ಕುಂಭ ವಿವಾಹ ಸೇರಿದಂತೆ ಮಂಗಳ ದೋಷದಿಂದ ಮದುವೆ ತಡವಾಗುತ್ತಿದ್ದಲ್ಲಿ ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕುಂಭ ವಿವಾಹ ಸೇರಿದಂತೆ ಮಂಗಳ ದೋಷದಿಂದ ಮದುವೆ ತಡವಾಗುತ್ತಿದ್ದಲ್ಲಿ ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು? ಇಲ್ಲಿದೆ ಮಾಹಿತಿ

ಕುಂಭ ವಿವಾಹ ಸೇರಿದಂತೆ ಮಂಗಳ ದೋಷದಿಂದ ಮದುವೆ ತಡವಾಗುತ್ತಿದ್ದಲ್ಲಿ ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು? ಇಲ್ಲಿದೆ ಮಾಹಿತಿ

Kuja Dosha: ಯಾವುದೇ ವ್ಯಕ್ತಿಯ ಜಾತಕದಲ್ಲಿ ಕುಜ ದೋಷ ಇದ್ದರೆ ಗಂಡಿಗಾಗಲೀ, ಹೆಣ್ಣಿಗಾಗಲೀ ಮದುವೆ ವಿಳಂಬವಾಗುತ್ತದೆ. ಮದುವೆ ಆದರೂ ವೈವಾಹಿಕ ಜೀವನ ಸಂತೋಷವಾಗಿರುವುದಿಲ್ಲ. ಕುಂಭ ವಿವಾಹ ಸೇರಿದಂತೆ ಮಂಗಳ ದೋಷದಿಂದ ಮದುವೆ ತಡವಾಗುತ್ತಿದ್ದಲ್ಲಿ ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು? ಇಲ್ಲಿದೆ ಮಾಹಿತಿ

ಕುಂಭ ವಿವಾಹ ಸೇರಿದಂತೆ ಮಂಗಳ ದೋಷ ಇದ್ದವರು ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು?
ಕುಂಭ ವಿವಾಹ ಸೇರಿದಂತೆ ಮಂಗಳ ದೋಷ ಇದ್ದವರು ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು?

ಒಬ್ಬ ವ್ಯಕ್ತಿಯು ಜೀವನದಲ್ಲಿ ಸುಖ, ಸಂತೋಷ, ನೆಮ್ಮದಿಯಿಂದ ಇರಬೇಕೆಂದರೆ ದೇವರ ಅನುಗ್ರಹದ ಜೊತೆಗೆ ಗ್ರಹ ಗತಿಗಳ ಪಾತ್ರ ಕೂಡಾ ಪ್ರಮುಖವಾಗಿರುತ್ತದೆ. ಜಾತಕದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಸಾಮಾನ್ಯ. ಆದರೆ ಜಾತಕದಲ್ಲಿ ಕಂಡು ಬರುವ ಕೆಲವೊಂದು ದೋಷಗಳು ವ್ಯಕ್ತಿಯ ಜೀವನಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ.

ಮನುಷ್ಯನ ಜೀವನದಲ್ಲಿ ಮದುವೆ ಎಂಬುದು ಕೂಡಾ ಪ್ರಮುಖ ಘಟ್ಟ. ಆದರೆ ಬಹಳಷ್ಟು ಜನರಿಗೆ ವಯಸ್ಸು ಮೀರಿದರೂ ಮದುವೆ ಆಗುವುದಿಲ್ಲ. ಒಂದು ವೇಳೆ ಮದುವೆ ಆದರೂ ಜಾತಕದಲಿರುವ ದೋಷ ಅವರನ್ನು ಸುಖ, ಸಂತೋಷದಿಂದ ಇರಲು ಬಿಡುವುದಿಲ್ಲ. ಈ ದೋಷ ಇರುವವರು ಮದುವೆ ಆದರೆ ಶೀಘ್ರದಲ್ಲೇ ಅವರು ಸಂಗಾತಿಯಿಂದ ದೂರ ಆಗುವ ಸಾಧ್ಯತೆಗಳು ಬಹಳ. ಈ ರೀತಿ ಸಮಸ್ಯೆ ನೀಡುವ ದೋಷಗಳಲ್ಲಿ ಕುಜ ದೋಷ ಕೂಡಾ ಒಂದು. ಇದನ್ನು ಮಂಗಳ ದೋಷ, ಮಾಂಗಲಿಕ ದೋಷ, ಅಂಗಾರಕ ದೋಷ ಎಂದೂ ಕರೆಯುತ್ತಾರೆ. ಕುಜ ದೋಷ ಇದ್ದರೆ ಮದುವೆ ಬಹಳ ತಡವಾಗುತ್ತದೆ. ಒಂದು ವೇಳೆ ಇದನ್ನು ಸರಿಪಡಿಸಿಕೊಳ್ಳದಿದ್ದರೆ ಮದುವೆ ನಡೆಯದೆ ಕೂಡಾ ಇರಬಹುದು. ಜ್ಯೋತಿಷ್ಯಶಾಸ್ತ್ರದಲ್ಲಿ ಕುಜ ದೋಷಕ್ಕೆ ಕೆಲವೊಂದು ಪರಿಹಾರಗಳಿವೆ.

ಕುಂಭ ವಿವಾಹ

ವಿಶೇಷವಾಗಿ ಕುಂಭ ವಿವಾಹವನ್ನು ಹೆಣ್ಣಿಗೆ ಮಾಡಿಸಲಾಗುತ್ತದೆ. ಜಾತಕದಲ್ಲಿ ಮಂಗಳ ದೋಷ, ಎರಡನೇ ಮದುವೆ ಯೋಗವಿದ್ದಾಗ ಕುಂಭ ವಿವಾಹ ಮಾಡಲಾಗುತ್ತದೆ. ಈ ಪರಿಹಾರದಲ್ಲಿ ಹುಡುಗಿಯು ಮದು ಮಗಳಂತೆ ಸಿಂಗಾರಗೊಳ್ಳುತ್ತಾಳೆ. ಒಂದು ಮದುವೆಯಲ್ಲಿ ಏನೆಲ್ಲಾ ಶಾಸ್ತ್ರವಿದೆಯೋ ಅವೆಲ್ಲವನ್ನೂ ಮಾಡಬೇಕಾಗುತ್ತದೆ. ಆದರೆ ಹುಡುಗನ ಬದಲಿಗೆ ಒಂದು ಮಣ್ಣಿನ ಮಡಿಕೆಗೆ ಅಲಂಕಾರ ಮಾಡಲಾಗುತ್ತದೆ. ವರನೊಂದಿಗೆ ಮಾಡಬೇಕಾದ ಎಲ್ಲಾ ಶಾಸ್ತ್ರ ಸಂಪ್ರದಾಯಗಳನ್ನು ಮಡಿಕೆಯೊಂದಿಗೆ ಮಾಡಲಾಗುತ್ತದೆ. ಎಲ್ಲಾ ಮುಗಿದ ನಂತರ ಮಡಿಕೆಯನ್ನು ಒಡೆದು ನೀರಿನಲ್ಲಿ ಬಿಟ್ಟರೆ ದೋಷ ಪರಿಹಾರವಾದಂತೆ.

ಕುಜ ದೋಷ ಇರುವವರನ್ನೇ ಮದುವೆ ಆಗುವುದು

ಕುಜ ದೋಷ ಇರುವವರು ಕುಜ ದೋಷ ಇದ್ದವರನ್ನೇ ಮದುವೆಯಾದರೆ ಜಾತಕದಲ್ಲಿನ ದೋಷ ಸ್ವಲ್ಪ ಮಟ್ಟಿಗೆ ಪರಿಹಾರವಾಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಈ ರೀತಿ ಮದುವೆ ಆದರೆ ಇಬ್ಬರ ಜೀವನದಲ್ಲೂ ಅಂಥಹ ಸಮಸ್ಯೆಗಳು ಬಾಧಿಸುವುದಿಲ್ಲ. ದಂಪತಿ ಸುಖ ಜೀವನ ನಡೆಸಬಹುದು.

ಮಂಗಳವಾರದ ಪೂಜೆ

ಹೆಸರೇ ಸೂಚಿಸುವಂತೆ ಮಂಗಳವಾರವು ಮಂಗಳನಿಗೆ ಪ್ರಿಯವಾದ ವಾರವಾಗಿದೆ. ಆದ್ದರಿಂದ ಈ ದಿನ ಕುಜ ದೋಷದಿಂದ ಉಂಟಾಗುವ ಋಣಾತ್ಮಕ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಮಂಗಳವಾರ ಉಪವಾಸವಿದ್ದು ದೇವರ ಪೂಜೆ ಮಾಡಿ ಮಂಗಳ ಅಷ್ಟೋತ್ತರ ಶತನಾಮಾವಳಿ, ಧರುಸುತಾಯ ವಿದ್ಮಹೇ ಋಣಹರಾಯ ಧೀಮಹಿ ತನ್ನಃ ಕುಜಃ ಪ್ರಚೋದಯಾತ್ ಸೇರಿದಂತೆ ಕುಜನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರಿಂದ ಜಾತಕದಲ್ಲಿರುವ ದೋಷ ಸ್ವಲ್ಪ ಮಟ್ಟಿಗೆ ಪರಿಹಾರವಾಗುತ್ತದೆ.

ಅಂಗಾರಕ ಶಾಂತಿ

ದೇಶದ ಕೆಲವೊಂದು ದೇವಾಲಯಗಳಲ್ಲಿ ಅಂಗಾರಕ ದೋಷ ಪೂಜೆ ಮಾಡಲಾಗುತ್ತದೆ. ಉಜ್ಜಯಿನಿಯ ಮಹಾವೀರನಾಥ ದೇವಾಲಯದಲ್ಲಿ ಮಂಗಳ ದೋಷ ಪೂಜೆ ಮಾಡಿದರೆ ಬಹಳ ಪರಿಣಾಮಕಾರಿ ಎನ್ನಲಾಗಿದೆ. ತಮಿಳುನಾಡು ಹಾಗೂ ಕರ್ನಾಟಕದಲ್ಲೂ ಕೆಲವೊಂದು ದೇವಾಲಯಗಳಿದ್ದು ಈ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಬಹುದು.

ಇದನ್ನು ಹೊರತುಪಡಿಸಿ ಪ್ರತಿ ಮಂಗಳವಾರ ಮಸೂರ್‌ ದಾಲ್‌, ಕೆಂಪು ಬಟ್ಟೆ, ಗೋಧಿಯನ್ನು ದಾನ ಮಾಡಿದರೆ ದೋಷ ಪರಿಹಾರವಾಗುತ್ತಾ ಬರುತ್ತದೆ. ಹಾಗೇ ಕೆಂಪು ಹವಳ ಧರಿಸಿದರೆ ಕೂಡಾ ಮಂಗಳ ದೋಷ ಪರಿಹಾರವಾಗುವ ಸಾಧ್ಯತೆ ಇದೆ. ಆದರೆ ಅದಕ್ಕೂ ಮುನ್ನ ಸೂಕ್ತ ಜ್ಯೋತಿಷಿಗಳನ್ನು ಭೇಟಿ ಮಾಡಿ ವಿವರ ತಿಳಿದುಕೊಳ್ಳಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.