ಈ ತಾರೀಖಿನಂದು ಜನಿಸಿದವರು ಪರಿಶ್ರಮಿಗಳು, ಪ್ರತಿಭಾವಂತರು; ಸಂಖ್ಯಾ ಶಾಸ್ತ್ರದಲ್ಲಿ ಹೇಳಲಾದ ಆ 4 ದಿನಾಂಕಗಳು ಯಾವುವು?
ಸಂಖ್ಯಾ ಶಾಸ್ತ್ರವೂ ಸಹ ಜ್ಯೋತಿಷ್ಯ ಶಾಸ್ತ್ರದಂತೆ ಬಹಳ ಮಹತ್ವ ಪಡೆದಿದೆ. ಅದರಲ್ಲಿ ಸಂಖ್ಯೆಗಳು ಮಾನವನ ಜೀವನದ ಮೇಲೆ ಬಹಳಷ್ಟು ಪ್ರಭಾವವನ್ನು ಬೀರುತ್ತದೆ ಎಂದು ಹೇಳಲಾಗಿದೆ. ಕೆಲವು ತಾರೀಖಿನಂದು ಜನಿಸಿದವರು ಶ್ರಮಜೀವಿಗಳು, ಕಷ್ಟಪಟ್ಟು ಕೆಲಸ ಮಾಡಿ ಗುರಿ ತಲುಪುವ ಛಲ ಹೊಂದಿದವರಾಗಿರುತ್ತಾರೆ. ಜೊತೆಗೆ ಅವರು ಪ್ರತಿಭಾವಂತರೂ ಆಗಿರುತ್ತಾರೆ. (ಬರಹ: ಅರ್ಚನಾ ವಿ. ಭಟ್)
ಜ್ಯೋತಿಷ್ಯ ಶಾಸ್ತ್ರದಂತೆ ಸಂಖ್ಯಾ ಶಾಸ್ತ್ರಕ್ಕೆ ಕೂಡಾ ಬಹಳ ಮಹತ್ವ ನೀಡಲಾಗಿದೆ. ಜನ್ಮ ದಿನಾಂಕದ ಸಂಖ್ಯೆಗಳ ಆಧಾರದ ಮೇಲೆ ವ್ಯಕ್ತಿಯ ಉದ್ಯೋಗ, ವ್ಯಾಪಾರ, ಪ್ರೀತಿ, ಮದುವೆ, ಶಿಕ್ಷಣ ಮುಂತಾದ ಮಾಹಿತಿಗಳನ್ನು ಹೇಳಲಾಗುತ್ತದೆ. ಕೆಲವು ದಿನಾಂಕದಲ್ಲಿ ಜನಿಸುವವರು ಕೆಲಸದ ಬಗ್ಗೆ ಅತಿಯಾದ ಕಾಳಜಿ ಹೊಂದಿರುವುದನ್ನು ಸಂಖ್ಯಾಶಾಸ್ತ್ರ ಹೇಳುತ್ತದೆ.
ಅದರಿಂದ ಯಶಸ್ಸು ಅವರನ್ನು ಹುಡುಕಿ ಬರುತ್ತದೆ. ಕಷ್ಟ ಪಟ್ಟು ಕೆಲಸ ಮಾಡಿ ತಮ್ಮ ಗುರಿ ತಲುಪಲು ಅವರು ಅಚಲವಾದ ಮನಸ್ಸು ಹೊಂದಿರುತ್ತಾರೆ ಎಂಬುದನ್ನು ಶಾಸ್ತ್ರವು ಹೇಳುತ್ತದೆ. ಕಷ್ಟಪಟ್ಟು ಕೆಲಸ ಮಾಡುವ ಇವರು ಪ್ರತಿಭಾವಂತರೂ ಸಹ ಆಗಿರುತ್ತಾರೆ. ಹಾಗಾದರೆ ಯಾವ ತಾರೀಖಿನಂದು ಜನಿಸಿದವರು ಪರಿಶ್ರಮಿಗಳು ಮತ್ತು ಪ್ರತಿಭಾವಂತರು ತಿಳಿಯಲು ಮುಂದೆ ಓದಿ.
1) 8, 17 ಮತ್ತು 26 ರಂದು ಜನಿಸಿದವರು
ಈ ತಾರೀಖಿನಂದು ಜನಿಸಿದವರು ರಾಡಿಕ್ಸ್ ನಂಬರ್ 8ನ್ನು ಹೊಂದಿರುತ್ತಾರೆ. ಬಹಳ ಮುಂದಾಲೋಚನೆ ಉಳ್ಳವರಾಗಿರುತ್ತಾರೆ. ಇವರು ಗುರಿ ಸಾಧಿಸಿ ಯಶಸ್ವಿಯಾಗಬೇಕೆಂಬ ಅಚಲವಾದ ಇಚ್ಛೆಯನ್ನು ಹೊಂದಿದವರಾಗಿದ್ದಾರೆ. ಗುರಿ ತಲುಪಲು ಅಗತ್ಯವಾದ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲು ಯಾವುದೇ ಹಿಂಜರಿಕೆ ವ್ಯಕ್ತಪಡಿಸುವುದಿಲ್ಲ. ಈ ದಿನದಂದು ಹುಟ್ಟಿದ ಜನರು ಸ್ವಾಭಾವಿಕವಾಗಿಯೇ ನಾಯಕನ ಗುಣ ಹೊಂದಿದವರಾಗಿರುತ್ತಾರೆ. ಸಮಸ್ಯೆಗೆ ತಕ್ಕ ಪರಿಹಾರ ಕಂಡುಹಿಡಿಯುವುದು ಮತ್ತು ಅವಕಾಶಗಳನ್ನು ಪಡೆದು ಅದರಿಂದ ಅಭಿವೃದ್ಧಿ ಹೊಂದುವುದು ಇವರಿಗೆ ತಿಳಿದ ವಿಷಯವಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇವರ ಅಚಲವಾದ ನಿಲುವು ಅವರು ಬೇರೆಯವರಿಗಿಂತ ಭಿನ್ನವಾಗಿರುವುದನ್ನು ಹೇಳುತ್ತದೆ.
2) 5, 14 ಮತ್ತು 23 ರಂದು ಜನಿಸಿದವರು
ಈ ತಾರೀಖಿನಂದು ಜನಿಸಿದವರು ರಾಡಿಕ್ಸ್ ನಂಬರ್ 5ಕ್ಕೆ ಸೇರಿದವರು. ಇವರು ಬಹಳ ಧೈರ್ಯಶಾಲಿಗಳು ಎಂದು ಸಂಖ್ಯಾ ಶಾಸ್ತ್ರ ಹೇಳುತ್ತದೆ. ಇವರು ಕಷ್ಟಪಟ್ಟು ಕೆಲಸ ಮಾಡುವವರಾಗಿರುತ್ತಾರೆ. ಕೆಲಸದ ಮೇಲೆ ಇವರಿಗಿರುವ ಆಸಕ್ತಿ ಇವರು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಅಪಾಯಗಳನ್ನು ಎದುರಿಸಿ ಗುರಿ ತಲುಪಲು ಇವರು ಹಿಂಜರಿಕೆ ತೋರಿಸುವುದಿಲ್ಲ. ಈ ತಾರೀಖಿನಂದು ಜನಿಸಿದವರು ಸ್ವಾಭಾವಿಕವಾಗಿಯೇ ಮಲ್ಟಿಟಾಸ್ಕ್ ಮಾಡುವವರಾಗಿದ್ದಾರೆ. ಇವರಲ್ಲಿ ಸದಾ ಉತ್ಸಾಹ ತುಂಬಿರುವುದರಿಂದ ಎಲ್ಲಾ ಚಟುವಟಿಕೆಗಳನ್ನು ಸುಲಭವಾಗಿ ನಿಭಾಯಿಸಬಲ್ಲರು. ಬಹುಮುಖ ಪ್ರತಿಭಾವಂತರಾಗಿರುವ ಇವರು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಚಾಣಾಕ್ಷರು. ಇದೇ ಅವರನ್ನು ಉತ್ತಮ ಉದ್ಯೋಗಿಯನ್ನಾಗಿಸಬಲ್ಲದು.
3) 4, 13, 22 ಮತ್ತು 31 ರಂದು ಜನಿಸಿದವರು
ಇವರದ್ದು ರಾಡಿಕ್ಸ್ ನಂಬರ್ 4. ಈ ತಾರೀಖಿನಂದು ಜನಿಸಿದ ವ್ಯಕ್ತಿಗಳು ಪ್ರಾಕ್ಟಿಕಲ್ ಜನರಾಗಿದ್ದು ನಿರ್ಣಯಗಳನ್ನು ಸರಿಯಾಗಿ ತೆಗೆದುಕೊಳ್ಳುವವರಾಗಿದ್ದಾರೆ. ಇವರಿಗೆ ಕೆಲಸವೇ ಎಲ್ಲಕ್ಕಿಂತ ದೊಡ್ಡದಾಗಿರುತ್ತದೆ. ಎಷ್ಟೇ ಕಷ್ಟ ಬಂದರು ತಮ್ಮ ಗುರಿ ತಲುಪಲು ಪರಿಶ್ರಮ ಹಾಕುತ್ತಾರೆ. ಅದಕ್ಕೆ ತಕ್ಕಂತೆ ಫಲಿತಾಂಶಗಳನ್ನು ಪಡೆದುಕೊಳ್ಳುತ್ತಾರೆ. ಇವರಿಗೆ ಕೆಲಸದ ಮೇಲೆ ಇರುವ ಸಮರ್ಪಣೆ ಮತ್ತು ವಿಶ್ವಾಸ ಅವರನ್ನು ಪರಿಣಾಮಕಾರಿ ವ್ಯಕ್ತಿಯನ್ನಾಗಿಸುತ್ತದೆ. ಕೆಲಸದ ಮೇಲೆ ಅವರಿಗಿರುವ ಶ್ರದ್ಧೆಯೇ ಅವರ ಆಸ್ತಿಯಾಗಿದೆ.
4) 6, 15 ಮತ್ತು 24 ರಂದು ಜನಿಸಿದವರು
ರಾಡಿಕ್ಸ್ ನಂಬರ್ 6 ರಲ್ಲಿ ಜನಿಸಿದವರು ಸಾಧಕರು. ಇವರು ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮತ್ತು ಇತರರಿಗೆ ಸಹಾಯ ಮಾಡುವ ಮನೋಧರ್ಮದವರು. ಇವರಿಗೆ ಕೆಲಸದ ಮೇಲೆ ಶ್ರದ್ಧೆ ಮತ್ತು ಜವಾಬ್ದಾರಿ ಹೆಚ್ಚು. ಇವರು ಜೀವನದಲ್ಲಿ ಸದಾ ಪ್ರಗತಿ ಹೊಂದುವುದಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ತಮ್ಮ ಸುತ್ತಲಿನ ಜನರಿಗೆ ಸಹಾಯ ಮಾಡುವುದರಲ್ಲಿ ತೃಪ್ತಿ ಕಾಣುತ್ತಾರೆ. ಅವರ ಈ ಕಾಳಜಿ ಸ್ವಭಾವ ಮತ್ತು ಕರ್ತವ್ಯದ ಭಾವನೆ ಅವರನ್ನು ವಿಶ್ವಾಸಾರ್ಹ ವ್ಯಕ್ತಿಗಳನ್ನಾಗಿ ಮಾಡುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(ಬರಹ: ಅರ್ಚನಾ ವಿ ಭಟ್)