ಹಣಕಾಸು ಭವಿಷ್ಯ ಆಗಸ್ಟ್ 10: ಕಟಕ ರಾಶಿಯವರ ಹಣಕಾಸಿನ ವಿವಾದ ಬಗೆಹರಿಯಲಿದೆ, ಕನ್ಯಾ ರಾಶಿಯವರು ಷೇರು ಹೂಡಿಕೆಗೂ ಮುನ್ನ ಯೋಚಿಸಿ
Money Astrological Predictions August 10, 2024: ಹಣಕಾಸು ಭವಿಷ್ಯ ಆಗಸ್ಟ್ 10ರ ಪ್ರಕಾರ ಕಟಕ ರಾಶಿಯವರ ಹಣಕಾಸಿನ ವಿವಾದ ಬಗೆಹರಿಯಲಿದೆ, ಕನ್ಯಾ ರಾಶಿಯವರು ಷೇರು ಹೂಡಿಕೆಗೂ ಮುನ್ನ ಯೋಚಿಸಬೇಕು. ಉಳಿದ ರಾಶಿಯವರಿಗೆ ಏನಿದೆ ಫಲ, 12 ರಾಶಿಗಳ ಆರ್ಥಿಕ ಭವಿಷ್ಯ ಏನು ಎಂಬಿತ್ಯಾದಿ ವಿವರಗಳು ಇಲ್ಲಿವೆ.
ಬಹುತೇಕ ಎಲ್ಲರ ದಿನಚರಿ ಶುರುವಾಗುವುದು ಇವತ್ತು ಹೇಗಪ್ಪ ಹಣಕಾಸು ಹೊಂದಿಸುವುದು ಎನ್ನುವ ಆಲೋಚನೆಯೊಂದಿಗೆ. ನಿತ್ಯವೂ ದಿನ ಭವಿಷ್ಯ ಓದುವವರು ಹಣಕಾಸು ಭವಿಷ್ಯದ ಕಡೆಗೂ ಕಣ್ಣು ಹಾಯಿಸುತ್ತಾರೆ. ಅಂಥವರ ಕುತೂಹಲ ತಣಿಸುವುದಕ್ಕಾಗಿ, ಇಲ್ಲಿ 12 ರಾಶಿಗಳ ಆರ್ಥಿಕ ಭವಿಷ್ಯದ ವಿವರವನ್ನು ಒದಗಿಸಲಾಗಿದೆ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲದಲ್ಲಿದೆ. ನೀವು ಅದನ್ನು ಓದಬಹುದು.
ಮೇಷ ರಾಶಿ ಆರ್ಥಿಕ ಜೀವನ (Aries Money Horoscope)
ಹಣಕಾಸಿಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಲಿವೆ. ಆದರೆ ಇದರಿಂದ ನಿಮ್ಮ ದೈನಂದಿನ ಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮನೆ ನವೀಕರಿಸುವ ಅಥವಾ ಪೀಠೋಪಕರಣ ಖರೀದಿಸುವ ಯೋಜನೆಯಿಂದ ಹಿಂದೆ ಸರಿಯಬೇಡಿ. ಖರ್ಚಿನ ಮೇಲೆ ಗಮನವಿರಲಿ. ಷೇರು ಹೂಡಿಕೆಯನ್ನು ತಪ್ಪಿಸಿ. ವ್ಯಾಪಾರಿಗಳು ಹಣ ಸಂಗ್ರಹಿಸುವ ವಿಚಾರದಲ್ಲಿ ತೊಂದರೆ ಅನುಭವಿಸಬಹುದು.
ವೃಷಭ ರಾಶಿ ಆರ್ಥಿಕ ಜೀವನ (Taurus Money Horoscope)
ಆತ್ಮೀಯರೊಂದಿಗೆ ಹಣಕಾಸಿನ ವಿವಾದ ಸಲ್ಲ. ಹಣಕಾಸಿನ ಪರಿಸ್ಥಿತಿ ನಿಮ್ಮ ಪರವಾಗಿಲ್ಲದ ಕಾರಣ ಇಂದು ಷೇರುಗಳಲ್ಲಿ ಹೂಡಿಕೆ ಮಾಡುವಾಗ ಜಾಗರೂಕರಾಗಿರಿ. ಕೆಲವು ಮಹಿಳೆಯರು ಆಸ್ತಿಯಿಂದ ಸಂಪತ್ತನ್ನು ಪಡೆದರೆ, ಕೆಲವು ಹಿರಿಯರು ಮಕ್ಕಳಿಗೆ ಸಂಪತ್ತನ್ನು ಹಂಚುತ್ತಾರೆ. ವ್ಯಾಪಾರಿಗಳಿಗೆ ಲಾಭವಾಗಲಿದೆ. ವೈದ್ಯಕೀಯ ಅಥವಾ ಕಾನೂನಿಗೆ ಸಂಬಂಧಿಸಿದ ವಿಷಯಗಳಿಗೆ ನೀವು ಹಣ ಖರ್ಚು ಮಾಡಬೇಕಾಗಬಹುದು.
ಮಿಥುನ ರಾಶಿ ಆರ್ಥಿಕ ಜೀವನ (Taurus Money Horoscope)
ಹಣದ ಹರಿವು ಉತ್ತಮವಾಗಿರುತ್ತದೆ. ಹಣಕಾಸಿಗೆ ಸಂಬಂಧಿಸಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಿ. ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಹಣ ಖರ್ಚು ಮಾಡಬೇಕಾಗಬಹುದು. ಹೊಸ ಆಸ್ತಿ ಖರೀದಿಸುವ ಆಲೋಚನೆಯೊಂದಿಗೆ ಮುಂದುವರಿಯಬಹುದು. ಕೆಲವು ವ್ಯಾಪಾರಿಗಳು ವಿದೇಶಿ ಗ್ರಾಹಕರಿಂದ ಹಣ ಸಂಗ್ರಹಿಸಲು ಸಾಧ್ಯವಾಗುತ್ತದೆ.
ಕಟಕ ರಾಶಿಯವರ ಹಣಕಾಸು ಭವಿಷ್ಯ (Cancer Money Horoscope)
ಹಣಕಾಸಿನ ಸಮಸ್ಯೆಗಳು ಎದುರಾಗುವುದಿಲ್ಲ. ಜೀವನದ ಸೌಕರ್ಯಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತೀರಿ. ಕಟಕ ರಾಶಿಯ ಪುರುಷರು ಒಡಹುಟ್ಟಿದ ಸಹೋದರ ಅಥವಾ ಸ್ನೇಹಿತನೊಂದಿಗಿನ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿದ್ದಾರೆ. ಈ ವಾರಾಂತ್ಯದಲ್ಲಿ ಮನೆಯಲ್ಲಿ ಸಂಭ್ರಮಾಚರಣೆ ಇರುತ್ತದೆ, ಇದಕ್ಕಾಗಿ ಹಣ ಖರ್ಚಾಗಬಹುದು. ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ.
ಸಿಂಹ ರಾಶಿ ಆರ್ಥಿಕ ಜಾತಕ (Leo Money Horoscope)
ಅಕೌಂಟ್ನಲ್ಲಿ ಹಣವಿದ್ದರೂ ಖರ್ಚಿನ ಮೇಲೆ ಹಿಡಿತ ಸಾಧಿಸುವುದು ಉತ್ತಮ. ಎಲೆಕ್ಟ್ರಾನಿಕ್ಸ್ ಉಪಕರಣಗಳ ಖರೀದಿಗೆ ಇಂದು ಉತ್ತಮ ದಿನ. ಸ್ನೇಹಿತರೊಂದಿಗಿನ ಹಣಕಾಸಿನ ವಿವಾದವನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಬಹುದು. ವಿದೇಶಿ ಕ್ಲೈಂಟ್ಗಳೊಂದಿಗೆ ವ್ಯವಹರಿಸುವ ಉದ್ಯಮಿಗಳು ಮುಂಗಡ ಪಾವತಿಗಳನ್ನು ಪಡೆಯುತ್ತಾರೆ. ಅದು ವ್ಯಾಪಾರ ವಿಸ್ತರಣೆಗಳಿಗೆ ಪ್ರಯೋಜನ ನೀಡುತ್ತದೆ.
ಕನ್ಯಾ ರಾಶಿಯ ಹಣಕಾಸು ಭವಿಷ್ಯ (Virgo Money Horoscope)
ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತೀರಿ. ವ್ಯಾಪಾರಿಗಳು ಉತ್ತಮ ಆದಾಯ ಗಳಿಸಲಿದ್ದಾರೆ. ಮನೆಯಲ್ಲಿ ನಡೆಯುವ ಶುಭಕಾರ್ಯಗಳಿಗಾಗಿ ಹಣ ಖರ್ಚು ಮಾಡಲಿದ್ದೀರಿ. ಹೊಸ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಯೋಚಿಸಿ.
ತುಲಾ ರಾಶಿ ಆರ್ಥಿಕ ಜಾತಕ (Libra Money Horoscope)
ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಹಣಕಾಸಿಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳು ಹೆಚ್ಚಾಗುತ್ತವೆ. ಹಳೆಯ ಹೂಡಿಕೆಯಿಂದ ಉತ್ತಮ ಲಾಭ ಗಳಿಸುತ್ತೀರಿ. ಬಾಕಿ ಹಣ ವಾಪಸ್ ಬರಲಿದೆ. ಬುದ್ಧಿವಂತಿಕೆಯಿಂದ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಿ. ಷೇರು ಮಾರುಕಟ್ಟೆ ಅಥವಾ ಹೊಸ ಅಪಾಯಕಾರಿ ವ್ಯವಹಾರಗಳಲ್ಲಿ ಹೂಡಿಕೆ ಮಾಡಬೇಡಿ.
ವೃಶ್ಚಿಕ ರಾಶಿಯ ಹಣಕಾಸು ಭವಿಷ್ಯ (Scorpio money horoscope)
ವಿವಿಧ ಆದಾಯದ ಮೂಲಗಳಿಂದ ಆರ್ಥಿಕ ಲಾಭ ಗಳಿಸುತ್ತೀರಿ. ಹೊಸ ಆಸ್ತಿ ಅಥವಾ ವಾಹನ ಖರೀದಿಸುವ ಯೋಚನೆ ಮಾಡಬಹುದು. ಎಲೆಕ್ಟ್ರಾನಿಕ್ ಸಾಧನ ಖರೀದಿಸುವ ಸಾಧ್ಯತೆ ಇದೆ. ದತ್ತಿ ಕಾರ್ಯಗಳಿಗೆ ಇಂದು ಅತ್ಯಂತ ಮಂಗಳಕರ ದಿನ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುದರಿಂದ ಲಾಭವಾಗಲಿದೆ. ಉದ್ಯಮಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಅನೇಕ ಮೂಲಗಳಿಂದ ಹಣವನ್ನು ಪಡೆಯುತ್ತಾರೆ.
ಧನು ರಾಶಿ ಆರ್ಥಿಕ ಜಾತಕ (Sagittarius Money Horoscope)
ವಿವಿಧ ಮೂಲಗಳಿಂದ ಸಂಪತ್ತು ಹರಿದು ಬರುತ್ತದೆ. ಸೂಕ್ತ ಕಾರಣಗಳಿಗಾಗಿ ಹಣ ಖರ್ಚು ಮಾಡಿ. ಹೊಸ ಆಸ್ತಿ ಖರೀದಿ ಮಾಡಲಿದ್ದೀರಿ. ವ್ಯಾಪಾರ ವಿಸ್ತರಣೆಗಾಗಿ ಉದ್ಯಮಿಗಳು ಹೆಚ್ಚುವರಿ ಹಣ ಗಳಿಸುತ್ತಾರೆ. ಆಸ್ತಿಯ ಮೇಲಿನ ಕಾನೂನು ಹೋರಾಟದಲ್ಲಿ ಜಯ ಗಳಿಸಬಹುದು.
ಮಕರ ರಾಶಿ ಇಂದಿನ ಹಣಕಾಸುಭವಿಷ್ಯ (Capricorn Money Horoscope)
ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ. ನೀವು ಒಂದು ಒಡಹುಟ್ಟಿದವರು ಅಥವಾ ಸ್ನೇಹಿತರಿಗೆ ಹಣ ಸಹಾಯ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಹಣದ ಅವಶ್ಯಕತೆ ಇರುತ್ತದೆ. ಹಿಂದಿನ ಹೂಡಿಕೆಗಳಿಂದ ಹಣಕಾಸಿನ ಲಾಭ ಸಿಗಬಹುದು. ಉದ್ಯಮಿಗಳು ವಿದೇಶಿ ಪ್ರವರ್ತಕರ ಮೂಲಕ ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತಾರೆ.
ಕುಂಭ ರಾಶಿ ಆರ್ಥಿಕ ಭವಿಷ್ಯ (Aquarius Money Horoscope)
ಆರ್ಥಿಕ ಜೀವನದಲ್ಲಿ ಇಂದು ಏರಿಳಿತಗಳು ಕಾಣಲಿದೆ. ವೈದ್ಯಕೀಯ ಮತ್ತು ಶಿಕ್ಷಣ ಸೇರಿದಂತೆ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಸಾಲ ಮಾಡಬೇಕಾಗಬಹುದು. ಸ್ತ್ರೀಯರು ಆಭರಣ ಖರೀದಿಸಲಿದ್ದಾರೆ.
ಮೀನ ರಾಶಿ ಆರ್ಥಿಕ ಭವಿಷ್ಯ (Pisces Money Horoscope)
ಆರ್ಥಿಕವಾಗಿ ಉತ್ತಮ ದಿನವಾಗಿರುತ್ತದೆ. ಆಸ್ತಿ ಖರೀದಿ ಸಾಧ್ಯತೆ. ಆರ್ಥಿಕ ವಿವಾದಗಳು ಬಗೆಹರಿಯಲಿವೆ. ನಿಮ್ಮ ಹಣಕಾಸಿನ ಗುರಿಗಳ ಮೇಲೆ ಕೇಂದ್ರೀಕರಿಸಲು ಇದು ಸೂಕ್ತ ಸಮಯ. ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ನೋಡಿ. ಹೊಸ ಹೂಡಿಕೆ ಅವಕಾಶಗಳ ಮೇಲೆ ನಿಗಾ ಇರಿಸಿ. ಇದು ದೀರ್ಘಾವಧಿಯಲ್ಲಿ ಆರ್ಥಿಕ ಲಾಭ ನೀಡುತ್ತದೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.