ಕುಂಭ ರಾಶಿಗೆ ರಾಹು ಪ್ರವೇಶ; ಹಣಕಾಸಿನ ಕೊರತೆ ಕಡಿಮೆ; ಧನು, ಮಕರ, ಕುಂಭ, ಮೀನ ರಾಶಿಯವರ ಫಲಾಫಲಗಳು ಹೀಗಿವೆ
ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ರಾಶಿ, ನಕ್ಷತ್ರ ಸ್ಥಾನವನ್ನ ಬದಲಾಯಿಸುತ್ತವೆ. ಕುಂಭ ರಾಶಿಗೆ ರಾಹು ಪ್ರವೇಶವು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತೆ. ಆದರೆ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಶುಭಫಲ ತಿಳಿಯಿರಿ.

ಪ್ರತಿಯೊಂದು ಗ್ರಹಗಳು ಪ್ರದಕ್ಷಿಣೆಯ ಮಾರ್ಗದಲ್ಲಿ ಚಲಿಸುತ್ತವೆ. ಆದರೆ ರಾಹು ಮತ್ತು ಕೇತುಗಳು ಅಪ್ರದಕ್ಷಿಣೆಯ ಮಾರ್ಗದಲ್ಲಿ ಸಂಚರಿಸುತ್ತದೆ. ರಾಹು ಮತ್ತು ಕೇತುಗಳನ್ನು ಛಾಯಾಗ್ರಹಗಳೆಂದು ಕರೆಯುತ್ತೇವೆ. ರಾಹು ತಾನಿರುವ ಕ್ಷೇತ್ರವನ್ನು ಕಾಪಾಡಿಕೊಳ್ಳುತ್ತಾನೆ. ಆದರೆ ರಾಹುವು ದೃಷ್ಟಿಸುವ ಭಾವಗಳನ್ನು ತೊಂದರೆಗೆ ಒಳಗಾಗುತ್ತವೆ. ರಾಹುವು 2025 ರ ಮೇ 18ರ ಭಾನುವಾರ ಮೀನ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. 2026 ರ ನವಂಬರ್ ತಿಂಗಳ 25 ಬುಧವಾರದಂದು ರಾಹುವು ಕುಂಭರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಯಾವುದೇ ಗ್ರಹಗಳ ಫಲಾಫಲಗಳು ಜನ್ಮಕುಂಡಲಿಯಲ್ಲಿನ ದಶಾಭುಕ್ತಿಗಳನ್ನು ಅವಲಂಭಿಸುತ್ತವೆ. ರಾಹು ಎಂದ ಮಾತ್ರಕ್ಕೆ ಭಯ ಪಡಬಾರದು. ಜೋತಿಷ್ಯದ ಪುಸ್ತಕಗಳಲ್ಲಿ ಒಳಿತು ಮತ್ತು ಕೆಡುಕುಗಳು ಎರಡನ್ನೂ ನೀಡಿರುತ್ತಾರೆ.
ರಾಹುವಿರುವ ರಾಶಿ, ರಾಹುವಿನ ಜೊತೆ ಇರುವ ಗ್ರಹಗಳು ಮತ್ತು ರಾಹುವನ್ನು ದೃಷ್ಟಿಸುವ ಗ್ರಹಗಳನ್ನು ಪರಿಶೀಲಿಸಬೇಕು. ಸುಲಭವಾದ ಪರಿಹಾರದಿಂದಲೂ ಶುಭಫಲಗಳನ್ನು ಪಡೆಯಬಹುದು. ರಾಹುವಿನ ಅಧಿದೇವತೆ ಸರಸ್ವತಿ. ಈ ಕಾರಣದಿಂದಲೇ ಯಾರದೇ ಕುಂಡಲಿಯಲ್ಲಿ ರಾಹುವು ಶುಭನಿದ್ದಲ್ಲಿ ಅವರಿಗೆ ವಿದೇಶಿಭಾಷಾಜ್ಞಾನ ಇರುತ್ತದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸುತ್ತಾರೆ. ಮನೆಯ ಬಳಿ ಇರುವ ತೆಂಗಿನ ಮರವನ್ನು ಕಡಿಯಬಾರದೆಂದು ಹೇಳುತ್ತಾರೆ. ಕಾರಣ ರಾಹುವಿನ ಮರ ತೆಂಗು. ಕುಂಭರಾಶಿಯಲ್ಲಿ ಗುರು, ಶನಿ ಮತ್ತು ರಾಹು ಗ್ರಹಗಳು ಉತ್ತಮ ಫಲಗಳನ್ನೇ ನೀಡುತ್ತಾರೆ. ಪ್ರಸಕ್ತ ಸನ್ನಿವೇಶದಲ್ಲಿ ರಾಹುವಿನ ಸಂಚಾರದಿಂದ ಪ್ರತಿಯೊಂದು ರಾಶಿಗಳು ತನ್ನದೇ ಆದ ಫಲಗಳನ್ನು ಪಡೆಯುತ್ತವೆ. ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ತಿಳಿಯಿರಿ.
ಧನು ರಾಶಿ
ಉತ್ತಮ ಉದ್ಯೋಗವಿರುತ್ತದೆ. ಆದರೆ ಉದ್ಯೋಗವನ್ನು ಬದಲಿಸುವಿರಿ ಅಥವಾ ಸ್ವಂತ ಉದ್ದಿಮೆಯನ್ನು ಆರಂಭಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರಮಾನವಿರುತ್ತದೆ. ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ನಂಬುವುದಿಲ್ಲ. ಉನ್ನತ ಮಟ್ಟದ ಯಶಸ್ಸು ಮತ್ತು ಗೌರವಯುತ ಸ್ಥಾನಮಾನ ನಿಮ್ಮದಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ನಂಬುವುದಿಲ್ಲ. ನಿಮ್ಮ ಕಾರ್ಯ ಯೋಜನೆಗಳು ಯಶಸ್ವಿಯಾಗಲು ಬಹುಕಾಲ ಬೇಕಾಗಬಹುದು. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಬಾಳಸಂಗಾತಿಯನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವಿರಿ. ಸಂಪಾದನೆಯಲ್ಲಿ ಮೊದಲಿಗರಾಗುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಬೇರೆಯವರ ಪ್ರಭಾವಕ್ಕೆ ಒಳಗಾಗುವಿರಿ. ಸ್ವಾರ್ಥದ ಬುದ್ಧಿಯಿದ್ದರೂ ಬೇರೆಯವರಿಗೆ ನಿಮ್ಮಿಂದ ತೊಂದರೆಯಾಗುವುದಿಲ್ಲ. ಮುಖ ಸೌಂದರ್ಯದ ಬಗ್ಗೆ ಗಮನ ನೀಡಿರಿ. ಗೌರವವನ್ನು ಕಾಪಾಡಿಕೊಳ್ಳಲು ಎಲ್ಲರಿಗೂ ಅನುಕೂಲವಾಗುವಂತಹ ಕೆಲಸಗಳಲ್ಲಿ ತೊಡಗುವಿರಿ. ಹಣಕಾಸಿನ ಕೊರತೆ ಕಡಿಮೆಯಾಗುತ್ತದೆ. ಮನೆತನದ ಹಣಕಾಸಿನ ವಿಚಾರದಲ್ಲಿ ವಿವಾದ ಒಂದು ಎದುರಾಗಲಿದೆ. ನಿಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಕೋಪವನ್ನು ಕಡಿಮೆ ಮಾಡಿಕೊಂಡಷ್ಟು ನಿಮಗೆ ತೊಂದರೆ ಇರುತ್ತೆ.
ಮಕರ ರಾಶಿ
ಮಕ್ಕಳ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ನಿಮ್ಮ ಮಾತಿನ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸಿ. ಅನಿರೀಕ್ಷಿತ ಧನ ಲಾಭವಿದೆ. ವಿದ್ಯೆ ಪೂರ್ಣಗೊಳಿಸಿದ ತಕ್ಷಣ ಉತ್ತಮ ಉದ್ಯೋಗ ದೊರೆಯುತ್ತದೆ. ಅನಿವಾರ್ಯವಾಗಿ ಉನ್ನತ ವಿದ್ಯಾಭ್ಯಾಸದ ವಿಚಾರ ಕೈಗೂಡುವುದಿಲ್ಲ. ತಪ್ಪುಗಳ ನಡುವೆ ಇರುವ ಅಂತರವನ್ನು ತಿಳಿಯುವುದಿಲ್ಲ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವಿರಿ. ಉನ್ನತ ಮಟ್ಟದ ಜೀವನಕ್ಕಾಗಿ ದೊಡ್ಡ ದೊಡ್ಡ ರೀತಿಯ ಕೆಲಸಗಳನ್ನು ಆರಂಭಿಸುವಿರಿ. ಜೀವನದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವಿರಿ. ಧಾರ್ಮಿಕ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಅನಿರೀಕ್ಷಿತ ಧನಲಾಭವಿದೆ. ಬಿಡುವಿಲ್ಲದ ಕೆಲಸ ಕಾರ್ಯಗಳಿರುತ್ತವೆ. ಕುಟುಂಬದಲ್ಲಿ ಹಣದ ತೊಂದರೆ ಕಂಡುಬರುವುದಿಲ್ಲ. ಪಾಲುಗಾರಿಕೆಯ ವ್ಯಾಪಾರ, ವ್ಯವಹಾರಗಳು ಹೆಚ್ಚಿನ ಲಾಭ ನೀಡುತ್ತದೆ. ಆರೋಗ್ಯದ ಬಗ್ಗೆ ಗಮನವಿರಲಿ
ಕುಂಭ ರಾಶಿ
ಜನಮೆಚ್ಚುವಂತಹ ಕೆಲಸವೊಂದನ್ನು ಮಾಡುವಿರಿ. ಮನೆತನದಲ್ಲಿ ನಿಮ್ಮ ರೀತಿ ನೀತಿಗಳು ಎಲ್ಲರಿಗೂ ಇಷ್ಟವೆನಿಸಲಿದೆ. ಸ್ವಾರ್ಥದ ಬುದ್ದಿ ಇರುವುದಿಲ್ಲ. ಆದರೆ ಮೊದಲ ಆದ್ಯತೆ ನಿಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ನೀಡುವಿರಿ. ಸೋದರ ಅಥವಾ ಸೋದರಿಯ ಜೀವನದಲ್ಲಿ ಉತ್ತಮ ಬದಲಾವಣೆಗಳು ತಲೆದೋರುತ್ತವೆ. ಮಾತನ್ನು ಕಡಿಮೆ ಮಾಡಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಆಸಕ್ತಿ ತೋರುವಿರಿ. ದೈಹಿಕವಾಗಿ ಸದೃಢವಾಗಿರುವಿರಿ. ಬಹುಕಾಲದಿಂದ ನೆನೆಗುದಿಯಲ್ಲಿದ್ದ ಕೆಲಸ ಕಾರ್ಯಗಳಿಗೆ ಕಾರ್ಯಕಲ್ಪ ನೀಡುವಿರಿ. ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನದ ಅವಕಾಶ ದೊರೆಯುತ್ತದೆ. ಕುಟುಂಬದ ಸ್ತ್ರೀಯರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ವಿರೋಧಿಗಳು ನಿಮ್ಮ ಮುಂದೆ ಸೋಲನ್ನು ಒಪ್ಪುತ್ತಾರೆ. ಉದ್ಯೋಗದಲ್ಲಿ ಉಂಟಾಗುವ ಬದಲಾವಣೆಗಳನ್ನು ಒಪ್ಪದೆ ಉದ್ಯೋಗ ಬದಲಿಸುವಿರಿ. ಸ್ವಂತ ಉದ್ದಿಮೆ ಆರಂಭಿಸುವ ಸೂಚನೆಗಳು ಕಾಣುತ್ತವೆ. ಆತುರದಿಂದ ಕೆಲಸ ಕಾರ್ಯಗಳಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸುವಿರಿ. ಹಣಕಾಸಿನ ಯೋಜನೆಗಳು ಲಾಭದಾಯಕವಾಗಿರುತ್ತದೆ.
ಮೀನ ರಾಶಿ
ಗರ್ಭಿಣಿ ಸ್ತ್ರೀಯರು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಪ್ರಯತ್ನದಿಂದ ಸಫಲತೆ ಕಾಣುತ್ತಾರೆ. ಉತ್ತಮ ಬುದ್ಧಿ ಇದ್ದರೂ ಕೆಲವೊಮ್ಮೆ ಬುದ್ಧಿಹೀನರಂತೆ ವರ್ತಿಸುವಿರಿ. ಮನಸಿಗೆ ಸಂತೃಪ್ತಿ ಇರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಕಠಿಣವಾದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ನಿಮ್ಮ ಮನದ ಬಾವನೆಗಳಿಗೆ ನಿಮ್ಮ ಮಕ್ಕಳು ಉತ್ತಮವಾಗಿ ಸ್ಪಂದಿಸುತ್ತಾರೆ. ವಯೋವೃದ್ದರಿಗೆ ಸಹಾಯ ಮಾಡಲು ಸಂಘ ಸಂಸ್ಥೆಗಳ ನೇತೃತ್ವ ಒಪ್ಪಿಕೊಳ್ಳುವಿರಿ. ಗಡಿಬಿಡಿಯಿಂದ ಹಣಕಾಸಿನ ವಿಚಾರದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಬಾಳ ಸಂಗಾತಿಯ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಬಿನ್ನಾಭಿಪ್ರಾಯ ಇರುತ್ತದೆ. ಉದ್ಯೋಗದಲ್ಲಿ ಗಂಭೀರವಾದ ವಾತವರಣ ಉಂಟಾಗುತ್ತದೆ. ಕಣ್ಣಿನ ತೊಂದ ಇರುತ್ತದೆ. ತಂದೆಯವರ ಅಥವಾ ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಕಂಡುಬರಲಿದೆ. ಹಿಂದಿನ ಸಂಪ್ರಾದಯಗಳಲ್ಲಿ ಆಸಕ್ತಿ ಉಂಟಾಗುತ್ತದೆ. ವಿದೇಶಿ ಪ್ರಯಾಣ ಯೋಗವಿದೆ. ಬೇರೆಯವರ ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ತೊಂದರೆಗೆ ಸಿಲುಕುವಿರಿ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).