ಕನ್ನಡ ಸುದ್ದಿ  /  Astrology  /  Horoscope Mercury Retrograde In Aries These Zodiac Signs Face Financial Problems Budha Graha Astrology Mgb

ಹೋಳಿ ಹಬ್ಬದ ನಂತರ ಬುಧನ ಹಿಮ್ಮುಖ ಚಲನೆ; ಈ 7 ರಾಶಿಯವರಿಗೆ ಕಾಡಲಿದೆ ಆರ್ಥಿಕ ಸಮಸ್ಯೆ

Mercury Retrograde: ಬುಧ ಗ್ರಹವು ಶೀಘ್ರದಲ್ಲೇ ತನ್ನ ಪಥವನ್ನು ಬದಲಾಯಿಸಲಿದ್ದಾನೆ. ಪ್ರಸ್ತುತ ಮೀನ ರಾಶಿಯಲ್ಲಿ ಸಂಚರಿಸುತ್ತಿರುವ ಬುಧನು ಹೋಳಿ ನಂತರ ಮೇಷ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದರಿಂದ ಕೆಲ ರಾಶಿಯವರಿಗೆ ಆರ್ಥಿಕ ಸಮಸ್ಯೆ ಕಾಡುವ ಸಾಧ್ಯತೆಯಿದೆ.

 ಬುಧನ ಹಿಮ್ಮುಖ ಚಲನೆ (ಪ್ರಾತಿನಿಧಿಕ ಚಿತ್ರ)
ಬುಧನ ಹಿಮ್ಮುಖ ಚಲನೆ (ಪ್ರಾತಿನಿಧಿಕ ಚಿತ್ರ)

ಜ್ಯೋತಿಷ್ಯದ ಪ್ರಕಾರ ಒಬ್ಬರ ರಾಶಿಯಲ್ಲಿ ಬುಧನ ಸ್ಥಾನವು ಬಲವಾಗಿದ್ದರೆ ಆರ್ಥಿಕವಾಗಿ ಲಾಭ-ಯಶಸ್ಸು ಪಡೆಯಲಿದ್ದಾರೆ. ಅದೇ ದುರ್ಬಲವಾಗಿದ್ದರೆ ಆರ್ಥಿಕ ನಷ್ಟ ಉಂಟಾಗುತ್ತದೆ. ಪ್ರಸ್ತುತ ಮೀನ ರಾಶಿಯಲ್ಲಿ ಸಂಚರಿಸುತ್ತಿರುವ ಬುಧನು ಮಾರ್ಚ್ 26 ರಂದು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಆದರೆ ಏಪ್ರಿಲ್ 2 ರಿಂದ ಮೇಷ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಬುಧನ ಹಿಮ್ಮುಖ ಚಲನೆ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಕೆಲ ರಾಶಿಯವರು ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಉದ್ಯೋಗ ಜೀವನದಲ್ಲಿ ಪ್ರಗತಿ ಕಾಣಲಿದ್ದಾರೆ. ಆದರೆ ಕೆಲ ರಾಶಿಯವರು ಮಾತ್ರ ಈ ಕೆಳಗಿನ ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ. ಆರಾಶಿಗಳು ಯಾವುವು ಎಂದು ನೋಡೋಣ..

ಮೇಷ ರಾಶಿ: ಬುಧನು ಮೇಷ ರಾಶಿಯಲ್ಲಿ ಹಿಮ್ಮುಖ ಸಂಚಾರವನ್ನು ಪ್ರಾರಂಭಿಸುತ್ತಾನೆ. ಈ ಸಮಯದಲ್ಲಿ ಹೂಡಿಕೆ ಮಾಡುವ ಮೊದಲು ಸರಿಯಾಗಿ ಯೋಚಿಸಬೇಕು. ಹಣಕಾಸಿನ ಪರಿಸ್ಥಿತಿಯು ಸವಾಲಿನದಾಗುತ್ತದೆ. ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ. ಆದಾಯದ ಮಟ್ಟವೂ ಕಡಿಮೆಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ಹಣವನ್ನು ಸರಿಯಾದ ಯೋಜನೆಯಲ್ಲಿ ಖರ್ಚು ಮಾಡಿ. ಇತರರಿಂದ ಮೋಸ ಹೋಗದಂತೆ ಎಚ್ಚರವಹಿಸಿ.

ಮಕರ ರಾಶಿ: ಹೊಸ ವ್ಯವಹಾರಗಳನ್ನು ಮಾಡಲು ಕಷ್ಟಪಡುವಿರಿ. ಆದಾಯ ಕಡಿಮೆಯಾಗಲಿದೆ. ಲಾಭದಲ್ಲಿ ಇಳಿಕೆ ಆರ್ಥಿಕ ಹೊರೆಗೆ ಕಾರಣವಾಗುತ್ತದೆ. ಆರ್ಥಿಕ ಗುರಿಗಳನ್ನು ಸಾಧಿಸುವುದು ಕಷ್ಟವಾಗಬಹುದು. ಆರ್ಥಿಕ ಸ್ಥಿರತೆಯನ್ನು ಸಾಧಿಸುವುದು ಹೆಚ್ಚು ಕಷ್ಟಕರವಾಗುತ್ತದೆ.

ಧನು ರಾಶಿ: ಖರ್ಚುಗಳು ಗಣನೀಯವಾಗಿ ಹೆಚ್ಚಾಗುತ್ತವೆ. ಹಣದ ಕೊರತೆಯಿಂದ ಮನದಲ್ಲಿ ಹತಾಶೆ ಮೂಡುತ್ತದೆ. ಆದಾಯದ ಮಾರ್ಗಗಳನ್ನು ಹುಡುಕುವುದು ಮತ್ತು ಹಣವನ್ನು ಉಳಿಸಲು ಯೋಜನೆಗಳನ್ನು ರೂಪಿಸುವುದು ಉತ್ತಮ. ಷೇರು ಮಾರುಕಟ್ಟೆಯಲ್ಲಿ ಲಾಭವನ್ನು ಮರುಹೂಡಿಕೆ ಮಾಡಲು ಯೋಚಿಸಬೇಡಿ.

ವೃಶ್ಚಿಕ ರಾಶಿ: ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ಜವಾಬ್ದಾರಿಗಳ ಹೊರೆ ಹೆಚ್ಚಾಗುತ್ತದೆ. ವೆಚ್ಚ ನಿರ್ವಹಣೆ ಕಷ್ಟವಾಗಬಹುದು. ಸಂಪತ್ತಿನ ಕ್ರೋಢೀಕರಣ ಕಷ್ಟವಾಗುತ್ತದೆ. ಉದ್ಯಮಿಗಳಿಗೆ ಕಡಿಮೆ ಲಾಭ ಸಿಗುತ್ತದೆ. ಪ್ರತಿಸ್ಪರ್ಧಿಗಳಿಂದ ಅಪಾಯವಿದೆ.

ಕನ್ಯಾ ರಾಶಿ: ಖರ್ಚು ಹೆಚ್ಚಾಗಲಿದೆ. ಹತಾಶರಾಗುತ್ತಾರೆ. ಕುಟುಂಬದ ಖರ್ಚು ಭರಿಸಲಾಗದೆ ಒತ್ತಡಕ್ಕೆ ಸಿಲುಕುವಿರಿ. ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಅನಿರೀಕ್ಷಿತ ವೆಚ್ಚಗಳು ಹಣಕಾಸಿನ ಪರಿಸ್ಥಿತಿಯನ್ನು ಹದಗೆಡಿಸಬಹುದು. ಒಂದಷ್ಟು ನಷ್ಟವಾಗುವ ಸಂಭವವೂ ಇದೆ.

ಕಟಕ ರಾಶಿ: ಆರ್ಥಿಕ ಸ್ಥಿತಿ ಹದಗೆಡುತ್ತದೆ. ಆದಾಯದ ಮೂಲಗಳು ಕಡಿಮೆಯಾಗುತ್ತವೆ. ಕಾಯಿಲೆಗಳು ತೊಂದರೆ ಕೊಡುತ್ತವೆ. ಹಣವನ್ನು ಉಳಿಸಲು ಸಾಧ್ಯವಾಗುವುಲ್ಲ. ದೂರದ ಪ್ರಯಾಣವನ್ನು ತಪ್ಪಿಸುವುದು ಉತ್ತಮ. ಹಣಕಾಸಿನ ನಷ್ಟವು ಹೆಚ್ಚಾಗುತ್ತದೆ. ದುಂದು ವೆಚ್ಚವನ್ನು ತಪ್ಪಿಸಬೇಕು.

ವೃಷಭ ರಾಶಿ: ಈ ಅವಧಿಯಲ್ಲಿ ಆರ್ಥಿಕವಾಗಿ ಬಹಳ ಜಾಗರೂಕರಾಗಿರಬೇಕು. ಅನಿರೀಕ್ಷಿತ ಖರ್ಚುಗಳು ನಿಮ್ಮ ಮನಸ್ಸನ್ನು ನೋಯಿಸಬಹುದು. ಹಣ ಗಳಿಸಲು ಕಷ್ಟಪಡಬೇಕಾಗುತ್ತದೆ. ಹಠಾತ್ ಖರ್ಚುಗಳು ಎದುರಾಗುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)