ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ದಿನಾಂಕಗಳಲ್ಲಿ ಜನಿಸಿದವರಿಗೆ ಸುಳ್ಳು ಅಂದ್ರೆ ಕೆಂಡದಂಥ ಕೋಪ; ನಿಮ್ಮ ಜನ್ಮ ದಿನಾಂಕ ಇದೆಯಾ ನೋಡಿ

ಈ ದಿನಾಂಕಗಳಲ್ಲಿ ಜನಿಸಿದವರಿಗೆ ಸುಳ್ಳು ಅಂದ್ರೆ ಕೆಂಡದಂಥ ಕೋಪ; ನಿಮ್ಮ ಜನ್ಮ ದಿನಾಂಕ ಇದೆಯಾ ನೋಡಿ

Numerology: ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಲ್ಲಿ ಜನಿಸಿದ ಜನರು ಸುಳ್ಳು, ಮೋಸ ಮತ್ತು ಅಪ್ರಾಮಾಣಿಕತೆಯನ್ನು ಸಹಿಸುವುದಿಲ್ಲ. ಇವರಲ್ಲಿ ಯಾರೇ ಸುಳ್ಳು ಹೇಳಿದರೂ ಸುಲಭವಾಗಿ ಸಿಕ್ಕಿಬೀಳುತ್ತಾರೆ. ಹೀಗಾಗಿ ಅವರು ಅಂಥಾ ಜನರಿಂದ ದೂರವಿರುತ್ತಾರೆ.

ಈ ದಿನಾಂಕಗಳಲ್ಲಿ ಜನಿಸಿದವರಿಗೆ ಸುಳ್ಳು ಅಂದ್ರೆ ಕೆಂಡದಂಥ ಕೋಪ
ಈ ದಿನಾಂಕಗಳಲ್ಲಿ ಜನಿಸಿದವರಿಗೆ ಸುಳ್ಳು ಅಂದ್ರೆ ಕೆಂಡದಂಥ ಕೋಪ

ರಾಶಿಚಕ್ರ ಚಿಹ್ನೆಗಳಿಂದ ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವದ ಬಗ್ಗೆ ಊಹಿಸಬಹುದು. ಅದೇ ರೀತಿ, ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆಗಳಿಗೆ ಮಹತ್ವ ಇದೆ. ಪ್ರತಿಯೊಂದು ಸಂಖ್ಯೆಯೂ ಯಾವುದೋ ಒಂದು ಗ್ರಹಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಜನ್ಮದಿನಕ್ಕೆ ಅನುಸಾರವಾಗಿ ಪ್ರತಿಯೊಬ್ಬರಿಗೂ ಒಂದು ರೇಡಿಕ್ಸ್‌ ಸಂಖ್ಯೆ ಇದೆ. ನಿಮ್ಮ ರೇಡಿಕ್ಸ್ ಅನ್ನು ಕಂಡುಹಿಡಿಯಲು, ನೀವು ನಿಮ್ಮ ಹುಟ್ಟಿದ ದಿನಾಂಕದಿಂದ ತಿಳಿಯಬಹುದು. ಉದಾಹರಣೆಗೆ, ನೀವು ಯಾವುದೇ ತಿಂಗಳ 5, 14 ಮತ್ತು 23ರಂದು ಜನಿಸಿದರೆ, ನಿಮ್ಮ ರೇಡಿಕ್ಸ್ ಸಂಖ್ಯೆ 05 ಆಗಿರುತ್ತದೆ. ಅಂದರೆ 5+0 =5, 1+4 =5, 2+3 =5 ಹೀಗೆ ಲೆಕ್ಕ ಹಾಕಲಾಗುತ್ತದೆ.

ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಲ್ಲಿ ಜನಿಸಿದ ಜನರು ಸುಳ್ಳು, ಮೋಸ ಮತ್ತು ಅಪ್ರಾಮಾಣಿಕತೆಯನ್ನು ಸ್ವಲ್ಪವೂ ಸಹಿಸುವುದಿಲ್ಲ. ಅಂಥವರನ್ನು ಈ ಮೂಲಾಂಕದ ಜನರು ದ್ವೇಷಿಸುತ್ತಾರೆ. ಸುಳ್ಳು ಕೇಳಿದಾಗೆಲ್ಲಾ ಕೋಪಗೊಳ್ಳುತ್ತಾರೆ. ಹಾಗಿದ್ದರೆ ಯಾವ ದಿನಾಂಕಗಳಲ್ಲಿ ಜನಿಸಿದವರಿಗೆ ಸುಳ್ಳು ಕೇಳಿದರೆ ಆಗಲ್ಲ ಎಂಬುದನ್ನು ನೋಡೋಣ.

ದಿನಾಂಕ 10ರಂದು ಜನಿಸಿದವರು

ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 10ನೇ ತಾರೀಖಿನಂದು ಜನಿಸಿದ ಜನರು ಸುಳ್ಳು ಹೇಳಲು ಮತ್ತು ಕೇಳಲು ಇಷ್ಟಪಡುವುದಿಲ್ಲ. ಈ ದಿನಾಂಕದ ರೇಡಿಕ್ಸ್ 1 ಆಗಿದೆ. ಅವರ ರೇಡಿಕ್ಸ್‌ನಂತೆ, ಅವರು ಯಾವಾಗಲೂ ಉನ್ನತ ಸ್ಥಾನದಲ್ಲಿರಲು ಬಯಸುತ್ತಾರೆ. ಪ್ರಾಮಾಣಿಕವಾಗಿಯೇ ಯಶಸ್ಸಿನ ಮೆಟ್ಟಿಲು ಹತ್ತುತ್ತಾರೆ. ಈ ದಿನಾಂಕದಂದು ಜನಿಸಿದ ಜನರು ಸರಳ, ವಿನಮ್ರ ಮತ್ತು ಸ್ವಭಾವತಃ ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಸುಳ್ಳು ಕೇಳಿದಾಗ ಅಥವಾ ಏನನ್ನಾದರೂ ಮರೆಮಾಚಿದಾಗ ಬೇಗನೆ ಕೋಪಗೊಳ್ಳುತ್ತಾರೆ.

ಡೇಟ್‌ ಆಫ್‌ ಬರ್ತ್‌ 18 ಇರುವವರು

ಯಾವುದೇ ತಿಂಗಳ 18ರಂದು ಜನಿಸಿದ ಜನರು ಸುಳ್ಳು ಮತ್ತು ಮೋಸವನ್ನು ಸಹಿಸುವುದಿಲ್ಲ. ಇವರ ರೇಡಿಕ್ಸ್ ಸಂಖ್ಯೆ 9. ಎಲ್ಲಿ ಪ್ರಾಮಾಣಿಕತೆ ಮತ್ತು ಸತ್ಯವಿದೆಯೋ ಅಂಥವರಲ್ಲಿ ಇವರು ಸಂಬಂಧ ಕಾಪಾಡಿಕೊಳ್ಳುತ್ತಾರೆ. ಈ ದಿನಾಂಕದಂದು ಜನಿಸಿದ ಜನರು ಸ್ವಾಭಾವಿಕವಾಗಿರುತ್ತಾರೆ. ಯಾವಾಗಲೂ ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರುತ್ತಾರೆ.

29ರಂದು ಜನಿಸಿದವರು

ಯಾವುದೇ ತಿಂಗಳ 29ರಂದು ಜನಿಸಿದ ಜನರು ಪ್ರಾಮಾಣಿಕರು. ಇವರು ಹೆಚ್ಚು ತಿಳುವಳಿಕೆಯುಳ್ಳವರು. ಇವರ ಅಪ್ರಾಮಾಣಿಕತೆ ಮತ್ತು ಮೋಸವನ್ನು ಇಷ್ಟಪಡುವುದಿಲ್ಲ. ಅವರು ಸುಳ್ಳು, ಮೋಸ ಮತ್ತು ಕಪಟತನವನ್ನು ಇಷ್ಟಪಡುವುದಿಲ್ಲ. ಅಂಥಾ ಜನರಿಂದ ತಕ್ಷಣ ದೂರ ಸರಿಯುತ್ತಾರೆ. ತಾವು ಸತ್ಯ ಮಾತನಾಡುವುದು ಮಾತ್ರವಲ್ಲದೆ ತನ್ನವರು ಕೂಡಾ ನೇರವಾಗಿರಬೇಕೆಂದು ಬಯಸುತ್ತಾರೆ. ಸಂಬಂಧಗಳಲ್ಲಿ ಪ್ರಾಮಾಣಿಕರಾಗಿರಬೇಕು ಎಂದು ನಿರೀಕ್ಷಿಸುತ್ತಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.