Mercury Transit: ಮಕರ ರಾಶಿಯಲ್ಲಿ ಬುಧ ಸಂಕ್ರಮಣ; ಈ ರಾಶಿಯವರಿಗೆ ಒಲಿದ ಅದೃಷ್ಟ, ಆರ್ಥಿಕ ಲಾಭದೊಂದಿಗೆ ಕೆಲಸದಲ್ಲಿ ಯಶಸ್ಸು ಇರುತ್ತೆ
Mercury Transit: 2025ರ ಆರಂಭದಲ್ಲೇ ಮಕರ ರಾಶಿಗೆ ಬುಧನ ಪ್ರವೇಶವು ಹಲವು ರಾಶಿಯವರಿಗೆ ಶುಭಫಲಗಳನ್ನು ತಂದಿದೆ. ಅದರಲ್ಲೂ ಮೂರು ರಾಶಿಯವರಿಗೆ ಹೆಚ್ಚಿನ ಲಾಭಗಳಿವೆ. ಇವರಿಗೆ ಆರ್ಥಿಕ ಲಾಭದ ಜೊತೆಗೆ ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗಲಿದೆ.
Mercury Transit: ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. 2025ರ ಜನವರಿ 8 ರಂದು ಬುಧ ಗ್ರಹವು ಮಕರ ರಾಶಿಯವನ್ನು ಪ್ರವೇಶಿಸಿದೆ. ಜನವರಿ 28 ರವರೆಗೆ ಇದೇ ರಾಶಿಯಲ್ಲೇ ಇರುತ್ತದೆ. ಈ ಗ್ರಹ ಬದಲಾವಣೆಯು ಪ್ರತಿಯೊಂದು ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮೂರು ರಾಶಿಚಕ್ರ ಚಿಹ್ನೆಗಳು ಪ್ರಗತಿಯನ್ನು ಕಾಣಲಿವೆ. ಮಕರ ರಾಶಿಯಲ್ಲಿ ಬುಧ ಸಂಚಾರದ ಸಮಯದಲ್ಲಿ ನಿಮ್ಮ ರಾಶಿಚಕ್ರವು ಅದೃಷ್ಟವನ್ನು ಪಡೆದಿರುವ ರಾಶಿಗಳ ಪಟ್ಟಿಯಲ್ಲಿ ಇದೆಯಾ ಎಂಬುದನ್ನು ಪರಿಶೀಲಿಸಿ.
ಮಕರ ರಾಶಿಯಲ್ಲಿ ಬುಧ ಸಂಚಾರದಿಂದ 3 ರಾಶಿಯವರಿಗೆ ಅದೃಷ್ಟ
ಮೇಷ ರಾಶಿ: ವಿಶೇಷವಾಗಿ ವೃತ್ತಿಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಕಾಣುತ್ತೀರಿ. ಬೌದ್ಧಿಕ ಸವಾಲುಗಳು ಮತ್ತು ಸಮಸ್ಯೆ ಪರಿಹಾರಕ್ಕೆ ಹೊಸ ಅವಕಾಶಗಳೊಂದಿಗೆ ವೃತ್ತಿಪರ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುತ್ತೀರಿ. ಚುರುಕಾಗಿ ಯೋಚಿಸುವ ನೀವು ನವೀನ ಪರಿಹಾರಗಳನ್ನು ಕಂಡುಕೊಳ್ಳುತ್ತೀರಿ. ತಮ್ಮ ಒಳನೋಟಗಳು ಮತ್ತು ಜ್ಞಾನದಿಂದ ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಪಡೆಯುತ್ತೀರಿ.
ಮಾರಾಟ, ಬರವಣಿಗೆ, ಸಂವಹನ ಮತ್ತು ನೆಟ್‌ವರ್ಕಿಂಗ್‌ನಂತಹ ಚಟುವಟಿಕೆಗಳು ವಿಶೇಷವಾಗಿ ಅನುಕೂಲಕರವಾಗಿವೆ. ಮೇಷ ರಾಶಿಯವರು ಗಮನ ಸೆಳೆಯಲು, ತಮ್ಮ ಕೌಶಲಗಳನ್ನು ಸಕಾಲದಲ್ಲಿ ಪ್ರದರ್ಶಿಸುತ್ತಾರೆ. ಖ್ಯಾತಿ ಹೆಚ್ಚಾಗುತ್ತದೆ. ಗುಪ್ತ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ವ್ಯಾಪಾರದಲ್ಲಿ ಲಾಭ ಪಡೆಯುತ್ತೀರಿ. ಸಂತೋಷದ ದಿನಗಳನ್ನು ಕಳೆಯುತ್ತೀರಿ.
ಕಟಕ ರಾಶಿ: ಬುಧನ ಸಂಚಾರದ ಸಮಯದಲ್ಲಿ ನಿಮ್ಮ ಸಂಬಂಧಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತೀರಿ. ಭಾವನಾತ್ಮಕ ಸಂಬಂಧಗಳು ಬಲಗೊಳ್ಳುತ್ತವೆ. ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗುತ್ತದೆ. ಹೊಸ ಹೊಸ ಯೋಜನೆಗಳನ್ನು ರೂಪಿಸುವ ಜೊತೆಗೆ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೀರಿ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದು ಅತ್ಯಗತ್ಯ, ಏಕೆಂದರೆ ಇದು ತಿಳುವಳಿಕೆ ಮತ್ತು ನಿರ್ಣಯವನ್ನು ಉತ್ತೇಜಿಸುತ್ತದೆ. ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ ಇರುತ್ತದೆ, ನಿಮ್ಮ ಪ್ರತಿಯೊಂದು ಕೆಲಸಕ್ಕೂ ಬೆಂಬಲವಾಗಿ ನಿಲ್ಲುತ್ತಾರೆ. ಸ್ಥಿರತೆ ಮತ್ತು ಪರಸ್ಪರ ಗೌರವವನ್ನು ಬೆಳೆಸಿಕೊಳ್ಳುತ್ತೀರಿ. ವೃತ್ತಿಪರವಾಗಿ, ಹೊಸ ಸಂಪರ್ಕಗಳು ಅತ್ಯಾಕರ್ಷಕ ಪ್ರಗತಿಗೆ ಕಾರಣವಾಗುತ್ತವೆ, ಆದರೆ ಪ್ರಾಮಾಣಿಕ ಸಂಭಾಷಣೆಗಳು ವೈಯಕ್ತಿಕ ಸಂಬಂಧಗಳನ್ನು ಬಲಪಡಿಸುತ್ತವೆ. ಎರಡ್ಮೂರು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತೀರಿ.
ಮಕರ ರಾಶಿ: ಬುಧ ಸಂಚಾರದ ಸಮಯದಲ್ಲಿ ಮಕರ ರಾಶಿಯವರು ನಿರೀಕ್ಷೆಗೂ ಮೀರಿದ ಲಾಭಗಳನ್ನು ಪಡೆಯುತ್ತಾರೆ. ಉತ್ತಮ ಆರೋಗ್ಯದೊಂದಿಗೆ ಸಂತೋಷದಿಂದ ಇರುತ್ತಾರೆ. ಈ ರಾಶಿಯವರ ಗಮನ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳು ಹಿಂದೆಂದಿಗಿಂತಲೂ ಚುರುಕಾಗಿರುತ್ತವೆ. ಪ್ರಾಯೋಗಿಕ ಮನಸ್ಥಿತಿಯೊಂದಿಗೆ ಜಗತ್ತನ್ನು ನೋಡುವಲ್ಲಿ, ಕಲಿಯುವಲ್ಲಿ, ಸಂಶೋಧನೆ ಮಾಡುವುದರಲ್ಲಿ ಹಾಗೂ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡುವುದರಲ್ಲಿ ಉತ್ಕೃಷ್ಟರಾಗಿರುತ್ತಾರೆ. ಈ ಅವಧಿಯಲ್ಲಿ ತಮ್ಮನ್ನು ತಾವು ನಂಬಲು, ತಮ್ಮ ಆಲೋಚನೆಗಳು ಹಾಗೂ ಅಭಿಪ್ರಾಯಗಳನ್ನು ವಿಶ್ವಾಸದಿಂದ ಹಂಚಿಕೊಳ್ಳಲು ಮುಂದಾಗುತ್ತಾರೆ.
ಮಾತನಾಡುವ ಮತ್ತು ನಂಬಿಕೆಗಳಿಗೆ ಅಂಟಿಕೊಳ್ಳುವ ಸಾಮರ್ಥ್ಯವು ಅನಿರೀಕ್ಷಿತ ಅವಕಾಶಗಳನ್ನು ಆಕರ್ಷಿಸುತ್ತದೆ. ಬಲವಾಗಿ ನಿಲ್ಲುವ ಮತ್ತು ಪೂರ್ವಭಾವಿ ತಯಾರಿಯೊಂದಿಗೆ ಯಶಸ್ಸನ್ನು ತಮ್ಮದಾಗಿಸಿಕೊಳ್ಳುತ್ತಾರೆ. ವೈಯಕ್ತಿಕ ಬೆಳವಣಿಗೆಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಾರೆ. ಆರ್ಥಿಕ ಲಾಭಗಳು ಇರುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)