Rahu Transit: ರಾಹು ಸಂಚಾರ; ಈ 3 ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಹೂಡಿಕೆಗೂ ಮುನ್ನ ಯೋಚಿಸಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Rahu Transit: ರಾಹು ಸಂಚಾರ; ಈ 3 ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಹೂಡಿಕೆಗೂ ಮುನ್ನ ಯೋಚಿಸಿ

Rahu Transit: ರಾಹು ಸಂಚಾರ; ಈ 3 ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಹೂಡಿಕೆಗೂ ಮುನ್ನ ಯೋಚಿಸಿ

ರಾಹುವಿನ ಸಂಕ್ರಮಣದಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಏರಿಳಿತಗಳು ಉಂಟಾಗುವ ಸಾಧ್ಯತೆ ಇದೆ. ಈ 3 ರಾಶಿಯವರು ಎಚ್ಚರಿಕೆಯಿಂದ ಇದ್ದು, ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿದೆ.

ರಾಹು ಸಂಚಾರದಿಂದ 3 ರಾಶಿಯವರ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರಲಿವೆ.
ರಾಹು ಸಂಚಾರದಿಂದ 3 ರಾಶಿಯವರ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರಲಿವೆ.

ಜನರು ಸಾಮಾನ್ಯವಾಗಿ ಶನಿಯ ನಂತರ ಭಯಪಡುವ ಗ್ರಹಗಳೆಂದರೆ ಅವು ರಾಹು ಮತ್ತು ಕೇತು. ಇವುಗಳನ್ನ ನೆರಳು ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ರಾಹು ಗ್ರಹವನ್ನು ತಪ್ಪಿಸಿಕೊಳ್ಳಲಾಗದ ಗ್ರಹ ಅಂತ ಹೇಳಲಾಗುತ್ತದೆ. ಈ ಗ್ರಹ ಯಾವಾಗಲೂ ಹಿಮ್ಮುಖ ದಿಕ್ಕಿನಲ್ಲೇ ಚಲಿಸುತ್ತದೆ.

ಸದ್ಯ ರಾಹು ಮೀನ ರಾಶಿಯಲ್ಲಿದ್ದಾನೆ. ಒಂದೂವರೆ ವರ್ಷಕ್ಕೊಮ್ಮೆ ರಾಹು ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಕಳೆದ ವರ್ಷದ ಅಕ್ಟೋಬರ್ 30 ರಂದು ರಾಹು ಮೇಷ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸಿದ. ಈ ವರ್ಷ ಪೂರ್ತಿ ಮೀನ ರಾಶಿಯಲ್ಲೇ ಸಾಗುತ್ತಾನೆ.

2025ಕ್ಕೆ ರಾಹು ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ರಾಹುಲಿನ ಕಣ್ಣು ಬಿದ್ದರೆ ಆಯಾ ರಾಶಿಯವರ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವು ರಾಶಿಯವರಿಗೆ ರಾಹು ಸಂಕ್ರಮಣ ಅಶುಭವೆಂದು ಪರಿಗಣಿಸಲಾಗುತ್ತದೆ. ಯಾವೆಲ್ಲಾ ರಾಶಿಯವರಿಗೆ ರಾಹು ಸಂಚಾರದಿಂದ ಸಮಸ್ಯೆ, ತೊಂದರೆ ಹಾಗೂ ಸವಾಲುಗಳು ಎದುರಾಗಬಹುದು ಎಂಬುದನ್ನ ತಿಳಿಯೋಣ.

ಕನ್ಯಾ ರಾಶಿ: ಮೀನ ರಾಶಿಯಲ್ಲಿ ರಾಹು ಸಂಚಾರದಿಂದ ಕನ್ಯಾ ರಾಶಿಯವರಿಗೆ ತೊಂದರೆಗಳು ಉಂಟಾಗುತ್ತವೆ. ಈ ಸಮಯದಲ್ಲಿ ನೀವು ಆಸ್ತಿ ಅಥವಾ ಷೇರುಗಳಲ್ಲಿ ಹೂಡಿಕೆ ಮಾಡುವ ಮುನ್ನ ಯೋಚಿಸಬೇಕು. ಈ ನಿರ್ಧಾರದಿಂದ ಹಿಂದೆ ಸರಿಯುವುದು ಉತ್ತಮ. ಮನೆಯಲ್ಲಿ ಕಲಹಗಳು ನಡೆಯುವ ಸಾಧ್ಯತೆ ಇದ್ದು, ಸಂಕಷ್ಟದ ವಾತಾವರಣ ನಿರ್ಮಾಣವಾಗಲಿದೆ. ರಾಹುವಿನ ಸಂಚಾರ ಕುಟುಂಬದಲ್ಲಿನ ಹಿರಿಯ ಮೇಲಿನ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಹೀಗಾಗಿ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ.

ಸಿಂಹ ರಾಶಿ: ರಾಹುವಿನ ಸಂಕ್ರಮಣದಿಂದ ಸಿಂಹ ರಾಶಿಯವರಿಗೆ ಲಾಭದಾಯ ಎಂದು ಪರಿಗಣಿಸಲಾಗುವುದಿಲ್ಲ. ಈ ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಬೇರೆಯಾಗುವ ಪರಿಸ್ಥಿತಿಯೂ ಬರಬಹುದು. ಯಾವುದೇ ವಿಚಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಪತಿ-ಪತ್ನಿ ಚಿಕ್ಕ ಚಿಕ್ಕ ವಿಷಯಗಳಿಗೆ ದೊಡ್ಡದು ಮಾಡದರೆ ಸಾಮರಸ್ಯದಿಂದ ಮಾತನಾಡಿದರೆ ಅನುಕೂಲವಾಗುತ್ತದೆ. ಆರ್ಥಿಕ ನಷ್ಟದ ಸೂಚನೆಗಳೂ ಇವೆ. ನೀವು ವ್ಯಾಪಾರದಲ್ಲಿ ಹೂಡಿಕೆ ಮಾಡುವ ಮುಂಚೆ ಯೋಚಿಸಿ. ಈ ಸಮಯದಲ್ಲಿ ನೀವು ಹೂಡಿಕೆ ಮಾಡಿದರೆ ನಷ್ಟದ ಅಪಾಯವಿದೆ.

ಮೀನ ರಾಶಿ: ರಾಹು ಮೀನ ರಾಶಿಯಲ್ಲಿ ಮುಂದುವರೆಯುತ್ತಿರುವುದರಿಂದ ಮೀನ ರಾಶಿಯವರಿಗೆ ಮಿಶ್ರ ಫಲಿತಾಂಶಗಳಿವೆ. ಆರೋಗ್ಯದ ಸಮಸ್ಯೆಗಳು ಇರುತ್ತವೆ. ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಕುಟುಂಬಕ್ಕೆ ಸಂಬಂಧಿಸಿದ ನಿರ್ಧಾರಗಳು ಘರ್ಷಣೆಗೆ ಕಾರಣವಾಗಬಹುದು. ಖರ್ಚು ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಪಾರ ಕ್ಷೇತ್ರದಲ್ಲಿ ರಾಹು ಸಂಚಾರ ಪ್ರಭಾವ ಬೀರಲಿದ್ದಾನೆ. ನಿಮ್ಮ ಮೇಲಾಧಿಕಾರಿಯೊಂದಿಗೆ ಘರ್ಷಣೆ ಇರಲಿದೆ. ಜಾಗರೂಕರಾಗಿರಿ. ಇತರರೊಂದಿಗೆ ಮಾತನಾಡುವಾಗ ಸೌಜನ್ಯದಿಂದ ವರ್ತಿಸುವುದು ಒಳ್ಳೆಯದು. ಈ ಅವಧಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವಾಗಲೂ ಎರಡ್ಮೂರು ಬಾರಿ ಯೋಚಿಸಿ.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.