2025 ರಲ್ಲಿ ಬುಧ ಮೊದಲ ಹಿಮ್ಮುಖ ಸಂಚಾರ: ಆತ್ಮಸ್ಥೈರ್ಯ ಹೆಚ್ಚಳಕ್ಕೆ ಪ್ರಯತ್ನಿಸುತ್ತೀರಿ, 12 ರಾಶಿಯವರ ಫಲಾಫಲ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  2025 ರಲ್ಲಿ ಬುಧ ಮೊದಲ ಹಿಮ್ಮುಖ ಸಂಚಾರ: ಆತ್ಮಸ್ಥೈರ್ಯ ಹೆಚ್ಚಳಕ್ಕೆ ಪ್ರಯತ್ನಿಸುತ್ತೀರಿ, 12 ರಾಶಿಯವರ ಫಲಾಫಲ ಹೀಗಿದೆ

2025 ರಲ್ಲಿ ಬುಧ ಮೊದಲ ಹಿಮ್ಮುಖ ಸಂಚಾರ: ಆತ್ಮಸ್ಥೈರ್ಯ ಹೆಚ್ಚಳಕ್ಕೆ ಪ್ರಯತ್ನಿಸುತ್ತೀರಿ, 12 ರಾಶಿಯವರ ಫಲಾಫಲ ಹೀಗಿದೆ

Mercury Retrograde: 2025ರಲ್ಲಿ ಬುಧನ ಮೊದಲ ಹಿಮ್ಮುಖ ಸಂಚಾರವು ಇಂದು (ಮಾರ್ಚ್ 14, ಶುಕ್ರವಾರ) ನಡೆಯುತ್ತಿದೆ. ಇದು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತೆ. ಫಲಾಫಲ ಮಾಹಿತಿ ಇಲ್ಲಿದೆ.

ಬುಧನ ಹಿಮ್ಮುಖ ಸಂಚಾರದಿಂದ 12 ರಾಶಿಯವರಿಗೆ ಏನೆಲ್ಲಾ ಶುಭ ಫಲಗಳಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಬುಧನ ಹಿಮ್ಮುಖ ಸಂಚಾರದಿಂದ 12 ರಾಶಿಯವರಿಗೆ ಏನೆಲ್ಲಾ ಶುಭ ಫಲಗಳಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಗ್ರಹಗಳು ಒಂದು ನಿರ್ದಿಷ್ಟ ಸಮಯದಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. ರಾಶಿಗಳಿಗೆ ಗ್ರಹಗಳ ಪ್ರವೇಶವು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಇಂದು (ಮಾರ್ಚ್ 14, ಶುಕ್ರವಾರ) ಬುಧ ಹಿಮ್ಮುಖವಾಗಿ ಸಂಚರಿಸಲಿದೆ. 2025 ರಲ್ಲಿ ಬುಧನ ಮೊದಲ ಹಿಮ್ಮುಖ ಸಂಚಾರ ಇದಾಗಿದೆ. ಏಪ್ರಿಲ್ 7 ರವರೆಗೆ ಬುಧನ ಈ ಸಂಚಾರವು ಮುಂದುವರಿಯಲಿದೆ. ಏಪ್ರಿಲ್ 12 ರಂದು ನೇರವಾಗಿ ಸಂಚರಿಸಲು ಆರಂಭಿಸುತ್ತಾನೆ. ಬುಧನ ಈ ಸಂಚಾರದಿಂದ 12 ರಾಶಿಯವರ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ. ಯಾರಿಗೆ ಶುಭ ಫಲಗಳಿವೆ, ಯಾರಿಗೆ ಸವಾಲುಗಳು ಇರುತ್ತವೆ ಎಂಬುದನ್ನು ರಾಶಿವಾರು ಇಲ್ಲಿ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರು ಈ ಅವಧಿಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಆಂತರಿಕವಾಗಿ ತುಂಬಾ ಒಳ್ಳೆಯ ಸ್ವಭಾವದವರು. ಇತರರಿಗೆ ಸಹಾಯ ಮಾಡುವ ಗುಣ ಇರುತ್ತದೆ. ಮುಂಬರುವ ವಾರಗಳಲ್ಲಿ ತಪ್ಪು ತಿಳುವಳಿಕೆಗಳು ಮತ್ತು ತಪ್ಪು ಸಂವಹನದ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ಎಲ್ಲಾ ಪ್ರಯತ್ನಗಳನ್ನು ಆಂತರಿಕವಾಗಿ ಮತ್ತೊಮ್ಮೆ ಪರಿಶೀಲಿಸಿ. ಆರ್ಥಿಕ ಲಾಭಗಳಿವೆ. ಕೆಲಸಗಳಲ್ಲಿ ಯಶಸ್ಸು ಕಾಣುತ್ತೀರಿ.

ವೃಷಭ ರಾಶಿ

ಯಾವುದೇ ಕಠಿಣ ಸವಾಲುಗಳು ಎದುರಾದರೂ ಸುಲಭವಾಗಿ ತೆಗೆದುಕೊಂಡು ಬಗೆಹರಿಸುತ್ತೀರಿ. ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಸಾಲದ ಪ್ರಮಾಣ ಕಡಿಮೆ ಮಾಡಿಕೊಳ್ಳುತ್ತೀರಿ. ಸಂಬಂಧಿಕರಿಂದ ಆರ್ಥಿಕ ನೆರವು ಪಡೆಯುತ್ತೀರಿ. ಶುಭ ಕಾರ್ಯಗಳು ನಡೆಯುತ್ತವೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗುತ್ತದೆ.

ಮಿಥುನ ರಾಶಿ

ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಸಂಗಾತಿಯೊಂದಿಗೆ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಬರಬೇಕಾದ ಹಣ ನಿಮ್ಮ ಕೈ ಸೇರುತ್ತದೆ. ಆದಾಯದ ಮೂಲಗಳನ್ನು ವಿಸ್ತರಿಸಿಕೊಳ್ಳುತ್ತೀರಿ. ಸ್ನೇಹಿತರ ಬೆಂಬಲ ಸಿಗುತ್ತದೆ. ಸಣ್ಣ ಪ್ರವಾಸಕ್ಕೆ ಯೋಜಿಸುತ್ತೀರಿ. ಯಾವುದೇ ಅಡೆತಡೆಗಳು ಈ ಅವಧಿಯಲ್ಲಿ ಇರುವುದಿಲ್ಲ. ಎಲ್ಲವೂ ಅಂದುಕೊಂಡತೆ ನಡೆಯುತ್ತವೆ.

ಕಟಕ ರಾಶಿ

ತಮ್ಮ ಅಧಿಕಾರವನ್ನು ಮರಳಿ ಪಡೆಯುವ ದೃಢ ನಿರ್ಧಾರದೊಂದಿಗೆ ಕೆಲಸ ಮಾಡುತ್ತೀರಿ. ಆಕ್ರಮಣಕಾರಿ ಘರ್ಷಣೆಗಳಿಗೆ ಒಳಗಾಗುವುದಿಲ್ಲ. ಮಾರ್ಚ್ ಮತ್ತು ಏಪ್ರಿಲ್ ಆರಂಭದಲ್ಲಿ ಏನು ಮಾಡುಬೇಕು ಎಂಬುದರ ಬಗ್ಗೆ ಪ್ಲಾನ್ ಮಾಡಿಕೊಳ್ಳುತ್ತೀರಿ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಸಾಲ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ಶುಭ ಕಾರ್ಯಕ್ರಮಗಳು ನಡೆಯುತ್ತವೆ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತೀರಿ.

ಸಿಂಹ ರಾಶಿಯವರು ವಿರೋಧಿಗಳ ವಿರುದ್ಧ ಗೆಲುವು ಸಾಧಿಸುತ್ತಾರೆ

ಮಾತಿನಲ್ಲಿ ಹಿಡತ ಇರುತ್ತದೆ. ಕೆಲವೊಂದು ಅನಾವಶ್ಯಕ ಚರ್ಚೆಗಳಿಂದ ದೂರ ಉಳಿಯುತ್ತೀರಿ. ಇದು ಉತ್ತಮ ನಿರ್ಧಾರವಾಗಿರುತ್ತದೆ. ಇತರರಿಗೆ ಸಾಕಷ್ಟು ಕಲಿಯುತ್ತೀರಿ. ಮಾಡಬೇಕಾದ ಕೆಲಸಗಳ ಬಗ್ಗೆ ಹೆಚ್ಚು ಯೋಚಿಸುತ್ತೀರಿ. ವಿದ್ಯಾರ್ಥಿಗಳು ಓದಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡುತ್ತಾರೆ. ಸಂಯಮದಿಂದ ನಡೆಯುತ್ತೀರಿ. ತಾಳ್ಮೆಯಿಂದ ಎಲ್ಲವನ್ನು ಜಯಿಸುತ್ತೀರಿ. ವಿರೋಧಿಗಳ ವಿರುದ್ಧ ಗೆಲುವು ಸಿಗುತ್ತದೆ.

ಕನ್ಯಾ ರಾಶಿ

ಮುಂಬರುವ ವಾರಗಳಲ್ಲಿ ಕನ್ಯಾ ರಾಶಿಯವರಿಗೆ ಉತ್ತಮ ಶುಭ ಫಲಗಳಿವೆ. ನಿರೀಕ್ಷೆಗೂ ಮೀರಿದ ಆರ್ಥಿಕ ಲಾಭಗಳಿವೆ. ವಿದೇಶ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ರಾಜಕಾರಣದಲ್ಲಿ ಇರುವವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ಸಿಗುತ್ತದೆ. ವ್ಯಾಪಾರಿಗಳಿಗೆ ಲಾಭ ಕಡಿಮೆಯಾಗುತ್ತದೆ. ಇದು ಅವರ ಹೆಚ್ಚು ಯೋಚನೆಗೆ ಕಾರಣವಾಗುತ್ತದೆ. ಹೊಸದಾಗಿ ಉದ್ಯಮ ಆರಂಭಿಸಲು ಪ್ಲಾನ್ ಮಾಡುತ್ತೀರಿ.

ತುಲಾ ರಾಶಿ

ಬುಧನ ಹಿಮ್ಮುಖ ಸಂಚಾರವು ತುಲಾ ರಾಶಿಯವರಿಗೆ ಲಾಭಗಳನ್ನು ತಂದಿದೆ. ಕೆಲವರು ನಿಮ್ಮಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾರೆ. ಅಂತಹವರನ್ನು ನೀವು ಬಲವಂತವಾಗಿ ಹಿಡಿದುಕೊಳ್ಳಲು ಪ್ರಯತ್ನಿಸುವುದಿಲ್ಲ. ಎಲ್ಲರಿಗಿಂತ ಭಿನ್ನವಾಗಿ ಯೋಚಿಸುತ್ತೀರಿ, ಭಿನ್ನವಾಗಿ ಬದಕಲು ಪ್ರಯತ್ನಿಸುತ್ತೀರಿ. ಸಾಲವನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆಯೇ ಹೆಚ್ಚು ಯೋಚನೆ ಮಾಡುತ್ತೀರಿ. ನೆಮ್ಮದಿಯ ಜೀವನ ನಡೆಸುತ್ತೀರಿ. ಕುಟುಂಬದಲ್ಲಿ ಸಂತೋಷ ಕೂಟ ನಡೆಯುತ್ತದೆ.

ವೃಶ್ಚಿಕ ರಾಶಿ

ಮುಂಬರುವ ವಾರಗಳಲ್ಲಿ ನಿಮಗೆ ಸಿಹಿ ಸುದ್ದಿ ಸಿಗಲಿದೆ. ಅವಿವಾಹಿತಕರಿಗೆ ಶೀಘ್ರದಲ್ಲಿ ಮದುವೆ ನಿಶ್ಚಯವಾಗುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಗುರಿಯನ್ನು ಮುಟ್ಟಲು ಹೊಸದಾಗಿ ಯೋಚಿಸುತ್ತೀರಿ. ಆರ್ಥಿಕ ನೆರವು ಸಿಗುತ್ತದೆ. ಸಮಸ್ಯೆಗಳನ್ನು ಕಡಿಮೆಮಾಡಿಕೊಳ್ಳುತ್ತೀರಿ.

ಧನು ರಾಶಿಯವರಿಗೆ ತಾಳ್ಮೆಯಿಂದ ಎಲ್ಲವನ್ನು ಸಹಿಸಿಕೊಳ್ಳುವ ಗುಣ ಇರುತ್ತೆ

ಕೆಲವು ದಿನಗಳ ಮಟ್ಟಿಗೆ ಸಾಕಷ್ಟು ಸವಾಲುಗಳು ಇರುತ್ತವೆ. ಸಣ್ಣ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತೀರಿ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಒತ್ತಡ ಇದ್ದರೂ ತಾಳ್ಮೆಯಿಂದ ಎಲ್ಲವನ್ನು ಸಹಿಸಿಕೊಳ್ಳುತ್ತೀರಿ. ಕಠಿಣ ಪರಿಶ್ರಮವು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಸಂಗಾತಿಗೆ ಸಮಯವನ್ನು ನೀಡುತ್ತೀರಿ. ಹೊರಗಡೆ ಹೋಗಲು ಯೋಜನೆ ರೂಪಿಸುತ್ತೀರಿ.

ಮಕರ ರಾಶಿ

ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಹಳೆಯ ಹೂಡಿಕೆಗಳಿಂದ ಲಾಭವನ್ನು ಪಡೆಯುತ್ತೀರಿ. ಹೊಸದಾಗಿ ಹೂಡಿಕೆ ಮಾಡುವ ಬಗ್ಗೆ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಉದ್ಯೋಗದ ಸ್ಥಳದಲ್ಲಿ ನಿಮಗೆ ನಿರೀಕ್ಷೆಗೆ ಮೀರಿದ ಬೆಂಬಲವನ್ನು ಪಡೆಯುತ್ತೀರಿ. ಬಡ್ತಿಗಳು ಸಿಗುವ ಬಹಳಷ್ಟು ಸಾಧ್ಯತೆ ಇದೆ. ಅಂದುಕೊಂಡಂತೆ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ.

ಕುಂಭ ರಾಶಿ

ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ಸಾವನ್ನು ತೀರಿಸಲು ಸಾಧ್ಯವಾಗುತ್ತದೆ. ಮನೆಯಲ್ಲಿ ಶುಭ ಕಾರ್ಯ ನಡೆಸಲು ಚರ್ಚೆಗಳು ನಡೆಯುತ್ತವೆ. ಉದ್ಯೋಗಿಗಳು ತಮ್ಮ ಸಂಸ್ಥೆಯಿಂದ ಸಿಹಿ ಸುದ್ದಿ ಕೇಳುತ್ತಾರೆ. ಆರ್ಥಿಕವಾಗಿ ಬಲಗೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೀರಿ. ವ್ಯಾಪಾರದಲ್ಲಿ ಲಾಭ ಮುಂದುವರಿಯುತ್ತದೆ. ಅದೃಷ್ಟ ನಿಮ್ಮ ಪರವಾಗಿ ಇರುವುದರಿಂದ ನಷ್ಟದ ಸಾಧ್ಯತೆ ಇದ್ದ ವ್ಯವಹಾರದಲ್ಲೂ ದೊಡ್ಡ ಲಾಭವನ್ನು ಪಡೆಯುತ್ತೀರಿ.

ಮೀನ ರಾಶಿ

ಬುಧನ ಹಿಮ್ಮುಖ ಸಂಚಾರವು ಮೀನ ರಾಶಿಯವರಿಗೆ ಸಾಕಷ್ಟು ಪ್ರಯೋಜನಗಳನ್ನು ತಂದಿದೆ. ನೀವು ಅಂದುಕೊಂಡಂತೆ ಕೆಲಸಗಳು ನಡೆಯುತ್ತವೆ. ಮನೆಯಲ್ಲಿ ಸಮಸ್ಯೆಗಳಿದ್ದರೂ ಕೆಲವೇ ದಿನಗಳಲ್ಲಿ ಬಗೆಹರಿಯುತ್ತವೆ. ವಾಸ್ತವದಲ್ಲಿ ಜೀವಿಸಲು ಇಷ್ಟ ಪಡುತ್ತಾರೆ. ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿಗಳು ಇರುತ್ತವೆ.

ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.