Sagittarius Astrology in 2024: ಉಪವೃತ್ತಿಯಿಂದ ಹೆಚ್ಚಿನ ಹಣ, 2024ರ ಮೊದಲಾರ್ಧ ಸಂಪೂರ್ಣ ಶುಭಫಲ ; ಧನು ರಾಶಿಯ ವರ್ಷ ಭವಿಷ್ಯ ಹೀಗಿದೆ
Sagittarius Horoscope in 2024: ಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷ ಆಗಮನವಾಗುತ್ತಿದೆ. ಕಷ್ಟ, ನೋವುಗಳು ದೂರವಾಗಿ ಹೊಸ ವರ್ಷದಲ್ಲಿ ಹೊಸ ಜೀವನ, ಸುಖ, ಸಂತೋಷ ನೆಲೆಸಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಹೊಸ ವರ್ಷ ದ್ವಾದಶ ರಾಶಿಗಳ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ? ಧನು ರಾಶಿಯ ವರ್ಷ ಭವಿಷ್ಯ ಹೀಗಿದೆ.
2024ರ ಧನು ರಾಶಿ ವರ್ಷ ಭವಿಷ್ಯ: ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ದಿನ ಉರುಳುತ್ತಿದ್ದಂತೆ ಎಲ್ಲರ ಜೀವನದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಲಿದೆ. ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ, ವೈಯಕ್ತಿಕ ಜೀವನ ಉತ್ತವಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ. ಈ ಆಸೆ ಆಕ್ಷಾಂಕ್ಷೆಗಳ ನಡುವೆ ಹೊಸ ವರ್ಷ ಆಗಮನವಾಗುತ್ತಿದೆ. 2024ರಲ್ಲಿ ಗ್ರಹಗತಿಗಳ ಸ್ತಾನ ಪಲ್ಲಟದೊಂದಿಗೆ ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. 2024 ವರ್ಷ ಭವಿಷ್ಯವನ್ನು ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರಸ್ತುತಪಡಿಸುತ್ತಿದ್ದಾರೆ. ಧನು ರಾಶಿಯವರ ವರ್ಷ ಭವಿಷ್ಯ ಹೀಗಿದೆ.
ಬಹುತೇಕ ಶುಭಫಲಗಳನ್ನು ಪಡೆದ ಧನು ರಾಶಿಯವರು ಈ ವರ್ಷ ಸಂತುಷ್ಟ ಜೀವನ ನಡೆಸುತ್ತಾರೆ. ಆರೋಗ್ಯದಲ್ಲಿ ಇದ್ದ ಸಮಸ್ಯೆಯು ದೂರವಾಗುತ್ತದೆ. ಆದರೆ ಕುಟುಂಬದಲ್ಲಿ ಆತಂಕದ ಸ್ವಲ್ಪ ಪರಿಸ್ಥಿತಿ ಇರುತ್ತದೆ. ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಮುಖ್ಯವಾಗಿ ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾರೆ. ತಾಯಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಭೂ ವಿವಾದ ಒಂದು ಎದುರಾಗಲಿದೆ. ತಾಯಿಯವರ ಜೊತೆಯಲ್ಲಿ ಅನವಶ್ಯಕವಾದ ವಿವಾದಗಳು ಇದ್ದರು ಸುಲಭವಾಗಿ ಪರಿಹಾರಗೊಳ್ಳುತ್ತವೆ.
ಸಮಾಜದಲ್ಲಿ ಉನ್ನತ ಸ್ಥಾನಮಾನ ಲಭಿಸುತ್ತದೆ. ಹೆಚ್ಚು ಕಡಿಮೆ ಮೊದಲ ಅರ್ಧ ವರ್ಷ ಸಂಪೂರ್ಣ ಶುಭಫಲಗಳನ್ನೇ ನೀಡಲಿವೆ. ಆನಂತರ ಸಣ್ಣ ಪುಟ್ಟ ಕೆಲಸಗಳಿಗೂ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇರುತ್ತದೆ. ಯೋಚಿಸದೆ ಆಡುವ ಮಾತುಗಳು ಮತ್ತು ತೆಗೆದುಕೊಳ್ಳುವ ನಿರ್ಧಾರ ವಿವಾದವನ್ನು ಹುಟ್ಟು ಹಾಕುತ್ತದೆ. ಸ್ವಂತ ಕೆಲಸ ಕಾರ್ಯದಲ್ಲಿಯೂ ಕಾದು ನೋಡುವ ತಂತ್ರವನ್ನು ಅನುಸರಿಸುವುದು ಒಳ್ಳೆಯದು. ವಿರೋಧಿಗಳನ್ನು ಮಟ್ಟ ಹಾಕುವ ತಂತ್ರಗಾರಿಕೆ ತಿಳಿದಿರುತ್ತದೆ. ಬೇಗನೆ ಕೋಪ ಬರುತ್ತದೆ, ಆದರೆ ಬಹುಕಾಲ ಉಳಿಯದು. ಒಳ್ಳೆಯದು ಮತ್ತು ಕೆಟ್ಟದ್ದನ್ನು ಅರಿಯುವ ಮನಸ್ಸಿರುತ್ತದೆ. ವಯಸ್ಸಿನ ಅಂತರವಿಲ್ಲದೆ ಎಲ್ಲರ ಸಲಹೆಗೂ ಗೌರವ ನೀಡುವಿರಿ.
ಆಕಸ್ಮಿಕವಾಗಿ ಪರಿಚಯದವರ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ಗುರುತು ಪರಿಚಯ ಇರುವವರೊಂದಿಗೆ ಅಥವಾ ಸಂಬಂಧದಲ್ಲಿ ವಿವಾಹವಾಗುತ್ತದೆ. ಆತ್ಮೀಯರ ಸಹಾಯ ಸಹಕಾರ ಸದಾ ಕಾಲ ದೊರೆಯಲಿದೆ. ತಪ್ಪನ್ನು ಮಾಡಿದರೆ ಒಪ್ಪಿಕೊಳ್ಳುವ ದೊಡ್ಡತನ ತೋರುವಿರಿ. ನಿಮ್ಮನ್ನು ದ್ವೇಷಿಸುವವರ ಮನಸ್ಸಿನಲ್ಲಿಯೂ ನಿಮ್ಮ ಬಗ್ಗೆ ಪ್ರೀತಿ ಇರುತ್ತದೆ. ಧೈರ್ಯ ಸಾಹಸದ ಗುಣ ಇರುವ ಕಾರಣ ಯಾವ ಕೆಲಸವೂ ಕಷ್ಟವೆನಿಸುವುದಿಲ್ಲ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಎಂದಿಗೂ ಬದಲಿಸುವುದಿಲ್ಲ. ಸಿಡುಕುತನದಿಂದ ದೂರವಾದಾಗಲು ಪ್ರೀತಿಯ ಮಾತಿಗೆ ಸೋತು ಹೋಗುವಿರಿ.
ಮಕ್ಕಳಿಗೆ ನಿಮ್ಮ ಬಗ್ಗೆ ಗೌರವಕ್ಕಿಂತಲೂ ಪ್ರೀತಿ ಮತ್ತು ನಂಬಿಕೆ ಹೆಚ್ಚು. ಎಲ್ಲರಿಗೂ ತಾಯಿಯ ಪ್ರೀತಿಯನ್ನು ನೀಡುವಿರಿ. ವಿದ್ಯಾರ್ಥಿಗಳು ಎಲ್ಲರೂ ಮೆಚ್ಚುವಂತಹ ಗಮನಾರ್ಹ ಸಾಧನೆಗಳನ್ನು ಮಾಡುತ್ತಾರೆ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಹಣದ ವ್ಯಾಮೋಹವು ಇರುವುದಿಲ್ಲ. ಕೈಯಲ್ಲಿರುವ ಹಣವೆಲ್ಲವೂ ಖರ್ಚಾಗುವವರೆಗೂ ನೆಮ್ಮದಿ ಕಾಣದು. ಅವಶ್ಯಕತೆ ಇದ್ದಷ್ಟು ಹಣವನ್ನು ಸಂಪಾದಿಸುವ ವರ್ಚಸ್ಸು ಇರುತ್ತದೆ. ವಿಚಾರವಾಗಲಿ ಕೆಲಸ ಕಾರ್ಯವಾಗಲಿ ಯಾರನ್ನೂ ಅವಲಂಬಿಸುವುದಿಲ್ಲ. ಏಕಾಂಗಿಯಾಗಿ ಗೆಲ್ಲದೆ ಹೋದರು ಹೋರಾಡುವ ಛಲ ಇರುತ್ತದೆ. ಎಲ್ಲರೂ ನಿಮ್ಮ ಪ್ರೀತಿ ವಿಶ್ವಾಸಕ್ಕಾಗಿ ಹಾತೊರೆದು ಬರುತ್ತಾರೆ.
ಸೋಲಿನಲ್ಲಿಯೂ ಗೆಲುವನ್ನು ಕಾಣುವ ಪ್ರತಿಭೆ ಇರುತ್ತದೆ. ಬಾಳ ಸಂಗಾತಿಯ ಜೊತೆ ಕೆಲವೊಮ್ಮೆ ಮನಸ್ತಾಪ ಉಂಟಾದರೂ ಸರಿದಾರಿಗೆ ಮರಳುತ್ತದೆ. ನಿಮ್ಮಲ್ಲಿರುವ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವ ಜನರಿರುತ್ತಾರೆ. ಎಚ್ಚರಿಕೆ ಇರಲಿ ಭವಿಷ್ಯದ ಜೀವನಕ್ಕಾಗಿ ಗುಪ್ತವಾಗಿ ಹಣವನ್ನು ಉಳಿಸುವಿರಿ. ಈ ವರ್ಷದಲ್ಲಿ ಕುಟುಂಬದ ಜನ ಮೆಚ್ಚುವ ಮತ್ತು ಹೊರ ಜನ ಮೆಚ್ಚುವ ಅನೇಕ ಕೆಲಸಗಳನ್ನು ಮಾಡುವಿರಿ. ವರ್ಷದ ಆರಂಭದಲ್ಲಿ ಖರ್ಚು ವೆಚ್ಚಗಳು ಹೆಚ್ಚಾದರೂ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಸ್ವಂತ ವಾಹನ ಕೊಳ್ಳಲು ಅಥವಾ ಮನೆ ಕೊಳ್ಳಲು ಹೆಚ್ಚಿನ ಹಣ ಅವಶ್ಯಕತೆ ಇರುತ್ತದೆ. ತಂದೆಯಿಂದ ಅಥವಾ ಸರಕಾರದಿಂದ ಎಲ್ಲಾ ರೀತಿಯ ಬೆಂಬಲ ದೊರೆಯಲಿದೆ.
ತಂದೆ ಮಾಡುತ್ತಿದ್ದ ವ್ಯಾಪಾರವನ್ನು ಮನಮೆಚ್ಚಿ ಮುಂದುವರಿಸುವಿರಿ. ವೈಭವೋಪೇತ ಜೀವನಕ್ಕಾಗಿ ಹೆಚ್ಚಿನ ಹಣ ಬೇಕೆನಿಸುತ್ತದೆ. ದಿಢೀರನೆ ಆರೋಗ್ಯದಲ್ಲಿ ಸಮಸ್ಯೆ ಎದುರಾಗಬಹುದು ಎಚ್ಚರಿಕೆ ಇರಲಿ. ಮನಸಿದ್ದಲ್ಲಿ ಉದ್ಯೋಗವನ್ನು ಬದಲಿಸಬಹುದು. ಉಪವೃತ್ತಿಯಿಂದ ಹೆಚ್ಚಿನ ಹಣ ಗಳಿಸುವಿರಿ. ಸಂಗಾತಿಗಾಗಿ ಅಥವಾ ಮನೆಯ ಹೆಣ್ಣು ಮಕ್ಕಳಿಗಾಗಿ ದುಬಾರಿ ಬೆಲೆಯ ಒಡವೆ ವಸ್ತ್ರವನ್ನು ಕೊಳ್ಳುವಿರಿ. ಹೆಚ್ಚು ಪ್ರಯತ್ನ ಪಟ್ಟಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಬಹುದು. ಒಟ್ಟಾರೆ ಏಪ್ರಿಲ್ ನಂತರ ಸಣ್ಣಪುಟ್ಟ ಕೆಲಸವನ್ನು ನಿರ್ವಹಿಸಲು ನಿರ್ಧರಿಸುವಿರಿ.
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
Note: ನಾಳೆ ಬೆಳಗ್ಗೆ ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಮಕರ ರಾಶಿಯ 2024ರ ವರ್ಷ ಭವಿಷ್ಯ ಪ್ರಕಟವಾಗಲಿದೆ.