Mercury Transit: ಕುಂಭ ರಾಶಿಯಲ್ಲಿ ಬುಧ ಸಂಕ್ರಮಣ; ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಸಂಪತ್ತು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತಾರೆ
Mercury Transit: ಮಕರ ರಾಶಿಯಿಂದ ಹೊರಬರಲಿರುವ ಬುಧನು, ಫೆಬ್ರವರಿಯಲ್ಲಿ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಕುಂಭ ರಾಶಿಯಲ್ಲಿ ಬುಧನ ಸಂಚಾರವು ಮೂರು ರಾಶಿಚಕ್ರ ಚಿಹ್ನೆಗಳಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಯಾವ ರಾಶಿಚಕ್ರ ಚಿಹ್ನೆಗಳು ಪ್ರಯೋಜನ ಪಡೆಯುತ್ತವೆ ಅನ್ನೋದನ್ನು ಇಲ್ಲಿ ನೀಡಲಾಗಿದೆ.

Mercury Transit: ಗ್ರಹಗಳ ರಾಜಕುಮಾರ ಬುಧನನ್ನು ಬುದ್ಧಿವಂತಿಕೆ, ವ್ಯವಹಾರ, ವಿವೇಚನೆ ಮತ್ತು ತಾರ್ಕಿಕತೆ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಬುಧ ಒಂದು ರಾಶಿಚಕ್ರ ಚಿಹ್ನೆಯಿಂದ ಹೊರಬಂದು ಮತ್ತೊಂದು ರಾಶಿಚಕ್ರವನ್ನು ಪ್ರವೇಶಿಸಿದಾಗ, ಅದು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಬುಧನು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ ಪರಿಣಾಮಗಳನ್ನು ಬೀರುತ್ತಾನೆ ಮತ್ತು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಅಶುಭ ಪರಿಣಾಮಗಳನ್ನು ಬೀರುತ್ತಾನೆ. 2025ರ ಫೆಬ್ರವರಿ 11 ರಂದು ಮಂಗಳವಾರ ಮಧ್ಯಾಹ್ನ 12:58 ಕ್ಕೆ ಮಕರ ರಾಶಿಯಿಂದ ಬುಧನು ಹೊರ ಬಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಕುಂಭ ರಾಶಿಯು ಶನಿ ದೇವರ ಪ್ರಾಬಲ್ಯವನ್ನು ಹೊಂದಿದೆ. ಕುಂಭ ರಾಶಿಯಲ್ಲಿ ಶನಿ ಮತ್ತು ಬುಧನ ಸಂಚಾರದಿಂದ ಕೆಲವು ರಾಶಿಚಕ್ರ ಚಿಹ್ನೆಗಳು ಶುಭ ಫಲಿತಾಂಶಗಳನ್ನು ಪಡೆಯುತ್ತವೆ. ಪ್ರಮುಖವಾಗಿ 3 ರಾಶಿಯವರಿಗೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ತಿಳಿಯೋಣ.
1. ಮಿಥುನ ರಾಶಿ: ಬುಧನ ಸಂಚಾರದ ಪ್ರಭಾವದಿಂದಾಗಿ, ಮಿಥುನ ರಾಶಿಯವರು ಆಹ್ಲಾದಕರ ಮತ್ತು ಆನಂದದಾಯಕ ಜೀವನವನ್ನು ನಡೆಸುತ್ತಾರೆ. ಭೌತಿಕ ಸಂಪತ್ತು ಹೆಚ್ಚಾಗುತ್ತದೆ. ವ್ಯಾಪಾರಿಗಳಿಗೆ ಲಾಭವಾಗಲಿದೆ. ಅದೃಷ್ಟದಿಂದಾಗಿ ಸ್ಥಗಿತೆಗೂಂಡಿದ್ದ ಕೆಲವು ಕೆಲಸಗಳನ್ನು ಮಾಡಲಾಗುತ್ತದೆ. ಸಂಪತ್ತನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತೀರಿ. ಸಂಗಾತಿಯಿಂದ ಬೆಂಬಲವನ್ನು ಪಡೆಯುತ್ತೀರಿ. ಸಂಬಂಧಗಳು ಸುಧಾರಿಸುತ್ತವೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರಯಾಣವು ಪ್ರಯೋಜನಕಾರಿಯಾಗಲಿದೆ.
2. ಸಿಂಹ ರಾಶಿ: ಕುಂಭ ರಾಶಿಯಲ್ಲಿ ಬುಧನ ಸಂಚಾರದೊಂದಿಗೆ ಸಿಂಹ ರಾಶಿಚಕ್ರದ ಜನರಿಗೆ ಶುಭ ಸಮಯ ಬರಲಿದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಆರೋಗ್ಯದಲ್ಲಿ ಸುಧಾರಣೆಯ ಲಕ್ಷಣಗಳಿವೆ. ಕೆಲಸದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಪ್ರಗತಿಗೆ ಅವಕಾಶಗಳು ಸಿಗಲಿವೆ. ವ್ಯವಹಾರದಲ್ಲಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.
3. ತುಲಾ ರಾಶಿ: ಬುಧನ ಸಂಕ್ರಮಣವು ತುಲಾ ರಾಶಿಯವರಿಗೆ ಉತ್ತಮ ಸಮಯವನ್ನು ತರಲಿದೆ. ಅದೃಷ್ಟದ ದಿನಗಳು ಸೃಷ್ಟಿಯಾಗುತ್ತಿವೆ. ಆರ್ಥಿಕ ಲಾಭಗಳು ಇರುತ್ತವೆ. ಉದ್ಯೋಗದಲ್ಲಿರುವವರು ಬಡ್ತಿ ಮತ್ತು ಆದಾಯದಲ್ಲಿ ಹೆಚ್ಚಳವನ್ನು ಪಡೆಯುತ್ತಾರೆ. ಜೀವನದಲ್ಲಿ ಸಂತೋಷ ಇರುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮವಾಗಿರುತ್ತೀರಿ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆ ಇದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
