ರಾಹು-ಕುಜ ಪರಸ್ಪರ ದೃಷ್ಠಿ: ಖರ್ಚು ವೆಚ್ಚ ಎದುರಾಗುತ್ತೆ; ಧನುದಿಂದ ಮೀನದವರಿಗೆ ಯಾವ ರಾಶಿಯವರಿಗೆ ಏನೆಲ್ಲಾ ಫಲಗಳಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಹು-ಕುಜ ಪರಸ್ಪರ ದೃಷ್ಠಿ: ಖರ್ಚು ವೆಚ್ಚ ಎದುರಾಗುತ್ತೆ; ಧನುದಿಂದ ಮೀನದವರಿಗೆ ಯಾವ ರಾಶಿಯವರಿಗೆ ಏನೆಲ್ಲಾ ಫಲಗಳಿವೆ

ರಾಹು-ಕುಜ ಪರಸ್ಪರ ದೃಷ್ಠಿ: ಖರ್ಚು ವೆಚ್ಚ ಎದುರಾಗುತ್ತೆ; ಧನುದಿಂದ ಮೀನದವರಿಗೆ ಯಾವ ರಾಶಿಯವರಿಗೆ ಏನೆಲ್ಲಾ ಫಲಗಳಿವೆ

ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. ರಾಶಿಗಳ ಸ್ಥಾನಗಳಿಗೆ ಪ್ರವೇಶದ ವೇಳೆಯಲ್ಲಿ ಕೆಲವು ಗ್ರಹಗಳು ಮುಖಾಮುಖಿಯಾಗುತ್ತವೆ. ರಾಹು-ಕುಜ ಪರಸ್ಪರ ದೃಷ್ಠಿಯಿಂದ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಶುಭಫಲಗಳು ಹೀಗಿವೆ.

ರಾಹು ಕೇತು ಪರಸ್ಪರ ದೃಷ್ಠಿಯಿಂದ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಏನೆಲ್ಲಾ ಶುಭಫಗಳಿವೆ, ಏನೆಲ್ಲಾ ಸವಾಲುಗಳಿವೆ ಎಂಬುದನ್ನು ತಿಳಿಯಿರಿ
ರಾಹು ಕೇತು ಪರಸ್ಪರ ದೃಷ್ಠಿಯಿಂದ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಏನೆಲ್ಲಾ ಶುಭಫಗಳಿವೆ, ಏನೆಲ್ಲಾ ಸವಾಲುಗಳಿವೆ ಎಂಬುದನ್ನು ತಿಳಿಯಿರಿ

ಶನಿವತ್ ರಾಹು ಕುಜವತ್ ಕೇತು ಎಂಬ ಮಾತು ಜೋತಿಷ್ಯ ಶಾಸ್ತ್ರದಲ್ಲಿದೆ. ಅಂದರೆ ರಾಹುವು ಶನಿಗ್ರಹದಂತೆ ಫಲಗಳನ್ನು ನೀಡುತ್ತದೆ. ಇದೇ ರೀತಿ ಕೇತುವು ಕುಜ ಅಥವಾ ಮಂಗಳನ ರೀತಿ ಫಲಗಳನ್ನು ನೀಡುತ್ತದೆ. ಈ ಕಾರಣದಿಂದಾಗಿ ರಾಹುವು ಕುಂಭರಾಶಿಯಲ್ಲಿ ಸಂಪೂರ್ಣ ಶಕ್ತಿಯುತನಾಗುತ್ತಾನೆ. ಆದ್ದರಿಂದ ರಾಹುವು ಕೇವಲ ಅಶುಭ ಫಲಗಳನ್ನು ನೀಡದೆ ಕೆಲವೊಂದು ವಿಚಾರದಲ್ಲಿ ಶುಭ ಫಲಗಳನ್ನು ನೀಡುತ್ತಾನೆ. ಇದರ ಬಗ್ಗೆ ಪುರಾತನ ಗ್ರಂಥಗಳಿಂದ ಮಾತ್ರ ತಿಳಿಯಲು ಸಾಧ್ಯ. ಕುಜನು ಸಿಂಹ ರಾಶಿಯನ್ನು 2025 ರ ಜೂನ್ 6 ರಂದು ಪ್ರವೇಶಿಸುತ್ತಾನೆ. ಇದೇ ರಾಶಿಯಲ್ಲಿ ಜುಲೈ ತಿಂಗಳ 28 ರವರೆಗು ಸಂಚರಿಸುತ್ತಾನೆ. ಕುಜನಿಗೆ ಸಿಂಹ ರಾಶಿಯು ಮಿತ್ರಕ್ಷೇತ್ರವಾಗುತ್ತದೆ. ಆದ್ದರಿಂದ ರಾಹು ಮತ್ತು ಕುಜರ ದೃಷ್ಠಿ ಇದ್ದರೂ ಶುಭ ಮತ್ತು ಅಶುಭಫಲಗಳು ಸಮನಾಗಿರುತ್ತವೆ. ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಫಲಾಫಲಗಳು ಇಲ್ಲಿವೆ.

ಧನು ರಾಶಿ

ಕಣ್ಣಿಗೆ ಸಂಬಂಧಿಸಿದ ದೋಷ ಇರುತ್ತದೆ. ಆರೋಗ್ಯದಲ್ಲಿ ಏರಿಳಿತ ಕಂಡು ಬರಲಿದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಸಮಸ್ಯೆ ಕಂಡು ಬರಲಿದೆ. ಮೂತ್ರದ ಸೋಂಕಿನಿಂದ ಬಳಲುವಿರಿ. ದಂಪತಿ ನಡುವೆ ಅನ್ಯೋನ್ಯತೆ ಮೂಡುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಆತ್ಮೀಯ ಪಾತ್ರವು ಅತಿ ಮುಖ್ಯವಾಗುತ್ತದೆ. ನಿಮ್ಮಿಂದ ಸಹಾಯ ಪಡೆದವರು ನಿಮಗೆ ಆಸರೆಯಾಗುತ್ತಾರೆ. ನಿಮ್ಮಲ್ಲಿ ಗೆಲ್ಲಲೇ ಬೇಕೆಂಬ ಹಠವಿರುತ್ತದೆ. ಆದರೆ ದೊರೆಯುವ ಅವಕಾಶವನ್ನು ಸಮರ್ಥಕವಾಗಿ ಬಳಸಿಕೊಳ್ಳಲು ವಿಫಲರಾಗುವಿರಿ. ಸಮಯ ಸಂದರ್ಭವನ್ನು ಅನುಸರಿಸಿ ನಿಮ್ಮ ಮನಸ್ಸನ್ನು ಬದಲಿಸಿಕೊಳ್ಳುವಿರಿ. ಸೋದರನ ಕೆಲಸ ಕಾರ್ಯಗಳಿಂದ ಕುಟುಂಬದ ಗೌರವಕ್ಕೆ ಧಕ್ಕೆ ಬರಲಿದೆ. ಅವಿವಾಹಿತೆಯರಿಗೆ ವಿವಾಹ ಯೋಗವಿದೆ. ದುಡುಕುತನದ ಮಾತಿನಿಂದಕ್ಕೆ ಸಂಕಷ್ಟಕ್ಕೆ ಒಳಗಾಗುವಿರಿ. ಹಣಕಾಸಿನ ವಿಚಾರದಲ್ಲಿ ದುಡುಕಿನ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಕುಟುಂಬದಲ್ಲಿನ ಸಮಸ್ಯೆಗಳು ಹೆಚ್ಚುವುದಿಲ್ಲ, ಆದರೆ ಇರುವ ಸಮಸ್ಯೆಗಳಿಗೆ ಪರಿಹಾರವೂ ದೊರೆಯುವುದಿಲ್ಲ. ಒಟ್ಟಾರೆ ದಿನನಿತ್ಯದ ಆಗುಹೋಗುಗಳು ನಿಮ್ಮ ಮಾತುಕತೆಯನ್ನು ಆಧರಿಸಿರುತ್ತದೆ.

ಮಕರ ರಾಶಿ

ಕುಟುಂಬದ ಎಲ್ಲರೂ ನಿಮ್ಮನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಆದರೆ ನಿಮ್ಮ ಮನಸ್ಸು ಪ್ರತ್ಯೇಕವನ್ನು ಬಯಸುತ್ತದೆ. ಎಲ್ಲರೊಡನೆ ವಿಶ್ವಾಸದಿಂದ ಬಾಳದೆ ಏಕಾಂಗಿಯಾಗಿ ಉಳಿಯುವಿರಿ. ದಾಂಪತ್ಯ ಜೀವನದಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಎದುರಾಗುತ್ತವೆ. ಉದ್ಯೋಗ ಅಥವಾ ಉನ್ನತ ವಿದ್ಯಾಭ್ಯಾಸದ ಸಲುವಾಗಿ ವಿದೇಶಕ್ಕೆ ತೆರಳುವ ಅವಕಾಶ ಪಡೆಯುವಿರಿ. ಬಾಳ ಸಂಗಾತಿಯ ಆರೋಗ್ಯದಲ್ಲಿ ತೊಂದರೆ ಕಂಡು ಬರಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಮನಸ್ಸನ್ನು ಅರಿತುಕೊಳ್ಳುವುದಿಲ್ಲ. ಪ್ರಾಣಿಗಳ ಬಗ್ಗೆ ವಿಶೇಷವಾದ ಅಕ್ಕರೆ ಮತ್ತು ಅನುಕಂಪ ಇರುತ್ತದೆ. ಶುಚಿ ಇಲ್ಲದ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ವಿಫಲರಾಗುವಿರಿ. ವಿಶೇಷವಾದ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಲಿರುವಿರಿ. ಎಲ್ಲಾ ಬಲ್ಲೆನೆಂಬ ಮನೋಭಾವನೆ ಒಳ್ಳೆಯದಲ್ಲ. ಹಣಕಾಸಿನ ವಿಚಾರವು ತೃಪ್ತಿಕರವಾಗಿ ಇರುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರವಿದ್ದಲ್ಲಿ ಅನ್ಯರ ಸಹಾಯದಿಂದ ಯಶಸ್ಸು ಗಳಿಸುವಿರಿ. ಹುಳಿ ಪದಾರ್ಥಗಳಿಂದ ದೂರವಿರುವುದು ಆರೋಗ್ಯಕರ.

ಕುಂಭ ರಾಶಿ

ಕೇವಲ ಕುಟುಂಬ ಮಾತ್ರವಲ್ಲದೆ ಸಮಾಜದಲ್ಲಿಯೂ ಉತ್ತಮ ಹೆಸರನ್ನು ಗಳಿಸುವಿರಿ. ಯಾವುದೇ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಬಲ್ಲಿರಿ. ಸಹೋದ್ಯೋಗಿಗಳು ನಿಮ್ಮ ಧೈರ್ಯ ಸಾಹಸದ ಮುಂದೆ ಅಧೀನರಾಗುತ್ತಾರೆ. ಆದರೆ ಅನಾವಶ್ಯಕವಾದ ವಿಚಾರಗಳಿಗೆ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ನಿಮ್ಮ ಮನಸ್ಸು ಒಳ್ಳೆಯದಾದರೂ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ. ನವದಂಪತಿಗೆ ಸಂತಾನ ಲಾಭವಿದೆ. ಪೈಲ್ಸ್ ನಂತಹ ತೊಂದರೆ ನಿಮ್ಮನ್ನು ಕಾಡುತ್ತದೆ. ಚರ್ಮದ ದೋಷ ಇರುತ್ತದೆ. ನಯ ವಿನಯದ ಮಾತುಕತೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಆದರೆ ಹಠದ ಗುಣ ಬೇರೆಯವರಲ್ಲಿ ಬೇಸರವನ್ನು ಉಂಟುಮಾಡುತ್ತದೆ. ಸೋದರನಿಗೆ ಅಥವಾ ಸೋದರಿಗೆ ವಿಶೇಷವಾದಂತಹ ಅನುಕೂಲಕಾರಿ ಫಲಗಳು ದೊರೆಯಲಿವೆ. ನಿಮ್ಮ ಬಾಳ ಸಂಗಾತಿಗೆ ನರಕ್ಕೆ ಸಂಬಂಧಿಸಿದ ತೊಂದರೆ ಕಂಡು ಬರುತ್ತದೆ. ಹಣಕಾಸಿನ ತೊಂದರೆ ಇದ್ದವರಿಗೆ ಮಂದಗತಿಯ ಚೇತರಿಕೆ ಕಂಡು ಬರುತ್ತದೆ. ನಿಮ್ಮ ಮನಸ್ಸಿಗೆ ಒಪ್ಪುವಂತಹ ರೀತಿಯಲ್ಲಿ ಸಹೋದ್ಯೋಗಿಗಳ ಮನಸ್ಸನ್ನು ಬದಲಿಸುವಿರಿ.

ಮೀನ ರಾಶಿ

ಸತತವಾದ ಪ್ರಯತ್ನದಿಂದ ಕಡಿಮೆ ಆದಾಯವಿದ್ದರೂ ಹಣವನ್ನು ಉಳಿಸುವಿರಿ. ಆದರೆ ಅನಾವಶ್ಯಕವಾದಂತಹ ಖರ್ಚು ವೆಚ್ಚಗಳು ಎದುರಾಗಲಿವೆ. ಮಕ್ಕಳ ಜೀವನೋಪಾಯಕ್ಕಾಗಿ ಹಣ ಖರ್ಚಾಗುತ್ತದೆ. ನಿಮ್ಮದು ತಪ್ಪಿಲ್ಲದೆ ಹೋದರು ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಅವಕೃಪೆಗೆ ಒಳಗಾಗುವಿರಿ. ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನವಿರಲಿ. ತಪ್ಪಾದ ನಿರ್ಧಾರಗಳು ಜೀವನದಲ್ಲಿ ಅಸಹಜ ಬದಲಾವಣೆಗಳನ್ನು ಉಂಟು ಮಾಡಬಹುದು. ಒಮ್ಮೆ ತೆಗೆದುಕೊಳ್ಳುವ ತೀರ್ಮಾನಗಳನ್ನು ಪದೇಪದೇ ಬದಲಿಸುವಿರಿ. ಮನೆತನದ ಉನ್ನತ ಅಧಿಕಾರವು ನಿಮ್ಮದಾಗುತ್ತದೆ. ನಿಮ್ಮ ಉನ್ನತಿಗೆ ಸಂಬಂಧಿಕರಿಂದ ಅಡ್ಡಿ ಉಂಟಾಗುತ್ತದೆ. ಸಮಾಜ ಸೇವೆ ಮಾಡುವ ಇಂಗಿತವಿರುತ್ತದೆ. ಅನಾವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಬೇರೆಯವರ ಮಕ್ಕಳನ್ನು ಪ್ರೀತಿಯಿಂದ ಸಲಹುವಿರಿ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಎಲ್ಲರಿಂದಲೂ ಗೌರವವನ್ನು ನಿರೀಕ್ಷಿಸುವಿರಿ. ರಾಜಕೀಯದಲ್ಲಿ ಉತ್ತಮ ಅವಕಾಶ ದೊರೆಯಲಿದೆ. ಹೆಣ್ಣುಮಕ್ಕಳಿಗೆ ಪತಿಯ ಸಂಪೂರ್ಣ ಸಹಾಯ ಸಹಕಾರ ದೊರೆಯುತ್ತದೆ. ಪ್ರಯಾಣ ಅಥವಾ ಪ್ರವಾಸಕ್ಕಾಗಿ ಹೆಚ್ಚಿನ ಹಣ ವಿನಿಯೋಗಿಸುವಿರಿ.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.