Rahu-Mercury Conjunction: 18 ವರ್ಷಗಳ ನಂತರ ರಾಹು-ಬುಧ ಸಂಯೋಗ: ಮಾರ್ಚ್​ನಲ್ಲಿ ಈ 6 ರಾಶಿಯವರಿಗೆ ಸಿಕ್ಕಾಪಟ್ಟೆ ಲಾಭ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Rahu-mercury Conjunction: 18 ವರ್ಷಗಳ ನಂತರ ರಾಹು-ಬುಧ ಸಂಯೋಗ: ಮಾರ್ಚ್​ನಲ್ಲಿ ಈ 6 ರಾಶಿಯವರಿಗೆ ಸಿಕ್ಕಾಪಟ್ಟೆ ಲಾಭ

Rahu-Mercury Conjunction: 18 ವರ್ಷಗಳ ನಂತರ ರಾಹು-ಬುಧ ಸಂಯೋಗ: ಮಾರ್ಚ್​ನಲ್ಲಿ ಈ 6 ರಾಶಿಯವರಿಗೆ ಸಿಕ್ಕಾಪಟ್ಟೆ ಲಾಭ

ಮಾರ್ಚ್ 7 ರಂದು, ಬುಧನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಆ ವೇಳೆಗಾಗಲೇ ರಾಹು ಕೂಡ ಮೀನ ರಾಶಿಯಲ್ಲಿರುತ್ತಾನೆ. ಸುಮಾರು 18 ವರ್ಷಗಳ ನಂತರ ರಾಹು-ಬುಧ ಸಂಯೋಗ ಸಂಭವಿಸಲಿದೆ. ಈ ಎರಡು ರಾಶಿಗಳ ಸಂಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಿದೆ ಎಂದು ತಿಳಿಯೋಣ ಬನ್ನಿ..

ಬುಧ- ರಾಹು ಸಂಯೋಗ (ಪ್ರಾತಿನಿಧಿಕ ಚಿತ್ರ)
ಬುಧ- ರಾಹು ಸಂಯೋಗ (ಪ್ರಾತಿನಿಧಿಕ ಚಿತ್ರ)

ರಾಹು ನೆಲೆಸಿರುವ ಮೀನ ರಾಶಿಯಲ್ಲಿ ಬುಧ ಗ್ರಹ ಕೂಡ ಪ್ರವೇಶಿಸಲಿದ್ದು, ಸುಮಾರು 18 ವರ್ಷಗಳ ನಂತರ ರಾಹು-ಬುಧ ಸಂಯೋಗ ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹುವನ್ನು ಅಶುಭ ಗ್ರಹ ಎಂದು ಪರಿಗಣಿಸಲಾಗುತ್ತದೆ ಮತ್ತು ಬುಧವನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಆದರೆ ಈ ಎರಡೂ ಗ್ರಹಗಳ ಸಂಯೋಜನೆಯಿಂದ ಕೆಲ ರಾಶಿಯವರಿಗೆ ಒಳಿತಾಗಲಿದೆ.

ಮಾರ್ಚ್ 7 ರಂದು, ಬುಧನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಆ ವೇಳೆಗಾಗಲೇ ರಾಹು ಕೂಡ ಮೀನ ರಾಶಿಯಲ್ಲಿರುತ್ತಾನೆ. ರಾಹು ಯಾವಾಗಲೂ ಸಮಸ್ಯೆಗಳನ್ನು ಸೃಷ್ಟಿಸುತ್ತಾನೆ ಎಂದು ಭಾವಿಸಲಾಗಿದೆ. ಆದರೆ ರಾಹುವಿನ ಸ್ಥಾನವು ಬಲವಾಗಿದ್ದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಬುಧನನ್ನು ಬುದ್ಧಿವಂತಿಕೆ, ವಿವೇಚನೆ, ಏಕಾಗ್ರತೆ, ಸೌಂದರ್ಯ, ವ್ಯವಹಾರದ ಅಧಿಪತಿ ಎಂದು ಪರಿಗಣಿಸಲಾಗಿದೆ. ಈ ಎರಡು ರಾಶಿಗಳ ಸಂಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಿದೆ ಎಂದು ತಿಳಿಯೋಣ ಬನ್ನಿ..

ವೃಷಭ ರಾಶಿ

ರಾಹು ಮತ್ತು ಬುಧ ಸಂಯೋಗದಿಂದಾಗಿ, ವೃಷಭ ರಾಶಿಯವರು ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳುತ್ತಾರೆ. ವಸ್ತು ಸಂಪತ್ತು ವೃದ್ಧಿಯಾಗಲಿದೆ. ಜೀವನವು ಸಂತೋಷದಿಂದ ತುಂಬಿರುತ್ತದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಳ್ಳೆಯ ಸುದ್ದಿ ಸಿಗುತ್ತದೆ. ದೀರ್ಘಕಾಲದ ಸಮಸ್ಯೆಗಳು ಮಾಯವಾಗುತ್ತವೆ. ವ್ಯಾಪಾರದಲ್ಲಿ ಲಾಭವಿರುತ್ತದೆ. ಹಳೆಯ ಹೂಡಿಕೆಯಿಂದ ಉತ್ತಮ ಲಾಭ ಪಡೆಯುವಿರಿ. ಹಣದ ಹರಿವು ಹೆಚ್ಚಾಗುತ್ತದೆ. ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.

ಕಟಕ

ಈ ಎರಡು ವಿಭಿನ್ನ ಗ್ರಹಗಳ ಸಂಯೋಜನೆಯು ಕರ್ಕ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಈ ಹಿಂದೆ ಸ್ಥಗಿತಗೊಂಡಿದ್ದ ಕೆಲಸಗಳನ್ನು ಈ ವೇಳೆಗೆ ಪೂರ್ಣಗೊಳಿಸುವಿರಿ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ಸಮಯದಲ್ಲಿ ಅವರ ಆಸೆ ಈಡೇರುತ್ತದೆ. ಆರ್ಥಿಕವಾಗಿ ಲಾಭ ಪಡೆಯುವಿರಿ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ವ್ಯಾಪಾರದ ಅಗತ್ಯಗಳಿಗಾಗಿ ಬೇರೆಡೆಗೆ ಹೋಗಬೇಕಾಗುತ್ತದೆ.

ಸಿಂಹ

ಸಿಂಹ ರಾಶಿಗೆ ರಾಹು ಮತ್ತು ಬುಧ ಸಂಯೋಜನೆಯು ಆರ್ಥಿಕ ಲಾಭ ತರುತ್ತದೆ. ನಿಮ್ಮ ಹಿಂದಿನ ಸಾಲಗಳನ್ನು ತೀರಿಸಲು ನಿಮಗೆ ಸಾಧ್ಯವಾಗುತ್ತದೆ. ಆತ್ಮವಿಶ್ವಾಸದಿಂದ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಬಡ್ತಿಗಾಗಿ ಕಾಯುತ್ತಿರುವವರು ಈ ಸಮಯದಲ್ಲಿ ಸಿಹಿ ಸುದ್ದಿ ಕೇಳುವಿರಿ. ಮದುವೆ ನಿಶ್ಚಯವಾಗುವ ಸಾಧ್ಯತೆ ಇದೆ. ಒಂಟಿ ಜನರ ಜೀವನದಲ್ಲಿ ಹೊಸ ವ್ಯಕ್ತಿ ಪ್ರವೇಶಿಸುತ್ತಾರೆ.

ವೃಶ್ಚಿಕ ರಾಶಿ

ಕೆಲಸದ ಸ್ಥಳದಲ್ಲಿ ವೃಶ್ಚಿಕ ರಾಶಿಯವರು ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಪ್ರಶಂಸೆಯನ್ನು ಪಡೆಯುತ್ತೀರಿ. ಆದಾಯ ಹೆಚ್ಚುತ್ತದೆ ಆದರೆ ಹಣ ಖರ್ಚಾಗುತ್ತದೆ. ಪ್ರೇಮ ಜೀವನ ಚೆನ್ನಾಗಿರುತ್ತದೆ. ಸಂಗಾತಿಗಳ ನಡುವೆ ಪ್ರೀತಿ ಹೆಚ್ಚಾಗುತ್ತದೆ.

ಕುಂಭ ರಾಶಿ

ಹಠಾತ್ ಹಣ ಮಾಡುವ ಅವಕಾಶಗಳಿವೆ. ಪೂರ್ವಿಕರ ಆಸ್ತಿಯನ್ನು ಕಾಣಬಹುದು. ವೃತ್ತಿ ಮತ್ತು ವ್ಯಾಪಾರದಲ್ಲಿ ಪ್ರಗತಿ ಹಾಗೂ ಲಾಭಕ್ಕೆ ಅವಕಾಶವಿದೆ. ವ್ಯಾಪಾರವನ್ನು ವಿಸ್ತರಿಸಲು ಹೊಸ ಅವಕಾಶಗಳು ಕಂಡುಬರುತ್ತವೆ.

ಮೀನ ರಾಶಿ

ವೃತ್ತಿಜೀವನದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಆತ್ಮಸ್ಥೈರ್ಯ ಹೆಚ್ಚುತ್ತದೆ. ಆರ್ಥಿಕ ಲಾಭ ಇರುತ್ತದೆ. ವ್ಯಾಪಾರ ಲಾಭದಾಯಕವಾಗಿರುತ್ತದೆ. ಆರೋಗ್ಯ ಸುಧಾರಿಸುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಮನಸ್ಸು ಶಾಂತವಾಗಿರುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.