆಯಿಂದ ಭವಿಷ್ಯದಲ್ಲಿ ತೊಂದರೆ ಉಂಟಾಗಬಹುದು. ಸಂಗಾತಿಯೊಂದಿಗಿನ ಸಂಬಂಧಗಳು ದುರ್ಬಲವಾಗಿರುತ್ತವೆ.

ಮಿಥುನ ರಾಶಿ

ಬುಧವು ಮಿಥುನ ರಾಶಿಯ 12 ನೇ ಮನೆಯಲ್ಲಿ ದಹನವಾಗಲಿದೆ. ಪರಿಣಾಮವಾಗಿ, ವೃತ್ತಿ ಜೀವನವು ನಿರಾಶೆಯಿಂದ ತುಂಬಿರುತ್ತದೆ. ಅದೃಷ್ಟ ಇಲ್ಲದಿರಬಹುದು. ವ್ಯಾಪಾರ ವಲಯದಲ್ಲಿ ಲಾಭ ಇಲ್ಲದಂತೆ ಆಗುತ್ತದೆ. ಯಶಸ್ಸು ಸಾಧಿಸಲು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ನಷ್ಟ ಉಂಟಾಗಬಹುದು. ಸಂಗಾತಿಯೊಂದಿಗೆ ಕೆಲಸದಲ್ಲಿ ಅಶಾಂತಿ ಉಂಟಾಗಬಹುದು. ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ