ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜೀವನದಲ್ಲಿ ಉಗುರುಗಳ ಪಾತ್ರ; ಈ ರೀತಿಯ ಉಗುರುಗಳಿದ್ದವರು ಅಂತರ್ಮುಖಿಗಳಾಗಿರುತ್ತಾರೆ, ವೈವಾಹಿಕ ಜೀವನ ಸುಂದರವಾಗಿರುತ್ತದೆ

ಜೀವನದಲ್ಲಿ ಉಗುರುಗಳ ಪಾತ್ರ; ಈ ರೀತಿಯ ಉಗುರುಗಳಿದ್ದವರು ಅಂತರ್ಮುಖಿಗಳಾಗಿರುತ್ತಾರೆ, ವೈವಾಹಿಕ ಜೀವನ ಸುಂದರವಾಗಿರುತ್ತದೆ

ಜ್ಯೋತಿಷ್ಯಶಾಸ್ತ್ರದಲ್ಲಿ ಉಗುರುಗಳಿಗೆ ಕೂಡಾ ಪ್ರಾಮುಖ್ಯತೆ ಇದೆ. ಶನಿ ದೇವನನ್ನು ಉಗುರಿನ ಅಧಿಪತಿ ಎಂದು ನಂಬಲಾಗಿದೆ. ಉಗುರುಗಳು ಸೌಂದರ್ಯವನ್ನು ಕೂಡಾ ಪ್ರತಿನಿಧಿಸುತ್ತದೆ. ಶುಕ್ರನು, ಸೌಂದರ್ಯದ ದೇವತೆಯಾಗಿದ್ದಾನೆ. ಉಗುರಿನ ಆಕಾರ ನೋಡಿ ಆ ವ್ಯಕ್ತಿಗಳ ಸ್ವಭಾವ ಹೇಗೆ ಎಂದು ಗುರುತಿಸಿಬಹುದು. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಜೀವನದಲ್ಲಿ ಉಗುರುಗಳ ಪಾತ್ರ; ಈ ರೀತಿಯ ಉಗುರುಗಳಿದ್ದವರು ಅಂತರ್ಮುಖಿಗಳಾಗಿರುತ್ತಾರೆ, ವೈವಾಹಿಕ ಜೀವನ ಸುಂದರವಾಗಿರುತ್ತದೆ
ಜೀವನದಲ್ಲಿ ಉಗುರುಗಳ ಪಾತ್ರ; ಈ ರೀತಿಯ ಉಗುರುಗಳಿದ್ದವರು ಅಂತರ್ಮುಖಿಗಳಾಗಿರುತ್ತಾರೆ, ವೈವಾಹಿಕ ಜೀವನ ಸುಂದರವಾಗಿರುತ್ತದೆ

ಕೆಲವರಿಗೆ ಉಗುರುಗಳು ನೋಡಲು ಹೆಚ್ಚು ಉದ್ಧವಾಗಿ ಇರುತ್ತದೆ. ಇದಲ್ಲದೆ ಸಣ್ಣ ಪ್ರಮಾಣದ ಬೆಳಕು ಬಿದ್ದರೂ ಹೊಳೆಯುತ್ತಿರುತ್ತದೆ. ಸಾಮಾನ್ಯವಾಗಿ ಇಂತಹ ಜನರಿಗೆ ಅತಿಯಾದ ಆಸೆ ಇರುವುದಿಲ್ಲ. ಅನುಕೂಲ ಇರಲಿ ಅಥವಾ ಇಲ್ಲದೇ ಇರಲಿ ಸಂತೃಪ್ತಿಯ ಜೀವನವನ್ನು ನಡೆಸುತ್ತಾರೆ. ಯಾರಿಂದಲೂ ಹಣದ ಸಹಾಯ ಇರುವುದಿಲ್ಲ. ಆದರೆ ಹೆದರದೆ ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಿ ಜೀವನದಲ್ಲಿ ಮುಂದುವರೆಯುತ್ತಾರೆ. ಕುಟುಂಬದ ಜವಾಬ್ದಾರಿಯನ್ನು ಒಪ್ಪಿಕೊಳ್ಳದೇ ಹೋದರೂ ಅವಶ್ಯಕತೆ ಇದ್ದರೆ ಯಾರಿಗಾದರೂ ಸಹಾಯ ಮಾಡುತ್ತಾರೆ.

ಸ್ವಂತಿಕೆಗೆ ಬೆಲೆ ನೀಡುವ ಜನರು

ಈ ವ್ಯಕ್ತಿಗಳ ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ಆದರೂ ಅಪಾಯದ ಮಟ್ಟಕ್ಕೆ ಆರೋಗ್ಯ ಕೆಡುವುದಿಲ್ಲ. ಯಾವುದೇ ವಿಚಾರವನ್ನು ಕಡೆಗಣ್ಣಿನಿಂದ ನೋಡಿದಾಗ ಮಾತ್ರ ತೊಂದರೆ ಅನುಭವಿಸುವಿರಿ. ಜೀವನದಲ್ಲಿ ಪ್ರತಿಯೊಂದು ವಿಚಾರದಲ್ಲಿಯೂ ನಿಮ್ಮದೇ ಆದ ಇತಿ ಮಿತಿ ಇರುತ್ತದೆ. ಆದ್ದರಿಂದ ಯಾವುದೇ ತೊಂದರೆ ಎದುರಾಗುವುದಿಲ್ಲ. ನಿರಾಸೆ ಮತ್ತು ಸೋಲನ್ನು ಸುಲಭವಾಗಿ ಒಪ್ಪುವುದಿಲ್ಲ. ಅಂತಹ ಸಂದರ್ಭದಲ್ಲಿ ಸಹನೆ ಕಳೆದುಕೊಂಡು ಕೋಪದಿಂದ ವರ್ತಿಸುವಿರಿ. ಆದರೂ ಬೇಗನೆ ಸಹಜ ಸ್ಥಿತಿಗೆ ಮರಳುವಿರಿ. ತಪ್ಪನ್ನು ಸರಿ ಮಾಡುವ ಬುದ್ದಿವಂತಿಕೆ ಮತ್ತು ಜ್ಞಾನ ನಿಮ್ಮಲ್ಲಿ ಇರುತ್ತದೆ. ಆದ್ದರಿಂದ ನಿಮ್ಮ ಜೀವನದಲ್ಲಿ ಸ್ವಂತಿಕೆಗೆ ಹೆಚ್ಚು ಬೆಲೆ ನೀಡುವಿರಿ.

ಸಾಮಾನ್ಯವಾಗಿ ಪ್ರತಿಯೊಬ್ಬರ ಬೆರಳ ಬುಡದಲ್ಲಿಯೂ ಅರ್ಧಚಂದ್ರಾಕೃತಿ ಕಂಡು ಬರುತ್ತದೆ. ಅದು ದೊಡ್ಡದಾಗಿರಬಹುದು, ಚಿಕ್ಕದಾಗಿರಬಹುದು ಅಥವಾ ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರಬಹುದು, ಅದು ಸಹ ಕೆಂಪು ಅಥವಾ ಬಿಳಿ ಬಣ್ಣವಿರಬಹುದು,ಇದರ ಆಕಾರ ಮತ್ತು ಬಣ್ಣಗಳು ಸಹ ನಮ್ಮ ಗುಣ ನಡತೆಯನ್ನು ಸೂಚಿಸುತ್ತದೆ, ಆ ಆಕಾರವು ಕಣ್ಣಿಗೆ ಕಾಣದಷ್ಟು ಸಣ್ಣವಿದ್ದರೆ ಜೀವನವು ಕಷ್ಟಗಳ ಹಾದಿ ಇರುತ್ತದೆ. ಇದರ ಬಣ್ಣವು ಗಾಢವಾಗಿದ್ದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರವು ದೊರೆಯುತ್ತದೆ. ಆದರೆ ಇವರು ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ಎಲ್ಲರಿಗೂ ತಿಳಿಸಬೇಕು. ಸಾಮಾನ್ಯವಾಗಿ ಇವರು ಅಂತರ್ಮುಖಿಗಳಾಗಿರುತ್ತಾರೆ. ಯಾವುದೇ ರೀತಿಯ ಸಂದರ್ಭಗಳಿಗೆ ಇವರು ಹೊಂದಿಕೊಳ್ಳುತ್ತಾರೆ. ಆದರೆ ಕೇವಲ ಇದರಿಂದ ಮಾತ್ರ ಜೀವನವನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ.

ಚಂದ್ರಾಕೃತಿ ಜೊತೆಗೆ ಬಿಳಿ, ಕೆಂಪು ಬಣ್ಣದ ಉಗುರು

ಕೆಲವರ ಉಗುರಿನನಲ್ಲಿ ಚಂದ್ರಾಕಾರ ಮಾತ್ರವಲ್ಲದೆ ಅದರ ಬಣ್ಣವು ಬಿಳಿ ಅಥವಾ ಕೆಂಪಗೆ ಕಣ್ಣಿಗೆ ಕಾಣುವಂತಿರುತ್ತದೆ. ಇಂಥವರ ಜೀವನ ಯಶಸ್ಸಿನ ಅಲೆಯಲ್ಲಿ ಸಾಗುತ್ತಿರುತ್ತದೆ. ಒಳಿತು ಕೆಡಕುಗಳ ನಡುವಿನ ಅರ್ಥವನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದರೆ ಜೀವನದಲ್ಲಿ ಎದುರಾಗುವ ಅಡಚಣೆಯನ್ನು ಯಶಸ್ವಿಯಾಗಿ ಸರಿಪಡಿಸಿಕೊಂಡು ಮುನ್ನಡೆಯುತ್ತಾರೆ ಬಯಸದಿದ್ದರೂ ತಾನಾಗಿಯೇ ಬರುವ ಸಂದರ್ಭವನ್ನು ತಮ್ಮ ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ. ಕುಟುಂಬದ ಜನರ ಜೊತೆ ಉತ್ತಮ ಅನುಬಂಧ ಮೂಡುತ್ತದೆ.

ಕೆಲವರ ಬೆರಳುಗಳಲ್ಲಿ ಚಂದ್ರಕಾರವು ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುವಷ್ಟು ದೊಡ್ಡದಾಗಿರುತ್ತದೆ. ಇದಕ್ಕೆ ಪೂರಕವಾಗಿ ದಟ್ಟವಾಗಿರುತ್ತದೆ. ಇವರು ಸಾಮಾನ್ಯವಾಗಿ ತಮ್ಮ ಜೀವನವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಬಂದದ್ದನ್ನು ಎದುರಿಸುವ ಮನಸ್ಥಿತಿ ಇರುತ್ತದೆ. ಕುಟುಂಬದ ಜನರೊಂದಿಗೆ ಉತ್ತಮ ಬಾಂಧವ್ಯ ಇರುವುದಿಲ್ಲ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಿದರೂ ಕೆಲಸ ಕಾರ್ಯಗಳ ವಿಚಾರದಲ್ಲಿ ಯಾರನ್ನು ಬೆಂಬಲಿಸುವುದಿಲ್ಲ. ಯಾರಿಗೂ ಸಹಾಯ ಮಾಡುವುದಿಲ್ಲ. ದುಡುಕಿನಲ್ಲಿ ತಪ್ಪು ಮಾಡುವುದಿಲ್ಲ. ಹೆಚ್ಚು ಕೋಪಕ್ಕೆ ಒಳಗಾಗದೆ ಸಹನೆಯಿಂದ ಇದ್ದಲ್ಲಿ ಜೀವನದ ತೊಂದರೆ ಕ್ರಮೇಣ ಮರೆಯಾಗುತ್ತದೆ.

ಗೌರವ, ಅಂತಸ್ತು ಕಾಪಾಡಲು ಶ್ರಮಿಸುವ ಜನರು

ವಿಶೇಷ ಗುಣವೆಂದರೆ ತಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸುವುದಿಲ್ಲ. ಆರಂಭಿಸಿದ ಕೆಲಸ ಕಾರ್ಯಗಳನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ. ಸ್ವಾರ್ಥದ ಸ್ವಭಾವ ಇಲ್ಲದೇ ಹೋದರೂ ತಮ್ಮ ಗೌರವ ಅಂತಸ್ತನ್ನು ಕಾಪಾಡಿಕೊಳ್ಳಲು ಶ್ರಮಿಸುತ್ತಾರೆ. ತಪ್ಪು ಮಾಡಿದವರನ್ನು ಕ್ಷಮಿಸುತ್ತಾರೆ. ಇವರಿಗೆ ಐಷಾರಾಮಿ ಜೀವನವೆಂದರೆ ಬಲು ಇಷ್ಟ. ಹೊಸದಾಗಿ ಮಾರುಕಟ್ಟೆಗೆ ಬರುವ ವಾಹನಗಳನ್ನು ಕೊಳ್ಳುವುದೇನೆಂದರೆ ಇವರಿಗೆ ಬಲು ಇಷ್ಟ. ಆದರೆ ದಾಂಪತ್ಯ ಜೀವನದಲ್ಲಿ ಸಂತೋಷದಿಂದ ಬಾಳುತ್ತಾರೆ. ಸಂಗಾತಿ ಖುಷಿಯಾಗಿರುವಂತೆ ನೋಡಿಕೊಳ್ಳುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.