ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Moon Remedies: ಜಾತಕದಲ್ಲಿ ಚಂದ್ರನ ಸ್ಥಾನ ಬಲಹೀನವಾಗಿದ್ದರೆ ಸಮಸ್ಯೆಗಳ ಸರಮಾಲೆ; ಪರಿಹಾರಕ್ಕಾಗಿ ಈ ರೀತಿ ಮಾಡಿ

Moon Remedies: ಜಾತಕದಲ್ಲಿ ಚಂದ್ರನ ಸ್ಥಾನ ಬಲಹೀನವಾಗಿದ್ದರೆ ಸಮಸ್ಯೆಗಳ ಸರಮಾಲೆ; ಪರಿಹಾರಕ್ಕಾಗಿ ಈ ರೀತಿ ಮಾಡಿ

ಜ್ಯೋತಿಷ್ಯದಲ್ಲಿ ಚಂದ್ರನಿಗೆ ವಿಶೇಷ ಸ್ಥಾನವಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಚಂದ್ರನನ್ನು ಮುಖ್ಯ ಗ್ರಹಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅನೇಕ ಜನರು ಸೂರ್ಯನನ್ನು ಮಾತ್ರವಲ್ಲದೆ, ಚಂದ್ರನನ್ನೂ ಪೂಜೆ ಮಾಡುತ್ತಾರೆ. ಒಂದು ವೇಳೆ ನಿಮ್ಮ ಜಾತಕದಲ್ಲಿ ಚಂದ್ರನ ಸ್ಥಾನ ಬಲ ಇಲ್ಲದಿದ್ದಲ್ಲಿ , ಪರಹಾರಕ್ಕಾಗಿ ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಜಾತಕದಲ್ಲಿ ಚಂದ್ರನ ಸ್ಥಾನ ಬಲಹೀನವಾಗಿದ್ದರೆ ಸಮಸ್ಯೆಗಳ ಸರಮಾಲೆ; ಪರಿಹಾರಕ್ಕಾಗಿ ಈ ರೀತಿ ಮಾಡಿ
ಜಾತಕದಲ್ಲಿ ಚಂದ್ರನ ಸ್ಥಾನ ಬಲಹೀನವಾಗಿದ್ದರೆ ಸಮಸ್ಯೆಗಳ ಸರಮಾಲೆ; ಪರಿಹಾರಕ್ಕಾಗಿ ಈ ರೀತಿ ಮಾಡಿ

ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಚಂದ್ರನಿಗೆ ವಿಶೇಷ ಸ್ಥಾನವಿದೆ. ಚಂದ್ರ ಕರ್ಕಾಟಕ ರಾಶಿಯನ್ನು ಆಳುತ್ತಾನೆ. ರೋಹಿಣಿ, ಅಷ್ಟಮ ಮತ್ತು ತಿರುವೋಣಂ ಚಂದ್ರನ ನಕ್ಷತ್ರಗಳು. ಇದನ್ನು ಪ್ರೀತಿ, ತಾಯಿ, ನೈತಿಕತೆ, ಎಡ ಕಣ್ಣು, ಎದೆಯ ಪ್ರದೇಶ ಎಂದು ಪರಿಗಣಿಸಲಾಗುತ್ತದೆ.

ಹುಣ್ಣಿಮೆಯಂದು ಧನಾತ್ಮಕ ಕಿರಣಗಳನ್ನು ಹೊರ ಸೂಸುವ ಚಂದ್ರ

ಹಿಂದೂ ಧರ್ಮದಲ್ಲಿ ಚಂದ್ರನಿಗೆ ಬಹಳ ಮಹತ್ವವಿದೆ. ಇದು ಸೃಷ್ಟಿ, ಜೀವನ, ಭಾವನೆಗಳು, ಮನಸ್ಥಿತಿ, ಮನಸ್ಸಿನ ಹಲವು ಅಂಶಗಳನ್ನು ಪ್ರತಿನಿಧಿಸುತ್ತದೆ. ಏಕೆಂದರೆ ಇವೆಲ್ಲವೂ ಚಂದ್ರನಿಂದ ನಿಯಂತ್ರಿಸಲ್ಪಡುತ್ತದೆ ಎಂದು ನಂಬಲಾಗಿದೆ. ಈ ಗ್ರಹವು ಪ್ರೀತಿ, ಒಂಟಿತನ, ಮನಸ್ಥಿತಿ ಬದಲಾವಣೆಗಳೊಂದಿಗೆ ಸಂಬಂಧಿಸಿದೆ. ಹುಣ್ಣಿಮೆ ಸಮಯದಲ್ಲಿ ಚಂದ್ರನು ತನ್ನ ಧನಾತ್ಮಕ ಶಕ್ತಿಯನ್ನು ಭೂಮಿಗೆ ಹೊರ ಸೂಸುತ್ತಾನೆ ಎಂದು ನಂಬಲಾಗಿದೆ. ಇದು ಉತ್ತಮ ಆರೋಗ್ಯ, ಸಮೃದ್ಧಿ ಮತ್ತು ದೀರ್ಘಾಯುಷ್ಯವನ್ನು ಸೂಚಿಸುತ್ತದೆ. ಇದಕ್ಕೆ ವಿರುದ್ಧವಾಗಿ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನನ್ನು ನೋಡಬಾರದು. ಏಕೆಂದರೆ ಆ ಸಮಯದಲ್ಲಿ ಚಂದ್ರನ ಕಿರಣಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಚಂದ್ರ ಅತ್ಯಂತ ವೇಗವಾಗಿ ಚಲಿಸುವ ಗ್ರಹವಾಗಿರುವುದರಿಂದ ಎರಡೂವರೆ ದಿನಗಳಲ್ಲಿ ತನ್ನ ಸ್ಥಾನವನ್ನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಯಿಸುತ್ತಾನೆ.

ಜಾತಕದಲ್ಲಿ ಚಂದ್ರ ಬಲಶಾಲಿಯಾಗಿದ್ದರೆ ಉತ್ತಮ ಯೋಗವಿರುತ್ತದೆ. ಜಾತಕನ ಲಗ್ನ ಮನೆಯಲ್ಲಿ ಚಂದ್ರನಿದ್ದರೆ ವ್ಯಕ್ತಿ ನೋಡಲು ಸುಂದರ, ಆಕರ್ಷಕ ಮತ್ತು ಸೂಕ್ಷ್ಮ ಸ್ವಭಾವದವನಾಗಿರುತ್ತಾನೆ. ಹೆಚ್ಚಾಗಿ ಅವರು ಕಲಾತ್ಮಕ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಜಾತಕದಲ್ಲಿ ಚಂದ್ರ ಬಲಶಾಲಿಯಾಗಿದ್ದರೆ ವ್ಯಕ್ತಿಯ ಮಾನಸಿಕ ಸ್ಥಿತಿಯೂ ಬಲವಾಗಿರುತ್ತದೆ. ಅವನು ಸಂತೋಷವಾಗಿರುತ್ತಾನೆ. ಜಾತಕದಲ್ಲಿ ಚಂದ್ರ ಬಲಹೀನನಾಗಿದ್ದರೆ. ಜೀವನದಲ್ಲಿ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತಾನೆ. ಇದು ಮನಸ್ಥಿತಿ, ಮನಸ್ಸು, ಭಾವನೆಗಳನ್ನು ಸಹ ಸೂಚಿಸುತ್ತದೆ. ಒಬ್ಬರ ಜಾತಕದಲ್ಲಿ ಚಂದ್ರನು ದುರ್ಬಲನಾಗಿದ್ದರೆ ಖಿನ್ನತೆ, ಕೆಟ್ಟ ಮನಸ್ಥಿತಿ ನಕಾರಾತ್ಮಕತೆ ಮತ್ತು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದಾಗುವ ದುಷ್ಪರಿಣಾಮಗಳನ್ನು ಹೋಗಲಾಡಿಸಲು ಕೆಲವು ಪರಿಹಾರಗಳನ್ನು ಕೈಗೊಳ್ಳಬಹುದು.

ಜಾತಕದಲ್ಲಿ ಚಂದ್ರನ ಸ್ಥಾನ ಬಲಗೊಳ್ಳಲು ಪರಿಹಾರ

ಚಂದ್ರನಿಗೆ ಇಷ್ಟವಾದ ಬಣ್ಣ ಬಿಳಿ. ಜಾತಕದಲ್ಲಿ ಚಂದ್ರ ಬಲಶಾಲಿಯಾಗಿದ್ದರೆ ಬೆಳ್ಳಿಯ ಉಂಗುರದಲ್ಲಿ ಮುತ್ತನ್ನು ಜೋಡಿಸಿ ಕಿರುಬೆರಳಿಗೆ ಧರಿಸಬೇಕು. ಸೋಮವಾರ ಉಪವಾಸ ಮಾಡಿದರೆ ಚಂದ್ರನ ಸ್ಥಾನವನ್ನು ಸುಧಾರಿಸುತ್ತದೆ. ಶಿವನು ಚಂದ್ರನ ಅಧಿಪತಿ. ಸೋಮವಾರ ಮಹಾದೇವನ ಆರಾಧನೆ ಮಾಡಿ. ನಿಯಮಿತವಾಗಿ ಚಂದ್ರ ಮಂತ್ರಗಳನ್ನು ಪಠಿಸಿ.

ಓಂ ಭೂರ್ಭವಃ ಸ್ವಃ

ಅಮೃತಂಗಾಯ ವಿದ್ಮಹೇ

ಕಾಲರೂಪಾಯ ಧೀಮಹಿ

ತನ್ನೋ ಸೋಮೋ ಪ್ರಚೋದಯಾತ್‌

ಓಂ ಇಮಂ ದೇವಾ ಅಸಪತ್ನಂ ಗ್ವಂ ಸುವಧ್ಯಂ|

ಮಹತೇ ಕ್ಷತ್ರಾಯ ಮಹತೇ ಜ್ಯೇಷ್ಠಾಯ

ಮಹತೇ ಜಾನರಾಜ್ಯಾಯೇಂದ್ರಸ್ಯೇಂದ್ರಿಯಾಯ

ಹಮ್ಮಮುಧ್ಯ ಪುತ್ರಮಮುಧ್ಯೈ ಪುತ್ರಮಸ್ಯೈ

ವಿಶ ವೋಮೀ ರಾಜಃ ಸೋಮೋಸ್ಮಾಕಂ ಬ್ರಾಹ್ಮಾಣಾನಾ ಗ್ವಂ ರಾಜಾ

ಇದರೊಂದಿಗೆ ಅಕ್ಕಿ, ಹಾಲು, ಮೊಸರು, ಸಕ್ಕರೆ ಸೇರಿದಂತೆ ಬಿಳಿ ಆಹಾರ ಪದಾರ್ಥಗಳನ್ನು ಇತರರಿಗೆ ದಾನ ಮಾಡಿ. ಅಗತ್ಯವಿದ್ದರೆ ಬಿಳಿ ಹೊದಿಕೆಯನ್ನು ಸಹ ದಾನ ಮಾಡಬಹುದು. ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಉಪವಾಸ ಮಾಡಿ ಚಂದ್ರನ ಪೂಜೆ ಮಾಡಿ. ಬೆಳ್ಳಿಯ ಕಲಶದಿಂದ ನೀರು ಹಾಗೂ ಹಾಲನ್ನು ಚಂದ್ರನಿಗೆ ಅರ್ಪಿಸಿ. ಇದನ್ನು ನಿರಂತರವಾಗಿ ಮಾಡುವುದರಿಂದ ಜಾತಕದಲ್ಲಿ ಚಂದ್ರನ ಸ್ಥಾನ ಸುಧಾರಿಸುತ್ತದೆ. ಜೀವನದಲ್ಲಿ ಸಮಸ್ಯೆಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಸಂತೋಷ ಪ್ರಾಪ್ತಿಯಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.