ಇವರು ತುಂಬಾ ಬುದ್ಧಿವಂತರಾಗಿದ್ದರೂ ಯಶಸ್ಸು ಸಿಗುವ ಸಾಧ್ಯತೆ ಕಡಿಮೆ; ನೀವು ಈ ರಾಶಿಯವರಲ್ಲಿ ಒಬ್ಬರಾ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇವರು ತುಂಬಾ ಬುದ್ಧಿವಂತರಾಗಿದ್ದರೂ ಯಶಸ್ಸು ಸಿಗುವ ಸಾಧ್ಯತೆ ಕಡಿಮೆ; ನೀವು ಈ ರಾಶಿಯವರಲ್ಲಿ ಒಬ್ಬರಾ

ಇವರು ತುಂಬಾ ಬುದ್ಧಿವಂತರಾಗಿದ್ದರೂ ಯಶಸ್ಸು ಸಿಗುವ ಸಾಧ್ಯತೆ ಕಡಿಮೆ; ನೀವು ಈ ರಾಶಿಯವರಲ್ಲಿ ಒಬ್ಬರಾ

ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ವಿವಿಧ ರೀತಿಯ ಪ್ರಯತ್ನಗಳನ್ನು ನಡೆಸುತ್ತಾರೆ. ಆದರೆ ಕೆಲವು ರಾಶಿಯವರಿಗೆ ಎಷ್ಟೇ ಪ್ರಯತ್ನ ನಡೆಸಿದರೂ, ಅವರು ಎಷ್ಟೇ ಬುದ್ಧಿವಂತರಾಗಿದ್ದರೂ, ಶ್ರಮ ಹಾಕಿದರೂ ಯಶಸ್ಸು ಸಿಗುವ ಸಾಧ್ಯತೆ ಕಡಿಮೆ ಇರುತ್ತದೆ.

ತುಂಬಾ ಬುದ್ಧಿವಂತರಾಗಿದ್ದರೂ ಯಾವ ರಾಶಿಯವರು
ತುಂಬಾ ಬುದ್ಧಿವಂತರಾಗಿದ್ದರೂ ಯಾವ ರಾಶಿಯವರು

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸಂಚಾರದ ಆಧಾರದ ಮೇಲೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿನ ಆಗುಹೋಗುಗಳನ್ನು ಅಂದಾಜು ಮಾಡಲಾಗುತ್ತದೆ. ಅದೃಷ್ಟ, ವ್ಯಕ್ತಿತ್ವ, ಯಶಸ್ಸು, ಕಷ್ಟು, ಸುಖ, ಸೋಲು, ಗೆಲುವಿನ ಲೆಕ್ಕಾಚಾರಗಳನ್ನು ಮಾಡಲಾಗುತ್ತದೆ. ಅನೇಕ ಜನರು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಕೆಲವರು ಬುದ್ಧಿವಂತರಾಗಿರಬಹುದು, ಆದರೆ ಅವರು ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಯಾವ ರಾಶಿಯವರು ಬುದ್ಧಿವಂತರಾಗಿದ್ದರೂ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ತಿಳಿಯೋಣ.

1.ತುಲಾ ರಾಶಿ
ಈ ರಾಶಿಯವರು ತುಂಬಾ ಬುದ್ಧಿವಂತರು. ತುಂಬಾ ಚೆನ್ನಾಗಿ ಯೋಚಿಸುತ್ತಾರೆ. ಮೆದುಳಿನ ಕಾರ್ಯನಿರ್ವಹಣೆ ತುಂಬಾ ಉತ್ತಮವಾಗಿರುತ್ತದೆ. ಆದರೆ ಸರಿಯಾದ ಹೆಜ್ಜೆ ಇಡುವಾಗ ಯಾವಾಗಲೂ ಹಿಂದೆ ಸರಿಯುತ್ತಾರೆ. ಕೆಲಸವನ್ನು ಮುಂದೂಡುತ್ತಲೇ ಇರುತ್ತಾರೆ, ತಡವಾಗಿ ಬರುತ್ತಾರೆ. ಇದೇ ಕಾರಣಕ್ಕಾಗಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಯಶಸ್ಸನ್ನು ತುಂಬಾ ಇಷ್ಟಪಡುತ್ತಾರೆ ಆದರೆ ಕಷ್ಟಪಟ್ಟು ಕೆಲಸ ಮಾಡಲು ಇಷ್ಟಪಡುವುದಿಲ್ಲ. ಇದು ಇವರ ಹಿನ್ನಡೆಗೆ ಕಾರಣವಾಗಿರುತ್ತದೆ.

2. ಕುಂಭ ರಾಶಿ
ಕುಂಭ ರಾಶಿಯವರು ತುಂಬಾ ಬುದ್ಧಿವಂತರು. ಇವರು ಬಹಳ ನವೀನವಾಗಿ ಯೋಚಿಸುತ್ತಾರೆ. ಜಗತ್ತನ್ನು ವಿಭಿನ್ನವಾಗಿ ನೋಡುತ್ತಾರೆ. ಕುಂಭ ರಾಶಿಯ ಜನರು ಅದ್ಭುತ ಆಲೋಚನೆಗಳೊಂದಿಗೆ ಬರುವಲ್ಲಿ ನಿಪುಣರಾಗಿರುತ್ತಾರೆ. ಆದರೆ ತುಂಬಾ ಬೇಗ ಆಸಕ್ತಿಯನ್ನು ಕಳೆದುಕೊಳ್ಳುವುದರಿಂದ ಯಾವಾಗಲೂ ಹಿಂದೆ ಉಳಿದುಬಿಡುತ್ತಾರೆ.

3. ಮೀನ ರಾಶಿ
ಮೀನ ರಾಶಿಯವರು ತುಂಬಾ ಬುದ್ಧಿವಂತರು. ಇವರ ಸೃಜನಶೀಲತೆ ಮತ್ತು ನೈಸರ್ಗಿಕ ಸ್ವಭಾವವು ಸಂಕೀರ್ಣ ಆಲೋಚನೆಗಳನ್ನು ಗ್ರಹಿಸುವ ಸಲುವಾಗಿ ಇತರರನ್ನು ಬೆರಗುಗೊಳಿಸುತ್ತದೆ. ಆದರೆ ತಮ್ಮ ಸ್ವಂತ ಆಲೋಚನೆಗಳನ್ನು ಬೇಗನೆ ಕಳೆದುಕೊಳ್ಳುತ್ತಾರೆ. ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಯಶಸ್ಸನ್ನು ಸಾಧಿಸಲು ಸಾಧ್ಯವಾಗದೆ ತೋಚಿದ ಕೆಲಸವನ್ನು ಮಾಡಿಕೊಂಡು ಜೀವನ ನಡೆಸುತ್ತಾರೆ.

4. ಧನು ರಾಶಿ
ಈ ರಾಶಿಯವರಲ್ಲಿ ಕೆಲವರು ಸಾಹಸ ಮನೋಭಾವ ಮತ್ತು ಮುಕ್ತ ಮನಸ್ಸಿಗೆ ಹೆಸರುವಾಸಿಯಾಗಿದ್ದಾರೆ. ಆದಾಗ್ಯೂ, ಅವರು ಹೊಸ ಯೋಜನೆಗಳನ್ನು ಹೆಚ್ಚಿನ ಉತ್ಸಾಹದಿಂದ ಪ್ರಾರಂಭಿಸುತ್ತಾರೆ. ಆದರೆ ಮಧ್ಯದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಮತ್ತು ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.

5. ಮಿಥುನ ರಾಶಿ
ಇವರು ತಮ್ಮ ಮಾನಸಿಕ ಚುರುಕುತನದಿಂದ ಇತರರನ್ನು ಸುಲಭವಾಗಿ ಮೆಚ್ಚಿಸುತ್ತಾರೆ. ಆದರೆ ತೀಕ್ಷ್ಣವಾದ ಬುದ್ಧಿವಂತಿಕೆಯ ಫಲವಾಗಿ ಬಹುಮಾನ ಪಡೆದರೂ ತಮ್ಮ ಪ್ರವೃತ್ತಿಯಿಂದ ಮತ್ತೊಂದು ಹಂತಕ್ಕೆ ಹೋಗಿ ಯಶಸ್ಸನ್ನು ಸಾಧಿಸಲು ವಿಫಲರಾಗುತ್ತಾರೆ. ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಮಿಥುನ ರಾಶಿಯ ಕೆಲವರು ಇಂಥ ಹಿನ್ನಡೆಗಳನ್ನು ಅನುಭವಿಸುತ್ತಾರೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.