ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  2025ರ ಮೇನಲ್ಲಿ ರಾಹು, ಕೇತು ಸಂಕ್ರಮಣ; ಹೊಸ ಮನೆ ಖರೀದಿ ಸೇರಿ ಈ 3 ರಾಶಿಯವರಿಗೆ ಭಾರಿ ಅದೃಷ್ಟ -Rahu Ketu Transit

2025ರ ಮೇನಲ್ಲಿ ರಾಹು, ಕೇತು ಸಂಕ್ರಮಣ; ಹೊಸ ಮನೆ ಖರೀದಿ ಸೇರಿ ಈ 3 ರಾಶಿಯವರಿಗೆ ಭಾರಿ ಅದೃಷ್ಟ -Rahu Ketu Transit

2025 ರ ಮೇನಿಂದ ರಾಹು ಕೇತುಗಳು ತಮ್ಮ ರಾಶಿಗಳ ಸ್ಥಾನವನ್ನು ಬದಲಾಯಿಸುತ್ತವೆ. ಇದರಿಂದಾಗಿ 3 ರಾಶಿಯವರಿಗೆ ಉತ್ತಮ ಫಲಿತಾಂಶಗಳಿವೆ. ಈ ರಾಶಿಯವರ ಕನಸುಗಳು ನನಸಾಗಿಸುವ ಸಮಯ. ಅದೃಷ್ಟವನ್ನು ಹೊಂದಲಿರುವ ರಾಶಿಯವರ ಬಗ್ಗೆ ತಿಳಿಯೋಣ.

2025ರ ಮೇನಲ್ಲಿ ರಾಹು, ಕೇತು ಸಂಕ್ರಮಣ; ಹೊಸ ಮನೆ ಖರೀದಿ ಸೇರಿ ಈ 3 ರಾಶಿಯವರಿಗೆ ಭಾರಿ ಅದೃಷ್ಟ
2025ರ ಮೇನಲ್ಲಿ ರಾಹು, ಕೇತು ಸಂಕ್ರಮಣ; ಹೊಸ ಮನೆ ಖರೀದಿ ಸೇರಿ ಈ 3 ರಾಶಿಯವರಿಗೆ ಭಾರಿ ಅದೃಷ್ಟ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹು ಮತ್ತು ಕೇತುವನ್ನು ನೆರಳಿನ ಗ್ರಹಗಳೆಂದು ಕರೆಯಲಾಗುತ್ತದೆ. ಇವುಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಎರಡೂ ಗ್ರಹಗಳು ಮಾನವನ ಜೀವನದ ಮೇಲೆ ನಕರಾತ್ಮಕ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ಕೇತು ಮತ್ತು ರಾಹು ವ್ಯಕ್ತಿಯ ಜಾತಕದಲ್ಲಿ ಅವರ ವಿವಿಧ ಸ್ಥಾನಗಳ ಆಧಾರದ ಮೇಲೆ ಫಲಿತಾಂಶಗಳನ್ನು ನೀಡುತ್ತವೆ.

2023 ರಲ್ಲಿ ರಾಶಿಗಳನ್ನು ಬದಲಾಯಿಸಿದ ರಾಹು ಕೇತುಗಳು 2025 ರಲ್ಲಿ ತಮ್ಮ ಮುಂದಿನ ರಾಶಿ ಸಂಕ್ರಮಣವನ್ನು ಮಾಡುತ್ತವೆ. ಇವು ಯಾವಾಗಲೂ ಹಿಮ್ಮುಖದಲ್ಲಿ ಚಲಿಸುತ್ತವೆ. 18 ತಿಂಗಳಿಗೊಮ್ಮೆ ಈ ಎರಡು ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ನೆರಳು ಗ್ರಹಗಳಾದ ರಾಹು ಮತ್ತು ಕೇತು ಸಂಕ್ರಮಣ ಮುಂದಿನ ವರ್ಷ ಕೆಲವು ರಾಶಿಯವರಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತವೆ. ರಾಹ-ಕೇತು ಸಂಕ್ರಮಣ ಯಾವಾಗ ನಡೆಯುತ್ತದೆ, ಇದರಿಂದ ಯಾವೆಲ್ಲಾ ರಾಶಿಯವರಿಗೆ ಹೆಚ್ಚಿನ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

ರಾಹು-ಕೇತು ಸಂಕ್ರಮಣ ಯಾವಾಗ ನಡೆಯುತ್ತೆ?

ಪ್ರಸ್ತುತ ರಾಹು ಮತ್ತು ಕೇತುಗಳು ಮೀನ ಮತ್ತು ಕನ್ಯಾ ರಾಶಿಯಲ್ಲಿ ಸಾಗುತ್ತಿವೆ. ರಾಹು ಮತ್ತು ಕೇತು ಯಾವಾಗಲೂ ಹಿಮ್ಮುಖ ದಿನಕ್ಕಿನಲ್ಲಿ ಚಲಿಸುತ್ತವೆ. 2025ರ ಮೇ ತಿಂಗಳವರೆಗೆ ಇದೇ ರಾಶಿಯವರಲ್ಲಿ ಇರುತ್ತವೆ. ಮೇ 18 ರಂದು ಸಂಜೆ 4.30ಕ್ಕೆ ರಾಹು ಶನಿಯ ರಾಶಿಯಾದ ಕುಂಭ ರಾಶಿಯನ್ನು ಪ್ರೇಶಿಸುತ್ತಾನೆ. ಕೇತು ಸಿಂಹ ರಾಶಿಯನ್ನು ಸೇರಿಸಲಿದ್ದಾನೆ. ಈ ಎರಡರ ಸಂಕ್ರಮಣ ಯಾವ ರಾಶಿಯವ ಮೇಲೆ ಪ್ರಭಾವ ಬೀರುತ್ತೆ ಅನ್ನೋದರ ವಿವರ ಇಲ್ಲಿದೆ.

ಕುಂಭ ರಾಶಿ

ರಾಹು-ಕೇತು ಸಂಕ್ರಮಣ ಕುಂಭ ರಾಶಿಯವರಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಶನಿ ಕುಂಭ ರಾಶಿಯ ಅಧಿಪತಿ. ರಾಹು ಈ ಕುಂಭ ರಾಶಿಯವನ್ನು ಪ್ರವೇಶಿಸುತ್ತಾನೆ. ರಾಹು ಮತ್ತು ಶನಿ ನಡುವೆ ಸ್ನೇಹದ ಭಾವ ಇದೆ. ಕುಂಭ ರಾಶಿಯವರಿಗೆ ಶುಭ ಫಲಿತಾಂಶಗಳಿವೆ. ಭೂಮಿ, ಕಟ್ಟಡ ಅಥವಾ ವಾಹನ ಖರೀದಿಸುವ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಸಾಧಿಸುವಿರಿ. ಮುಂದಿನ ಎಡೂವರೆ ವರ್ಷಗಳು ಕುಂಭ ರಾಶಿಯವರಿಗೆ ಅದ್ಭುತವಾಗಿರುತ್ತದೆ. ಈ ಸಮಯದಲ್ಲಿ ನೀವು ಕಂಡ ಕನಸುಗಳು ನನಸಾಗಿಸಬಹುದು.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ರಾಹು ಮತ್ತು ಕೇತುಗಳ ಸ್ಥಾನ ಬದಲಾವಣೆಯಿಂದ ಉತ್ತಮ ಫಲಿತಾಂಶಳಿವೆ. 2025ರ ಮೇ ತಿಂಗಳಿನಿಂದ ಎರಡೂವೆ ವರ್ಷಗಳು ಸಿಂಹ ರಾಶಿಯವರಿಗೆ ತುಂಬಾ ಲಾಭದಾಯಕವಾಗಿರುತ್ತೆ. ರಾಹು-ಕೇತುಗಳ ಪ್ರಭಾವದಿಂದ ನೀವು ನಿಮ್ಮ ವೃತ್ತಿಯಲ್ಲಿ ಪ್ರಗತಿಯನ್ನು ಸಾಧಿಸುತ್ತೀರಿ. ಉದ್ಯೋಗಳಿಗೆ ಆದಾಯ ಹೆಚ್ಚಳದ ಜೊತೆಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯಿಂದ ಬೆಂಬಲ ಪಡೆಯುತ್ತೀರಿ. ಕೋರ್ಟ್ ಕೇಸ್‌ನಲ್ಲಿ ಜಯ ಗಳಿಸುತ್ತೀರಿ. ಸಂಬಂಧಗಳು ಸುಧಾರಿಸುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಗಣನೀಯವಾಗಿ ಮುನ್ನಡೆಯುವ ಅವಕಾಶ ಇರುತ್ತದೆ. ನಿಮ್ಮ ಕನಸುಗಳು ನನಸಾಗುತ್ತವೆ.

ವೃಷಭ ರಾಶಿ

ಹಾಹು-ಕೇತು ಸಂಚಾರವು ವೃಷಭ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿವರಿಗೆ 2025 ರ ಮೇ ನಿಂದ ಗೋಲ್ಡನ್ ಅವಧಿ ಅಂತಲೇ ಹೇಳಲಾಗಿದೆ. ರಾಹು-ಕೇತು ಸಂಕ್ರಮಣದಿಂದ ವೃಷಭ ರಾಶಿಯವರಿಗೆ ಜೀವನದಲ್ಲಿ ಸಂತೋಷ ಹೆಚ್ಚಿರುತ್ತದೆ. ಆರ್ಥಿಕ ಪ್ರಗತಿ ಸಾಧಿಸುತ್ತಾರೆ. ಹಣ ಬರಲಿದೆ. ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಒಟ್ಟಾರೆಯಾಗಿ ಈ ಸಮಯ ಆಶೀರ್ವಾದವಾಗಿರುತ್ತದೆ.

(ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.